ಟೀಂ ಇಂಡಿಯಾದ ಇಂತಹ ಯಡವಟ್ಟುಗಳಿಗೆ ಯಾರು ಹೊಣೆ?
ಕೋಟ್ಯಾಂತರ ಅಭಿಮಾನಿಗಳ ಪ್ರಶ್ನೆಗಳಿಗಾದರು ಬಿಸಿಸಿಐ ದಂಡ ತೆರುತ್ತಾ?
ವಿಂಡೀಸ್ ವಿರುದ್ಧ ಅಶ್ವಿನ್ ಹಲವು ದಾಖಲೆ, ನೆಕ್ಸ್ಟ್ ಟಾರ್ಗೆಟ್ ಏನು?
2021-23 ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯದಲ್ಲಿ ಭಾರತ ತಂಡ ಹೀನಾಯವಾಗಿ ಸೋಲು ಕಂಡಿತು. ಲಂಡನ್ನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ರೋಹಿತ್ ಪಡೆ ಮುಗ್ಗರಿಸಿರುವುದಕ್ಕೆ ಹಲವು ಕಾರಣಗಳಿರಬಹುದು. ಆದರೆ ಟೆಸ್ಟ್ ಪಂದ್ಯಕ್ಕೆ ಮುಖ್ಯವಾಗಿ ಬೇಕಾಗಿದ್ದ ಚೆನ್ನೈ ಎಕ್ಸ್ಪ್ರೆಸ್, ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ರನ್ನು ಆಯ್ಕೆ ಮಾಡಿರಲಿಲ್ಲ. ಇದು ಸೋಲಿಗೆ ಬಹುದೊಡ್ಡ ಕಾರಣ ಎಂದು ಈ ಹಿಂದೆಯೇ ಟೀಕೆಗಳು ವ್ಯಕ್ತವಾಗಿದ್ದವು. ಮಾತ್ರವಲ್ಲ ಇದನ್ನು ಸ್ವತಃ ಅಶ್ವಿನ್ ಅವರೇ ಖಂಡಿಸಿದ್ದರು. ಸದ್ಯ ವಿಶ್ವ ಟೆಸ್ಟ್ ಮುಗಿದಿರುವ ಅಧ್ಯಯನವಾದರೂ ಆಶ್ವಿನ್ರ ವಿಶಿಷ್ಟ ಸಾಧನೆಗಳು ಈಗ ಬಿಸಿಸಿಐಗೆ ಮನವರಿಕೆ ಮಾಡಿಕೊಡುತ್ತಿವೆ.
ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಕೇವಲ ಮೂರೇ ದಿನಕ್ಕೆ ಅಮೋಘವಾದ ಗೆಲುವು ಪಡೆಯಿತು. ತಂಡದಲ್ಲಿದ್ದ ಹಲವರ ಕೊಡುಗೆ ಸ್ಮರಿಸುವುದರ ಜೊತೆ ಇಲ್ಲಿ ಆರ್.ಅಶ್ವಿನ್ ದಾಖಲೆಗಳು ದ್ರಾಕ್ಷಿಗಳಂತೆ ಗೊಂಚು ಗೊಂಚಾಲಾಗಿ ಕಾಣುತ್ತಿವೆ. ಕೆರಿಬಿಯನ್ರನ್ನು ಕಟ್ಟಿ ಹಾಕುವಲ್ಲಿ ಅಶ್ವಿನ್ ಸ್ಪಿನ್ ಬಾಲ್ ಸಖತ್ ಆಗಿಯೇ ಫಲ ತಂದುಕೊಟ್ಟಿತು. ಏಕೆಂದರೆ ಈ ಟೆಸ್ಟ್ನಲ್ಲಿ ಚೆನ್ನೈ ಎಕ್ಸ್ಪ್ರೆಸ್ ಬರೋಬ್ಬರಿ 12 ವಿಕೆಟ್‌ಗಳನ್ನು ಉರುಳಿಸುವುದರ ಜೊತೆಗೆ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಸಿಕೊಂಡರು. ಅಲ್ಲದೇ ಈ ಟೆಸ್ಟ್ಗೂ ಮೊದಲು 697 ವಿಕೆಟ್‌ಗಳನ್ನು ಪಡೆದುಕೊಂಡಿದ್ದ ಅಶ್ವಿನ್ ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಪಡೆಯುವುದರೊಂದಿಗೆ 700 ವಿಕೆಟ್ಗಳ ಗಡಿ ದಾಟಿದರು.
ಅನಿಲ್ ಕುಂಬ್ಳೆ ಸಾಧನೆ ಹಿಂದಿಕ್ಕುವವರೇ ಅಶ್ವಿನ್..?
ಟೆಸ್ಟ್ ಮ್ಯಾಚ್ಗಳಲ್ಲಿ 8 ಬಾರಿ 10 ವಿಕೆಟ್‌ಗಳನ್ನು ಅನಿಲ್ ಕುಂಬ್ಳೆ ಅವರು ಮಾತ್ರ ಭಾರತದಲ್ಲಿ ಪಡೆದಿದ್ದಾರೆ. ಸದ್ಯ ಆರ್.ಅಶ್ವಿನ್ ಕೂಡ 8 ಬಾರಿ 10 ವಿಕೆಟ್‌ಗಳನ್ನು ಉರುಳಿಸುವ ಮೂಲಕ ಕುಂಬ್ಳೆ ಸರಿಸಮನಾಗಿ ಸಾಧನೆ ಮಾಡಿದಂತೆ ಆಯಿತು. ಇನ್ನು, ಅಶ್ವಿನ್ ಆಡುತ್ತಿರುವ ಕಾರಣ ಈ ದಾಖಲೆ ಸದ್ಯದಲ್ಲೇ ಬ್ರೇಕ್ ಮಾಡಬಹುದು.
ಸದ್ಯದಲ್ಲೇ ಹರ್ಭಜನ್ ಸಿಂಗ್ ರೆಕಾರ್ಡ್ ಬ್ರೇಕ್..!
700 ವಿಕೆಟ್‌ಗಳನ್ನು ಕೆಡವಿದ ವಿಶ್ವದ 16ನೇ ಟೆಸ್ಟ್ ಆಟಗಾರ ಎಂದು ಅಶ್ವಿನ್ ಪಾತ್ರರಾದರು. ಭಾರತದಲ್ಲಿ 700 ವಿಕೆಟ್‌ಗಳನ್ನು ಉರುಳಿಸಿದ 3ನೇ ಸ್ಪಿನ್ನರ್ ಎನಿಸಿಕೊಂಡರು. ಅಶ್ವಿನ್ 709 ವಿಕೆಟ್ ಉರುಳಿಸಿದ್ದು ಮುಂದಿನ ಪಂದ್ಯದಲ್ಲಿ ಹರ್ಭಜನ್ ಸಿಂಗ್ 711 ವಿಕೆಟ್ಗಳ ದಾಖಲೆ ಉಡೀಸ್ ಮಾಡಬಹುದು. ಕುಂಬ್ಳೆ ಬರೋಬ್ಬರಿ 956 ವಿಕೆಟ್ ಉರುಳಿಸಿ ಭಾರತದ ಆಟಗಾರರ ಪೈಕಿ ಅಗ್ರ ಸ್ಥಾನದಲ್ಲಿದ್ದಾರೆ. ಅಶ್ವಿನ್ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ 2 ಇನ್ನಿಂಗ್ಸ್‌ನಲ್ಲಿ ಪ್ರತ್ಯೇಕವಾಗಿ 5-ವಿಕೆಟ್‌ಗಳನ್ನು ಪಡೆದ ಭಾರತದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಶೇನ್ ವಾರ್ನ್ ದಾಖಲೆ ಉಡೀಸ್ ಮಾಡ್ತಾರಾ ಚೆನ್ನೈ ಎಕ್ಸ್ಪ್ರೆಸ್
ಟೆಸ್ಟ್ ಪಂದ್ಯದಲ್ಲಿ ಐದೈದು ವಿಕೆಟ್‌ಗಳನ್ನು 34 ಬಾರಿ ಅಶ್ವಿನ್ ಪಡೆದುಕೊಂಡಿದ್ದಾರೆ. ಇದರಿಂದ ಜೇಮ್ಸ್ ಆಂಡ್ರೆಸನ್ (32 ಬಾರಿ) ದಾಖಲೆ ಸರಿಗಟ್ಟಿದರು. ಇನ್ನು 5 ವಿಕೆಟ್‌ಗಳನ್ನು ಅತೀ ಹೆಚ್ಚು ಬಾರಿ ಪಡೆದವರೆಂದರೆ ಶ್ರೀಲಂಕಾದ ಮುತ್ತಯ್ಯ ಮುರುಳೀಧರ್ ಅವರು ಒಟ್ಟು 67 ಬಾರಿ ಐದೈದು ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಇವರ ನಂತರ 2ನೇ ಸ್ಥಾನದಲ್ಲಿ ಆಸೀಸ್ನ ಶೇನ್ ವಾರ್ನ್ 37 ಬಾರಿ ಐದೈದು ವಿಕೆಟ್‌ಗಳನ್ನು ಪಡೆದಿದ್ದರು. ಕನ್ನಡಿಗ ಕುಂಬ್ಳೆ 35 ಬಾರಿ ಐದೈದು ವಿಕೆಟ್ಸ್ ಪಡೆದು 4ನೇ ಸ್ಥಾನದಲ್ಲಿದ್ದಾರೆ. ಈ ರೆಕಾರ್ಡ್ ಅನ್ನು ಅಶ್ವಿನ್ ಸದ್ಯದಲ್ಲೇ ಬ್ರೇಕ್ ಮಾಡಬಹುದು.
ವಿಶ್ವದ ಸ್ಪಿನ್ನರ್ಸ್ರಲ್ಲಿ 700 ವಿಕೆಟ್ ಪಡೆದವರ ಸ್ಟ್ರೈಕ್ ರೇಟ್ನಲ್ಲಿ ಅಶ್ವಿನ್ 46 ಸರಾಸರಿ ಹೊಂದಿದ್ದಾರೆ. 271 ಪಂದ್ಯಗಳಲ್ಲಿ 702 ವಿಕೆಟ್‌ಗಳನ್ನು ಪಡೆದು 46 ಸ್ಟ್ರೈಕ್ ರೇಟ್ ಪಡೆದಿದ್ದಾರೆ. ಇದರಲ್ಲಿ ಅಶ್ವಿನ್ ನಂತರ ಮುತ್ತಯ್ಯ ಮುರುಳೀಧರ್ ಸ್ಥಾನ ಪಡೆದಿದ್ದಾರೆ. ಇನ್ನು ವೆಸ್ಟ್ ಇಂಡೀಸ್ ವಿರುದ್ಧ 12 ಪಂದ್ಯಗಳಲ್ಲಿ ಅಶ್ವಿನ್ 65 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಸರಾಸರಿ 21.09 ಇದ್ದು 83 ರನ್ಗೆ 7 ವಿಕೆಟ್ ಪಡೆದಿರುವುದು ಕೆರಿಬಿಯನ್ರ ವಿರುದ್ಧ ಬೆಸ್ಟ್ ವಿಕೆಟ್ ಟೇಕರ್ ಆಗಿದ್ದಾರೆ. ಇದಲ್ಲದೇ 5 ವಿಕೆಟ್ಗಳ ಗೊಂಚಲನ್ನು ಐದು ಬಾರಿ ಇವರ ವಿರುದ್ಧವೇ ಪಡೆದಿರುವುದು ಇಲ್ಲಿ ಇನ್ನೊಂದು ವಿಶೇಷ ಎಂದು ಹೇಳಬಹುದು.
ವಿಶೇಷ ವರದಿ: ಭೀಮಪ್ಪ, ಡಿಜಿಟಲ್ ಡೆಸ್ಕ್, ನ್ಯೂಸ್ ಫಸ್ಟ್
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
2nd 5-wicket haul in the ongoing Test 👍
34th 5-wicket haul in Test 👌
8th 10-wicket haul in Tests 👏
Well done, R Ashwin 🙌 🙌
Follow the match ▶️ https://t.co/FWI05P4Bnd #TeamIndia | #WIvIND pic.twitter.com/u9dy3t0TAd
— BCCI (@BCCI) July 14, 2023