ಟೆಸ್ಟ್ನಲ್ಲಿ ಕಿಂಗ್ ಕೊಹ್ಲಿ ಕಳಪೆ ಪ್ರದರ್ಶನದ ಬಗ್ಗೆ ಹಲವರಿಂದ ಟೀಕೆ
ವೆಸ್ಟ್ ಇಂಡೀಸ್ ವಿರುದ್ಧ ವಿರಾಟ್ ಕಮ್ಬ್ಯಾಕ್ ಮಾಡಲೇಬೇಕು..!
ಫ್ಯಾಬ್-4 ರೇಸ್ನಿಂದ ಕಿಂಗ್ ಕೊಹ್ಲಿ ಔಟ್, ಈಗಿರುವುದು ಫ್ಯಾಬ್-3
ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿ ಕಿಂಗ್ ಕೊಹ್ಲಿ ಪಾಲಿಗೆ ಅಗ್ನಿ ಪರೀಕ್ಷೆಯ ಕಣ. ಈ ಡು ಆರ್ ಡೈ ಸಿರೀಸ್ನಲ್ಲಿ ವಿರಾಟ್ ಅದ್ಭುತ ಪ್ರದರ್ಶನ ಮಾಡಬೇಕಿದೆ. ಸ್ಥಾನ ಉಳಿಸಿಕೊಳ್ಳೋಕೆ ಮಾತ್ರವಲ್ಲ. ಅಧಃಪತನದ ಹಾದಿ ಹಿಡಿದಿರೋ ಟೆಸ್ಟ್ ಸಾಮ್ರಾಜ್ಯವನ್ನ ಉಳಿಸಿಕೊಳ್ಳಬೇಕು ಎಂದರೆ ಕೊಹ್ಲಿ ಘರ್ಜಿಸ ಬೇಕು.
2019ರ ಬಳಿಕ ಕರಿಯರ್ನಲ್ಲಿ ನೀರಿಕ್ಷೆನೇ ಮಾಡಲಾಗದಂತ ಕುಸಿತ ಕಂಡ ವಿರಾಟ್ ಕೊಹ್ಲಿ, ಸದ್ಯ ಕಮ್ಬ್ಯಾಕ್ ಮಾಡಿದ್ದಾರೆ. ಕಳೆದ ಏಷ್ಯಾಕಪ್ ಟೂರ್ನಿಯಲ್ಲಿ ಸೆಂಚುರಿ ಸಿಡಿಸಿ ಘರ್ಜಿಸಿದ ಕೊಹ್ಲಿ ಆ ಬಳಿಕ ರನ್ ಕೊಳ್ಳೆ ಹೊಡೆದಿದ್ದಾರೆ. ಆದ್ರೆ, ಕೊಹ್ಲಿಯ ಆರ್ಭಟ, ಅಬ್ಬರ ಎಲ್ಲ ವೈಟ್ಬಾಲ್ ಕ್ರಿಕೆಟ್ಗೆ ಸೀಮಿತವಾಗಿದೆ. ರೆಡ್ ಬಾಲ್ ಕ್ರಿಕೆಟ್ನಲ್ಲಿ ಅದೇ ರಾಗ.. ಅದೇ ಹಾಡು.
ಅದಃಪತನದ ಹಾದಿಯಲ್ಲಿ ಕಿಂಗ್ ಕೊಹ್ಲಿಯ ಟೆಸ್ಟ್ ಸಾಮ್ರಾಜ್ಯ.!
ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ಅಂದರೆ ಪ್ರಾಣ. ಫ್ಯೂರೆಸ್ಟ್ ಫಾರ್ಮೆಟ್ನಲ್ಲಿ ಆಡೋದು ಮತ್ತು ಸಾಧಿಸೋದು ಎರಡೂ ಸಿಕ್ಕಾಪಟ್ಟೆ ಇಷ್ಟ. ಆದ್ರೆ, ಕಳೆದ ಕೆಲ ವರ್ಷಗಳಿಂದ ಈ ಲಾಂಗೆಸ್ಟ್ ಫಾರ್ಮೆಟ್ನಲ್ಲಿ ಕೊಹ್ಲಿಯ ಆಟ ನಡೆಯುತ್ತಿಲ್ಲ. ಟೆಸ್ಟ್ ಕ್ರಿಕೆಟ್ನಲ್ಲಿ ಸಾಮ್ರಾಟ್ ವಿರಾಟ್ ಕೊಹ್ಲಿಯ ಸಾಮ್ರಾಜ್ಯ ಅಧಃಪತನದ ಹಾದಿ ಹಿಡಿದಿದೆ.
3 ವರ್ಷದಿಂದ ಟೆಸ್ಟ್ ಫಾರ್ಮೆಟ್ ಫುಲ್ ಡಲ್..!
ಒಂದು ಕಾಲದಲ್ಲಿ 50+ ಇದ್ದ ಕೊಹ್ಲಿಯ ಟೆಸ್ಟ್ ಸರಾಸರಿ ಈಗ ಅದಕ್ಕಿಂತ ಕೆಳಕ್ಕೆ ಕುಸಿದಿದೆ. ದಾಖಲೆಯ 937ರ ರೇಟಿಂಗ್ಸ್ನೊಂದಿಗೆ ವಿಶ್ವದ ನಂ.1 ಟೆಸ್ಟ್ ಕ್ರಿಕೆಟರ್ ಆಗಿ ಮೆರೆದಾಡಿದ್ದ ಕೊಹ್ಲಿಗೆ ಈಗ ಟಾಪ್ 10ರಲ್ಲೂ ಸ್ಥಾನವಿಲ್ಲ. ಕಳೆದ 3 ವರ್ಷದಿಂದ ನೀಡಿರುವದು ನಿರಾಶದಾಯಕ ಪ್ರದರ್ಶನ. ಕಳೆದ ಮಾರ್ಚ್ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಅಹಮದಾಬಾದ್ನಲ್ಲಿ ಸೆಂಚುರಿ ಸಿಡಿಸಿದ್ದು ಬಿಟ್ರೆ, ಅದಕ್ಕೂ ಹಿಂದೆ ಹಾಗೂ ಅದಾದ ಮೇಲೆ ನೀಡಿರುವುದು ಕಳಪೆ ಫರ್ಪಾಮೆನ್ಸ್.
2019ರ ನವೆಂಬರ್ ಬಳಿಕ ಟೆಸ್ಟ್ನಲ್ಲಿ ಕೊಹ್ಲಿ
2019ರ ನವೆಂಬರ್ ಬಳಿಕ ಟೆಸ್ಟ್ ಕ್ರಿಕೆಟ್ನಲ್ಲಿ 44 ಇನ್ನಿಂಗ್ಸ್ಗಳನ್ನು ಆಡಿರುವ ಕೊಹ್ಲಿ ಗಳಿಸಿರೋದು ಕೇವಲ 1,277 ರನ್ ಮಾತ್ರ. 29.69ರ ಸಾಧಾರಣ ಸರಾಸರಿಯನ್ನ ಹೊಂದಿರೋ ಕೊಹ್ಲಿ, 1 ಶತಕ 6 ಅರ್ಧಶತಕ ಸಿಡಿಸಿದ್ದಾರೆ. ಇದರ ಮಧ್ಯೆ 4 ಬಾರಿ ಡಕೌಟ್ ಆಗಿದ್ದಾರೆ.
‘ಫ್ಯಾಬ್-4’ ರೇಸ್ನಲ್ಲಿ ವಿರಾಟ್ ಕೊಹ್ಲಿನೇ ಇಲ್ಲ..!
ಕೇನ್ ವಿಲಿಯಮ್ಸನ್, ಸ್ಟೀವ್ ಸ್ಮಿತ್, ಜೋ ರೂಟ್ ಹಾಗೂ ವಿರಾಟ್ ಕೊಹ್ಲಿ. ಈ ನಾಲ್ವರ ಆಟಕ್ಕೆ ಫಿದಾ ಆದ ಕ್ರಿಕೆಟ್ ಜಗತ್ತು ಇವರನ್ನ ಫ್ಯಾಬ್-4ಗಳೆಂದು ಕರೆದಿತ್ತು. ಇವರ ಮಧ್ಯೆ ಪೈಪೋಟಿ ಹೇಗಿತ್ತು ಅಂದ್ರೆ, ಪಂದ್ಯದಿಂದ ಪಂದ್ಯಕ್ಕೆ ಸರಣಿಯಿಂದ ಸರಣಿಗೆ ಱಂಕಿಂಗ್ ಪಟ್ಟಿಯಲ್ಲಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸ್ತಾ ಇದ್ರು. ಈಗಲೂ ಆ ಪೈಪೋಟಿ ಹಾಗೇ ಇದೆ. ಆದ್ರೆ, ರೇಸ್ನಲ್ಲಿ ಕೊಹ್ಲಿ ಇಲ್ಲ. ಫ್ಯಾಬ್- 4 ಹೋಗಿ ಫ್ಯಾಬ್ 3 ಆಗಿದೆ.
‘ಈಗಿರೋದು ಫ್ಯಾಬ್-3 ಮಾತ್ರ’
‘ವಿರಾಟ್ ಕೊಹ್ಲಿ, ಜೋ ರೂಟ್, ಸ್ಟೀವ್ ಸ್ಮಿತ್ ಮತ್ತು ಕೇನ್ ವಿಲಿಯಮ್ಸನ್ ಒಂದು ಕಾಲದಲ್ಲಿ ‘ಫ್ಯಾಬ್-4’ ಆಗಿದ್ರು. ಡೇವಿಡ್ ವಾರ್ನರ್ ಹೆಸರೂ ಪೈಪೋಟಿಯಲ್ಲಿತ್ತು. ನಾವು 2014ರಿಂದ 2019ರವರೆಗಿನ ಅವಧಿಯ ಬಗ್ಗೆ ಮಾತನಾಡುತ್ತಿದ್ದೇವೆ. ಆದ್ರೆ, ಈಗ ‘ಫ್ಯಾಬ್-4’ ಇಲ್ಲ. ಈಗಿರೋದು ಫ್ಯಾಬ್-3 ಮಾತ್ರ’
ಆಕಾಶ್ ಚೋಪ್ರಾ, ಮಾಜಿ ಕ್ರಿಕೆಟಿಗ
ವಿಂಡೀಸ್ ವಿರುದ್ಧ ಮಾಡಲೇಬೇಕು ಕಮ್ಬ್ಯಾಕ್.!
ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ನಲ್ಲಿ ಕೊಹ್ಲಿ ಕಮ್ಬ್ಯಾಕ್ ಮಾಡಲೇಬೇಕು. ಇಲ್ಲದಿದ್ರೆ, ಫ್ಯಾಬ್4 ರೇಸ್ನಿಂದ ಕೊಹ್ಲಿ ಹೊರಬೀಳೋದು ಕನ್ಫರ್ಮ್. ಅಷ್ಟೇ ಅಲ್ಲ.. ಕೊಹ್ಲಿ ಸಾಮ್ರಾಜ್ಯಕ್ಕೆ ಪಾಕ್ ಕ್ಯಾಪ್ಟನ್ ಬಾಬರ್ ಅಝಂ ಎಂಟ್ರಿ ಕೊಡೋ ಸಾಧ್ಯತೆಯೂ ದಟ್ಟವಾಗಿದೆ. ಕೊಹ್ಲಿ ರನ್ಗಳಿಕೆಗೆ ಟೆಸ್ಟ್ ಮಾದರಿಯಲ್ಲಿ ಪರದಾಡ್ತಿದ್ರೆ, ಬಾಬರ್ ಅಝಂ ಕನ್ಸಿಸ್ಟೆಂಟ್ ಪರ್ಫಾಮೆನ್ಸ್ ನೀಡ್ತಿದ್ದಾರೆ. ಕೆರಿಬಿಯನ್ ನಾಡಲ್ಲಿ ಯಾಮಾರಿದ್ರೆ ಸಾಮ್ರಾಟ್ ಕೊಹ್ಲಿಯ ಸಾಮ್ರಾಜ್ಯ ಬಾಬರ್ ಪಾಲಾಗಲಿದೆ.
ಟೀಕೆಗಳಿಗೆ ಉತ್ತರ ಕೊಡ್ತಾರಾ ಕಿಂಗ್ ಕೊಹ್ಲಿ..?
ವೈಟ್ಬಾಲ್ ಫಾರ್ಮೆಟ್ ಕೊಹ್ಲಿಯ ಆಟವನ್ನ ಸದ್ಯ ಎಲ್ರೂ ಕೊಂಡಾಡ್ತಿದ್ದಾರೆ. ಇದ್ರ ಜೊತೆಗೆ ಟೆಸ್ಟ್ ಕ್ರಿಕೆಟ್‌ನ ಕಳಪೆ ಆಟ ಬಹಿರಂಗವಾಗಿ ಟೀಕೆ ಮಾಡ್ತಿದ್ದಾರೆ. ಈಗಾಗಲೇ ಟಿ20 ತಂಡದಲ್ಲಿ ಸ್ಥಾನವನ್ನ ಬಹುತೇಕ ಕಳೆದುಕೊಂಡಿರುವ ಕೊಹ್ಲಿ, ಟೆಸ್ಟ್ ಫಾರ್ಮೆಟ್ನಿಂದ ಔಟ್ ಆಗ್ತಾರೆ ಎಂದು ಭವಿಷ್ಯ ನುಡಿತಿದ್ದಾರೆ. ಕಳೆಪೆ ಪ್ರದರ್ಶನ ಮುಂದಿವರೆದ್ರೆ, ಭವಿಷ್ಯ ನಿಜವಾಗೋದ್ರಲ್ಲಿ ಅನುಮಾನವೇ ಇಲ್ಲ. ಹೀಗಾಗಿ ಇಂಡೀಸ್ ಸರಣಿಯಲ್ಲಿ ವಿರಾಟ್ ಎಚ್ಚರಿಕೆಯ ಆಟ ಆಡಲೇಬೇಕು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ