ಹೂವಿನ ವ್ಯಾಪಾರ ಮಾಡುತ್ತಿದ್ದ ಗಂಡನನ್ನೇ ಕೊಂದಳು
ತನಗಿಂತ ಚಿಕ್ಕ ವಯಸ್ಸಿನ ಲವ್ವರ್ ಜೊತೆ ಸೇರಿ ಮರ್ಡರ್
ಮೃತದೇಹವನ್ನು ಸುಡಲು ಯತ್ನಿಸಿ ವಿಫಲ; ಮುಂದೇನು ಮಾಡಿದ್ರು?
ಪತ್ನಿ ಮತ್ತು ಪ್ರಿಯಕರ ಸೇರಿ ಪತಿಯನ್ನೇ ಹತ್ಯೆಗೈದ ಘಟನೆ ತಮಿಳುನಾಡಿನ ತಿರುಚ್ಚಿಯಲ್ಲಿ ನಡೆದಿದೆ. 26 ವರ್ಷದ ವಿನೋಧಿನಿ ತನ್ನ 23 ವರ್ಷದ ಲವ್ವರ್ ಭಾರತಿ ಮತ್ತು ಆತನ ಸ್ನೇಹಿತರ ಜೊತೆ ಸೇರಿಕೊಂಡು ಗಂಡನನ್ನೇ ಕೊಂದಿದ್ದಾಳೆ. ಸದ್ಯ ಇಬ್ಬರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
30 ವರ್ಷದ ಪ್ರಭು ಕೊಲೆಯಾದ ದುರ್ದೈವಿ. ಈತ ಹೂವಿನ ವ್ಯಾಪಾರ ಮಾಡುತ್ತಾ ಜೀವನ ನಡೆಸುತ್ತಿದ್ದನು. ಆದರೆ ಅತ್ತ ಪತ್ನಿ ವಿನೋಧಿನಿ ಪ್ರಿಯಕರನ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದು, ಕೊನೆಗೆ ಈ ವಿಚಾರ ಪತಿಗೆ ತಿಳಿದಿದೆ. ಇದೇ ಕಾರಣಕ್ಕೆ ಕೊಲೆ ಮಾಡಲಾಗಿದೆ.
ಪತ್ನಿ ವಿನೋಧಿನಿ ತನ್ನ ಪತಿಯನ್ನು ಕೊಲ್ಲಲು ಮಾತ್ರೆ ನೀಡಿದ್ದಾಳೆ. ಬಳಿಕ ಲವ್ವರ್ ಭಾರತಿ ಮತ್ತು ಆತನ ಸ್ನೇಹಿತರ ಸಹಾಯದಿಂದ ಪ್ರಭುವನ್ನು ಕೊಲೆ ಮಾಡಿದ್ದಾರೆ. ಬಳಿಕ ಈ ವಿಚಾರ ಯಾರಿಗೂ ತಿಳಿಯಬಾರದೆಂದು ತಿರುಚಿ-ಮಧುರೈ ಹೈವೇ ಬಳಿ ಮೃತದೇಹವನ್ನು ಸುಡಲು ಯತ್ನಿಸಿದ್ದಾರೆ. ಆದರೆ ವಿಪರೀತ ಮಳೆ ಇದ್ದ ಕಾರಣ ಮೃತದೇಹವನ್ನು ಸುಡಲು ಸಾಧ್ಯವಾಗಿಲ್ಲ. ಬಳಿಕ ಪ್ರಭು ಮೃತದೇಹವನ್ನು ತುಂಡರಿಸಿ ಕಾವೇರಿ ಮತ್ತು ಕೊಲ್ಲಿ ಡ್ಯಾಂಗೆ ಬೀಸಾಕಿದ್ದಾರೆ.
ನವೆಂಬರ್ 5ರಂದು ಪ್ರಭು ಅಣ್ಣ ಆತನ ಮನೆಗೆ ಹೋಗಿ ವಿನೋಧಿನಿಯನ್ನ ವಿಚಾರಿಸಿದ್ದಾನೆ. ಈ ವೇಳೆ ಆತನ ಪತ್ನಿ ಮಾರುಕಟ್ಟೆಗೆ ಹೋದವರು ಮತ್ತೆ ಹಿಂತಿರುಗಿ ಬಂದಿಲ್ಲ ಎಂದು ಹೇಳಿದ್ದಾಳೆ. ಈ ವೇಳೆ ಅಣ್ಣ ಮಾರ್ಕೆಟ್ಗೆ ಹೋಗಿ ಪ್ರಭುವನ್ನು ಹುಡುಕಾಡಿದ್ದಾರೆ. ಎಲ್ಲೂ ಕಾಣಿಸದ ತಮ್ಮನ ಕುರಿತು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
ದೂರಿನ ಅನ್ವಯ ಪೊಲಿಸರು ಅನುಮಾನಗೊಂಡ ಪತ್ನಿ ವಿನೋಧಿನಿಯನ್ನು ವಿಚಾರಿಸಿದ್ದಾರೆ. ಈ ವೇಳೆ ಲವ್ವರ್ ಭಾರತಿ ಮತ್ತು ಸ್ನೇಹಿತರಾದ ರುಬಿನ್ ಬಾಬು, ದಿವಾಕರ್, ಸರ್ವನ್ ಜೊತೆ ಸೇರಿ ಕೊಲೆ ಮಾಡಿರುವುದಾಗಿ ಬಾಯಿಬಿಟ್ಟಿದ್ದಾಳೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ