ರಾತ್ರಿ ನಡೆದ ಭೀಕರ ಕೃತ್ಯಕ್ಕೆ ಬೆಚ್ಚಿಬಿದ್ದ ದೆಹಲಿ ಜನ
ಡಿಲಿವರಿ ಬಾಯ್ಗೆ ಚಾಕುವಿನಿಂದ ಇರಿದ ಮಹಿಳೆ
ಚಾಕುವಿನಿಂದ ಇರಿದ ಮಹಿಳೆ ಯಾರು? ಕಾರಣವೇನು?
ನವದೆಹಲಿ: ಅಡ್ರೆಸ್ ಕೇಳುವ ನೆಪದಲ್ಲಿ ಬಂದ ಮಹಿಳೆ ಡೆಲಿವರಿ ಬಾಯ್ಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿರೋ ಘಟನೆ ದೆಹಲಿಯಲ್ಲಿ ನಡೆದಿದೆ. ದ್ವಾರಕಾದ ಸೆಕ್ಟರ್ 23 ಎಂಬಲ್ಲಿ ಈ ಕೃತ್ಯ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ಶುಕ್ರವಾರ ರಾತ್ರಿ ಡಿಲಿವರಿ ಬಾಯ್ ಓರ್ವ ಸ್ಕೂಟರ್ ಮೇಲೆ ಕೂತಿದ್ದ. ಆಗ ಮಹಿಳೆ ಡೆಲಿವರಿ ಬಾಯ್ಗೆ ಅಡ್ರೆಸ್ ಕೇಳಲು ಮುಂದಾದಳು. ಈ ವೇಳೆ ಡೆಲಿವರಿ ಬಾಯ್ ಮಾತಾಡಿಸಲು ಹಿಂದೆ ತಿರುಗಿದಾಗ ಮಹಿಳೆ ಕೂಡಲೇ ಚಾಕುವಿನಿಂದ ಆತನ ಕುತ್ತಿಗೆಗೆ ಇರಿದಿದ್ದಾಳೆ. ಜತೆಗೆ ಡೆಲಿವರಿ ಬಾಯ್ ಸ್ಕೂಟರ್ ಕೀಯನ್ನು ತೆಗೆದು ಎಸೆಯುತ್ತಾಳೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇನ್ನು, ಡೆಲಿವರಿ ಬಾಯ್ ನೆರವಿಗೆ ಧಾವಿಸಿದ ಸ್ಥಳೀಯರನ್ನು ಕೂಡ ಮಹಿಳೆ ನೂಕುತ್ತಾಳೆ. ಹಾಗೆಯೇ ಸೈಕೋ ರೀತಿ ಸ್ಕೂಟರ್ ಟೈರಿಗೂ ಹಲವು ಬಾರಿ ಚಾಕುವಿನಿಂದ ಇರಿಯುತ್ತಾಳೆ. ಯಾರಾದ್ರೂ ಆಕೆಯನ್ನು ಹಿಡಿದುಕೊಳ್ಳಲು ಮುಂದಾದರೆ ಚಾಕು ತೋರಿಸಿ ಬೆದರಿಕೆ ಹಾಕುತ್ತಾಳೆ.
ಜನ ವಿಷಯ ತಿಳಿಸುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಬಂದ ಪೊಲೀಸರು ಮಹಿಳೆಯಿಂದ ಚಾಕು ಕಸಿದುಕೊಳ್ಳುತ್ತಾರೆ. ಆಗಲೂ ಒಂದು ಕೋಲಿನಿಂದ ಪೊಲೀಸ್ ಮತ್ತು ಸ್ಥಳೀಯರ ಕಾರುಗಳ ಮೇಲೆ ದಾಳಿ ನಡೆಸಿ ವಿಚಿತ್ರವಾಗಿ ನಡೆದುಕೊಳ್ಳುತ್ತಾಳೆ.
ಸದ್ಯ ಪೊಲೀಸ್ರು ಕೇಸ್ ದಾಖಲಿಸಿಕೊಂಡು ಆಕೆಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. 42 ವರ್ಷದ ಈ ಮಹಿಳೆ ಫ್ಲಾಟ್ನಲ್ಲಿ ರೆಂಟ್ಗೆ ಇದ್ದು, ಎಲ್ಲರೊಂದಿಗೆ ಜಗಳ ಮಾಡುತ್ತಲೇ ಇರುತ್ತಾಳೆ ಎಂದಿದ್ದಾರೆ ಸ್ಥಳೀಯರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ