newsfirstkannada.com

ಅನ್ಯಾಯಕಾರಿ ಬ್ರಹ್ಮ.. ಸನ್ಯಾಸಿ ಯುವಕರೇ ಎಚ್ಚರ; ಮದುವೆ ಆಗ್ತೀನಿ ಅಂತ ಮೋಸ ಮಾಡ್ತಿದ್ದ ಆಂಟಿ ಅರೆಸ್ಟ್‌!

Share :

Published September 1, 2024 at 2:29pm

    ಲಕ್ಷಾಂತರ ರೂಪಾಯಿ ಹಣ ಪಡೆದು ಮೋಸ ಮಾಡುತ್ತಿದ್ದ ದೂರು ದಾಖಲು

    ಮ್ಯಾಟ್ರಿಮೋನಿಯಿಂದ ಯುವಕರನ್ನು ಪರಿಚಯ ಮಾಡಿಕೊಂಡು ಮೋಸ!

    ಗುಜರಾತ್​‌ನಲ್ಲಿ ನೆಲೆಸಿರುವ ಕುಂದಾಪುರ ನಿವಾಸಿಗೂ ವಂಚಿಸಿದ ಆರೋಪ

ಚಿಕ್ಕಬಳ್ಳಾಪುರ: ಮದುವೆ ಆಗೋದಾಗಿ ನಂಬಿಸಿ ಮೂವರು ಪುರುಷರಿಗೆ ವಂಚನೆ ಮಾಡುತ್ತಿದ್ದ ಮಹಿಳೆಯನ್ನು ಚಿಕ್ಕಬಳ್ಳಾಪುರ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಮೂಲದ ಕೋಮಲಾ ಬಂಧಿತ ಮಹಿಳೆ. ಬಂಧಿತ ಆರೋಪಿ ಕೋಮಲಾ ಗಂಡ ಸಾವನ್ನಪ್ಪಿ 6 ರಿಂದ 7 ವರ್ಷಗಳು ಕಳೆದಿತ್ತು.

ಇದನ್ನೂ ಓದಿ: 8 ಗಂಡಂದಿರ ಮುದ್ದಿನ ಹೆಂಡತಿ.. 6 ತಿಂಗಳಿಗೆ 1 ಮದುವೆಯಾಗಿ ನಾಟಕ; ಊಸರವಳ್ಳಿ ಬಣ್ಣ ಬಯಲಾಗಿದ್ದು ಹೇಗೆ? 

ಗಂಡನ ಕಳೆದುಕೊಂಡ ಮೇಲೆ ಮೋಜು‌ ಮಸ್ತಿಯ ಜೀವನಕ್ಕಾಗಿ‌ ವಿವಾಹವಾಗುವುದಾಗಿ ನಂಬಿಸಿ ಹಲವು ಪುರುಷರ ಬಳಿ ಹಣ ಪಡೆದು ವಂಚನೆ ಮಾಡುತ್ತಿದ್ದ ಕಿಲಾಡಿ ಲೇಡಿಯನ್ನ ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ಮೊದಲು ಕೋಮಲಾ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರದ ರಾಘವೇಂದ್ರ ಎಂಬುವವರನ್ನ ಮ್ಯಾಟ್ರಿಮೋನಿ ವೆಬ್​ಸೈಟ್ ಮೂಲಕ ಪರಿಚಯ ಮಾಡಿಕೊಂಡು ಆತನಿಂದ 7 ಲಕ್ಷ 40 ಸಾವಿರ ಪೀಕಿದ್ದಳು ಎನ್ನಲಾಗಿದೆ. ಹೀಗಾಗಿ ರಾಘವೇಂದ್ರ ದೂರಿನ ಮೇರೆಗೆ ಕೋಮಲಾಳನ್ನ ಬಂಧಿಸಿ ವಿಚಾರಣೆ ನಡೆಸಲಾಗಿದೆ.

ಇದನ್ನೂ ಓದಿ: ಸೀರಿಯಲ್​ನಲ್ಲಿ ತಾಯಿ.. ರಿಯಲ್​​ ಲೈಫ್​ನಲ್ಲಿ ಸಖತ್​​ ಹಾಟ್​​ ಗರ್ಲ್​​; ನಟಿ ಫೋಟೋಸ್​ಗೆ ಫ್ಯಾನ್ಸ್​ ಶಾಕ್

ವಿಚಾರಣೆ ವೇಳೆ ಈಕೆ ಇದೇ ರೀತಿ ಗುಜರಾತ್​‌ನಲ್ಲಿ ನೆಲೆಸಿರುವ ಕುಂದಾಪುರ ನಿವಾಸಿ ರಾಘವೇಂದ್ರ ಎಂಬುವವರಿಗೆ ಮೋಸ ಮಾಡಿರೋದು ಬೆಳಕಿಗೆ ಬಂದಿದೆ. ಜೊತೆಗೆ ಬೆಂಗಳೂರಿನ‌ ನಾಗರಾಜು ಎಂಬುವವರ ಬಳಿಯೂ 1 ಲಕ್ಷ 50 ಸಾವಿರ ಪಡೆದು ಮೋಸ ಮಾಡಿರುವುದು ಗೊತ್ತಾಗಿದೆ. ಮೂರು ಪ್ರಕರಣಗಳಲ್ಲೂ ಆಯಾ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದೆ. ಈಕೆ ಗಂಡ ಕೆಪಿಟಿಸಿಲ್ ನೌಕರನಾಗಿದ್ದು 2017ರಲ್ಲಿ ಮರಣ ಹೊಂದಿದ್ದರು. ಗಂಡ ಮೃತಪಟ್ಟಿರುವ ಕಾರಣ ಆತನ 6 ಕೋಟಿ ಪರಿಹಾರದ ಹಣಕ್ಕೆ ಟ್ಯಾಕ್ಸ್ ಕಟ್ಟಬೇಕು ಅಂತ ಹೇಳಿ ಹಣ ವಸೂಲಿ ಮಾಡುತ್ತಿದ್ದಳು. ಸದ್ಯ ಚಿಕ್ಕಬಳ್ಳಾಪುರ ಸಿಇಎನ್ (ಸೈಬರ್ ಠಾಣೆ) ಠಾಣೆ ಪೊಲೀಸರು ಈಕೆಯನ್ನ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅನ್ಯಾಯಕಾರಿ ಬ್ರಹ್ಮ.. ಸನ್ಯಾಸಿ ಯುವಕರೇ ಎಚ್ಚರ; ಮದುವೆ ಆಗ್ತೀನಿ ಅಂತ ಮೋಸ ಮಾಡ್ತಿದ್ದ ಆಂಟಿ ಅರೆಸ್ಟ್‌!

https://newsfirstlive.com/wp-content/uploads/2024/09/FAKE-WOMEN1.jpg

Load More