newsfirstkannada.com

ಸಿಎಂ ಸಿದ್ದರಾಮಯ್ಯ ಮುಂದೆ ಗಳಗಳನೇ ಕಣ್ಣೀರಿಟ್ಟ ಮಹಿಳೆ; ಅಸಲಿಗೆ ಆಗಿದ್ದೇನು..?

Share :

09-09-2023

    ಸಿಎಂ ಸಿದ್ದರಾಮಯ್ಯ ಮುಂದೆ ಕಣ್ಣೀರು ಹಾಕಿದ ಸೈನಾಜ್ ದೊಡ್ಡಮನಿ!

    ‘ನಮ್ಮ‌ ಭೂಮಿ ನಮಗೆ ಕೊಡಿಸಿ’ ಎಂದು ಸಿಎಂ ಮುಂದೆ ಮಹಿಳೆ ಕಣ್ಣೀರು‌

    ಜಿಲ್ಲಾಧಿಕಾರಿಯನ್ನ ಕರೆದು ಮಹಿಳೆ ಕಣ್ಣೀರಿಗೆ ಕಾರಣ ತಿಳಿದುಕೊಂಡ ಸಿಎಂ

ಹುಬ್ಬಳ್ಳಿ: ಭೂಮಿ ವಿಚಾರವಾಗಿ ಮನವಿ ಸಲ್ಲಿಸಲು ಬಂದಿದ್ದ ಮಹಿಳೆಯೊಬ್ಬರು ಸಿಎಂ ಸಿದ್ದರಾಮಯ್ಯ ಅವರ ಮುಂದೆ ಕಣ್ಣೀರು ಹಾಕಿರೋ ಘಟನೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ತಾಜ್ ನಗರದ ನಿವಾಸಿಯಾಗಿರೋ ಸೈನಾಜ್ ದೊಡ್ಡಮನಿ ಕಣ್ಣೀರಿಟ್ಟ ಮಹಿಳೆ. ಸೈನಾಜ್ ದೊಡ್ಡಮನಿ ಕುಟುಂಬಸ್ಥರು ಬೊಮ್ಮಸಮುದ್ರದಲ್ಲಿ ಉಳುಮೆ ಮಾಡುತ್ತಿದ್ದ ಭೂಮಿಯನ್ನು ಅರಣ್ಯ ಇಲಾಖೆಗೆ ಒಳಪಡುತ್ತೆ ಎಂದು ಅಧಿಕಾರಿಗಳು ದರ್ಪ ತೋರಿಸಿದ್ದರಂತೆ. ಹೀಗಾಗಿ ಸಿದ್ದರಾಮಯ್ಯ ಬಳಿ ಮನವಿ ಕೊಟ್ಟು ‘ನಮ್ಮ‌ ಭೂಮಿ ನಮಗೆ ಕೊಡಿಸಿ’ ಎಂದು ಸೈನಾಜ್ ದೊಡ್ಡಮನಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸಿಎಂ ಸಿದ್ದರಾಮಯ್ಯನವರು ಭೇಟಿ ನೀಡಿದ್ದರು. ಇದೇ ವೇಳೆ ಸಿಎಂ ಸಿದ್ದರಾಮಯ್ಯ ಅವರನ್ನು ನೋಡುತ್ತಿದ್ದಂತೆ ಮಹಿಳೆ ಮನವಿ ಸಲ್ಲಿಸುತ್ತಾ ಕಣ್ಣೀರು ಹಾಕಿದ್ದಾರೆ. ಬಳಿಕ ಸಿಎಂ ಮಹಿಳೆಯನ್ನು ಸಮಧಾನಗೊಳಿಸಿ ಧಾರವಾಡ ಜಿಲ್ಲಾಧಿಕಾರಿ ಗುರುದತ್ ಹೆಗಡೆಗೆ ಮಾಹಿತಿ ಪಡೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿಎಂ ಸಿದ್ದರಾಮಯ್ಯ ಮುಂದೆ ಗಳಗಳನೇ ಕಣ್ಣೀರಿಟ್ಟ ಮಹಿಳೆ; ಅಸಲಿಗೆ ಆಗಿದ್ದೇನು..?

https://newsfirstlive.com/wp-content/uploads/2023/09/siddu-5.jpg

Load More