newsfirstkannada.com

×

ಅಯ್ಯೋ ಮಸಣವ್ವ.. ದೇವಸ್ಥಾನಕ್ಕೆ ಕನ್ನ ಹಾಕಿದ ಕಳ್ಳರನ್ನು ನೋಡಿದ ಮಹಿಳೆಯ ದಾರುಣ ಸಾವು; ಆಗಿದ್ದೇನು?

Share :

Published September 26, 2024 at 4:47pm

    ಸಗಣಿ ಎತ್ತಿ ತಿಪ್ಪೆಗೆ ಎಸೆಯಲು ಹೋಗಿದ್ದಾಗ ನಡೆದ ಘಟನೆ

    ಶಿಂದೊಳ್ಳಿ ಗ್ರಾಮದಲ್ಲಿ ಕಳ್ಳರಿಂದಲೇ ಅಮಾನವೀಯ ಕೃತ್ಯ

    ಕಳ್ಳರ ಕೃತ್ಯಕ್ಕೆ ಪ್ರಾಣಕಳೆದುಕೊಂಡ ಮಹಿಳೆ ಭಾರತಿ ಪೂಜಾರಿ

ಬೆಳಗಾವಿ: ಕಳ್ಳರ ಕೃತ್ಯ ನೋಡಿದ ಮಹಿಳೆಯನ್ನೇ ಬಾವಿಗೆ ತಳ್ಳಿ ಕಳ್ಳರು ಕೊಲೆಗೈದ ಅಮಾನವೀಯ ಘಟನೆ ಶಿಂದೊಳ್ಳಿ ಗ್ರಾಮದಲ್ಲಿ ನಡೆದಿದೆ. ಭಾರತಿ ಪೂಜಾರಿ (48) ಮೃತ ದುರ್ದೈವಿ. ಇಂದು ಬೆಳಂ ಬೆಳಗ್ಗೆ ಶಿಂದೊಳ್ಳಿಯ ಮಸಣವ್ವ ದೇವಸ್ಥಾನಕ್ಕೆ ಕಳ್ಳರು ಕನ್ನ ಹಾಕಿದ್ದರು.

ಇದನ್ನೂ ಓದಿ: ಮುಡಾ ಕೇಸ್​; ಸಿಎಂ ಸಿದ್ದರಾಮಯ್ಯ ವಿರುದ್ಧ ಯಾವ್ಯಾವ IPC ಸೆಕ್ಷನ್​ ಏನ್ ಹೇಳುತ್ತೆ?

ಅದೇ ದಾರಿಯಲ್ಲಿ ಮನೆಯ ದನಕರಗಳ ಸಗಣಿ ಎತ್ತಿ ತಿಪ್ಪೆಗೆ ಎಸೆಯಲು ಮಹಿಳೆ ಹೋಗಿದ್ದಾಳೆ. ಆಗ ಆಕೆಯ ಮನೆ ಪಕ್ಕದಲ್ಲಿದ್ದ ಮಸಣವ್ವ ದೇಗುಲದಲ್ಲಿ ಕಳ್ಳರು ಆಭರಣಗಳನ್ನು ಕಳ್ಳತನ ಮಾಡುತ್ತಿದ್ದರು. ಆಗ ದೇಗುಲ ಕಳ್ಳತನ ಮಾಡ್ತಿದ್ದ ಕಳ್ಳರನ್ನು ಭಾರತಿ ಎಂಬುವವರು ನೋಡಿದ್ದಾರೆ.

ಇದನ್ನೇ ನೋಡಿದ ಕಳ್ಳರು ಕೃತ್ಯ ಬೆಳಕಿಗೆ ಬರಬಾರದೆಂದು ಮಹಿಳೆಯನ್ನು ಹೊತ್ತೊಯ್ದು ದೇಗಲದ ಹಿಂದಿದ್ದ ಬಾವಿಗೆ ಎಸೆದಿದ್ದಾರೆ. ಆಗ ಭಾರತಿ ಮನೆಗೆ ಬಾರದಾಗ ಆತಂಕಗೊಂಡಿರುವ ಕುಟುಂಬಸ್ಥರ ಹುಡುಕಾಟ ನಡೆಸಿದ್ದಾರೆ. ದೇಗುಲ ಎದುರು ಸಗಣಿ ಬುಟ್ಟಿ, ಬಾವಿ ಎದುರು ಮಹಿಳೆ ಚಪ್ಪಳಿ ನೋಡಿದ ಕುಟುಂಬಸ್ಥರು ಗಾಬರಿಗೊಂಡು ತಕ್ಷಣವೇ ಮಾರಿಹಾಳ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಆ ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ತಪಾಸಣೆ ನಡೆಸುತ್ತಿದ್ದ ವೇಳೆ ಬಾವಿಯಲ್ಲಿ ಭಾರತಿ ಪೂಜಾರಿ ಶವವಾಗಿ ಪತ್ತೆಯಾಗಿದ್ದಾರೆ. ಸ್ಥಳೀಯರೇ ಕಳ್ಳತನ ಮಾಡಿ ಗೊತ್ತಾಗಬಾರದೆಂದು ಈ ಕೃತ್ಯ ಎಸಗಿದ್ದಾರೆಂದು ಭಾರತಿ ಪೋಷಕರ ಆರೋಪ ಮಾಡಿದ್ದಾರೆ. ಸದ್ಯ ಮಸಣವ್ವ ದೇಗುಲದಲ್ಲಿನ ಬೆಳ್ಳಿ ಆಭರಣ ಕದ್ದು ಪರಾರಿಯಾಗಿರೋ ಕಳ್ಳರಿಗಾಗಿ ಪೊಲೀಸರು ಬಲೆ ಬಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಯ್ಯೋ ಮಸಣವ್ವ.. ದೇವಸ್ಥಾನಕ್ಕೆ ಕನ್ನ ಹಾಕಿದ ಕಳ್ಳರನ್ನು ನೋಡಿದ ಮಹಿಳೆಯ ದಾರುಣ ಸಾವು; ಆಗಿದ್ದೇನು?

https://newsfirstlive.com/wp-content/uploads/2024/09/bgm.jpg

Load More