newsfirstkannada.com

ವಾಕಿಂಗ್ ಹೋಗಿದ್ದ ಮಹಿಳೆ ಶವವಾಗಿ ಪತ್ತೆ.. ಅತ್ಯಾಚಾರ ಮಾಡಿ ಬಳಿಕ ಕೊಲೆ; ಕುಟುಂಬಸ್ಥರು ಆರೋಪ

Share :

13-08-2023

    ಅನುಮಾನಾಸ್ಪದ ರೀತಿಯಲ್ಲಿ ಮಹಿಳೆ ಶವ ಪತ್ತೆ

    ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಶಂಕೆ..!

    ಬನ್ನೇರುಘಟ್ಟದ ಭೂತಾನಹಳ್ಳಿಯಲ್ಲಿ ಘಟನೆ

ಬೆಂಗಳೂರು: ನಿನ್ನೆ ಬಾಲಕನ ಜೊತೆ ವಾಕಿಂಗ್​ ಹೋಗಿದ್ದ ಮಹಿಳೆ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಬನ್ನೇರುಘಟ್ಟ ಸಮೀಪದ ಭೂತಾನಹಳ್ಳಿಯ ನಿರ್ಜನ ಪ್ರದೇಶದಲ್ಲಿ ನಡೆದಿದೆ. ಇನ್ನು ಮಹಿಳೆಯನ್ನು ಅತ್ಯಾಚಾರ ಮಾಡಿ, ಕೊಲೆ ಮಾಡಲಾಗಿದೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.

ಬ್ಯಾಟರಾಯನದೊಡ್ಡಿಯ ಹಳೆ ಊರಿನ ನಿವಾಸಿ ಮುನಿರತ್ನ (38) ಶವವಾಗಿ ಪತ್ತೆಯಾಗಿರುವ ಮಹಿಳೆ. ನಿನ್ನೆ ಸಹೋದರಿಯ ಮಗನನ್ನು ಕರೆದುಕೊಂಡು ಮಹಿಳೆ ವಾಕಿಂಗ್ ಹೋಗಿದ್ದರು. ರಾತ್ರಿಯಾದರು ಮನೆಗೆ ಬಾರದ ಹಿನ್ನೆಲೆಯಲ್ಲಿ ಕುಟುಂಬಸ್ಥರ ಹುಡುಕಾಟ ನಡೆಸಿದ್ದಾರೆ. ಆಗ ರಾತ್ರಿ 8 ಗಂಟೆಗೆ ಸುಮಾರಿಗೆ ಭೂತಾನಹಳ್ಳಿಯ ನಿರ್ಜನ ಪ್ರದೇಶದಲ್ಲಿ ಬಾಲಕ ಪತ್ತೆಯಾಗಿದ್ದು ತಲೆ, ಕೈ, ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು ಬಾಲಕನನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇನ್ನು ಬಾಲಕ ಸಿಕ್ಕಿರುವ ಸ್ಥಳದಿಂದ ಸಮೀಪದಲ್ಲೇ ಮಹಿಳೆಯ ಶವ ಪತ್ತೆಯಾಗಿದೆ. ಆಕೆಯ ದೇಹದ ಮೇಲೂ ಗಾಯದ ಗುರುತುಗಳು ಪತ್ತೆಯಾಗಿವೆ. ಹೀಗಾಗಿ ಅತ್ಯಾಚಾರ ಮಾಡಿ ಬಳಿಕ ಕೊಲೆ ಮಾಡಿದ್ದಾರೆ ಎಂದು ಕುಟುಂಬಸ್ಥರು ಶಂಕಿಸಿ ಆರೋಪಿಸಿದ್ದಾರೆ. ಇನ್ನು ಘಟನೆ ಸಂಬಂಧ FSL ತಂಡ ಹಾಗೂ ಬನ್ನೇರುಘಟ್ಟ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಾಕಿಂಗ್ ಹೋಗಿದ್ದ ಮಹಿಳೆ ಶವವಾಗಿ ಪತ್ತೆ.. ಅತ್ಯಾಚಾರ ಮಾಡಿ ಬಳಿಕ ಕೊಲೆ; ಕುಟುಂಬಸ್ಥರು ಆರೋಪ

https://newsfirstlive.com/wp-content/uploads/2023/08/BNG_WOMAN_DIE.jpg

Load More