/newsfirstlive-kannada/media/post_attachments/wp-content/uploads/2024/08/wayanad-23.jpg)
ವಯನಾಡಿನ ಭೂಕುಸಿತದಲ್ಲಿ ಅನೇಕ ಜನರನ್ನು, ಕುಟುಂಬಗಳನ್ನು ಬದುಕಿಸಿದ ಮಹಿಳೆಗೆ ಮಾತ್ರ ಅದೃಷ್ಟವೇ ಇಲ್ಲ. ಭೀಕರ ಭೂಕುಸಿತಕ್ಕೆ ಸಿಲುಕಿ ನೀತು ಜೋಜೊ ಸಾವನ್ನಪ್ಪಿದ್ದರು. ಆದರೆ ಆಕೆ ಮಾಡಿದ ಒಂದು ಕೆಲಸದಿಂದ ಇಂದು ಹಲವಾರು ಜನರು ಬದುಕಿದ್ದಾರೆ. ಆಕೆಯ ಹೆಸರಿನಿಂದ ಜೀವ ಉಳಿಸಿಕೊಂಡಿದ್ದಾರೆ ಎಂದು ನಂಬಲೇಬೇಕು.
ಮೆಪ್ಪಾಡಿಯಲ್ಲಿ ಭೂಕುಸಿತ ಸಂಭವಿಸಿದಂತೆ ರಕ್ಷಣಾ ತಂಡಕ್ಕೆ ಮೊದಲ ಕರೆ ಮಾಡಿದ್ದೇ ನೀತು ಜೋಜೊ. ಭೂಕುಸಿತದ ಕರಾಳತೆಯನ್ನು ತಿಳಿಸಿ ತಕ್ಷಣವೇ ಆಗಮಿಸಿವಂತೆ ನೀತು ಜೋಜೊ ಕರೆ ಮಾಡಿ ಹೇಳಿದ್ದರು. ಆಕೆಯ ಮಾತಿನಿಂದ ಸ್ಥಳಕ್ಕಾಗಿಮಿಸಿದ ರಕ್ಷಣಾ ತಂಡಕ್ಕೆ ಕಂಡದ್ದು ಅಲ್ಲಿನ ಬದಲಾದ ಚಿತ್ರಣ. ಆದರೂ ರಕ್ಷಣಾ ಕಾರ್ಯಚರಣೆ ವೇಳೆ ಹಲವು ಕುಟುಂಬಗಳನ್ನು ಬದುಕಿಸಿದ್ದಾರೆ. ಆದರೆ ದುರಾದೃಷ್ಟ ನೀತು ಜೋಜೊ ಭೂಕುಸಿತ ಕರಾಳತೆಗೆ ಬಲಿಯಾದರು.
/newsfirstlive-kannada/media/post_attachments/wp-content/uploads/2024/08/WAYANAD-DAMEGE-22-1.jpg)
ಇದನ್ನೂ ಓದಿ: ಒಂದೇ ಕುಟುಂಬದ 16 ಮಂದಿ ಸಾವು.. ತನ್ನವರೆಲ್ಲರನ್ನು ಕಳೆದುಕೊಂಡು ಒಬ್ಬಂಟಿಯಾದ ಮನ್ಸೂರ್
ನೀತು ವಯನಾಡಿನ ಖಾಸಗಿ ಆಸ್ಪತ್ರೆಯೊಂದರ ಮಹಿಳಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಚುರಲ್ಮಲಾದಲ್ಲಿ ಭೂಕುಸಿತವಾದಂತೆ ರಕ್ಷಣೆ ಕೋರಿ ರಕ್ಷಣಾ ತಂಡಕ್ಕೆ ಕರೆ ಮಾಡಿ ತಿಳಿಸುತ್ತಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಅವರ ಮಾತನಾಡಿರುವ ಆಡಿಯೋ​​ ವೈರಲ್​ ಆಗುತ್ತಿದೆ.
ನೀತು ಫೋನಿನಲ್ಲಿ ‘ಸುತ್ತಮುತ್ತಲಿನ ಆರು ಕುಟುಂಬಗಳು ನಮ್ಮ ಮನೆಯಲ್ಲಿ ಆಶ್ರಯ ಪಡೆದಿವೆ. ಭೂಕುಸಿತದಿಂದಾಗಿ ಕಾರುಗಳು, ಮನೆಯೊಳಗೆ ನೀರು ತುಂಬಿವೆ’ ಎಂದು ಹೇಳಿದ್ದಾರೆ.
/newsfirstlive-kannada/media/post_attachments/wp-content/uploads/2024/08/WAYANAD-DAMAGE.jpg)
ಇದನ್ನೂ ಓದಿ: ಮೇಘಾ ಶೆಟ್ಟಿ ಫುಲ್ ಬ್ಯುಸಿ! ಒಂದಲ್ಲಾ.. ಎರಡಲ್ಲಾ ‘ಕೈವ’ ನಟಿ ಕೈಯಲ್ಲಿ ಎಷ್ಟು ಸಿನಿಮಾಗಳಿವೆ ಗೊತ್ತಾ?
‘ಚುರಲ್ಮಲಾದಲ್ಲಿ ಭೂಕುಸಿತವಾಗಿದೆ. ನಾನು ಇಲ್ಲಿ ಶಾಲೆಯ ಹಿಂದೆ ವಾಸಿಸುತ್ತಿದ್ದೇನೆ. ದಯವಿಟ್ಟು ನಮಗೆ ಸಹಾಯ ಮಾಡಲು ಯಾರನ್ನಾದರು ಕಳುಹಿಸಬಹುದೇ? ಎಂದು ಡಾ ಮೂಪನ್ಸ್​ ವೈದ್ಯಕೀಯ ಕಾಲೇಜು ಸಿಬ್ಬಂದಿಗೆ ಕರೆ ಮಾಡಿ ಹೇಳಿದ್ದಾರೆ.
ಸಿಬ್ಬಂದಿಗಳು ಆಕೆಯ ಎಲ್ಲಾ ವಿವರಗಳನ್ನು ಕೇಳಿ ರಕ್ಷಣಾ ತಂಡ ಬರುತ್ತಿದೆ ಎಂದು ಅವರಿಗೆ ಭರವಸೆ ತುಂಬಿದ್ದಾರೆ. ಮಾತ್ರವಲ್ಲದೆ ಪೊಲೀಸರಿಗೆ ಮಾಹಿತಿ ತಿಳಿಸಿದರು. ಜೊತೆಗೆ ಆ್ಯಂಬುಲೆನ್ಸನ್ನು ಚುರಲ್ಮಲಾಗೆ ಕಳುಹಿಸಿದರು.
ಇದನ್ನೂ ಓದಿ: ಭೂಕುಸಿತದಲ್ಲಿ 3 ಬಾರಿ ಮನೆ ಕಳೆದುಕೊಂಡು ಬದುಕುಳಿದ ಮೇರಿಯಮ್ಮ.. ಈ ತಾಯಿಯ ನೋವಿನ ಕತೆಯೇ ವಿಭಿನ್ನ
/newsfirstlive-kannada/media/post_attachments/wp-content/uploads/2024/07/Wayanad-landslide10.jpg)
ಬೇಸರದ ಸಂಗತಿ ಎಂದರೆ ವಯನಾಡಿನಲ್ಲಿ ಮೂರು ಬಾರಿ ಭೂಕುಸಿತವಾಗಿದೆ. 2ನೇ ಬಾರಿಯ ಭೂಕುಸಿತದಲ್ಲಿ ಆಕೆಯ ಸಂಪರ್ಕ ಕಡಿತಗೊಂಡಿದೆ. ಮಾತ್ರವಲ್ಲದೆ, ಮರಗಳು ಧರೆಗುಳಿದು ರಸ್ತೆ ಸಂಪರ್ಕ ಕಡಿತವಾಗಿತ್ತು. ಹೀಗಾಗಿ ಭೂಕುಸಿತದಲ್ಲಿ ನೀತು ಜಾಗದ ಬಳಿ ರಕ್ಷಣಾ ತಂಡಕ್ಕೆ ವೇಗವಾಗಿ ತಲುಪಲು ಸಾಧ್ಯವಾಗಲಿಲ್ಲ. ಪರಿಣಾಮ ಸಾವನ್ನಪ್ಪಿದ್ದರು.
ವಯನಾಡು ಭೂಕುಸಿತ ಸಂಭವಿಸಿ ಇಂದಿಗೆ 7 ದಿನಗಳು. ಅನೇಕರು ತಮ್ಮ ಕುಟುಂಬಗಳಿಗಾಗಿ ಈ ಜಾಗದಲ್ಲಿ ಹುಡುಕಾಡುತ್ತಿದ್ದಾರೆ. ಈಗಾಗಲೇ ಭೂಕುಸಿತದಲ್ಲಿ 360ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. 200ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಅದರಲ್ಲಿ 100ಕ್ಕೂ ಹೆಚ್ಚು ಮೃತದೇಗಳ ಗುರುತೇ ಸಿಗದಂತ ಸ್ಥಿತಿಯಲ್ಲಿ ಪತ್ತೆಯಾಗಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us