/newsfirstlive-kannada/media/post_attachments/wp-content/uploads/2024/04/cab.jpg)
ಬೆಂಗಳೂರು: ಮಹಿಳೆಯೊಬ್ಬಳು ವಿಮಾನಯಾನಕ್ಕಾಗಿ 3,500 ರೂಪಾಯಿ ಖರ್ಚು ಮಾಡಿದ್ದು, ಬಳಿಕ ಏರ್ಪೋರ್ಟ್​ನಿಂದ ಬೆಂಗಳೂರು ನಗರ ಬರಲು ಕ್ಯಾಬ್​ಗಾಗಿ 2000 ರೂಪಾಯಿ ಖರ್ಚು ಮಾಡಿದರ ಬಗ್ಗೆ ಸ್ಕ್ರೀನ್​ ಶಾಟ್​ ಹಂಚಿಕೊಂಡಿದ್ದಾಳೆ.
ಮನಸ್ವಿ ಶರ್ಮಾ ಎಂಬ ಟ್ವಿಟ್ಟರ್​ (ಎಕ್ಸ್) ಬಳಕೆದಾರ ಕೆಂಪೇಗೌಡ ಏರ್​ಪೋರ್ಟ್​​ನಿಂದ ನಗರಕ್ಕೆ ಬರಲು 2000 ಸಾವಿರ ರೂಪಾಯಿ ಖರ್ಚು ಮಾಡಬೇಕಿದೆ ಎಂದು ಮೊಬೈಲ್​ನಲ್ಲಿದ್ದ ಸ್ಕ್ರೀನ್​ ಶಾಟ್​ ಹಂಚಿಕೊಂಡಿದ್ದಾರೆ.
ಅಂದಹಾಗೆಯೇ, ಮನಸ್ವಿ ಶರ್ಮಾ ಪುಣೆಯಿಂದ ಬೆಂಗಳೂರಿಗೆ ವಿಮಾನದ ಮೂಲಕ ಬಂದಿದ್ದಾರೆ. ಸುಮಾರು 3,500 ರೂಪಾಯಿ ಖರ್ಚು ಮಾಡಿ ಕೆಂಪೇಗೌಡ ಏರ್​ಪೋರ್ಟ್​ಗೆ ತಲುಪಿದ್ದಾರೆ. ಅಲ್ಲಿಂದ ನಗರಕ್ಕೆ ಬರಲು ಕ್ಯಾಬ್​ ಹುಡುಕಾಡಿದ್ದಾರೆ. ಆದರೆ ಆನ್​ಲೈನ್​ ಕ್ಯಾಬ್​ ಸೇವೆಯಲ್ಲಿ 2000 ಸಾವಿರ ರೂಪಾಯಿ ತೋರಿಸುತ್ತಿದೆ ಎಂದು ಬರೆದುಹಾಕಿದ್ದಾರೆ.
I booked flight for 3.5k from Pune to Bangalore.
And then, a cab for 2k from Bangalore airport to my home?@Uber_Indiapic.twitter.com/wZyzOpOvHF— Manasvi Sharma (@manasvisharmaaa)
I booked flight for 3.5k from Pune to Bangalore.
And then, a cab for 2k from Bangalore airport to my home💀@Uber_Indiapic.twitter.com/wZyzOpOvHF— Manasvi Sharma (@manasvisharmaaa) April 1, 2024
">April 1, 2024
ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿವೆ. ಒಂದೆಡೆ ಬೆಂಗಳೂರಿನ ಟ್ರಾಫಿಕ್​ ಸಮಸ್ಯೆ ಬಗ್ಗೆ ಜನರು ಕಾಮೆಂಟ್​ ಮಾಡಿದರೆ, ಮತ್ತೊಂದೆಡೆ ಕ್ಯಾಬ್​ ದುಬಾರಿ ಮೊತ್ತದ ಬಗ್ಗೆ ಚರ್ಚಿಸುತ್ತಿದ್ದಾರೆ. ಇನ್ನು ಕೆಲವು ಕ್ಯಾಬ್​ನಲ್ಲಿ ಏಸಿ ಆನ್​ ಮಾಡೋದಿಲ್ಲ. ಪ್ರೀಮಿಯರ್​ ವಾಹನ ಮಾತ್ರ AC ಹೊಂದಿರುತ್ತದೆ ಎಂದು ಬರೆದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us