newsfirstkannada.com

Video: ಲಿಫ್ಟ್​​ನಲ್ಲಿ ಮಗುವಿಗೆ ಜನ್ಮ ನೀಡಿ ಕೈಯಾರೆ ಕಸದ ಬುಟ್ಟಿಗೆ ಎಸೆದ ಪಾಪಿ ತಾಯಿ!

Share :

01-09-2023

    ಲಿಫ್ಟ್​ನಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ

    ಹೆತ್ತ ಮಗುವನ್ನೇ ಕೈಯಾರೆ ಕಸದ ಬುಟ್ಟಿಗೆ ಎಸೆದ ತಾಯಿ

    ಸಿಸಿಟಿವಿಯಲ್ಲಿ ಸೆರೆಯಾಯ್ತು ಪಾಪಿ ತಾಯಿಯ ಕರಾಳ ಮುಖ

ಗರ್ಭಿಣಿ ಮಹಿಳೆಯೊಬ್ಬಳು ಲಿಫ್ಟ್​ನಲ್ಲೇ ಮಗುವಿಗೆ ಜನ್ಮ ನೀಡಿ ಬಳಿಕ ಆ ಮಗುವನ್ನು ಕಸದ ತೊಟ್ಟಿಗೆ ಎಸೆದ ಘಟನೆ ಚೀನಾದಲ್ಲಿ ಬೆಳಕಿಗೆ ಬಂದಿದೆ. ತಾಯಿಯ ಅಮಾನುಷ ಕೃತ್ಯ ಸಿಸಿಟಿಯಲ್ಲಿ ಸೆರೆಯಾಗಿದ್ದು, ಎಲ್ಲೆಡೆ ವೈರೆಲ್​ ಆಗಿದೆ.

ಚೀನಾದ ನೈಋತ್ಯ ಕಟ್ಟಡದ ಲಿಫ್ಟ್​​ವೊಂದರಲ್ಲಿ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾಳೆ. ಆಗಸ್ಟ್​ 21ರಂದು ಮಹಿಳೆ ಹೌಸಿಂಗ್​ ಲಿಫ್ಟ್​ನಲ್ಲಿ ಲಗೇಜ್​ ತೆಗೆದುಕೊಂಡು ಹೋಗಿದ್ದು, ಈ ವೇಳೆ ಅಲ್ಲೇ ಮಗುವನ್ನು ಹೆತ್ತಿದ್ದಾಳೆ.

ಸಿಸಿಟಿವಿ ದೃಶ್ಯದಲ್ಲಿ ಸೆರೆಯಾದಂತೆ ಮಗುವಿಗೆ ಜನ್ಮ ನೀಡಿದ ಬಳಿಕ ಅದರ ಮೈಮೇಲೆ ಮತ್ತು ನೆಲದ ಮೇಲೆ ಇದ್ದ ರಕ್ತವನ್ನು ಬಟ್ಟೆಯ ಮೂಲಕ ಒಡೆಸಿದ್ದಾಳೆ. ಇದಾದ ಬಳಿಕ ಲಿಫ್ಟ್​ಗೆ ಪ್ರವೇಶಿಸುವ ಜನರು ಮಗುವನ್ನು ನೋಡದಂತೆ ಬಚ್ಚಿಡುತ್ತಾಳೆ. ಬಳಿಕ ಲಗೇಜ್​ ಜೊತೆಗೆ ಮಗುವನ್ನು ಹಿಡಿದುಕೊಂಡು ಲಿಫ್ಟ್​ನಿಂದ ಹೊರಗೆ ಬರುತ್ತಾಳೆ. ಲಿಫ್ಟ್​ ಹೊರಗೆ ಇದ್ದ ಡಸ್ಟ್​​ ಬಿನ್​ಗೆ ಮಗುವನ್ನು ಹಾಕುತ್ತಾಳೆ.

ಇಷ್ಟರಲ್ಲಿ ವಯಸ್ಸಾದ ಮಹಿಳೆಯೊಬ್ಬರು ಮಹಿಳೆಯ ಈ ವಿಚಿತ್ರ ವರ್ತನೆಯನ್ನು ನೋಡುತ್ತಾರೆ. ಆದರೆ ಸ್ಥಳೀಯ ಜನರ ಸಹಾಯದಿಂದ ಮಗುವನ್ನು ಚಾಂಗ್​ಕಿಂಗ್​ ಆಸ್ಪತ್ರೆಗೆ ಸೇರಿಸಲಾಗುತ್ತದೆ. ಸಾಮಾಜಿಕ ಜಲತಾಣದಲ್ಲುಂತೂ ಈ ದೃಶ್ಯ ಹರಿದಾಡುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಲಿಫ್ಟ್​​ನಲ್ಲಿ ಮಗುವಿಗೆ ಜನ್ಮ ನೀಡಿ ಕೈಯಾರೆ ಕಸದ ಬುಟ್ಟಿಗೆ ಎಸೆದ ಪಾಪಿ ತಾಯಿ!

https://newsfirstlive.com/wp-content/uploads/2023/09/China.webp

Load More