ಹಾವು ಬಿಟ್ಟು ಪ್ರಿಯಕರನ ಕೊಂದ ಪ್ರಿಯತಮೆ
ಸತ್ತ ಉದ್ಯಮಿಯ ಕಾಲಿನಲ್ಲಿತ್ತು ಹಾವು ಕಚ್ಚಿದ ಗುರುತು
ಉದ್ಯಮಿ ಕೊಲೆಯಲ್ಲಿ ಹಾವಾಡಿಗನು ಭಾಗಿ
ಮಹಿಳೆಯೊಬ್ಬಳು ತಾನು ಸಂಪರ್ಕಹೊಂದಿದ್ದ ಉದ್ಯಮಿಯನ್ನ ಹಾವು ಕಚ್ಚಿಸಿ ಕೊಲೆ ಮಾಡಿದ ಘಟನೆ ಉತ್ತರಾಖಂಡದ ಹಲ್ವಾನಿಯಲ್ಲಿ ನಡೆದಿದೆ. ಅಂಕಿತ್ ಚೌಹಾಣ್ ಎಂಬಾತ ಕೊಲೆಯಾಗಿದ್ದು, ಈ ಕೊಲೆಯಲ್ಲಿ ಹಾವಾಡಿಗನು ಭಾಗಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಹಲ್ವಾನಿಯ ತೀನ್ ಪಾನಿ ಎಂಬಲ್ಲಿ ಜುಲೈ 15ರಂದು ಅಂಕಿತ್ ಚೌಹಾನ್ ಮೃತದೇಹ ಕಾರಿನಲ್ಲಿ ಪತ್ತೆಯಾಗಿತ್ತು. ಆತನ ಕಾಲಿನಲ್ಲಿ ಹಾವು ಕಚ್ಚಿದ ಗುರುತು ಕೂಡ ಸಿಕ್ಕಿತ್ತು. ಕುಟುಂಬಸ್ಥರ ದೂರಿನ ಅನ್ವಯ ಜುಲೈ 17ರಂದು ಐಪಿಸಿ ಸೆಕ್ಷನ್ 369/23 ಮತ್ತು 3042ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಯೋಜನೆ ರೂಪಿತ ಕೊಲೆ
ಈ ಪ್ರಕರಣದ ಬೆನ್ನತ್ತಿದ ಪೊಲೀಸರಿಗೆ ಅಂಕಿತ್ ಚೌಹಾಣ್ನದ್ದು ಯೋಜನೆ ರೂಪಿತ ಕೊಲೆ ಎಂಬುದು ಧೃಡವಾಯಿತು. ಮಾತ್ರವಲ್ಲದೆ, ಹಾವಾಡಿಗ ಮತ್ತು ಮಹಿಳೆಯ ಕೈವಾಡ ಈ ಕೊಲೆ ಮೇಲಿದೆ ಎಂಬುದು ತನಿಖೆ ವೇಳೆ ಗೊತ್ತಾಯಿತು. ಬಳಿಕ ನೈನಿತಾಲ್ನ ಪೊಲೀಸರು ಇವರನ್ನು ಬಂಧಿಸಿದ್ದಾರೆ.
ಕೊಲೆಯಲ್ಲಿ ಐವರು ಭಾಗಿ
ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಪಂಕಜ್ ಭಟ್ ಪ್ರಕರಣ ಸಂಬಂಧಿಸಿದಂತೆ ಮಾತನಾಡಿದ್ದು, ಅಂಕಿತ್ ಚೌಹಾಣ್ ಕೊಲೆಯಲ್ಲಿ ಐವರು ಭಾಗಿಯಾಗಿದ್ದಾರೆ. ಇದರ ಪ್ರಮುಖ ಆರೋಪಿ ಡಾಲಿ ಅಲಿಯಾಸ್ ಮಾಹಿ ಎಂಬಾತ ಮೃತ ಅಂಕಿತ್ ಚೌಹಾಣ್ ಜೊತೆ ಸಂಪರ್ಕದಲ್ಲಿದ್ದ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ