ಬೆಳ್ಳಂಬೆಳಗ್ಗೆ ಬಟ್ಟೆ ಬಿಚ್ಚಿ ಪ್ರಿಯತಮನ ಓಡಿಸಿದ್ದೇಕೆ ಅವಳು?
ಸೀರೆ, ಓಲೆ, ಚಿನ್ನದ ಕಾಲುಂಗರ, ಬಳೆಗಳು, ಹೊಸ ಶೂ ಗಿಫ್ಟ್
ಹುಚ್ಚು ಪ್ರೇಮಿ ಭಗ್ನನಲ್ಲ ಇದು ನಗ್ನಪ್ರೇಮಿಯಾದ ಫಜೀತಿ
ಥಾಣೆ: ಪ್ರೀತಿ ಮಾಯೆ ಹುಷಾರು.. ಒಮ್ಮೆ ಶರಣಾದ್ರೆ ಪ್ರೀತಿಗೆ ಕತ್ತು ಕೊಟ್ಟಂಗೆ ಕತ್ತಿಗೆ ಅನ್ನೋದು ದುನಿಯಾ ಸಿನಿಮಾದ ಹಾಡು. ಇಲ್ಲೊಬ್ಬ ಪ್ರೇಮಿ ಬಾಳಲ್ಲೂ ಈ ಸಾಲು ಪಕ್ಕಾ ಪ್ರೂ ಆಗಿದೆ. ಪ್ರೀತಿಸಿದ ಯುವತಿ ಆಕೆಯನ್ನೇ ನಂಬಿ ಬಂದ ಯುವಪ್ರೇಮಿಯ ಬಟ್ಟೆ ಬಿಚ್ಚಿ ಹೆದ್ದಾರಿಯಲ್ಲಿ ನಗ್ನವಾಗಿ ಓಡುವಂತೆ ಮಾಡಿದ್ದಾಳೆ. ಹುಚ್ಚು ಪ್ರೇಮಿಯ ಭಗ್ನ ಸ್ಟೋರಿ ಅಲ್ಲ ಇದು ನಗ್ನಪ್ರೇಮಿಯ ಫಜೀತಿ ಅಯ್ಯೋ ಪಾಪ ಅನ್ನಿಸುತ್ತೆ.
ಅಷ್ಟಕ್ಕೂ ಬಟ್ಟೆ ಬಿಚ್ಚಿ ಪ್ರಿಯತಮನ ಓಡಿಸಿರೋ ಘಟನೆ ನಡೆದಿರೋದು ಮಹಾರಾಷ್ಟ್ರದ ಥಾಣೆ ಬಳಿ ಇರುವ ಶಹಾಪುರ ಹೆದ್ದಾರಿಯಲ್ಲಿ. ಶಹಾಪುರ ನಿವಾಸಿ ರಿಯಲ್ ಎಸ್ಟೇಟ್ ಉದ್ಯಮಿ ಬಾಲಾಜಿ ಶಿವಭಗತ್ ಎನ್ನುವವರು 30 ವರ್ಷದ ಭೋರ್ ಎಂಬಾಕೆಯನ್ನ ಪ್ರೀತಿಸುತ್ತಾನೆ. ಕೆಲವು ವರ್ಷಗಳಿಂದ ಇವರಿಬ್ಬರು ಪ್ರೀತಿಯೂ ಚೆನ್ನಾಗಿಯೇ ಇರುತ್ತೆ.
ಕಳೆದ ಜೂನ್ 28ರಂದು ಭೋರ್ ತನ್ನ ಲವ್ವರ್ ಬಾಲಾಜಿ ಶಿವಭಗತ್‌ಗೆ ಕರೆ ಮಾಡಿ ನನಗೆ ಗಿಫ್ಟ್ ಕೊಡು ಅಂತಾ ಕೇಳಿದ್ದಾಳೆ. ಭೋರ್ ಇದ್ದಕ್ಕಿದ್ದಂತೆ ದುಬಾರಿ ಗಿಫ್ಟ್‌ಗಳನ್ನ ಕೇಳಿದ್ರೂ ಶಿವಭಗತ್‌ಗೆ ಮೋಸದ ಸುಳಿವೇ ಸಿಕ್ಕಿಲ್ಲ. ಅಂದು ರಾತ್ರಿ ಶಿವಭಗತ್, ಭೋರ್ ಕೇಳಿದಂತೆ ಸೀರೆ, ಚಿನ್ನದ ಓಲೆ, ಚಿನ್ನದ ಕಾಲುಂಗರು, ಬಳೆಗಳು, ಹೊಸ ಶೂ, ಛತ್ರಿಯನ್ನು ಉಡುಗೊರೆಯಾಗಿ ನೀಡಲು ತನ್ನ ಕಾರಿನಲ್ಲೇ ತೆರಳುತ್ತಾನೆ.
ಶಿವಭಗತ್ ತನ್ನ ಕಾರಿನಲ್ಲಿ ಶಹಾಪುರ ಹೈವೇಗೆ ಹೋದಾಗಲೇ ಇಷ್ಟು ದಿನ ಪ್ರೀತಿಸುತ್ತಿದ್ದ ಭೋರ್ ನಿಜವಾದ ಮುಖವಾಡ ಬಯಲಾಗುತ್ತೆ. ಶಿವಭಗತ್ ಇದ್ದ ಕಾರಿಗೆ ಭೋರ್ ಹತ್ತಿದ ಕೂಡಲೇ ನಾಲ್ವರು ಜೊತೆಗಾರರು ಕಾರಿನೊಳಗೆ ಬರುತ್ತಾರೆ. ಖದೀಮರು ಶಿವಭಗತ್‌ಗೆ ಹಿಗ್ಗಾಮುಗ್ಗ ಒಡೆದು ಚಿನ್ನ, ದುಡ್ಡು ಎಲ್ಲವನ್ನು ದೋಚಿಕೊಳ್ಳುತ್ತಾರೆ. ಉಟ್ಟ ಬಟ್ಟೆಯನ್ನು ಬಚ್ಚಿಸಿ ಬೆಳಗಿನ ಜಾವ 5 ಗಂಟೆಗೆ ಹೆದ್ದಾರಿಯಲ್ಲಿ ಬಿಟ್ಟು ಹೋಗಿದ್ದಾರೆ.
ಶಹಾಪುರ ಹೆದ್ದಾರಿಯಲ್ಲಿ ನಗ್ನನಾದ ಶಿವಭಗತ್ ಹುಡುಗಿಗಾಗಿ ಎಲ್ಲವನ್ನು ಕಳೆದುಕೊಳ್ತಾನೆ. ಕೊನೆಗೆ ಪೊಲೀಸ್ ಠಾಣೆಗೆ ಹೋಗಿ ದೂರು ಕೊಟ್ಟಿದ್ದು, ಭೋರ್‌ಳಿಂದ ಮೋಸ ಹೋದ ಕಥೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ. ದೂರು ದಾಖಲಿಸಿರೋ ಪೊಲೀಸರು ಮೋಸಗಾತಿ ಹಾಗೂ ಆಕೆಯ ಸಹಚರರಿಗಾಗಿ ಬಲೆ ಬೀಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ