ದೇವಸ್ಥಾನಕ್ಕೆ ಮಹಿಳೆಯರ ದಂಡು, ಬಸ್‌ಗಳು ಹೌಸ್ ಫುಲ್
ಕೊಪ್ಪಳ- ಹೊಸಪೇಟೆಗೆ ಹೊರಟಿದ್ದ ಬಸ್ಗೆ ಕಲ್ಲೆಸೆದ ಮಹಿಳೆ
ಅಯ್ಯೋ ದೇವರೇ ಹಿಂಗೆಲ್ಲ ಇರ್ತಾರಾ ಜನ..?
ಕೊಪ್ಪಳ: ಉಚಿತ ಪ್ರಯಾಣ ಶುರುವಾಗಿದ್ದೇ ಆಗಿದ್ದು ಮಹಿಳೆಯರು ಧಾರ್ಮಿಕ ಸ್ಥಳಗಳಿಗೆ ಹೋಗುತ್ತಿದ್ದಾರೆ. ಹೀಗೆ ಧಾರ್ಮಿಕ ಸ್ಥಳಕ್ಕೆ ಹೋಗಿ ಬಸ್ಗಾಗಿ ಕಾದು ಕುಳಿತಿದ್ದ ಮಹಿಳೆಯೊಬ್ಬರು ಚಲಿಸುತ್ತಿದ್ದ ಬಸ್ಗೆ ಕಲ್ಲು ತೂರಿದ ಘಟನೆ ಹೊಸಲಿಂಗಾಪುರ ಬಳಿ ನಡೆದಿದೆ.
ಚಾಲಕ ಬಸ್ ಅನ್ನು ನಿಲ್ಲಿಸದೇ ಹೋಗಿದ್ದಕ್ಕೆ ಆಕ್ರೋಶಗೊಂಡ ಮಹಿಳೆ ಬಸ್ಗೆ ಕಲ್ಲು ತೂರಿದ್ದಾರೆ. ಇಳಕಲ್ ಬಳಿಯ ಪಾಪನಳ್ಳಿ ನಿವಾಸಿ ಲಕ್ಷ್ಮಿ ಎಂಬುವವರು ಕೊಪ್ಪಳದ ಹುಲಿಗಿಯ ಹುಲಿಗೆಮ್ಮ ದೇವಿ ದರ್ಶನಕ್ಕೆ ಬಂದಿದ್ದರು. ಹುಲಿಗಿಯ ಹುಲಿಗೆಮ್ಮ ದರ್ಶನ ಪಡೆದು ಲಿಂಗಾಪುರ ಬಳಿ ಮಳೆಯಲ್ಲಿ ನಾಲ್ಕೈದು ತಾಸು ಬಸ್ಗಾಗಿ ಕಾದು ಕುಳಿತಿದ್ದರು.
ತನ್ನ ಊರಿಗೆ ತೆರಳಲು ಯಾವೊಂದೂ ಬಸ್ ನಿಲ್ಲಿಸದ ಕಾರಣ ಕೋಪಗೊಂಡ ಮಹಿಳೆ ಕೊಪ್ಪಳದಿಂದ-ಹೊಸಪೇಟೆಗೆ ಹೊರಟಿದ್ದ ನಾನ್ ಸ್ಟಾಪ್ ಬಸ್ಗೆ ಕಲ್ಲೆಸೆದಿದ್ದಾಳೆ. ಕಲ್ಲು ಎಸೆದ ಹಿನ್ನೆಲೆಯಲ್ಲಿ ಬಸ್ನ ಚಾಲಕ ಮುತ್ತಪ್ಪ ಹಾಗೂ ಕಂಡಕ್ಟರ್ ಪ್ರಯಾಣಿಕರ ಸಮೇತ ಪೊಲೀಸ್ ಠಾಣೆಗೆ ಬಸ್ ಅನ್ನು ತಂದು ದೂರನ್ನು ದಾಖಲಿಸಿದ್ದಾರೆ.
ಬಸ್ ಡ್ಯಾಮೇಜ್ ಹಿನ್ನೆಲೆ 5000 ರೂಪಾಯಿ ದಂಡ ಕಟ್ಟುವಂತೆ ಬಸ್ ಡಿಪೋ ಮ್ಯಾನೇಜರ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಬಳಿಕ ಕಲ್ಲೆಸೆದ ಮಹಿಳೆಯು ಕ್ಷಮೆ ಕೇಳಿ 5000 ರೂಪಾಯಿ ದಂಡವನ್ನು ಕಟ್ಟಿದ ಮೇಲೆ ಅಲ್ಲಿಂದ ಹೊರಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ತನ್ನ ಊರಿಗೆ ತೆರಳಲು ಯಾವೊಂದು ಬಸ್ ನಿಲ್ಲಿಸದ ಕಾರಣ ಕೋಪಗೊಂಡ ಮಹಿಳೆ ಹೊಸಪೇಟೆಗೆ ಹೊರಟಿದ್ದ ನಾನ್ ಸ್ಟಾಪ್ ಬಸ್ಗೆ ಕಲ್ಲೆಸೆದಿದ್ದಾಳೆ. ಬಸ್ ಡ್ಯಾಮೇಜ್ ಹಿನ್ನೆಲೆ 5000 ರೂಪಾಯಿ ದಂಡ ಕಟ್ಟುವಂತೆ ಬಸ್ ಡಿಪೋ ಮ್ಯಾನೇಜರ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಬಳಿಕ ಕಲ್ಲೆಸೆದ ಮಹಿಳೆಯು ಕ್ಷಮೆ ಕೇಳಿ 5000 ರೂಪಾಯಿ ದಂಡವನ್ನು ಕಟ್ಟಿದ ಮೇಲೆ… pic.twitter.com/hb9iszox8s
— NewsFirst Kannada (@NewsFirstKan) June 25, 2023