ಲ್ಯಾಂಪ್ ಖರೀದಿಗಾಗಿ ಐಕಿಯಾಗೆ ಹೋದ ಯುವತಿ
500 ರೂ. ಲ್ಯಾಂಪ್ ಬಿಟ್ಟು ಮತ್ತೆಲ್ಲಾ ಖರೀದಿ ಮಾಡಿದ್ರು
ದೊಡ್ಡ ಲಿಸ್ಟ್ ಇರೋ ಬಿಲ್ ನೋಡಿದ್ರೆ ಶಾಕ್ ಆಗ್ತೀರಾ!
ಹೈದರಾಬಾದ್: ಭಾರತದ ಅತೀ ದೊಡ್ಡ ಮಾರಾಟ ಮಳಿಗೆ ಐಕಿಯಾ. ಐಕಿಯಾ ರಾಷ್ಟ್ರ ರಾಜಧಾನಿ ದೆಹಲಿ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿದಂತೆ ಮುಂಬೈನಂತಹ ಮಹಾನಗರಗಳಲ್ಲಿ ಇದೆ. ಫರ್ನೀಚರ್ ದೈತ್ಯ ಐಕಿಯಾವನ್ನು ನೋಡಲು ಸಿಟಿ ಮಂದಿ ಯಾವಾಗಲೂ ಮುಗಿ ಬೀಳುತ್ತಾರೆ. ಎಲ್ಲಾ ಐಕಿಯಾ ಶೋ ರೂಮ್ಗಳಲ್ಲೂ ಗೃಹೋಪಯೋಗಿ ವಸ್ತುಗಳು ಸಿಗುತ್ತವೆ. ವಿಶೇಷ ಎಂದರೆ ಇಂತಹ ಮಾರಾಟ ಮಳಿಗೆಗೆ ಕೇವಲ ಲ್ಯಾಂಪ್ ತರಲು ಎಂದು ಹೋದ ಯುವತಿಯೊಬ್ಬರು ಅಡ್ವೆಂಚರ್ ಮಾಡಿರೋ ಸ್ವಾರಸ್ಯಕರ ಘಟನೆಯೊಂದು ನಡೆದಿದೆ.
ಯೆಸ್, ಈಕೆ ಹೆಸರು ಸಮೀರಾ. ಮೂಲತಃ ಹೈದರಾಬಾದಿನವರು. ಸದ್ಯ ಖಾಸಗಿ ಕಂಪನಿಯೊಂದರಲ್ಲಿ ಟೀಂ ಲೀಡ್ ಆಗಿರೋ ಸಮೀರಾ ಗೋವಾದಲ್ಲಿ ಗೋಲ್ಡ್ ಸ್ಪಾಟ್ ಎಂಬ ಕೆಫೆ ಹೊಂದಿದ್ದಾರೆ. ಐಕಿಯಾ ಶೋ ರೂಮ್ನಲ್ಲಿ ನಡೆದ ತನ್ನ ಅಡ್ವೆಂಚರಸ್ ಅಂಡ್ ಸ್ವಾರಸ್ಯಕರ ಘಟನೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
Went to IKEA to buy ONE lamp.
Forgot to buy the lamp. pic.twitter.com/drnz1hi7wb— Sameera (@sameeracan) August 10, 2023
ಈ ಸಂಬಂಧ ಟ್ವೀಟ್ ಮಾಡಿರೋ ಸಮೀರಾ, ನಾನು ಲ್ಯಾಂಪ್ ಖರೀದಿ ಮಾಡಲು ಹೋಗಿದ್ದೆ. ಲ್ಯಾಂಪ್ ಹೊರತು ಸಾಕಷ್ಟು ವಸ್ತುಗಳ ಖರೀದಿ ಮಾಡಿದ್ದೇನೆ. ಆದರೆ, ಕೊನೆಗೆ ಲ್ಯಾಂಪ್ ಪರ್ಚೇಸ್ ಮಾಡೋದೆ ಮರೆತು ಹೋದೆ ಎಂದು ಬರೆದು ದೊಡ್ಡ ಲಿಸ್ಟ್ ಇರೋ ಬಿಲ್ವೊಂದು ಪೋಸ್ಟ್ ಮಾಡಿದ್ದಾರೆ.
ಜನ ಸಮೀರಾ ಪೋಸ್ಟ್ಗೆ ಭಿನ್ನಭಿನ್ನವಾಗಿ ಕಾಮೆಂಟ್ ಮಾಡಿದ್ದಾರೆ. ನಮಗೂ ಆಗಾಗ ಈ ರೀತಿ ಆಗುತ್ತದೆ. ಐಕಿಮಾ, ಡಿಮಾರ್ಟ್ಗೆ ಹೋದಾಗ ನಮಗೆ ಬೇಕಾದ ವಸ್ತು ಬಿಟ್ಟು ಎಲ್ಲವನ್ನು ಖರೀದಿ ಮಾಡುತ್ತೇವೆ ಎಂದು ಕೆಲವರು ಕಾಮೆಂಟ್ ಮಾಡಿದ್ರೆ, ಇನ್ನು ಹಲವರು ರಿಚ್ ಪೀಪಲ್ ಪ್ರಾಬ್ಲಮ್ ಎಂದು ವ್ಯಂಗ್ಯವಾಡಿದ್ದಾರೆ. ಸದ್ಯ ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಕೇವಲ 500 ರೂ. ಲ್ಯಾಂಪ್ ಖರೀದಿ ಮಾಡಲು ಹೋದ ಸಮೀರಾ ಕೊನೆಗೆ ಬರುವಾಗ ಅದನ್ನು ಬಿಟ್ಟು ಲಕ್ಷಗಟ್ಟಲೇ ಮೌಲ್ಯದ ಇತರೆ ವಸ್ತುಗಳನ್ನು ಶಾಪಿಂಗ್ ಮಾಡಿ ಬಂದಿದ್ದು ಮಾತ್ರ ಗಮನಾರ್ಹ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ