ಹೆಂಡತಿ ಮಾಡಿದ ಕೆಲಸಕ್ಕೆ ಗಂಡ ಫುಲ್ ಖುಷ್.. ಖುಷಿ..
ತೆಲಂಗಾಣದಲ್ಲಿ ಅಪರೂಪದಲ್ಲಿ ಅಪರೂಪದ ಮದುವೆ
ಗಂಡನಿಗೆ ಮುಂದೆ ನಿಂತು ಮದುವೆ ಮಾಡಿಸಿದ ಹೆಂಡತಿ
ಹೈದ್ರಾಬಾದ್: ಮದುವೆ ಆದಮೇಲೆ ಹೆಂಡ್ತಿಗೆ ಗಂಡ ಪ್ರಾಣದಂತೆ ಕಾಣ್ತಾನೆ. ಹೆಂಡ್ತಿಯನ್ನ ಗಂಡ, ಜೀವದಂತೆ ಪ್ರೀತಿಸ್ತಾನೆ. ಇವರಿಬ್ಬರಲ್ಲೂ ಅಂಡರ್ ಸ್ಟ್ಯಾಂಡಿಂಗ್ ಬಹಳ ಮುಖ್ಯ. ಅದರಲ್ಲೂ ಪ್ರತಿ ಹೆಣ್ಣು ಬಹಳ ಪೊಸೆಸಿವ್ ಆಗಿರ್ತಾಳೆ. ತನ್ನ ಗಂಡನನ್ನು ಯಾರಾದ್ರೂ ಬುಟ್ಟಿಗೆ ಹಾಕಿಕೊಂಡರೆ ಅಥವಾ ಗಂಡನೇ ಬೇರೆ ಮಹಿಳೆಯ ಜೊತೆ ಸಂಬಂಧ ಇಟ್ಟುಕೊಂಡರೆ ಅಂತ ಹೆಂಡತಿಯಾದವಳು ಈ ವಿಚಾರವನ್ನು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳುವುದಿಲ್ಲ. ಸಿಕ್ಕಾಪಟ್ಟೆ ಕೋಪ ಮಾಡಿಕೊಳ್ಳುತ್ತಾಳೆ.
ಆದ್ರೆ ಇಲ್ಲಿ ಇದಕ್ಕೆ ತದ್ವಿರುದ್ಧವಾದ ವಿಚಿತ್ರ ಘಟನೆಯೊಂದು ನಡೆದಿದ್ದು, ಪತ್ನಿಯೇ ತನ್ನ ಮುದ್ದಿನ ಗಂಡನಿಗೆ ಅದ್ಧೂರಿಯಾಗಿ ಎರಡನೇ ಮದುವೆ ಮಾಡಿಸಿದ್ದಾಳೆ. ತನ್ನ ಗಂಡನನ್ನು ಬುದ್ಧಿಮಾಂದ್ಯ ಯುವತಿಯೊಬ್ಬಳು ನಿನ್ನ ಗಂಡನನ್ನ ನಾನು ಮನಸಾರೆ ಇಷ್ಟ ಪಟ್ಟಿದೀನಿ ಅಂತ ಮಹಿಳೆಗೆ ಹೇಳಿದ್ದಾಳೆ. ವಿಷಯ ಯಾವಾಗ ಗೊತ್ತಾಯ್ತೋ, ಆ ಯುವತಿಗೆ ತನ್ನ ಗಂಡನೊಂದಿಗೆ ಮದುವೆ ಮಾಡಿಸಿದ್ದಾಳೆ. ಈ ಅಚ್ಚರಿಯ ಘಟನೆ ತೆಲಂಗಾಣದ ಮಹಬೂಬಾಬಾದ್ ಜಿಲ್ಲೆಯ ಚಿನ್ನಗುಡೂರಿನ ಉಗ್ಗಂಪಲ್ಲಿ ಗ್ರಾಮದಲ್ಲಿ ನಡೆದಿದೆ. ಹೆಂಡ್ತಿಯೊಬ್ಬಳು ತಾನೇ ಮುಂದೆ ನಿಂತುಕೊಂಡು, ತನಗೆ ತಾಳಿ ಕಟ್ಟಿದ ಮುದ್ದಿನ ಗಂಡನಿಗೆ ಎರಡನೇ ಮದುವೆ ಮಾಡಿಸಿದ್ದಾಳೆ. ಬುದ್ಧಿಮಾಂದ್ಯ ಯುವತಿ ತನ್ನ ಗಂಡನನ್ನು ಇಷ್ಟ ಪಡ್ತಿದ್ದಾಳೆ ಅನ್ನೋ ಕಾರಣಕ್ಕೆ ಆಕೆಯ ಆಸೆಯನ್ನು ಈಡೇರಿಸೋಣ ಅಂತ ತನ್ನ ಗಂಡನಿಗೆ ಆಕೆಯೊಂದಿಗೆ ಮದುವೆ ಮಾಡಿಸಿದ್ದಾಳೆ.
ಉಗ್ಗಂಪಲ್ಲಿ ಗ್ರಾಮದ ಸುರೇಶ್ ಅನ್ನೋ ವ್ಯಕ್ತಿಯನ್ನ, ಸರಿತಾ ಅನ್ನೋ ಮಹಿಳೆ, ಕೆಲ ವರ್ಷಗಳ ಹಿಂದೆ ಮದುವೆಯಾಗಿದ್ರು. ಇವರಿಬ್ಬರು, ಮಗ ಮತ್ತು ಮಗಳೊಂದಿಗೆ ಒಳ್ಳೇ ಲೈಫ್ ನಡೆಸ್ತಾ ಇದ್ದರು. ಇತ್ತೀಚಿಗೆ ಮಹಬೂಬಾಬಾದ್ ಸಿಟಿಯಲ್ಲಿದ್ದ ಸುರೇಶ್ ಸಂಬಂಧಿ ಮಗಳಾದ ಸಂಧ್ಯಾ ಅನ್ನೋಳು, ತನ್ನ ಸೋದರ ಮಾವನಾದ ಸುರೇಶ್ನನ್ನು ಪ್ರೀತಿಸೋಕೆ ಶುರು ಮಾಡಿದ್ದಾಳೆ. ಈ ವಿಷಯ ತಿಳಿದು ಆಕೆಯ ಪೋಷಕರು ದಯವಿಟ್ಟು ನನ್ನ ಮಗಳಿಗೆ ನಿನ್ನ ಗಂಡನೊಂದಿಗೆ ಮದುವೆ ಮಾಡಿಸ್ತೀಯಾ ಅಂತ ಸರಿತಾ ಹತ್ರ ಕೇಳಿಕೊಂಡಿದ್ದಾರೆ. ಸಂಧ್ಯಾ ಬುದ್ಧಿಮಾಂದ್ಯ ಯುವತಿಯಾಗಿರೋದ್ರಿಂದ ಆಕೆಯ ಇಷ್ಟವನ್ನು ಪೂರೈಸಿ ಆಕೆಗೂ ಒಂದು ಜೀವನ ಕೊಡೋಣ ಅಂತ ಮಾನವೀಯ ದೃಷ್ಟಿಯಿಂದ ಸರಿತಾ ಒಪ್ಪಿಕೊಂಡಿದ್ದಾಳೆ. ಈ ನಿರ್ಧಾರದಂತೆ ಆಗಸ್ಟ್ 28ನೇ ತಾರೀಖು, ನಗರದ ಭಕ್ತ ಮಾರ್ಕೆಂಡೇಯ ದೇವಸ್ಥಾನದಲ್ಲಿ ಕುಟುಂಬಸ್ಥರು ಹಾಗೂ ಬಂಧುಮಿತ್ರರ ಸಮ್ಮುಖದಲ್ಲಿ ಗಂಡ ಸುರೇಶ್ ಹಾಗೂ ಸಂಧ್ಯಾಗೆ ತಾಳಿ ಕಟ್ಟಿಸಿ, ಸಪ್ತಪದಿ ತುಳಿದು ಅದ್ಧೂರಿಯಾಗಿ ಮದುವೆಯನ್ನ ಹೆಂಡ್ತಿ ಸರಿತಾ ಮಾಡಿಸಿದ್ದಾಳೆ. ಈ ಎರಡನೇ ಮದುವೆ ಸುದ್ದಿ ಇದೀಗ ಎಲ್ಲೆಗೆ ವೈರಲ್ ಆಗುತ್ತಿದೆ.
ಇದನ್ನೂ ಓದಿ: Red Alert: ರಣಭೀಕರ ಮಳೆಗೆ ತತ್ತರಿಸಿ ಹೋದ ತೆಲಂಗಾಣ.. 19 ಜಿಲ್ಲೆಯಲ್ಲಿ ಸಾವು-ನೋವಿನ ಭೀತಿ!
ಇನ್ನು ಇದೇ ರೀತಿ, ಆಂಧ್ರಪ್ರದೇಶದಲ್ಲಿ ಡಿಫ್ರೆಂಟ್ ಮದುವೆ ಆಗಿದೆ. ಆದ್ರೇ ಈ ಗಂಡನಿಗೆ ಒಬ್ಬಳಲ್ಲ.. ಇಬ್ಬರು ಹೆಂಡ್ತೀರು. ಈ ಇಬ್ಬರು ಹೆಂಡತಿಯರು ಸೇರಿ ಕೆಲ ದಿನಗಳ ಹಿಂದೆ ತನ್ನ ಮುದ್ದಿನ ಗಂಡನಿಗೆ ಮೂರನೇ ಮದುವೆ ಮಾಡಿಸಿದ್ದಾರೆ. ಆಂಧ್ರಪ್ರದೇಶದ ಪಾಂಡಣ್ಣ ಎನ್ನುವ ವ್ಯಕ್ತಿಗೆ ತನ್ನ ಇಬ್ಬರು ಹೆಂಡತಿಯರು ಸೇರಿಕೊಂಡು ಮೂರನೇ ಮದುವೆ ಮಾಡಿಸಿದ್ದಾರೆ.
ಇದನ್ನೂ ಓದಿ: NIA ಅಧಿಕಾರಿ ಪುತ್ರಿಯ ನಿಗೂಢ ಸಾವು.. ಬೆಚ್ಚಿ ಬೀಳಿಸಿದ ಭಯಾನಕ ಘಟನೆ; ಆಗಿದ್ದೇನು?
ಸದ್ಯ ಈ ಮದುವೆಯ ಇನ್ವಿಟೇಷನ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯ ಗುಲ್ಲೇಲು ಗ್ರಾಮದ ಪಾಂಡಣ್ಣ, ಎರಡು ಸಾವಿರದ ಇಸ್ವಿಯಲ್ಲಿ ತಮ್ಮ ಮೊದಲ ಪತ್ನಿ ಪಾರ್ವತಮ್ಮ ಎನ್ನುವ ಮಹಿಳೆಯನ್ನ ಮದುವೆಯಾಗಿದ್ದ. ಆದ್ರೇ ಪಾರ್ವತಮ್ಮಗೆ ಮಕ್ಕಳು ಆಗದೇ ಇರೋದಕ್ಕೆ, ಆಕೆಯ ಒಪ್ಪಿಗೆ ಪಡೆದುಕೊಂಡೇ 2007ರಲ್ಲಿ ಮತ್ತೊಮ್ಮೆ ಅಪ್ಪಲಮ್ಮ ಅನ್ನೋ ಮಹಿಳೆಯನ್ನ ಮದುವೆಯಾಗಿದ್ದ. ಇದಾದ್ಮೇಲೆ, ಅಪ್ಪಲಮ್ಮಗೆ ಮಗು ಕೂಡ ಆಯ್ತು. ಈಗ ಮತ್ತೊಂದು ಮಗು ಬೇಕು ಅಂತ ಇಬ್ಬರು ಹೆಂಡತಿಯರೇ ಮುಂದೆ ನಿಂತು ಗಂಡನಿಗೆ ಮತ್ತೊಂದು ಮದುವೆ ಮಾಡಿದ್ದಾರೆ.
ಇದನ್ನೂ ಓದಿ:ದೀಪಿಕಾ ಪಡುಕೋಣೆ ಫ್ಯಾನ್ಸ್‌ಗೆ ಗುಡ್‌ನ್ಯೂಸ್.. ಸೆ.28ಕ್ಕೆ ಬರಲಿದೆ ಮನೆಗೆ ಮುದ್ದು ಮಗು; ಇದೇ ಡೇಟ್ ನಿಶ್ಚಯ ಯಾಕೆ?
ತಾಳಿ ಕಟ್ಟಿಸಿಕೊಂಡು, ಧರ್ಮಪತ್ನಿಯಾದವಳು ತನ್ನ ಗಂಡ, ಬೇರೊಬ್ಬ ಹೆಣ್ಣನ್ನು ಕಣ್ಣೆತ್ತಿ ನೋಡೋದಕ್ಕೆ ಬಿಡೋದಿಲ್ಲ ಅನ್ನೋದು ವಾಸ್ತವದಲ್ಲಿರುವ ಮಾತು. ಎಷ್ಟೋ ಪ್ರೇಮಿಗಳು ಹಾಗೂ ದಂಪತಿಗಳು, ಇಂಥಾ ಕಾರಣದಿಂದಲೇ ಬೇರೆ ಬೇರಾಗಿದ್ದನ್ನು ನಾವು ನೋಡ್ತಾ ಇರುತ್ತೇವೆ.. ಆದ್ರೇ ಇಲ್ಲಿ, ಗಂಡನಿಗೆ ಮದುವೆಯನ್ನ ಮುಂದೆ ನಿಂತು ಹೆಂಡತಿಯೇ ಮದುವೆ ಮಾಡಿಸಿರೋ ವಿಚಾರ ಮಾತ್ರ ಎಪಿಕ್ ಅಂತ ಹೇಳಬಹುದು. ಜೊತೆಗೆ ಮದುವೆ ಮಾಡಿಸಿದ ಹೆಂಡತಿಯೇ ಸುಮ್ನೆ ಇರೋವಾಗ ನಮ್ಗೇನೂ ಪ್ರಾಬ್ಲಂ ಇಲ್ಲ.. ಎಲ್ಲಾ ಅವರಿಷ್ಟ ಅಂತ ಕುಟುಂಬಸ್ಥರು, ಊರಿನವರು ಹೇಳ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ