newsfirstkannada.com

ಪ್ರೀತಿಯನ್ನು ನಂಬಿ ಬರೋಬ್ಬರಿ 26 ಲಕ್ಷ ಕಳ್ಕಂಡ ಯುವಕ; ನೀವು ಓದಲೇಬೇಕಾದ ಸ್ಟೋರಿ!

Share :

18-08-2023

    ಯಾರನ್ನಾದ್ರೂ ಲವ್​ ಮಾಡೋ ಮುನ್ನ ಎರಡು ಬಾರಿ ಯೋಚಿಸಿ

    ನಿಮ್ಮ ಬಳಿಯಿರೋ ದುಡ್ಡು ಖರ್ಚು ಮಾಡಿ ಬೀದಿಗೆ ಬೀಳಬೇಡಿ..!

    ಹುಡುಗಿಯನ್ನು ನಂಬಿ ಬರೋಬ್ಬರಿ 26 ಲಕ್ಷ ಕಳೆದು ಕೊಂಡ ಪ್ರೇಮಿ

ನಾ ನಿನ್ನ ಮರೆಯಲಾರೆ ಅಂತ ಒಂದ್​ ಕಾಲದಲ್ಲಿ ಕೈ ಕೈ ಹಿಡ್ಕೊಂಡು ಊರೆಲ್ಲಾ ಸುತ್ತಾಡಿದ್ದ ಕೀರ್ತಿರಾಜ್ ಎಂಬ ಆ ಯುವಕ. ನದಿಯ ಹೆಸರನ್ನ ಇಟ್ಕೊಂಡಿದ್ದ ಯಮುನಾ ನದಿಯಂತೆಯೇ ಸ್ವಚ್ಛ ಮನಸಿನವಳಂತೆ ಕೀರ್ತಿರಾಜ್ನ ಪ್ರೀತಿಯನ್ನ ಒಪ್ಪಿದ್ದಳು. ಹೀಗಾಗಿ ಅಂದು ಒಪ್ಕೊಂಡ್​ ಬಿಟ್ಲು ಕಣ್ಲಾ ಪ್ರೀತಿ ಮಾಡೋಕೆ ಅಂತ ಸ್ನೇಹಿತರ ಮುಂದೆ ಸಂತಸ ಪಟ್ಟಿದ್ದ. ಆದ್ರೆ ಈಗ ಅದೇ ಸ್ನೇಹಿತರ ಮುಂದೆ ಪ್ರೀತಿಯ ಪಾರಿವಾಳ ಹಾರಿಹೋಯ್ತು ಗೆಳೆಯ ಅಂತ ಹೇಳುತ್ತಾ ಕಣ್ಣೀರು ಹಾಕ್ತಿದ್ದಾನೆ.

ಇಲ್ಲಿ ಬರೀ ಪ್ರೀತಿಯ ಪಾರಿವಾಳ ಹಾರಿ ಹೋಗ್ಲಿಲ್ಲ. ಜೊತೆಗೆ ಬರೋಬ್ಬರಿ 26 ಲಕ್ಷಾನ ದೋಚ್ಕೊಂಡೂ ಹೋಗಿದೆ. ಕಿರಣ್‌ ಮತ್ತು ಯಮುನಾದು 2 ವರ್ಷ ಪ್ರೀತಿ. ಈ ಪ್ರೀತಿ ಟೈಮಲ್ಲಿ ಚಿನ್ನ, ರನ್ನ, ನನ್ ಮುನ್ನ ಅಂತ ಯಾಮಾರಿಸಿ ಕಿರಣ್ ಬಳಿ ಪೀಕಿದ್ದು ಬರೋಬ್ಬರಿ 26 ಲಕ್ಷ. ಕ್ಲೈಮ್ಯಾಕ್ಸಲ್ಲಿ ಇನ್ನೂ ಒಂದು ಟ್ವಿಸ್ಟ್ ಇದೆ.

ಯಮುನೆಯಲ್ಲಿ ಕಳೆದು ಹೋದ ಕಿರಣ್‌!

2020ರಲ್ಲಿ ಯಮುನಾ ಮತ್ತು ಕೀರ್ತಿರಾಜ್​ ಪರಿಚಯವಾಗ್ತಾರೆ. ಕೀರ್ತಿರಾಜ್​ ಕಂಪನಿಗೆ ಕೆಲಸ ಕೇಳ್ಕೊಂಡು ಬಂದಿದ್ದ ಯಮುನಾಗೆ ಅಲ್ಲಿ ಕೆಲಸವಿರಲಿಲ್ಲ. ಆಗ ಪರಿಚಯವಾಗಿದ್ದ ಕೀರ್ತಿರಾಜ್​ ಬಳಿ ಎಲ್ಲಾದರೂ ಕೆಲಸವಿದ್ರೆ ಹೇಳಿ ಅಂತ ಯಮುನಾ ಮನವಿ ಮಾಡಿರ್ತಾಳೆ. ಬಳಿಕ ಇಬ್ಬರೂ ಫೋನ್​ ನಂಬರ್ ಎಕ್ಸ್​ಚೇಂಜ್​ ಮಾಡ್ಕೊಳ್ತಾರೆ. ಬಳಿಕ ಮಾತುಕತೆ.. ಸ್ನೇಹಕ್ಕೆ ತಿರುಗುತ್ತೆ. ಸ್ನೇಹ ಪ್ರೀತಿಯಾಗಿ ಮದುವೆಯಾಗೋಣ ಅಂತ ನಿರ್ಧಾರ ಮಾಡ್ತಾರೆ. ಇತ್ತ ಕೀರ್ತಿರಾಜ್​ ತನ್ನ ಪೋಷಕರನ್ನೂ ಒಪ್ಪಿಸಿಕೊಂಡಿದ್ದ. ಅದನ್ನ ಯಮುನಾ ಬಳಿ ಹೇಳ್ತಾನೆ. ಆಗ ಕೀರ್ತಿರಾಜ್​ಗೆ ಶಾಕ್​ ಎದುರಾಗುತ್ತೆ.

ಮದುವೆ ಆಗೋದು ಸದ್ಯ ಕಷ್ಟ ಆಗುತ್ತೆ. ನಾನು ಬಡವಳು. ನಿಮ್ಮ ಜೊತೆ ಮದುವೆ ಅಂದ್ರೆ ಖರ್ಚುವೆಚ್ಚ ಎಲ್ಲ ಭರಿಸೋಕೆ ನಮ್ಮ ಕುಟುಂಬಕ್ಕೆ ಕಷ್ಟ ಆಗುತ್ತೆ ಅಂತ ಹೇಳ್ತಾಳೆ. ಇದಕ್ಕೆ ಕರಗಿದವ ನಮ್ಮ ಮದುವೆಗೆ ನಾನೇ ಎಲ್ಲಾ ಖರ್ಚು ಮಾಡ್ತೀನಿ ಅಂತ ಮಾತು ಕೊಡ್ತಾನೆ.

ಪ್ರೀತಿಗೆ ಒಬ್ಬ… ಮದುವೆ ಇನ್ನೊಬ್ಬ!

ಮದುವೆಗೆ ಒಡವೆ ತೆಗೆದುಕೊಳ್ಳೋಕೆ ಅಂತ ಸ್ವಲ್ಪ, ತಾಯಿಯನ್ನ ಆಸ್ಪತ್ರೆ ಸೇರಿಸಬೇಕು ಅಂತ ಮತ್ತೊಂದಿಷ್ಟು, ಮದುವೆಗೆ ಸಿದ್ಧತೆ ಮಾಡಿಕೊಳ್ಬೇಕು ಮಗದಷ್ಟು ಅಂತ ಎರಡು ಲಕ್ಷ ಹಣ ಪಡೆದಿದ್ದಳು ಯಮುನಾ. ನನ್ನ ಮದುವೆಗೇ ಅಲ್ವಾ ಅಂತ ಯೋಚನೆ ಮಾಡದೇ ಬ್ಯಾಂಕ್​ ಖಾತೆಗೆ ಅಲ್ದೇ ನಗದಾಗಿಯೂ ಕೀರ್ತಿರಾಜ್​ ಹಣ ಕೊಟ್ಟಿದ್ದ. ಆದ್ರೆ ಇಷ್ಟೆಲ್ಲಾ ಹಣ ಪಡೆದವಳು ಬೇರೊಬ್ಬನ ಜೊತೆ ಹಸೆ ಮಣೆ ಏರಿದ್ದಾಳೆ.

26 ಲಕ್ಷ ತಗೊಂಡೋಳು ಮದ್ವೆಯಾಗಿದ್ದು ಮತ್ತೊಬ್ಬನ್ನ. ಮದುವೆ ಬಗ್ಗೆ ಕೀರ್ತಿರಾಜ್​ಗೆ ಮಾಹಿತಿ ಸಿಕ್ತಿದ್ದಂತೆ ಯಮುನಾಗೆ ಫೋನ್​ ಮಾಡಿ ಕೀರ್ತಿರಾಜ್​ ವಿಚಾರಿಸಿದ್ದ. ಆಗ ಸಾರಿ ಹೇಳಿ, ನಿನ್ನ ಹಣ ವಾಪಾಸ್​ ಕೊಡ್ತೀನಿ ಸ್ವಲ್ಪ ಟೈಮ್​ ಕೊಡು ಅಂತ ಕೇಳಿದ್ದಾಳೆ. ಸ್ವಲ್ಪ ದಿನದ ಬಳಿಕ ಹಣ ಕೊಡು ಅಂದ್ರೆ ಮನೆಗೆ ಬಾ ಹಣ ತಗೊಂಡು ಹೋಗು ಅಂತ ಕರೆಸಿಕೊಂಡ ಯಮುನಾ ಗಂಡನ ಜೊತೆ ಸೇರಿಕೊಂಡು ಕೀರ್ತಿರಾಜ್​ಗೆ ಥಳಿಸಿದ್ದಾಳಂತೆ. ಕೊಲೆ ಬೆದರಿಕೆಯೂ ಹಾಕಿದ್ದಾಳೆ.

ಅಬ್ಬಬ್ಬಾ ಎಂಥಾ ಚಾಲಾಕಿ ಅಲ್ವಾ ಈ ಯಮುನಾ.. ಬ್ಯಾಟರಾಯನ ಪುರ ಪೊಲೀಸರು ದೂರು ಪಡೆದು ಎಫ್​​ಐಆರ್​ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಅದೇನೇ ಇರ್ಲಿ ಕೀರ್ತಿರಾಜ್​ನ ಮುದ್ದಾದ.. ಪ್ರೀತಿಯ ಗಿಣಿ.. ಹದ್ದಾಗಿ ಕುಕ್ಕಿದ್ದು ವಿಪರ್ಯಾಸ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರೀತಿಯನ್ನು ನಂಬಿ ಬರೋಬ್ಬರಿ 26 ಲಕ್ಷ ಕಳ್ಕಂಡ ಯುವಕ; ನೀವು ಓದಲೇಬೇಕಾದ ಸ್ಟೋರಿ!

https://newsfirstlive.com/wp-content/uploads/2023/08/Indian_Marriage.jpg

Load More