newsfirstkannada.com

ಮದುವೆಯಾಗಿ 3 ವರ್ಷ ಆದ್ರೂ ನನ್ನ ಗಂಡ ನನ್ನೊಂದಿಗೆ ಮಲಗಿಲ್ಲ- ಮಹಿಳೆ ಕಣ್ಣೀರು

Share :

17-08-2023

    ಮದುವೆ ಆಗಿ 3 ವರ್ಷ ಆದ್ರೂ ಮಕ್ಕಳಾಗಿಲ್ಲ

    ಒಮ್ಮೆಯೂ ನನ್ನ ಗಂಡ ನನ್ನನ್ನು ಮುಟ್ಟಿಲ್ಲ..!

    ಪೊಲೀಸ್ರ ಮುಂದೆ ನೊಂದ ಮಹಿಳೆ ಅಳಲು

ಬೆಂಗಳೂರು: ಶಿವಮೊಗ್ಗ ಮೂಲದ ಯುವತಿ. ಒಳ್ಳೆ ಕೆಲಸ ಜೊತೆಗೆ ಒಳ್ಳೆ ಸಂಬಳ. ಇಷ್ಟಿದ್ಮೇಲೆ ಇನ್ಯಾಕ್​ ತಡ ಅಂತ ಪೋಷಕರು ಓರ್ವ ಟೆಕ್ಕಿ ಜೊತೆ ಮದುವೆ ಮಾಡಿದ್ರು. 2020ರಲ್ಲಿ ದಿಗಂತ್​ ಎಂಬಾತನ ಜತೆ ಮದುವೆ ನಡೆಯುತ್ತೆ. ಆದ್ರೆ ಮದುವೆಯಾಗಿ 3 ವರ್ಷವಾದ್ರೂ ಮೇಲ್ನೋಟಕ್ಕೆ ಜೊತೆಯಾಗಿದ್ರೂ ಅವ್ರಿಬ್ರು ಗಂಡ ಹೆಂಡ್ತಿಯಾಗಿ ಇಲ್ಲ.

ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರೊಂದು ದಾಖಲಾಗಿದೆ. ಗಂಡ ನನಗೆ ಹೆಂಡ್ತಿ ಬೇಕು ಅಂತಿದ್ದಾನೆ. ಆದ್ರೆ ಹೆಂಡ್ತಿ ನನಗೆ ಈ ಗಂಡ ಬೇಡ ಅಂತಿದ್ದಾಳೆ. ಜೊತೆಗೆ ಗಂಡನ ವಿರುದ್ಧ ಒಂದಿಷ್ಟು ಆರೋಪಗಳನ್ನ ಮಾಡಿ ಪೊಲೀಸರೇ ನನಗೆ ನ್ಯಾಯ ಕೊಡಿಸಿ ಅಂತಿದ್ದಾಳೆ.

‘ನನಗೆ ಇಂಥಾ ಗಂಡ ಬೇಡ’

ನಾವು ಮದುವೆಯಾಗಿ 3 ವರ್ಷ ಆಗಿದೆ. ಮಕ್ಕಳಿಲ್ಲ.. ಎಲ್ಲರೂ ಮಕ್ಕಳು ಯಾಕೆ ಆಗಿಲ್ಲ ಅಂತ ಕೇಳ್ತಿದ್ದಾರೆ. ನನ್ನ ಗಂಡ ನನ್ನ ಜೊತೆ ಲೈಂಗಿಕ ಸಂಪರ್ಕ ಹೊಂದದೇ ಇರೋದ್ರಿಂದಲೇ ಮಕ್ಕಳಾಗಿಲ್ಲ. ಎರಡು ವರ್ಷ ನನ್ನನ್ನ ಈ ಮಹಾನುಭಾವ ಮುಟ್ಟೇ ಇಲ್ಲ. ಮಕ್ಕಳ ಬಗ್ಗೆ ಕೇಳಿದ್ರೆ ತಪ್ಪಿಸಿಕೊಂಡು ಹೋಗ್ತಾರೆ. ದೈಹಿಕವಾಗಿ ದೌರ್ಜನ್ಯ ಮಾಡ್ತಾರೆ. ಕೃತಕ ಗರ್ಭಧಾರಣೆ ಮಾಡಿಸೋಣ ಅಂತಾರೆ. ನನಗೆ ಒಮ್ಮೆ ಅನುಮಾನ ಬಂದು ಅವರ ಮೊಬೈಲ್​ ಚೆಕ್​ ಮಾಡಿದೆ. ಅಲ್ಲಿ ನಾನಿರಬೇಕಾದ ಜಾಗದಲ್ಲಿ ಮತ್ತೊಬ್ಬ ಗಂಡಸಿದ್ದಾನೆ. ಅವನ ಜೊತೆ ನನ್ನ ಗಂಡ ಲೈಂಗಿಕ ಸಂಪರ್ಕ ಸಾಧಿಸಿದ್ದಾರೆ. ಇದನ್ನ ಪ್ರಶ್ನೆ ಮಾಡಿದ್ರೆ ಮತ್ತೆ ಹಲ್ಲೆ ಮಾಡಿದ್ರು. ನಾನು ಈಗ ತವರಲ್ಲಿದ್ದೇನೆ. ಕರೆ ಮಾಡಿ ಮನೆಗೆ ಬಾ, ಸಂಸಾರ ಮಾಡು. ಇಲ್ಲದಿದ್ರೆ ಆತ್ನಹತ್ಯೆ ಮಾಡಿಕೊಳ್ತೀನಿ ಅಂತ ಬೆದರಿಕೆ ಹಾಕ್ತಿದ್ದಾರೆ. ನನಗೆ ಅವನ ಜೊತೆ ಸಂಸಾರ ಮಾಡಲು ಇಷ್ಟವಿಲ್ಲ. ಕೆಲಸ ಬಿಡಿಸಿದ್ದಾರೆ. ನನ್ನ ಜೀವನ ಹಾಳು ಮಾಡಿರುವ ನನ್ನ ಗಂಡ, ಅತ್ತೆ, ಮಾವನ ವಿರುದ್ದ ಕಾನೂನು ಕ್ರಮ ಕೈಗೊಳ್ಳಿ.

-ಸಂತ್ರಸ್ತೆ

ಮಗ ಸಲಿಂಗ ಕಾಮಿ ಅನ್ನೋದನ್ನ ಮುಚ್ಚಿಟ್ಟು 160 ಗ್ರಾಂ ಚಿನ್ನಾಭರಣದ ಜೊತೆಗೆ ಒಂದಷ್ಟು ಹಣವನ್ನೂ ವರದಕ್ಷಿಣೆಯಾಗಿ ತಗೊಂಡ ಪೋಷಕರಾದ ಪ್ರಭಾಕರ್, ಸುಧಾ ವಿರುದ್ಧ ಸಂತ್ರಸ್ತೆ ದೂರು ದಾಖಲಿಸಿದ್ದಾರೆ. ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮದುವೆಯಾಗಿ 3 ವರ್ಷ ಆದ್ರೂ ನನ್ನ ಗಂಡ ನನ್ನೊಂದಿಗೆ ಮಲಗಿಲ್ಲ- ಮಹಿಳೆ ಕಣ್ಣೀರು

https://newsfirstlive.com/wp-content/uploads/2023/08/Marriage.jpg

Load More