newsfirstkannada.com

ಫ್ರೀ ಬಸ್ ವ್ಯವಸ್ಥೆ​​​​ ಇದ್ರೂ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ ಮಹಿಳೆಯರು.. ಕಾರಣವೇನು..?

Share :

16-06-2023

  ಮುಂಗಡ ಬುಕ್ಕಿಂಗ್​​ಗೆ ಮುಂದಾದ ಮಹಿಳೆಯರಿಗೆ ನಿರಾಸೆ ಮೂಡಿಸಿದ KSRTC!

  ಉಚಿತ ಬಸ್​ನ ಲಾಭವನ್ನು ಪಡೆಯುತ್ತಿದ್ದಾರೆ 50 ಲಕ್ಷಕ್ಕೂ ಅಧಿಕ ಮಹಿಳೆಯರು

  ಟಿಕೆಟ್ ಬುಕ್ಕಿಂಗ್ ಹೆಚ್ಚಳವಾಗುತ್ತಿದ್ದಂತೆ KSRTC ಆ್ಯಪ್​​, ವೆಬ್​ಸೈಟ್​​ನ ಸರ್ವರ್ ಡೌನ್!

ಬೆಂಗಳೂರು: ರಾಜ್ಯದಲ್ಲಿ ಶಕ್ತಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್​ ಸಿಗ್ತಿದೆ. ನಿತ್ಯ 50 ಲಕ್ಷಕ್ಕೂ ಅಧಿಕ ಮಹಿಳೆಯರು ಉಚಿತ ಬಸ್​ನ ಲಾಭ ಪಡೆಯುತ್ತಿದ್ದಾರೆ. ಈ ಯೋಜನೆ ಜಾರಿಯಾದ ಬೆನ್ನಲ್ಲೇ ಮಹಿಳೆಯರ ಓಡಾಟವೂ ಹೆಚ್ಚಿದೆ. ರಾಜ್ಯದ ಮೂಲೆ ಮೂಲೆಗೂ ಟ್ರಿಪ್​ ಮಾಡ್ತಿದ್ದಾರೆ. ದೂರ ಊರಿಗೆ ಪ್ರವಾಸಕ್ಕೆ ತೆರಳುವವರಿಗೆ ಶಕ್ತಿ ಯೋಜನೆ ಅಡಿ ಅಡ್ವಾನ್ಸ್​ ಬಸ್​ ಬುಕ್ಕಿಂಗ್​​ಗೂ ಅವಕಾಶ ನೀಡಲಾಗಿತ್ತು. ಆದರೆ ಮುಂಗಡ ಬುಕ್ಕಿಂಗ್​​ಗೆ ಮುಂದಾದ ಮಹಿಳಾ ಮಣಿಯರಿಗೆ ನಿರಾಸೆಯಾಗಿದೆ.

ಶಕ್ತಿ ಯೋಜನೆ ಮೂಲಕ ದೂರದ ಊರುಗಳಿಗೆ ತೆರಳುವವರಿಗೆ ಅನುಕೂಲ ಆಗಲು, ಅಡ್ವಾನ್ಸ್​ ಬಸ್​ ಬುಕ್ಕಿಂಗ್​​ಗೆ ಕೆಎಸ್ಆರ್​ಟಿಸಿ ಅವಕಾಶ ನೀಡಿತ್ತು. ಸಾಧಾರಣ ಬಸ್​​ಗಳಲ್ಲಿ ಟಿಕೆಟ್ ಬುಕ್ ಮಾಡಲು ಕೆಎಸ್ಆರ್​ಟಿಸಿ ಆ್ಯಪ್ ನಲ್ಲಿ ಅವಕಾಶ ನೀಡಿತ್ತು. ನಾ ಮುಂದು ತಾ ಮುಂದು ಎಂದು ಮುಗಿಬಿದ್ದು ಮಹಿಳೆಯರು ಟಿಕೆಟ್ ಬುಕ್ಕಿಂಗ್ ಮಾಡುತ್ತಿದ್ದರು. ಅಲ್ಲದೆ ಅಡ್ವಾನ್ಸ್​ ಟಿಕೆಟ್ ಬುಕ್ ಮಾಡಲು ಕೇವಲ 20 ರುಪಾಯಿ ಮಾತ್ರ ತೆಗೆದುಕೊಳ್ಳಲಾಗ್ತಿತ್ತು. ಏಕಾಏಕಿ ಬುಕ್ಕಿಂಗ್ ಹೆಚ್ಚಳವಾದ ಕಾರಣ ಕೆಎಸ್ಆರ್​ಟಿಸಿ ಆ್ಯಪ್​​ ಹಾಗೂ ವೆಬ್​​ಸೈಟ್​​ನ ಸರ್ವರ್ ಡೌನ್ ಆಗಿದೆ.

ಕೆಎಸ್ಆರ್​ಟಿಸಿ ವೆಬ್​ಸೈಟ್​​ ಸರ್ವರ್ ಡೌನ್ ಆಗಿದ್ದಕ್ಕೆ ಜನರು ಟ್ವಿಟರ್​ ಖಾತೆಯಲ್ಲಿ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ. ಟಿಕೆಟ್ ಬುಕ್ ಮಾಡಿದ್ರೆ ಅಮೌಂಟ್ ಕಟ್ ಆಗ್ತಿದೆ ಆದರೆ ಸೀಟ್ ಬುಕ್ ಆಗ್ತಿಲ್ಲ ಅಂತ ಕಿಡಿಕಾರಿದ್ದಾರೆ. ಅಲ್ಲದೆ ಕೆಎಸ್ಆರ್​ಟಿಸಿ ಸಹಾಯವಾಣಿಗೆ ಕರೆ ಮಾಡಿದ್ರು ನೋ ರೆಸ್ಪಾನ್ಸ್ ಅಂತ ಟ್ವೀಟ್​ ಮಾಡಿ ಬೇಸರ ವ್ಯಕ್ತಪಡಿಸಿದ್ದರು. ಜನರು ರೊಚ್ಚಿಗೆದ್ದು ಟ್ವೀಟ್​ ಮಾಡಿದ್ರೋ ಕೆಎಸ್ಆರ್​ಟಿಸಿ ಅಲರ್ಟ್​ ಆಗಿ ಟ್ವಿಟರ್​ನಲ್ಲಿ ಪ್ರತಿಕ್ರಿಯೆ ನೀಡಿದೆ. ಟೆಕ್ನಿಕಲ್ ಸಮಸ್ಯೆಯಿಂದ ‌ಸರ್ವರ್ ಡೌನ್ ಆಗಿದೆ‌ ಅಂತ ಸ್ಪಷ್ಟನೆ ನೀಡಿದೆ. ಜೊತೆಗೆ ಕಟ್​ ಆಗಿರುವ ಹಣ ಐದರಿಂದ ಏಳು ದಿನದೊಳಗೆ ನಿಮ್ಮ ಖಾತೆಗೆ ಹಣ ರಿಫಂಡ್ ಆಗುತ್ತೆ ಅಂತ ಭರವಸೆ ನೀಡಿದೆ. ಶೀಘ್ರದಲ್ಲಿಯೇ ಸರ್ವರ್​ ಸರಿ ಹೋಗುತ್ತೆ ಅಂತ ತಿಳಿಸಿದೆ.

ಒಟ್ಟಾರೆ ಶಕ್ತಿ ಯೋಜನೆಗೆ ಜಾರಿ ಆದ ನಂತರ ಸಾರ್ವಜನಿಕ ಸಾರಿಗೆ ಬಳಸುವವರ ಸಂಖ್ಯೆ ಹೆಚ್ಚಳವಾಗಿದೆ. ನಾರಿಯರು ಭರ್ಜರಿ ಟ್ರೀಪ್​ ಕೂಡ ಮಾಡ್ತಿದ್ದಾರೆ. ಆದರೆ ಏಕಾಏಕಿಯಾಗಿ ಸರ್ವರ್​ ಡೌನ್​ ಆಗಿದ್ದು ಜನರಿಗೆ ನಿರಾಸೆ ಮೂಡಿಸಿತ್ತು. ಈಗ ಕೆಎಸ್ಆರ್​ಟಿಸಿ ಸರಿ ಮಾಡುವ ಭರವಸೆ ನೀಡಿದ್ದು, ಮತ್ತೆ ಅಡ್ವಾನ್ಸ್​ ಟಿಕೆಟ್​ ಬುಕ್ಕಿಂಗ್​ ಮಹಿಳೆಯರು ಕಾಯುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಫ್ರೀ ಬಸ್ ವ್ಯವಸ್ಥೆ​​​​ ಇದ್ರೂ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ ಮಹಿಳೆಯರು.. ಕಾರಣವೇನು..?

https://newsfirstlive.com/wp-content/uploads/2023/06/free-bus-4.jpg

Load More