newsfirstkannada.com

VIDEO: ಆನ್​ಲೈನ್​ನಲ್ಲಿ ಆರ್ಡರ್ ಮಾಡಿದ್ದ ಬಾಕ್ಸ್‌ನಲ್ಲಿ ಬುಸ್.. ಬುಸ್‌ ಸದ್ದು; ಆಮೇಲೇನಾಯ್ತು?

Share :

Published June 19, 2024 at 5:25pm

Update June 19, 2024 at 5:51pm

    ಏನಾದ್ರೂ ಹೆಚ್ಚು ಕಡಿಮೆಯಾದ್ರೆ ಜೀವಕ್ಕೆ ಯಾರು ಹೊಣೆ ಅಂತ ಯುವತಿ ಆಕ್ರೋಶ

    ಆನ್​​ಲೈನ್​​ನಿಂದ ಬಂದ ಬಾಕ್ಸ್‌ ಓಪನ್​​ ಮಾಡುತ್ತಿದ್ದಂತೆ ಯುವತಿಗೆ ಕಾದಿತ್ತು ಶಾಕ್

    ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ವಿಡಿಯೋ ನೋಡಿ ಅಚ್ಚರಿಗೊಂದ ನೆಟ್ಟಿಗರು

ಬೆಂಗಳೂರು: ಈಗಂತೂ ಸಾಕಷ್ಟು ಜನ ಆನ್​ಲೈನ್​ನಲ್ಲಿ ಒಟ್ಟೆ, ಮನೆಗೆ ಬೇಕಾದ ವಸ್ತುಗಳು ಸೇರಿದಂತೆ ಇನ್ನು ಏನೇನೋ ಆರ್ಡರ್ ಮಾಡುತ್ತಾರೆ. ಆರ್ಡರ್ ಮಾಡಿದ್ದ ಪಾರ್ಸೆಲ್ ಅನ್ನು ಹಾಗೇ ಓಪನ್​ ಮಾಡುತ್ತಾರೆ. ಆದರೆ ಹೀಗೆ ಆನ್​ಲೈನ್​ನಲ್ಲಿ ಆರ್ಡರ್ ಮಾಡಿದ್ದ ಬಾಕ್ಸ್​​ ಓಪನ್​ ಮಾಡಿದ ಮಹಿಳೆಗೆ ಆಘಾತ ಕಾದಿತ್ತು.

ಇದನ್ನೂ ಓದಿ: ಉಮಾಪತಿ ಹೇಳಿಕೆಯಿಂದ ದರ್ಶನ್​​ಗೆ ಮತ್ತೊಂದು ಸಂಕಷ್ಟ.. ಗೃಹ ಇಲಾಖೆಯಿಂದ ಶಾಕಿಂಗ್ ನಿರ್ಧಾರ..?

ಹೌದು, ಸರ್ಜಾಪುರದಲ್ಲಿ ವಾಸ ಮಾಡುತ್ತಿದ್ದ ಮಹಿಳೆಯೊಬ್ಬರು ಅಮೆಜಾನ್​ನಿಂದ ಎಕ್ಸ್‌ಬಾಕ್ಸ್ ನಿಯಂತ್ರಕವನ್ನು ಆರ್ಡರ್ ಮಾಡಿದ್ದರು. ಆದರೆ, ಆರ್ಡರ್ ಬಾಕ್ಸ್‌ ಅನ್ನು ಓಪನ್​​ ಮಾಡುತ್ತಿದ್ದಂತೆ ತಲೆ ಎತ್ತಿದ ಹಾವನ್ನು ನೋಡಿದ ಕೂಡಲೇ ಮಹಿಳೆ ಬೆಚ್ಚಿ ಬಿದ್ದಿದ್ದಾರೆ. ಮಹಿಳೆ ಆರ್ಡರ್​ ಮಾಡಿದ್ದ Xbox ಕಂಟ್ರೋಲರ್ ಬದಲಿಗೆ ವಿಷಪೂರಿತ ಹಾವು ಪತ್ತೆಯಾಗಿದೆ. ಈ ಬಗ್ಗೆ ಮಹಿಳೆ ಸಾಮಾಜಿಕ ಜಾಲತಾಣವಾದ X ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡ ಬಳಿಕ ಈ ವಿಚಾರ ಬೆಳಕಿಗೆ ಬಂದಿದೆ.

ಅದೃಷ್ಟವಶಾತ್ ಹಾವು ಪ್ಯಾಕೇಜಿಂಗ್ ಟೇಪ್‌ಗೆ ಅಂಟಿಕೊಂಡಿದ್ದರಿಂದ ಜೊತೆಗೆ ತಕ್ಷಣವೇ ಅಲರ್ಟ್ ಆಗಿದ್ದರಿಂದ ಭಾರೀ ಅನಾಹುತ ತಪ್ಪಿ ಹೋಗಿದೆ. ಇನ್ನು, ಅಮೆಜಾನ್ ಕಂಪನಿಯ ನಿರ್ಲಕ್ಷ್ಯಕ್ಕೆ ಮಹಿಳೆ ಆಕ್ರೋಶ ಹೊರ ಹಾಕಿದ್ದಾರೆ. ಕೂಡಲೇ ಈ ವಿಚಾರವನ್ನ ಅಮೆಜಾನ್ ಕಂಪನಿಗೆ​ ತಿಳಿಸಿದ್ದಾರೆ. ಜೊತೆಗೆ ಏನಾದ್ರೂ ಹೆಚ್ಚು ಕಡಿಮೆಯಾದ್ರೆ ಯಾರು ಹೊಣೆ ಅಂತ ಅಮೆಜಾನ್ ವಿರುದ್ಧ ಕಿಡಿ ಹಾಕಿದ್ದಾರೆ. ಬಳಿಕ ಅಮೆಜಾನ್​ನಿಂದ ಸಂಪೂರ್ಣ ಹಣ ಮರು ಪಾವತಿ ಮಾಡಿಸಿಕೊಂಡಿದ್ದಾರೆ. ಅಲ್ಲದೇ ಈ ಬಗ್ಗೆ ಕಾನೂನು ಸಮರ ಸಾರಲು ಮಹಿಳೆ ತಯಾರಿ ನಡೆಸುತ್ತಿದ್ದಾರಂತೆ. ಇನ್ನು ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತಿದೆ. ಇದೇ ವಿಡಿಯೋ ನೋಡಿದ ನೆಟ್ಟಿಗರು ಫುಲ್​ ಶಾಕ್​ ಆಗಿದ್ದಾರೆ.

ಈ ಬಗ್ಗೆ ಅಮೆಜಾನ್ ಕಂಪನಿ ಹೇಳಿದ್ದೇನು?

ಅಮೆಜಾನ್ ಆರ್ಡರ್‌ನಲ್ಲಿ ನೀವು ಹೊಂದಿರುವ ಅನಾನುಕೂಲತೆಯ ಬಗ್ಗೆ ತಿಳಿಯಲು ನಾವು ವಿಷಾದಿಸುತ್ತೇವೆ. ಇದನ್ನು ಪರಿಶೀಲಿಸಲು ನಾವು ಬಯಸುತ್ತೇವೆ. ದಯವಿಟ್ಟು ಅಗತ್ಯವಿರುವ ವಿವರಗಳನ್ನು ಇಲ್ಲಿ ಹಂಚಿಕೊಳ್ಳಿ. ಮತ್ತು ನಮ್ಮ ತಂಡವು ನವೀಕರಣದೊಂದಿಗೆ ಶೀಘ್ರದಲ್ಲೇ ನಿಮ್ಮನ್ನು ಸಂಪರ್ಕಿಸುತ್ತದೆ ಎಂದು ಟ್ವೀಟ್​ ಮಾಡುವ ಮೂಲಕ ಈ ಬಗ್ಗೆ ಪ್ರತಿಕ್ರಿಯೆ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಆನ್​ಲೈನ್​ನಲ್ಲಿ ಆರ್ಡರ್ ಮಾಡಿದ್ದ ಬಾಕ್ಸ್‌ನಲ್ಲಿ ಬುಸ್.. ಬುಸ್‌ ಸದ್ದು; ಆಮೇಲೇನಾಯ್ತು?

https://newsfirstlive.com/wp-content/uploads/2024/06/cobra.jpg

Load More