newsfirstkannada.com

ಟಿಕೆಟ್​​ ನೀಡಲು ಆಧಾರ್​​ ಕಾರ್ಡ್​​ ಕೇಳಿದ್ದಕ್ಕೆ ಕಂಡಕ್ಟರ್​​ ಮೇಲೆ ಮಹಿಳೆ ದರ್ಪ; ಅಸಲಿಗೆ ನಡೆದಿದ್ದೇನು?

Share :

26-07-2023

    ಬಿಎಂಟಿಸಿ ಬಸ್​​ ಕಂಡಕ್ಟರ್ ಮೇಲೆ ದರ್ಪ ತೋರಿದ ಮಹಿಳೆ..!

    ಸರ್ಕಾರಿ ಕೆಲಸದ​ ಐಡಿ ಕಾರ್ಡ್​ ತೋರಿಸಿ ಟಿಕೆಟ್​ ಕೊಡಿ ಅಂದ್ರು

    ಆಧಾರ್​​ ಕಾರ್ಡ್​​ ಕೇಳಿದಕ್ಕೆ ಬಿಎಂಟಿಸಿ ಬಸ್​​ ಕಂಡಕ್ಟರ್ ಜತೆ ಜಗಳ

ಬೆಂಗಳೂರು: ಇತ್ತೀಚೆಗೆ ನಡೆದ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ಕೊಟ್ಟ ಮಾತಿನಂತೆ ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್​​ ನೇತೃತ್ವದ ಕಾಂಗ್ರೆಸ್​ ಸರ್ಕಾರ ಐದು ಗ್ಯಾರಂಟಿಗಳ ಜಾರಿಗೆ ಮುಂದಾಗಿದೆ. ಐದು ಗ್ಯಾರಂಟಿಗಳ ಮೊದಲ ಜಾರಿಯಾಗಿದ್ದೇ ಶಕ್ತಿ ಸ್ಕೀಮ್​​. ಮಹಿಳೆಯರ ಹಿತದೃಷ್ಟಿಯಿಂದ ಜಾರಿಯಾದ ಈ ಯೋಜನೆಗೆ ಇಡೀ ರಾಜ್ಯಾದ್ಯಂತ ಅತ್ಯುತ್ತಮ ಸ್ಪಂದನೆ ಸಿಕ್ಕಿದೆ. ಅದರಲ್ಲೂ ಇಷ್ಟು ದಿನ ಮನೆಗಳಲ್ಲೇ ಇದ್ದ ಹೆಣ್ಣುಮಕ್ಕಳು ಹೊರಗೆ ಬಂದು ತಮ್ಮಿಷ್ಟದ ಪ್ರವಾಸಿ ತಾಣಗಳಿಗೆ ಹೋಗುತ್ತಿದ್ದಾರೆ.

ಒಂದೆಡೆ ವಾರಂತ್ಯದಲ್ಲಿ ಸರ್ಕಾರಿ ಬಸ್​ಗಳಲ್ಲಿ ಮಹಿಳೆಯರು ಕಿಕ್ಕಿರಿದು ತುಂಬಿ ಪುಣ್ಯಕ್ಷೇತ್ರಗಳತ್ತ ಮುಖ ಮಾಡಿದ್ದಾರೆ. ಇನ್ನೊಂದೆಡೆ ಸಾಮಾನ್ಯ ಬಡ ಕುಟುಂಬದ ಕೂಲಿ ಕಾರ್ಮಿಕ ಹೆಣ್ಣುಮಕ್ಕಳು ನಿತ್ಯ ಕೆಲಸಕ್ಕೆ ಹೋಗಿ ಬರಲು ಸರ್ಕಾರಿ ಬಸ್​​ ಸೇವೆ ಬಳಸಿಕೊಳ್ಳುತ್ತಿದ್ದಾರೆ. ಹಲವು ಸ್ಥಳಗಳಲ್ಲಿ ನಿಲ್ಲಲು ಕೂಡ ಜಾಗವಿಲ್ಲದಷ್ಟು ಮಹಿಳೆಯರು ತುಂಬಿರುವ ಕಾರಣ ಕಂಡಕ್ಟರ್​​​ಗಳು ಟಿಕೆಟ್​ ಹರಿಯಲು ಕಷ್ಟಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಎಷ್ಟೇ ಕಷ್ಟವಾದ್ರೂ ಕಂಡಕ್ಟರ್​ಗಳು ಪ್ರಯಾಣಿಕರ ಸ್ನೇಹಿಯಾಗಿ ವರ್ತಿಸುತ್ತಿದ್ದಾರೆ. ಹೀಗಾಗಿಯೇ ಮಹಿಳೆಯರು ಆರಾಮಾಗಿ ಬಸ್​ಗಳಲ್ಲಿ ಸಂಚಾರ ಮಾಡಲು ಸಾಧ್ಯವಾಗುತ್ತಿದೆ. ಆದರೆ, ಬೆಂಗಳೂರಿನಲ್ಲಿ ಕಂಡಕ್ಟರ್​​ ಒಬ್ಬರು ಟಿಕೆಟ್​ ಹರಿಯಲು ಮಹಿಳೆಯೊಬ್ಬರ ಬಳಿ ಆಧಾರ್​ ಕಾರ್ಡ್​​​ ಕೇಳಿ ಅವಮಾನಕ್ಕೀಡಾಗಿದ್ದಾರೆ. ಆಧಾರ್​ ಕಾರ್ಡ್​ ಕೇಳಿದ್ದಕ್ಕೆ ಮಹಿಳೆ ಕಂಡಕ್ಟರ್​​ ಮೇಲೆ ದರ್ಪ ತೋರಿ ಅವಮಾನ ಮಾಡಿದ್ದಾರೆ.

ನನ್ನ ಬಳಿ ಈಗ ಆಧಾರ್​ ಕಾರ್ಡ್​ ಇಲ್ಲ. ನಾನು ಕೇಂದ್ರ ಸರ್ಕಾರದ ಉದ್ಯೋಗಿ. ಇದು ನನ್ನ ಸೆಂಟ್ರಲ್​​ ಗವರ್ನಮೆಂಟ್​​​ ಜಾಬ್​​ ಐಡಿ ಕಾರ್ಡ್​​. ಅದರಲ್ಲೇ ಬೆಂಗಳೂರಿನಲ್ಲಿ ವಾಸ ಮಾಡುತ್ತಿರುವ ಅಡ್ರೆಸ್​ ಇದೆ ನೋಡಿ ಎಂದು ಕಂಡಕ್ಟರ್​ಗೆ ಸಮಜಾಯಿಷಿ ಕೊಟ್ಟಿದ್ದಾರೆ. ಜತೆಗೆ ಮೊಬೈಲ್​ನಿಂದ ವಿಡಿಯೋ ಮಾಡಿ ಕಂಡಕ್ಟರ್​ ಬಳಿ ಜಗಳ ತೆಗೆದಿದ್ದಲ್ಲದೆ ಸಹ ಪ್ರಯಾಣಿಕರೊಂದಿಗೂ ವಾಗ್ವಾದಕ್ಕೆ ಇಳಿದಿದ್ದರು. ಈಕೆ ಹಿಂದಿ, ಇಂಗ್ಲೀಷ್​ನಲ್ಲಿ ಕಂಡಕ್ಟರ್​​ ಮೇಲೆ ರೇಗಾಡಿ ಕೂಗಾಡಿ ದರ್ಪ ತೋರಿದ ವಿಡಿಯೋ ವೈರಲ್​ ಆಗಿದೆ. ಜನರು ತುಂಬಿ ತುಳುಕುತ್ತಿರೋ ಸರ್ಕಾರಿ ಬಸ್​ಗಳಲ್ಲಿ ದಿನವಿಡೀ ಜಾಗವಿಲ್ಲದೆ ಟಿಕೆಟ್​ ಹರಿಯಲು ಪರದಾಡುವ, ನಿಂತು ಕೆಲಸ ಮಾಡಿ ದಣಿಯುವ ಕಂಡಕ್ಟರ್​​ಗಳ ಮೇಲೆ ಉತ್ತರ ಭಾರತದ ಮಹಿಳೆ ಹೀಗೆ ದರ್ಪ ತೋರುವುದು ಎಷ್ಟು ಸರಿ ಎಂಬುದು ಸದ್ಯ ಚರ್ಚಿತ ವಿಷಯ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟಿಕೆಟ್​​ ನೀಡಲು ಆಧಾರ್​​ ಕಾರ್ಡ್​​ ಕೇಳಿದ್ದಕ್ಕೆ ಕಂಡಕ್ಟರ್​​ ಮೇಲೆ ಮಹಿಳೆ ದರ್ಪ; ಅಸಲಿಗೆ ನಡೆದಿದ್ದೇನು?

https://newsfirstlive.com/wp-content/uploads/2023/07/bmtc.jpg

Load More