newsfirstkannada.com

ಗೃಹಲಕ್ಷ್ಮಿ ಹಣ ಕಳೆದುಕೊಂಡ ಮಹಿಳೆಯರು.. ಕೋಟಿ ಕೋಟಿ ವಂಚಿಸಿ ಗ್ಯಾಂಗ್ ಎಸ್ಕೇಪ್

Share :

Published July 9, 2024 at 8:58am

  ಟಿ.ಆರ್ ಟ್ರೇಡರ್ಸ್ ಹೆಸರಲ್ಲಿ ಕಂಪನಿ ಬಡವರಿಗೆ ಮೋಸ ಮಾಡಿ ಪರಾರಿ

  ಗೃಹೋಪಯೋಗಿ ವಸ್ತುಗಾಗಿ ಗೃಹಲಕ್ಷ್ಮಿ ಹಣ ಕಳೆದುಕೊಂಡ ಗೃಹಿಣಿಯರು

  ಮನೆಯಲ್ಲಿದ್ದ ದುಡ್ಡಿನ ಜೊತೆಗೆ ಸರ್ಕಾರ ಕೊಡೋ ಗೃಹಲಕ್ಷ್ಮಿ ಹಣ ವಂಚನೆ

ಕಡು ಬಡವರು, ಕೂಲಿ ಮಾಡಿ ಜೀವನ ನಡೆಸ್ತಿದ್ದ ನೂರಾರು ಜನರು ಕಣ್ಣೀರು ಹಾಕ್ತಿದ್ದಾರೆ. ಕಾರಣ ಕಡಿಮೆ ಬೆಲೆಗೆ ಗೃಹೋಪಯೋಗಿ ವಸ್ತುಗಳು ಸಿಗುತ್ತೆ ಎಂಬ ಆಸೆಗೆ ಮೋಸ ಹೋಗಿದ್ದಾರೆ. ಮನೆಯಲ್ಲಿದ್ದ ದುಡ್ಡಿನ ಜೊತೆಗೆ ಸರ್ಕಾರ ಕೊಡೋ ಗೃಹಲಕ್ಷ್ಮಿ ಹಣವನ್ನ ಪಡೆದು ಮಹಿಳೆಯರಿಗೆ ಪಂಗನಾಮ ಹಾಕಿ ಎಸ್ಕೇಪ್ ಆಗಿದ್ದಾರೆ. ಆಸೆ ಇದ್ದರೆ ಪರವಾಗಿಲ್ಲ ಆದರೆ ದುರಾಸೆ ಇರಬಾರದು ಎನ್ನೋದಕ್ಕೆ ಈ ಸುದ್ದಿಯೇ ಸಾಕ್ಷಿ.

ಇದನ್ನೂ ಓದಿ: ಇಂದು ಕೂಡ ಈ ಜಿಲ್ಲೆಗಳ ಶಾಲಾ- ಕಾಲೇಜುಗಳಿಗೆ ರಜೆ.. ಭಾರೀ ಮಳೆ ಆಗೋ ಮುನ್ಸೂಚನೆ

ಇದು ಹಾವೇರಿ ಜಿಲ್ಲೆಯ ಬ್ಯಾಡಗಿ ಪಟ್ಟಣದಲ್ಲಿ ನಡೆದ ಘಟನೆ ಆಗಿದೆ. ಆಫ್​ ರೇಟ್​ ಚೀಫ್​ ರೇಟ್​ಗೆ ಆಸೆ ಬಿದ್ದವರು, ಇದೀಗ ಗೋಳಾಡುವಂತಾಗಿದೆ. ಕೈಯಲ್ಲಿ ರಶೀದಿ ಹಿಡಿದುಕೊಂಡ ಇವರೆಲ್ಲ ಹಗಲು ಕಂಡ ಬಾವಿಗೆ ರಾತ್ರಿ ಬಿದ್ದಿದ್ದಾರೆ.

ಇದನ್ನೂ ಓದಿ: ಸ್ಕೂಟರ್​ಗೆ BMW ಡಿಕ್ಕಿ.. ಒಂದೂವರೆ ಕಿ.ಮೀ ಎಳೆದೊಯ್ದ ಕಾರು.. ಭಾರೀ ಸೌಂಡ್​ ಮಾಡ್ತಿದೆ ಹಿಟ್​ ಅಂಡ್​ ರನ್ ಕೇಸ್

ಫ್ರಿಡ್ಜ್, ಟಿವಿ, ವಾಷಿಂಗ್ ಮಷೀನ್, ಟಿಪಾಯ್ ಹೀಗೆ ಹಲವು ಗೃಹೋಪಯೋಗಿ ವಸ್ತುಗಳನ್ನ ಕಡಿಮೆ ಬೆಲೆಗೆ ನೀಡುವುದಾಗಿ ನಂಬಿಸಿ. 5 ಜನರ ಗುಂಪೊಂದು ಕೋಟ್ಯಾಂತರ ರೂಪಾಯಿ ಹಣ ಪಡೆದು ಎಸ್ಕೇಪ್​ ಆಗಿರುವ ಆರೋಪ ಹೇಳಿ ಬಂದಿದೆ. ಬ್ಯಾಡಗಿ ಪಟ್ಟಣದ ದಂಡಿನಪೇಟೆಯಲ್ಲಿ ಆಂಧ್ರ ಹಾಗೂ ತಮಿಳುನಾಡು ಮೂಲದ ಟಿ.ಆರ್. ಟ್ರೇಡರ್ಸ್ ಹೆಸರಿನ ಬೋಗಸ್ ಕಂಪನಿ ಈ ಬಡ ಜನರಿಗೆ ಮೋಸ ಮಾಡಿದೆ. ಅರ್ಧ ಬೆಲೆಗೆ ಗೃಹೋಪಯೋಗಿ ವಸ್ತುಗಳನ್ನ ಕೊಡ್ತೀವಿ ಅಂತಾ ನಂಬಿಸಿ ಕೂಡಿಟ್ಟಿದ್ದ ಹಣ ಮತ್ತು ಸರ್ಕಾರ ಕೊಟ್ಟಿದ್ದ ಗೃಹಲಕ್ಷ್ಮಿ ಹಣವನ್ನ ಮಹಿಳೆಯರು ವಂಚಕರ ಕೈಗೆ ಕೊಟ್ಟು ಮೋಸ ಹೋಗಿದ್ದಾರೆ.

ಐಟಮ್ಸ್​ ಎಲ್ಲ ಚೆನ್ನಾಗಿದ್ದವು. ಬೇರೆ ಬೇರೆ ವಸ್ತುಗಳೆಲ್ಲ ಚೆನ್ನಾಗಿದ್ದವು. ನಾವು ನೋಡೋಣ ಅಂತ ನಾವು ಹಣ ಕೊಟ್ಟಿದ್ದೇವು. ನಾವು ಇಲ್ಲಿ ಅಂಗಡಿ ಮಾಡುತ್ತಿದ್ದೇವೆ, ಅದಕ್ಕೆ ಕಡಿಮೆ ರೇಟ್​ಗೆ ವಸ್ತುಗಳನ್ನು ಕೊಡುವುದಾಗಿ ಹೇಳಿದ್ದರು. ಜುಲೈ 13ರವರೆಗೆ ಮಾತ್ರ ಆಫರ್ ಇದೆ. ಆ ಮೇಲೆ ಕಂತ್ ರೀತಿಯಲ್ಲಿ ತಿಂಗಳು, ತಿಂಗಳು ಅಥವಾ ವಾರಕ್ಕೊಮ್ಮೆ ಹಣ ಕಟ್ಟಿಸಿಕೊಳ್ಳುತ್ತೇವೆ ಎಂದಿದ್ರು. ಇದರಿಂದಲೇ ನಾವು ಮೋಸ ಹೋದೇವು.

ಪ್ರೇಮಾ, ಮೋಸ ಹೋದವರು

ವಿನಯ್​ ವಾಲಿಶೆಟ್ಟರ್​ ಎಂಬುವರಿಗೆ ಸೇರಿದ ಕಟ್ಟಡವನ್ನ ತಮಿಳುನಾಡಿನ ನಾಲ್ವರ ತಂಡ ಕಾನೂನು ಬಾಹಿರವಾಗಿ ಬಾಡಿಗೆಗೆ ಪಡೆದಿದ್ದರು. ಹಾಗೂ ದಾಖಲೆಗಳನ್ನು ಬ್ಯಾಡಗಿ ಪುರಸಭೆಗೆ ನೀಡಿ ಕಮರ್ಷಿಯಲ್ ಇಲ್ಲದಿದ್ರೂ ಪರವಾನಗಿ ಪಡೆದುಕೊಂಡಿರೋದು ಬಯಲಿಗೆ ಬಂದಿದೆ. ಜನರ ವಿಶ್ವಾಸಗಳಿಸುವ ಸಲುವಾಗಿ ಫ್ರಿಡ್ಜ್, ಟಿವಿ, ವಾಷಿಂಗ್ ಮಷೀನ್, ಟಿಪಾಯ್ ಇತರೆ ವಸ್ತುಗಳನ್ನು ಅರ್ಧ ಬೆಲೆಗೆ ನೀಡ್ತೇವೆಂದು ನಂಬಿಸಿದ್ದಾರೆ. ಈ ಚೀಪ್ ರೆಟ್ ಆಸೆಗೆ ನೂರಾರು ಜನರು ಬಲಿಯಾಗಿ ಹಣ ಕಳಕೊಂಡಿದ್ದಾರೆ.

ಇದನ್ನೂ ಓದಿ: ದರ್ಶನ್ ಜೈಲು ಸೇರಿದಕ್ಕೆ ನೋವಲ್ಲಿರೋ ಡೈನಾಮಿಕ್ ಫ್ಯಾಮಿಲಿ.. ದಾಸನ ಪರ ಬ್ಯಾಟ್​ ಬೀಸ್ತಿರೋ ಸ್ಯಾಂಡಲ್​ವುಡ್

ಅಂದಾಜು ಒಂದೆರಡು ಕೋಟಿ ರೂಪಾಯಿಗಳನ್ನು ಅವರು ಮೋಸ ಮಾಡಿದ್ದಾರೆ. ದಿನ ಏನಿಲ್ಲ ಎಂದರೂ ಒಂದೂವರೆ ಲಕ್ಷ ಅಮೌಂಟ್ ಕಟ್ಟುತ್ತಿದ್ದರಲ್ಲ, ಆ ಹಣ ಎಲ್ಲಿ ಹೋಗುತ್ತೆ ಎಂಬುದು ಗೊತ್ತಿರಲಿಲ್ಲ. ಅಲ್ಲದೇ ಇಲ್ಲಿ ಕೆಲಸ ಮಾಡಲು ಸೇರಿಕೊಂಡಿದ್ದ ನಾಲ್ಕೈದು ಜನರಿಗೆ ರೊಕ್ಕನು ಕೊಡದಂಗೆ ಹೋಗಿದ್ದಾರೆ.

ರಾಜಶೇಖರ್, ಆರೋಪ ಮಾಡಿದವರು

ಇನ್ನು ಈ ವಂಚಕರು ಜನರ ಜೊತೆಗೆ ವ್ಯವಹಾರ ಮಾಡುವ ಫೋಟೋಗಳು ಸಿಕ್ಕಿದ್ದು, ಪೋಲಿಸರು ಕೇಸ್ ದಾಖಲಿಸಿಕೊಂಡು ಆರೋಪಿಗಳ ಸೆರೆಗೆ ಬಲೆ ಬೀಸಿದ್ದಾರೆ. ಸರ್ಕಾರ, ಅಧಿಕಾರಿಗಳು ಎಷ್ಟೇ ಜಾಗೃತಿ ಮೂಡಿಸಿದ್ರೂ, ಜನರು ಆಸೆಗೆ ಬಿದ್ದು, ಮೋಸ ಹೋಗ್ತಿರೋದು ಕಡಿಮೆಯೇ ಆಗ್ತಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗೃಹಲಕ್ಷ್ಮಿ ಹಣ ಕಳೆದುಕೊಂಡ ಮಹಿಳೆಯರು.. ಕೋಟಿ ಕೋಟಿ ವಂಚಿಸಿ ಗ್ಯಾಂಗ್ ಎಸ್ಕೇಪ್

https://newsfirstlive.com/wp-content/uploads/2024/07/HVR_HALF_RATE.jpg

Load More