newsfirstkannada.com

ಮಹಿಳೆಯರಿಗೆ ಕೇಂದ್ರ ಸರ್ಕಾರ ಗುಡ್‌ನ್ಯೂಸ್; ಸಂಸತ್‌ನಲ್ಲಿ ‘ನಾರಿಶಕ್ತಿ ವಂದನ್‌’ ಬಿಲ್ ಮಂಡನೆ.. ಏನಿದರ ವಿಶೇಷತೆ..?

Share :

Published September 20, 2023 at 7:01am

Update September 20, 2023 at 7:03am

    ‘ಲೋಕ’ ಪುನರ್ ವಿಂಗಡಣೆ ಬಳಿಕ ಮೀಸಲಾತಿ ಜಾರಿ

    ಮಹಿಳೆಯರಿಗೆ ಮೀಸಲಾತಿ ನೀಡುವ ಐತಿಹಾಸಿಕ ಹೆಜ್ಜೆ

    ದೇವೇಗೌಡರು ಕಂಡಿದ್ದ ಕನಸು ಮೋದಿಯಿಂದ ಸಕಾರ!

ದೇಶದ ರಾಜಕೀಯ ರಂಗದಲ್ಲಿ ಏಳು-ಬೀಳುಗಳನ್ನ ಕಂಡಿದ್ದ ಮಹಿಳೆಯರಿಗೆ ಮೀಸಲಾತಿ ನೀಡುವ ಪ್ರಕ್ರಿಯೆ ಮತ್ತೆ ಚಾಲ್ತಿಗೆ ಬಂದಿದೆ. ಪ್ರಧಾನಿ ಮೋದಿ ಸರ್ಕಾರ ಮಹಿಳೆಯರಿಗೆ ರಾಜಕೀಯ ರಿಸರ್ವೇಶನ್ ನೀಡಲು ಮಹತ್ವದ ಹೆಜ್ಜೆ ಇಟ್ಟಿದೆ. ನಾರಿಶಕ್ತಿಯ ಅನಾವರಣಕ್ಕೆ ವೇದಿಕೆ ಕಲ್ಪಿಸಲು ಮಸೂದೆಯೂ ಮಂಡನೆಯಾಗಿದೆ.

ಈ ಮೂಲಕ, 27 ವರ್ಷಗಳ ಹಿಂದೆ ದೇವೇಗೌಡರು ಕಂಡಿದ್ದ ಕನಸು ಸಾಕಾರವಾಗ್ತಿದೆ ಅನ್ನೋದನ್ನ ಮರೆಯೋಹಾಗಿಲ್ಲ. 1996 ಅಂದಿನ ಪ್ರಧಾನಿ ಹೆಚ್‌.ಡಿ.ದೇವೇಗೌಡ್ರು ಮಹಿಳೆಯರ ರಾಜಕೀಯ ನೆಲೆಯ ಬಗ್ಗೆ ಕನಸು ಕಂಡಿದ್ರು. ಪುರುಷರಂತೆ ಮಹಿಳೆಯರಿಗೂ ಶಾಸಕಾಂಗ ಸ್ಥಾನಮಾನ ನೀಡುವ ಆಸೆ ಹೊತ್ತಿದ್ರು. ಆದ್ರೆ, ರಾಜಕೀಯ ಪಕ್ಷಗಳ ಇಚ್ಛಾಶಕ್ತಿ ಕೊರತೆಯಿಂದ ಈ ಕನಸು ಕನಸಾಗೇ ಉಳಿದಿತ್ತು. ಇದೀಗ ಈ ಕನಸನ್ನ ನನಸಾಗಿಸಲು ಮೋದಿ ಸರ್ಕಾರ ದಾಪುಗಾಲಿಟ್ಟಿದೆ.

ವಿಶೇಷ ಅಧಿವೇಶನದಲ್ಲಿ ರಾಷ್ಟ್ರದ ನಾರಿಶಕ್ತಿಗೆ ಗುಡ್‌ನ್ಯೂಸ್‌!
ಹೊಸ ಸಂಸತ್​ನಲ್ಲಿ ‘ನಾರಿ ಶಕ್ತಿ ವಂದನ್​’ ಮಸೂದೆ ಮಂಡನೆ

ರಾಷ್ಟ್ರದ ನಾರಿಶಕ್ತಿಗೆ ಕೇಂದ್ರ ಸರ್ಕಾರ ಗುಡ್‌ನ್ಯೂಸ್ ಕೊಟ್ಟಿದೆ. ನೂತನ ಸಂಸತ್‌ ಭವನದಲ್ಲಿ ಇವತ್ತು ವಿಶೇಷ ಅಧಿವೇಶನ ನಡೀತು. ಹೊಸ ಪಾರ್ಲಿಮೆಂಟ್‌ನಲ್ಲಿ ಹೊಸ ಹುರುಪಿನೊಂದಿಗೆ ಪ್ರಧಾನಿ ಮೋದಿ ಸರ್ಕಾರ ಅಡಿ ಇಟ್ಟಿತ್ತು.. ಕಳೆದ 27 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮಹಿಳಾ ಮೀಸಲಾತಿ ಮಸೂದೆಯನ್ನ ಪ್ರಧಾನಿ ಮೋದಿ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿದೆ.. ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್‌ ಮೇಘವಾಲ್‌ ಮಸೂದೆ ಮಂಡನೆ ಮಾಡಿದ್ರು. ಈ ಮೂಲಕ ಲೋಕಸಭೆ, ರಾಜ್ಯಸಭೆ, ವಿಧಾನಸಭೆಯಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ಐತಿಹಾಸಿಕ ಹೆಜ್ಜೆಯನ್ನ ಇಟ್ಟಿದೆ.

‘ನಾರಿಶಕ್ತಿ ವಂದನ್‌’ ವಿಶೇಷತೆ!

ಲೋಕಸಭಾ, ರಾಜ್ಯಸಭೆ, ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇಕಡ 33 ರಷ್ಟು ಮೀಸಲಾತಿ ಕಲ್ಪಿಸೋದು. ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ, ದೇಶದ ಜನಗಣತಿಯ ಬಳಿಕ ಮಹಿಳಾ ಮೀಸಲಾತಿ ಕಾನೂನು ಜಾರಿಗೆ ಬರುವ ಸಾಧ್ಯತೆ ಇದೆ. ಇನ್ನೂ ಮೂರು ಲೋಕಸಭಾ ಅವಧಿಗೆ ಮಹಿಳಾ ಮೀಸಲಾತಿ ಅನುಷ್ಟಾನದಲ್ಲಿ ಇರಲಿದ್ದು, ಈಗಿರುವ ಲೋಕಸಭಾ, ವಿಧಾನಸಭೆಗಳಿಗೆ ಮೀಸಲಾತಿ ಅನ್ವಯಿಸಲ್ಲ. ಅಲ್ಲದೇ ಮಹಿಳಾ ಮೀಸಲಾತಿ ಕ್ಷೇತ್ರಗಳ ರೋಟೇಷನ್ ಮೇಲೆ ಬದಲಾವಣೆ ಆಗಲಿದೆ. ಮಹಿಳಾ ಮೀಸಲಾತಿಯ ಶೇ.33 ರಷ್ಟು ಎಸ್‌ಸಿ, ಎಸ್‌ಟಿಗೆ ಮೀಸಲಾಗಿರಲಿದೆ. 2028ರ ಬಳಿಕ ಶೇಕಡ 33ರಷ್ಟು ಮಹಿಳಾ ಮೀಸಲಾತಿ ಜಾರಿಗೆ ಬರುವ ಸಾಧ್ಯತೆ ಇದೆ. ಇನ್ನೂ ಸದ್ಯ ಲೋಕಸಬೆಯಲ್ಲಿ ಶೇಕಡ 15ರಷ್ಟು ಮಹಿಳಾ ಸಂಸದೆಯರಿದ್ದಾರೆ. ಇತ್ತ ರಾಜ್ಯಸಭೆಯಲ್ಲಿ ಶೇಕಡ 14ರಷ್ಟು ಮಹಿಳಾ ಸಂಸದೆಯರಿದ್ದಾರೆ. ಇನ್ನೂ ಈ ಮಹಿಳಾ ಮೀಸಲಾತಿ ಕಾನೂನು ಜಾರಿಗೆ ಯಾವೆಲ್ಲಾ ಸರ್ಕಾರಗಳು ಪ್ರಯತ್ನಿಸಿದ್ವು.. 1996ರಿಂದ 2023ರವರೆಗೆ ಮಹಿಳಾ ಮೀಸಲಾತಿ ಮಸೂದೆಯ ಹಾದಿ ಹೇಗಿತ್ತು ಅನ್ನೋ ವಿವರ ಕೂಡ ಇಲ್ಲಿದೆ.

ಮಹಿಳಾ ಮೀಸಲಾತಿ ಹಾದಿ

1996ರಲ್ಲಿ ಮೊದಲ ಬಾರಿಗೆ ಸಂಸತ್​ನಲ್ಲಿ ಹೆಚ್‌.ಡಿ. ದೇವೇಗೌಡ ಸರ್ಕಾರ ಈ ಮಸೂದೆಯನ್ನ ಪರಿಚಯಿಸಿತ್ತು. 1998ರಲ್ಲಿ ಮಸೂದೆಯನ್ನ ಅಟಲ್ ಬಿಹಾರಿ ವಾಜಪೇಯಿ​ ಸರ್ಕಾರ ಮರು ಮಂಡನೆ ಮಾಡಿತ್ತು. 1999ರಲ್ಲಿ ಲೋಕಸಭೆಯಲ್ಲಿ ಎನ್​ಡಿಎ ಸರ್ಕಾರದಿಂದ ಹೊಸ ಮಸೂದೆಯ ಮಂಡನೆಯಾಗಿತ್ತು. 2002ರಲ್ಲಿ ಮಂಡನೆಯಾದ ಮಹಿಳಾ ಮೀಸಲಾತಿ ಮಸೂದೆಗೆ ಸೋಲು ಎದುರಾಗಿತ್ತು. ಇನ್ನೂ 2003ರಲ್ಲಿ ಎರಡು ಬಾರಿ ಮಹಿಳಾ ಮೀಸಲಾತಿ ಮಸೂದೆ ಮಂಡನೆಯಾಗಿತ್ತು. 2008 ರಲ್ಲಿ ಯುಪಿಎ ಸರ್ಕಾರ ರಾಜ್ಯಸಭೆ ಟೇಬಲ್​​ಗೆ ನೇರವಾಗಿ ಮಸೂದೆಯನ್ನ ತಂದಿತ್ತು. 2010ರಲ್ಲಿ ರಾಜ್ಯಸಭೆಯಲ್ಲಿ ಮಸೂದೆಯನ್ನ ಯುಪಿಎ ಸರ್ಕಾರ ಅಂಗೀಕಾರ ಮಾಡಿತ್ತು. 2010ರಲ್ಲಿ ರಾಜ್ಯಸಭೆಯಲ್ಲಿ ಮಸೂದೆಗೆ ಬಿಜೆಪಿ, ಎಡಪಕ್ಷಗಳು​, ಜೆಡಿಯು ಬೆಂಬಲ ಸೂಚಿಸಿದ್ವು. ಇದೀಗ 2023ರಲ್ಲಿ ಲೋಕಸಭೆಯಲ್ಲಿ ಬಿಜೆಪಿ ಸರ್ಕಾರ ‘ನಾರಿಶಕ್ತಿ ವಂದನ್ ಹೆಸರಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನ ಮಂಡನೆ ಮಾಡಿದೆ.

ನೂತನ ಸಂಸತ್‌ನಲ್ಲಿ ನಾರಿಶಕ್ತಿ ವಂದನ್‌ ಬಗ್ಗೆ ಮೋದಿ ಮಾತು

ಇನ್ನೂ ನೂತನ ಸಂಸತ್ ಭವನದ ಕಲಾಪದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ನಾರಿಶಕ್ತಿ ವಂದನ್ ಅಧಿನಿಯಮದ ಬಗ್ಗೆ ಪ್ರಸ್ತಾಪಿಸಿದ್ರು. ಅಲ್ಲದೇ ಹಿಂದಿನ ಸರ್ಕಾರಗಳು ಈ ಮಸೂದೆಯನ್ನು ಅಂಗೀಕರಿಸಲು ವಿಫಲವಾಗಿದ್ವು ಅಂತ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಹಿಳೆಯರಿಗೆ ಅಧಿಕಾರ ನೀಡೋದು, ಮಹಿಳೆಯರಿಗೆ ಶಕ್ತಿ ಕಲ್ಪಿಸೋದು ಆ ಒಂದು ಕೆಲಸ ಬಹುಶಃ ಈಶ್ವರನೇ ಇಂಥಹ ಕೆಲಸವನ್ನ ಮಾಡಲು ನನ್ನನ್ನ ಆಯ್ಕೆ ಮಾಡಿಕೊಂಡಂತಿದೆ. ಈ ಕ್ಯಾಬಿನೆಟ್‌ನಲ್ಲಿ ಮಹಿಳೆಯರ ಆರಕ್ಷಣಾ ವಿಧೇಯಕವನ್ನ ಮಂಜೂರು ಮಾಡಲಾಗಿದೆ.

ನಾರಿಶಕ್ತಿ ವಂದನ್‌ ಮಸೂದೆ ಕ್ರೆಡಿಟ್‌ಗಾಗಿ ಮೂರು ಪಕ್ಷಗಳ ಜಟಾಪಟಿ

ಇನ್ನೂ ಮಹಿಳಾ ಮೀಸಲಾತಿ ಬಿಲ್‌ ಏನೋ ಮಂಡನೆಯಾಗಿದೆ. ಆದ್ರೆ, ನಾರಿಶಕ್ತಿ ವಂದನ್‌ ಕ್ರೆಡಿಟ್‌ಗಾಗಿ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಮಧ್ಯೆ ಜಟಾಪಟಿ ನಡೆದಿದೆ. ಈಗಾಗಲೇ ಮಸೂದೆಯನ್ನ ಮಂಡಿಸಿರೋ ಬಿಜೆಪಿ ಸಂಪೂರ್ಣ ಕ್ರೆಡಿಟ್ ತಮ್ಮದಾಗಿಸಿಕೊಳ್ಳಲು ಸಜ್ಜಾಗಿದೆ. ಆದ್ರೆ, ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಈ ಮಸೂದೆ ನಮ್ಮದೇ ಅಂತ ನೇರವಾಗಿ ಬ್ಯಾಟ್ ಬೀಸಿದ್ದಾರೆ. ಇತ್ತ ಮಾಜಿ ಸಿಎಂ ಕುಮಾರಸ್ವಾಮಿ, ಮಹಿಳಾ ಮೀಸಲಾತಿ ಮಸೂದೆ ದೇವೇಗೌಡರ ಕನಸು. 27 ವರ್ಷಗಳ ಬಳಿಕ ದೇವೇಗೌಡರ ಕನಸಿಗೆ ಮರುಜೀವ ಬಂದಿದೆ ಅಂತ ಹರ್ಷ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ, ಮಹಿಳೆಯರನ್ನ ರಾಜಕೀಯವಾಗಿ ಸಬಲಗೊಳಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಜೊತೆಗೆ ಲೋಕಸಭೆಯ ಹೊತ್ತಲ್ಲಿ ಮಹಿಳೆಯರ ಮನಗೆದ್ದು ವಿಪಕ್ಷಗಳಿಗೆ ನಾರಿಶಕ್ತಿಯ ಅಸ್ತ್ರವನ್ನೂ ಪ್ರಯೋಗಿಸಿರೋದಂತೂ ನಿಜ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಹಿಳೆಯರಿಗೆ ಕೇಂದ್ರ ಸರ್ಕಾರ ಗುಡ್‌ನ್ಯೂಸ್; ಸಂಸತ್‌ನಲ್ಲಿ ‘ನಾರಿಶಕ್ತಿ ವಂದನ್‌’ ಬಿಲ್ ಮಂಡನೆ.. ಏನಿದರ ವಿಶೇಷತೆ..?

https://newsfirstlive.com/wp-content/uploads/2023/09/pm-modi-17.jpg

Load More