ಅಪಾರ್ಟ್ಮೆಂಟ್ನ ಅಕ್ಕಪಕ್ಕದವ್ರ ಸಹಾಯದಿಂದ ಆಸ್ಪತ್ರೆಗೆ ಶಿಫ್ಟ್
ಜಾವಿದ್ನನ್ನ ಆಸ್ಪತ್ರೆಗೆ ಸೇರಿಸಿ ರೇಣುಕಾ ಮನೆಗೆ ವಾಪಸ್
ಅಪಾರ್ಟ್ಮೆಂಟ್ಗೆ ಬಂದು ಪರಾರಿಗೆ ಯತ್ನಿಸಿದ್ದ ರೇಣುಕಾ
ಬೆಂಗಳೂರು: ಈಕೆ ರೇಣುಕಾ.. ಬೆಳಗಾವಿ ಮೂಲದವಳು.. ಕೇರಳ ಮೂಲದ ಜಾವಿದ್ ಎಂಬಾತನ ಜೊತೆ ಲಿವಿಂಗ್ ರಿಲೇಶನ್ನಲ್ಲಿದ್ದ ಈಕೆ ಈಗ ಹುಳಿಮಾವು ಪೊಲೀಸರ ಅತಿಥಿಯಾಗಿದ್ದಾಳೆ.
ರೇಣುಕಾ ಪೊಲೀಸರ ಅತಿಥಿಯಾಗಿದ್ದು ಹೇಗೆ? ಯಾಕೆ? ಅಂತ ಹೇಳೋಕು ಮುನ್ನ ಈ ಅಪಾರ್ಟ್ಮೆಂಟ್ ಬಗ್ಗೆ ತಿಳ್ಕೊಳಿ. ಇದು ಹುಳಿಮಾವು ಠಾಣಾ ವ್ಯಾಪ್ತಿಯ ಅಕ್ಷಯ ನಗರದ ಸರ್ವಿಸ್ ಅಪಾರ್ಟ್ಮೆಂಟ್. ಇದೇ ಅಪಾರ್ಟ್ಮೆಂಟ್ನಲ್ಲಿ ರೇಣುಕಾ ಮತ್ತು ಜಾವಿದ್ ಉಳ್ಕೊಂಡಿದ್ರು. ಪ್ರೀತಿ ಅರಳಿದಾಗಿನಿಂದ ಚೆನ್ನಾಗಿದ್ದ ಜೋಡಿ ಮಧ್ಯೆ ಹಣಕಾಸಿನ ವ್ಯವಹಾರವೂ ಆಗಿತ್ತು. ಇದೆಲ್ಲದರ ನಡುವೆ ನಿನ್ನೆ ಇಬ್ಬರೂ ಭೇಟಿಯಾಗಿದ್ರು.. ಆಗ ರೇಣುಕಾ ಜಾವಿದ್ ಎದೆಗೆ ಚಾಕುವಿನಿಂದ ಚುಚ್ಚಿಬಿಟ್ಟಿದ್ದಳು.
ಲಾಕ್ ಆಗಿದ್ದು ಹೇಗೆ?
ಅಪಾರ್ಟ್ಮೆಂಟ್ನಲ್ಲಿದ್ದ ಅಕ್ಕ ಪಕ್ಕದವ್ರ ಸಹಾಯ ಪಡೆದು ಆತನನ್ನ ಆಸ್ಪತ್ರೆಗೆ ಸೇರಿಸಿದ್ದಳು. ಆತ ಆಸ್ಪತ್ರೆಯಲ್ಲಿ ದಾಖಲಾಗುತಿದ್ದಂತೆ ಬಳಿಕ ವಾಪಾಸ್ ಆಗಿದ್ದಳು..ಆಗ ಅಪಾರ್ಟ್ಮೆಂಟ್ ಗೆ ಬಂದು ಅಲ್ಲಿಂದ ಪರಾರಿಗೆ ಯತ್ನಿಸಿದ್ದು, ಡೋರ್ ಲಾಕ್ ಮಾಡಿದ ಅಪಾರ್ಟ್ಮೆಂಟ್ ಸಿಬ್ಬಂದಿ ಪೊಲೀಸ್ರಿಗೆ ಮಾಹಿತಿ ನೀಡಿದ್ರು. ಬಳಿಕ ಪೊಲೀಸರು ಬಂದು ಆಕೆಯನ್ನ ಅರೆಸ್ಟ್ ಮಾಡಿ ವಿಚಾರನೆ ನಡೆಸಿದಾಗ ಆಕೆ ಅಸಲಿ ಕಥೆ ಬಾಯ್ಬಿಟ್ಟಿದ್ದಾಳೆ.
‘ಅನುಮಾನದ ಹುಳು ಅವನು’
ತನಗೆ ಈಗಾಗ್ಲೇ ಒಂದು ಮದುವೆಯಾಗಿ ಹೆಣ್ಣುಮಗುವಿದೆ. ಆದ್ರೆ ನಾನು ಗಂಡನಿಂದ ದೂರಾಗಿ ಜಾವಿದ್ನ ಜೊತೆ ಇದ್ದೆ. ನನ್ನ ಮಗಳೂ ನನ್ನ ಜೊತೆಯಲ್ಲೇ ಇದ್ದಾಳೆ. ಇತ್ತೀಚಿಗೆ ಜಾವಿದ್ ನನ್ನ ಮೇಲೆ ಅನುಮಾನ ಪಡ್ತಿದ್ದ. ನನಗೆ ಅದು ಸಹಿಸಿಕೊಳ್ಳೋಕೆ ಆಗದೇ ಚುಚ್ಚಿಬಿಟ್ಟೆ.
– ರೇಣುಕಾ, ಕೊಲೆ ಆರೋಪಿ
ರೇಣುಕಾ ಆಸ್ಪತ್ರೆಯಿಂದ ಅಪಾರ್ಟ್ಮೆಂಟ್ಗೆ ಬರ್ತಿದ್ದಂತೆ ಅತ್ತ ಜಾವಿದ್ ಕೊನೆಯುಸಿರೆಳೆದಿದ್ದಾನೆ. ಪೊಲೀಸರು ರೇಣುಕಾ ವಿರುದ್ದ ಕೊಲೆ ಕೇಸ್ ಹಾಕಿ ತನಿಖೆ ಮುಂದುವರೆಸಿದ್ದಾರೆ. ಅದೇನೇ ಇರ್ಲಿ ಇತ್ತೀಚಿಗೆ ಲಿವಿಂಗ್ ರಿಲೇಶನ್ಶಿಪ್ನಲ್ಲಿದ್ದವರ ಕೊಲೆಗಳಾಗ್ತಿರೋದು ವಿಪರ್ಯಾಸ.