newsfirstkannada.com

ಹೊಸ ಪಾರ್ಲಿಮೆಂಟ್‌ನಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡನೆ; ‘ನಾರಿಶಕ್ತಿ’ ಬಿಲ್ ಇತಿಹಾಸವೇನು?

Share :

19-09-2023

    1996ರಲ್ಲಿ ದೇವೇಗೌಡರ ಕಾಲದಲ್ಲಿ ಮೊದಲ ಬಾರಿ ಮಂಡನೆ

    ಲೋಕಸಭೆಯಲ್ಲಿ ಮಹಿಳಾ ಸದಸ್ಯರ ಸಂಖ್ಯೆ 181 ಆಗಲಿದೆ

    ಮೋದಿ ಸರ್ಕಾರದಿಂದ ನಾರಿಶಕ್ತಿ ವಂದನಾ ಮಸೂದೆ ಮಂಡನೆ

ಹೊಸ ಸಂಸತ್ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮಹತ್ವದ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡನೆ ಮಾಡಿದೆ. ಲೋಕಸಭೆಯಲ್ಲಿ ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ನಾರಿಶಕ್ತಿ ವಂದನಾ ಅಧಿನಿಯಮ ಮಸೂದೆ ಮಂಡಿಸಿದ್ದಾರೆ. ಈ ಮಸೂದೆ ಕಾನೂನು ಆಗಿ ಜಾರಿಯಾದಾಗ ದೇಶದಲ್ಲಿ ನಾರಿಶಕ್ತಿ ದುಪ್ಪಾಟ್ಟಾಗುತ್ತೆ. ಹೀಗಾಗಿ ಎರಡು ಸದನದ ಸಂಸದರಲ್ಲೂ ಸರ್ವಾನುಮತದಿಂದ ಮಸೂದೆ ಅಂಗೀಕರಿಸಲು ಪ್ರಾರ್ಥನೆ ಮಾಡುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಹೊಸ ಸಂಸತ್‌ ಭವನದಲ್ಲಿ ಸಂಸದರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಸೆಪ್ಟೆಂಬರ್ 19ರ ಈ ದಿನ ಇತಿಹಾಸದಲ್ಲಿ ಅಚ್ಚಳಿಯದೇ ಉಳಿಯುತ್ತೆ. ಮಹಿಳೆಯರು ಇಂದು ಎಲ್ಲಾ ರಂಗದಲ್ಲೂ ಮುನುಗ್ಗುತ್ತಿದ್ದಾರೆ. ನೀತಿ ನಿರ್ಧಾರದಲ್ಲೂ ನಾರಿಶಕ್ತಿ ಮಹತ್ವಪೂರ್ಣ ಪಾತ್ರ ನಿಭಾಯಿಸುತ್ತಿದ್ದಾರೆ. ಈ ಐತಿಹಾಸಿಕ ಅಧಿವೇಶನದಲ್ಲಿ ಮೊದಲ ದಿನವೇ ದೇಶದ ನಾರಿಶಕ್ತಿಗೆ ಎಲ್ಲಾ ಸಂಸದರು ಸೇರಿ ಹೊಸ ಪ್ರವೇಶದ್ವಾರ ತೆರೆದಿದ್ದೇವೆ. ನಮ್ಮ ಸರ್ಕಾರ ಹೊಸ ಸಂವಿಧಾನ ತಿದ್ದುಪಡಿ ಮಸೂದೆ ಮಂಡಿಸುತ್ತಿದ್ದೇವೆ ಎಂದರು. ಲೋಕಸಭೆ , ವಿಧಾನಸಭೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ವಿಸ್ತಾರ ಮಾಡುತ್ತಿದ್ದು, ನಾರಿಶಕ್ತಿ ವಂದನಾ ಅಧಿನಿಯಮ-2023 ಮೂಲಕ ನಮ್ಮ ಪ್ರಜಾಪ್ರಭುತ್ವ ಶಕ್ತಿಶಾಲಿಯಾಗಲಿದೆ ಎಂದರು. ದೇಶದ ಮಹಿಳೆಯರಿಗೆ ನಾರಿಶಕ್ತಿ ವಂದನಾ ಅಧಿನಿಯಮಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ನಾವು ಈ ಮಸೂದೆಯನ್ನು ಕಾನೂನು ಆಗಿ ಜಾರಿಗೆ ತರಲು ನಾವು ಸಂಕಲ್ಪ ಬದ್ದರಾಗಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಕೇಂದ್ರದ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ನಾರಿಶಕ್ತಿ ವಂದನಾ ಅಧಿನಿಯಮ ಮಸೂದೆಯನ್ನು ಮಂಡಿಸಿದ್ದಾರೆ. ಮಸೂದೆಯನ್ನು ವೆಬ್‌ಸೈಟ್‌ನಲ್ಲಿ ಅಪ್ ಲೋಡ್ ಮಾಡಲಾಗಿದೆ. ಹೊಸ ಪಾರ್ಲಿಮೆಂಟ್‌ನಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ ಎಂದು ಲೋಕಸಭಾ ಸ್ಪೀಕರ್ ಓಂಬಿರ್ಲಾ ಅವರು ಹೇಳಿದ್ದಾರೆ. ಈ ಮಸೂದೆಯನ್ನು ಈಗಾಗಲೇ ವೆಬ್ ಸೈಟ್‌ನಲ್ಲಿ ಅಪ್ ಲೋಡ್ ಮಾಡಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿದ್ದಾರೆ.

ಇದನ್ನೂ ಓದಿ: ಮಹಿಳಾ ಮೀಸಲಾತಿ ಬಿಲ್‌ ನಮ್ಮದು.. ಹೊಸ ಸಂಸತ್‌ ಭವನದ ಎಂಟ್ರಿಗೆ ಮುನ್ನ ದಾಳ ಉರುಳಿಸಿದ ಸೋನಿಯಾ ಗಾಂಧಿ

ದೇವೇಗೌಡರ ಕಾಲದಲ್ಲಿ ಮೊದಲ ಬಾರಿ ಮಂಡನೆ

ಮಹಿಳೆಯರಿಗೆ ಲೋಕಸಭಾ, ವಿಧಾನಸಭೆಯಲ್ಲಿ ಶೇ.33 ರಷ್ಟು ಸ್ಥಾನ ಮೀಸಲಾತಿ ನೀಡುವ ಮಸೂದೆ ಇದಾಗಿದೆ. ಈ ಕಾನೂನು ಜಾರಿಯಾದ್ರೆ ಲೋಕಸಭೆಯಲ್ಲಿ ಮಹಿಳಾ ಸದಸ್ಯರ ಸಂಖ್ಯೆ 181 ಆಗಲಿದೆ. ಈ ಮಸೂದೆಯನ್ನು ಸೆಪ್ಟೆಂಬರ್ 1996ರಲ್ಲಿ ದೇವೇಗೌಡರ ಕಾಲದಲ್ಲಿ ಮೊದಲ ಬಾರಿ ಮಂಡಿಸಲಾಗಿತ್ತು. ಅಟಲ್ ಜೀ ಸರ್ಕಾರದಲ್ಲೂ ಮಸೂದೆ ಮಂಡಿಸಲಾಗಿತ್ತು. 2008ರಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಸರ್ಕಾರ ರಾಜ್ಯಸಭೆಯಲ್ಲಿ ಈ ಮಸೂದೆ ಮಂಡನೆ ಮಾಡಿತ್ತು. 2010ರ ಮಾರ್ಚ್​ 9ರಂದು ರಾಜ್ಯಸಭೆ ಮಹಿಳಾ ಮೀಸಲಾತಿ ಮಸೂದೆಯನ್ನು ಅನುಮೋದಿಸಿತ್ತು.

ಲೋಕಸಭೆಯ ಕ್ಷೇತ್ರ ಪುನರ್ ವಿಂಗಡಣೆಯ ಬಳಿಕ ಹಾಗೂ ದೇಶದ ಜನಗಣತಿಯ ಬಳಿಕ ಮಹಿಳಾ ಮೀಸಲಾತಿ ಕಾನೂನು ಜಾರಿಗೆ ಬರಲಿದೆ. ಹಾಲಿ ಇರುವ ಲೋಕಸಭಾ, ವಿಧಾನಸಭೆಗಳಿಗೆ ಮಹಿಳಾ ಮೀಸಲಾತಿ ಅನ್ವಯಿಸಲ್ಲ. ಮಹಿಳಾ ಮೀಸಲಾತಿ ಕ್ಷೇತ್ರಗಳು ರೋಟೇಷನ್ ಮೇಲೆ ಬದಲಾವಣೆ ಆಗಲಿದೆ. ಮಹಿಳಾ ಮೀಸಲಾತಿ ಮಸೂದೆ ಜಾರಿಯಾದ್ರೆ ಮುಂಬರುವ ಚುನಾವಣೆಯಲ್ಲಿ ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿ ಸಿಗಲಿದೆ. ಸದ್ಯ ಸಂಸತ್ತಿನ ಸದಸ್ಯರಲ್ಲಿ 14.4% ಮಾತ್ರ ಮಹಿಳೆಯರಿದ್ದಾರೆ. ವಿಧಾನಸಭೆಗಳಲ್ಲಿ ಮಹಿಳಾ ಸದಸ್ಯೆಯರ ಸಂಖ್ಯೆ ತೀರಾ ಕಡಿಮೆ ಇದೆ. ರಾಷ್ಟ್ರೀಯ ಸರಾಸರಿ ಮಹಿಳಾ ಸದಸ್ಯರ ಪ್ರಮಾಣ ಶೇ.9 ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಹೊಸ ಪಾರ್ಲಿಮೆಂಟ್‌ನಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡನೆ; ‘ನಾರಿಶಕ್ತಿ’ ಬಿಲ್ ಇತಿಹಾಸವೇನು?

https://newsfirstlive.com/wp-content/uploads/2023/09/PM-Modi-IN-Parliment-Session.jpg

Load More