newsfirstkannada.com

PHOTO: ನಾನೇ ಯಜಮಾನಿ, ನಾನೇ ಗೃಹಲಕ್ಷ್ಮಿ.. ನಾರಿಯರ ಜೋಶ್ ಹೇಗಿದೆ ನೋಡಿ

Share :

30-08-2023

    ಗೃಹಲಕ್ಷ್ಮಿ ಯೋಜನೆಗೆ ಮಹಿಳಾ ಮಣಿಯರ ಕಲರ್‌ಫುಲ್ ಸ್ವಾಗತ

    ರಂಗೋಲಿಯಲ್ಲಿ ನಾನೇ ಯಜಮಾನಿ, ನಾನೇ ಗೃಹಲಕ್ಷ್ಮಿ ಚಿತ್ತಾರ

    ಮನೆ ಯಜಮಾನಿಯ ಖಾತೆಗೆ ಇಂದೇ ಎರಡು ಸಾವಿರ ರೂ ಜಮೆ

ರಾಜ್ಯ ಸರ್ಕಾರದ ನಾಲ್ಕನೇ ಗ್ಯಾರಂಟಿ ಯೋಜನೆ ನಾರಿಯರ ಜೋಶ್ ಹೆಚ್ಚಿಸಿದೆ. ಗೃಹಲಕ್ಷ್ಮಿ ಯೋಜನೆಯ ಸಂಭ್ರಮ ರಾಜ್ಯದ ವಿವಿಧೆಡೆ ಹಬ್ಬದ ವಾತಾವರಣವನ್ನೇ ತಂದಿದೆ. ಗೃಹಲಕ್ಷ್ಮಿ ಸ್ಕೀಮ್‌ಗೆ ಚಾಲನೆ ನೀಡುವ ಮುಂಚೆಯೇ ಗೃಹಲಕ್ಷ್ಮಿ ಯೋಜನೆಗೆ ಮಹಿಳಾ ಮಣಿಯರು ಕಲರ್‌ಫುಲ್ ಸ್ವಾಗತ ಕೋರಿದ್ದಾರೆ. ರಂಗೋಲಿಯಲ್ಲಿ ನಾನೇ ಯಜಮಾನಿ, ನಾನೇ ಗೃಹಲಕ್ಷ್ಮಿ ಅಂತಾ ಚಿತ್ತಾರ ಮೂಡಿಸಿದ್ದು ಗಮನ ಸೆಳೆದಿದೆ.

ಗೃಹಲಕ್ಷ್ಮಿ ಯೋಜನೆ ಪ್ರತಿ ಮನೆಯ ಯಜಮಾನಿಗೂ ಎರಡು ಸಾವಿರ ನೀಡುವ ಗುರಿಯನ್ನು ಹೊಂದಿದೆ. ಸರ್ಕಾರದ ಈ ಸೌಲಭ್ಯಕ್ಕಾಗಿ ನಾರಿಯರು ವಿಭಿನ್ನವಾಗಿ ಸ್ವಾಗತ ಕೋರಿದ್ದಾರೆ. ಮನೆಗೆ ಧನಲಕ್ಷ್ಮಿ ಬರುತ್ತಿದ್ದಾಳೆ ಎನ್ನುವ ರೀತಿಯಲ್ಲಿ ರಂಗೋಲಿ ಹಾಕುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ದೊಡ್ಡಗುಬ್ಬಿಯಲ್ಲಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಹಿನ್ನೆಲೆ ರಂಗೋಲಿ ಬಿಡಿಸಿ ಸಂಭ್ರಮ ಆಚರಿಸಿದ್ದಾರೆ. ಸುಂದರ ರಂಗೋಲಿಯಲ್ಲಿ ನಾನೇ ಯಜಮಾನಿ, ನಾನೇ ಗೃಹಲಕ್ಷ್ಮಿ ಅಂತಾ ಬರೆದಿದ್ದು ತಮ್ಮ ಸಂತೋಷವನ್ನು ಹೊರ ಹಾಕುತ್ತಿದ್ದಾರೆ. ರಂಗೋಲಿಯ ಬಳಿ ಫೋಟೋ ತೆಗೆಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಬೆಂಗಳೂರು ಟೌನ್ ಹಾಲ್ ಬಳಿ ಗೃಹಲಕ್ಷ್ಮಿ ಕಾರ್ಯಕ್ರಮ ಕಳೆ ಕಟ್ಟಿತ್ತು. ಬಿಬಿಎಂಪಿ ಸಿಬ್ಬಂದಿ ಮಹಿಳಾ ಮಣಿಯರಿಗೆ ಗುಲಾಬಿ ಕೊಟ್ಟು ಬರಮಾಡಿಕೊಂಡಿದ್ದಾರೆ. ಟೌನ್ ಹಾಲ್ ಮುಂಭಾಗದಲ್ಲಿ ಸುಂದರವಾಗಿ ರಂಗೋಲಿ ಇಟ್ಟು ಸಂಭ್ರಮ ಆಚರಿಸಿದ್ದಾರೆ.

ಮೈಸೂರಲ್ಲಿ ಗೃಹಲಕ್ಷ್ಮಿ ಯೋಜನೆಗೆ ರಾಜ್ಯ ಸರ್ಕಾರ ಚಾಲನೆ ನೀಡುತ್ತಿದ್ದು ಇದಕ್ಕಾಗಿ ಬೃಹತ್ ಸಮಾವೇಶವನ್ನೇ ಆಯೋಜಿಸಿದೆ. ಈ ಸಮಾವೇಶಕ್ಕೂ ಮುನ್ನ ಮಹಿಳಾಮಣಿಯರು ಕುಣಿದು ಕುಪ್ಪಳಿಸಿ ತಮ್ಮ ಸಂಭ್ರಮವನ್ನು ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

PHOTO: ನಾನೇ ಯಜಮಾನಿ, ನಾನೇ ಗೃಹಲಕ್ಷ್ಮಿ.. ನಾರಿಯರ ಜೋಶ್ ಹೇಗಿದೆ ನೋಡಿ

https://newsfirstlive.com/wp-content/uploads/2023/08/Rangoli.jpg

Load More