newsfirstkannada.com

ನಾವು​ ಭಯದಿಂದ ಬ್ಯಾಟಿಂಗ್​ ಮಾಡಿದೆವು ಎಂಬ ವಾದ ತಪ್ಪು -ಕುಗ್ಗಿ ಹೋಗಿದ್ದ ಆಟಗಾರರಿಗೆ ದ್ರಾವಿಡ್ ಸ್ಫೂರ್ತಿಯ ಮಾತು

Share :

20-11-2023

    ತಮ್ಮ ತಂಡದ ಹೋರಾಟ ಸಮರ್ಥಿಸಿಕೊಂಡ ದ್ರಾವಿಡ್

    ‘ನಮ್ಮ ಆಟಗಾರರು ಭಯದಿಂದ ಬ್ಯಾಟ್ ಮಾಡಿಲ್ಲ’

    ‘ವಿಕೆಟ್ ಬಿದ್ದಿದ್ದರೆ ನಾವು ಮತ್ತೆ ಗೇಮ್​ನಲ್ಲಿ ಇರುತ್ತಿದ್ದೇವು’

ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಸೋತು ನಿರಾಸೆ ಮೂಡಿಸಿದೆ. ಸೋಲು ಖಚಿತವಾಗುತ್ತಿದ್ದಂತೆಯೇ, ಟೀಂ ಇಂಡಿಯಾ ಆಟಗಾರರ ಮುಖ ಕಳೆಗುಂದಿತ್ತು. ಪಂದ್ಯ ಮುಗಿದ ಬೆನ್ನಲ್ಲೇ ತಂಡದ ಮುಖ್ಯ ಕೋಚ್​ ರಾಹುಲ್ ದ್ರಾವಿಡ್, ತನ್ನ ತಂಡವನ್ನು ಸಮರ್ಥಿಸಿಕೊಂಡು ಕುಗ್ಗಿ ಹೋಗಿದ್ದ ಆಟಗಾರರಿಗೆ ಸ್ಫೂರ್ತಿ ತುಂಬಿದ್ದಾರೆ.

ನಾವು ಭಯದಿಂದ ಆಡಿಲ್ಲ

ಫೈನಲ್ ಪಂದ್ಯದ ವೇಳೆ ನಾವು ಭಯದಿಂದ ಆಡಿದ್ದೇವೆ ಅನ್ನೋದನ್ನು ನಾನು ಒಪ್ಪಿಕೊಳ್ಳುವುದಿಲ್ಲ, ನಮ್ಮ ತಂಡ ಕೂಡ ಒಪ್ಪಿಕೊಳ್ಳಲ್ಲ. ಮೊದಲ 10 ಓವರ್​ನಲ್ಲಿ ನಾವು 80 ರನ್​​ ಗಳಿಸಿದ್ದೇವು. ಆರಂಭದಲ್ಲೇ ವಿಕೆಟ್​ಗಳನ್ನು ಕಳೆದುಕೊಂಡೆವು. ಯಾವಾಗ ವಿಕೆಟ್ ಸತತವಾಗಿ ಬೀಳಲು ಶುರುವಾಯ್ತೋ ಆಗ ಗೇಮ್ ಸ್ಟ್ರಾಟರ್ಜಿ ಮತ್ತು ತಂತ್ರಗಳನ್ನು ಬದಲಾಯಿಸಿಕೊಂಡೆವು. ಆದರೆ ನಾವು ಇಡೀ ಟೂರ್ನಮೆಂಟ್​ನಲ್ಲಿ (ವಿಶ್ವಕಪ್) ಉತ್ತಮ ಪ್ರದರ್ಶನ ನೀಡಿದ್ದೇವೆ.

ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ಬೇಗ ವಿಕೆಟ್ ಕಳೆದುಕೊಂಡಾಗ ಬೇರೆ ಮಾರ್ಗದ ಮೂಲಕ ಚೆನ್ನಾಗಿ ಆಡಿದ್ದೇವು. ಕೆಲವೊಮ್ಮೆ ನಮಗೆ ಆರಂಭ ಉತ್ತಮವಾಗಿ ಸಿಕ್ಕರೂ ಅಂತ್ಯ ಸರಿಯಾಗಿ ಸಿಗದಿದ್ದರಿಂದ ಸೋಲಬೇಕಾಗುತ್ತದೆ. ಫೈನಲ್​​ನಲ್ಲೂ ಅದೇ ಆಗಿದೆ. ನಾವು ಭಯದಿಂದ ಆಟ ಆಡುವುದಿಲ್ಲ ಎಂದರು.

ಮತ್ತೆ ಪುಟಿದೇಳುತ್ತೇವೆ

ಮಿಡಲ್ ಓವರ್​ಗಳಲ್ಲಿ ಅವರು ತುಂಬಾ ಚೆನ್ನಾಗಿ ಬೌಲಿಂಗ್ ಮಾಡಿದರು. ಅದಕ್ಕೂ ಮೊದಲೇ ನಾವು ಮೂರು ವಿಕೆಟ್ ಕಳೆದುಕೊಂಡಿದ್ವಿ. ನಮಗೆ ಮಿಡಲ್ ಓವರ್​ನಲ್ಲಿ ತಂಡದ ಮೊತ್ತವನ್ನು ಹೆಚ್ಚಿಸುವ ಸಮಯವಾಗಿತ್ತು. ಯಾವಾಗ ಅಟ್ಯಾಕಿಂಗ್, ಪಾಸಿಟಿವ್ ಕ್ರಿಕೆಟ್ ಆಡಲು ಶುರುಮಾಡಿದಾಗ ವಿಕೆಟ್​​​ಗಳನ್ನು ಕಳೆದುಕೊಂಡೆವು. ನಾವು ಮತ್ತೆ ಸರಿಪಡಿಸಿಕೊಳ್ಳುತ್ತೇವೆ ಎಂದಿದ್ದಾರೆ.
ಎದುರಾಳಿ ತಂಡದ ಮಾರ್ನಸ್ ಮತ್ತು ಹೆಡ್ ತುಮ್ಮ ಪಾರ್ಟ್ನರ್​ಶಿಪ್ ಮಾಡಿದ್ದನ್ನು ನಾವು ನೋಡಿದೇವು. ಅವರು ವಿಕೆಟ್​ಗಳನ್ನು ಕಳೆದುಕೊಳ್ಳಲಿಲ್ಲ. ಒಂದು ವೇಳೆ ಅವರ ವಿಕೆಟ್ ಬಿದ್ದಿದ್ದರೆ ನಾವು ಮತ್ತೆ ಗೇಮ್​ನಲ್ಲಿ ಇರುತ್ತಿದ್ದೇವು ಎಂದು ದ್ರಾವಿಡ್ ಹೇಳಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ನಾವು​ ಭಯದಿಂದ ಬ್ಯಾಟಿಂಗ್​ ಮಾಡಿದೆವು ಎಂಬ ವಾದ ತಪ್ಪು -ಕುಗ್ಗಿ ಹೋಗಿದ್ದ ಆಟಗಾರರಿಗೆ ದ್ರಾವಿಡ್ ಸ್ಫೂರ್ತಿಯ ಮಾತು

https://newsfirstlive.com/wp-content/uploads/2023/11/RAHUL_DRAVID-2.jpg

Load More