newsfirstkannada.com

ತ್ರಿಷಾ ಜತೆ ಬೆಡ್​ ರೂಮ್​​ ಸೀನ್​ ವಿವಾದ.. ಯಾವುದೇ ಕಾರಣಕ್ಕೂ ಕ್ಷಮೆ ಕೇಳಲ್ಲ ಎಂದ ನಟ ಮನ್ಸೂರ್​​!

Share :

21-11-2023

    ತ್ರಿಷಾ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ಕ್ಷಮೆ ಕೇಳಲ್ಲವೆಂದ ಮನ್ಸೂರ್

    ಲಿಯೋದಲ್ಲಿ ತ್ರಿಷಾ ಜತೆ ಬೆಡ್​ರೂಮ್ ಸೀನ್ ಇರುತ್ತೆಂದು ಭಾವಿಸಿದ್ದೆ

    ವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ ತರಾಟೆಗೆ ತೆಗೆದುಕೊಂಡಿದ್ದ ತ್ರಿಷಾ

ಚೆನ್ನೈ: ಸೌತ್ ಸೆನ್ಸೇಷನ್​ ಹೀರೋಯಿನ್ ತ್ರಿಷಾ ಬಗ್ಗೆ ತಮಿಳಿನ ಖಳನಟ ಮನ್ಸೂರ್ ಅಲಿ ಖಾನ್​ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅವರು ಕ್ಷಮೆ ಕೇಳಬೇಕೆಂದು ಒತ್ತಾಯ ಕೇಳಿ ಬಂದಿತ್ತು. ಆದ್ರೆ ಈ ಬಗ್ಗೆ ಚೆನ್ನೈನಲ್ಲಿ ಮಾಧ್ಯಮಗೋಷ್ಠಿ ನಡೆಸಿರುವ ಮನ್ಸೂರ್ ಅಲಿ ಖಾನ್ ಯಾವುದೇ ಕಾರಣಕ್ಕೂ ಕ್ಷಮೆ ಕೇಳುವುದಿಲ್ಲ ಎಂದು ಹೇಳಿದ್ದಾರೆ.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಮನ್ಸೂರ್ ಅಲಿ ಖಾನ್, ನಾನು ನೀಡಿರುವ ಹೇಳಿಕೆಗೆ ಕ್ಷಮೆ ಕೇಳುವುದಿಲ್ಲ. ಚಲನಚಿತ್ರ ಸಂಸ್ಥೆಯಾದ ನಾಡಿಗರ ಸಂಗಮ ತಾತ್ಕಾಲಿಕವಾಗಿ ನನ್ನನ್ನು ನಿಷೇಧಿಸಿ ತಪ್ಪು ಮಾಡುತ್ತಿದೆ. ಕ್ಷಮೆ ಕೇಳುವವರಿಗೆ ಸೇರ್ಪಡೆ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದೆ. ಆದ್ರೆ ಇದನ್ನು ಅವರು ಹಿಂತೆಗೆದುಕೊಳ್ಳಬೇಕು. ಈ ರೀತಿ ಸಮಸ್ಯೆ ಬಂದಾಗ ನನ್ನನ್ನು ವಿಚಾರಿಸದೆ ಬ್ಯಾನ್ ಮಾಡಿದ್ದಾರೆ. ಇಲ್ಲದಿದ್ದರೇ ಫೋನ್ ಕರೆ ಮಾಡಿ ಏನು ಅಂತ ಕೇಳಬೇಕಿತ್ತು. ಅಥವಾ ಕೊನೆಗೆ ನೋಟಿಸ್ ಆದ್ರೂ ನೀಡಬೇಕಿತ್ತು. ಆದ್ರೆ ಈ ಯಾವುದನ್ನು ಮಾಡದೇ ನಿಷೇಧ ಮಾಡಿರುವುದು ತಪ್ಪು. ಇದನ್ನು ಹಿಂತೆಗೆದುಕೊಳ್ಳಬೇಕು ಎಂದಿದ್ದಾರೆ.

ನಟಿ ತ್ರಿಷಾ ಮತ್ತು ಮನ್ಸೂರ್ ಅಲಿ ಖಾನ್

ನಾಡಿಗರ ಸಂಗಮ ತನ್ನ ನಿರ್ಧಾರವನ್ನು ಹಿತೆಗೆದುಕೊಳ್ಳಲು 4 ಗಂಟೆಗಳ ಕಾಲಾವಕಾಶ ಕೊಡುತ್ತೇನೆ. ನಾನು ಕ್ಷಮೆ ಕೇಳುವವನಂತೆ ಕಾಣುತ್ತಿದ್ದೇನಾ ಎಂದು ಪ್ರಶ್ನಿಸಿದ್ದಾರೆ. ನಾನು ಯಾರೆಂದು ಜನರಿಗೆ ತಿಳಿದಿದೆ. ತಮಿಳರ ಬೆಂಬಲವಿದೆ ಎಂದು ಹೇಳಿದ್ದಾರೆ.

ಇತ್ತೀಚೆಗೆ ದಳಪತಿ ವಿಜಯ್ ಅಭಿನಯದ ಲಿಯೋ ಸಿನಿಮಾದಲ್ಲಿ ತ್ರಿಷಾ ಜೊತೆ ಬೆಡ್​ ರೂಮ್ ಸೀನ್ ಇರುತ್ತೆ ಎಂದು ಭಾವಿಸಿದ್ದೆ ಎಂದು ಮನ್ಸೂರ್ ಅಲಿ ಖಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಸಂಬಂಧ ನಟಿ ತ್ರಿಷಾ ಅವರು ಮನ್ಸೂರ್​ನನ್ನು ತರಾಟೆಗೆ ತೆಗೆದುಕೊಂಡಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತ್ರಿಷಾ ಜತೆ ಬೆಡ್​ ರೂಮ್​​ ಸೀನ್​ ವಿವಾದ.. ಯಾವುದೇ ಕಾರಣಕ್ಕೂ ಕ್ಷಮೆ ಕೇಳಲ್ಲ ಎಂದ ನಟ ಮನ್ಸೂರ್​​!

https://newsfirstlive.com/wp-content/uploads/2023/11/TRISHA-4.jpg

Load More