ಸೋಶಿಯಲ್ ಮೀಡಿಯಾದಲ್ಲಿ ಸಖತ್ ಫೇಮಸ್ ಆಗ್ತಿದೆ ವಿಡಿಯೋ
ಹೊಸ ಟ್ರೆಂಡ್ ಸೃಷ್ಟಿಸಿದ ಜಿಮ್ ಟ್ರೈನರ್ ರೀನಾ ಸಿಂಗ್
ಸೀರೆಯಲ್ಲಿ ಮಾಡಿದ ವರ್ಕೌಟ್ಗೆ ಫಾಲೋವರ್ಸ್ ದಂಗು
ಹೆಣ್ಮಕ್ಕಳ ನಿಜವಾದ ಸೌಂದರ್ಯ ಅನಾವರಣಗೊಳ್ಳುವುದು ಅವರು ಸೀರೆ ಉಟ್ಟಾಗ. ಅದಕ್ಕೆ ನಮ್ಮ ಸಾಹಿತಿಗಳು ‘ಹೆಣ್ಣಿಗೆ ಸೀರೆ ಏಕೆ ಅಂದ’ ಅಂತಾ ಹಾಡಿ ಹೊಗಳಿರೋದು. ಆದರೆ ಸದ್ಯದ ದಿನಮಾನಗಳಲ್ಲಿ ಸೀರೆಗಳಿಂದ ಹೆಣ್ಮಕ್ಕಳು ದೂರ ಆಗ್ಬಿಟ್ಟಿದ್ದಾರೆ. ಆಗಾಗ ಅಪರೂಪಕ್ಕೆ ಸೀರೆ ತೊಟ್ಟು ಕಂಗೊಳಿಸೋದು ಬಿಟ್ಟರೆ, ಅದರ ಬಳಕೆ ಬಹುತೇಕ ಕಮ್ಮಿಯೇ!
ಹಂಗಾದ್ರೆ ಸೀರೆಗೆ ಡಿಮ್ಯಾಂಡ್ ಕಮ್ಮಿ ಆಗಿದ್ಯಾ..?
ಹಾಂಗತ ಅದಕ್ಕೆ ಡಿಮ್ಯಾಂಕ್ ಕಮ್ಮಿ ಆಗಿದೆ ಅಂತಲ್ಲ. ಸೀರೆ ಎಂಬ ಮಾಯಾವಿ ಆಗಾಗ ಸುದ್ದಿಯಲ್ಲಿರುತ್ತದೆ. ಅಜ್ಜಿಯೊಬ್ಬರು ಸೀರೆ ಧರಿಸಿ ಮಾಡಿದ ಸ್ಟಂಟ್, ಟೀಚರ್ ಒಬ್ಬರು ಸೀರೆ ಉಟ್ಟುಕೊಂಡೇ ಮಾಡಿದ ಸಾಹಸ.. ಹೀಗೆ, ನಾನಾ ಬಗೆಯಲ್ಲಿ ಆಗಾಗ ಮೈಲೇಜ್ ಪಡೆದುಕೊಳ್ಳುತ್ತಿರುತ್ತದೆ. ಅದರಂತೆ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಜಿಮ್ ಟ್ರೈನರ್ ಒಬ್ಬರ ವರ್ಕೌಟ್ ಸಖತ್ ಫೇಮಸ್ ಆಗ್ತಿದೆ. ಅದಕ್ಕೆ ಕಾರಣ ಅವರು ಸೀರೆಯಲ್ಲಿ ಮಾಡ್ತಿರೋ ಕಸರತ್ತು..
ಜಿಮ್ ಟ್ರೈನರ್ ರೀನಾ ಸಿಂಗ್
ಹೌದು, ರೀನಾ ಸಿಂಗ್ ಎಂಬ ಫಿಟ್ನೆಸ್ ಟ್ರೈನರ್ ಸೀರೆಯಲ್ಲಿ ವರ್ಕೌಟ್ ಮಾಡಿ ಬಿಸಿಬಿಸಿ ಸುದ್ದಿಯಾಗಿದ್ದಾರೆ. ಫಿಟ್ನೆಸ್ ಸೆಂಟರ್ ನಡೆಸಿಕೊಂಡು ಬರುತ್ತಿರುವ ರೀನಾ, ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಒಂದಷ್ಟು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಸೀರೆಯಲ್ಲಿ ಅವರು ಮಾಡಿರುವ ವರ್ಕೌಟ್ ಕಂಡು ಅಭಿಮಾನಿಗಳು ಬೆರಗಾಗಿದ್ದಾರೆ.
ಫಿಟ್ನೆಸ್ಗೆ ಹೆಚ್ಚು ಜನರನ್ನು ಕರೆ ತರುವ ಉದ್ದೇಶದ ಜೊತೆಗೆ, ಜನರನ್ನು ಮೋಟಿವೇಟ್ ಮಾಡಲು ಮುಂದಾಗಿದ್ದಾರೆ. ಹಾಗೆಯೇ ತಮ್ಮ ಸಂಸ್ಕೃತಿಯ ಭಾಗವಾಗಿರುವ ಉಡುಗೆ-ತೊಡುಗೆಗಳನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮದು ಎಂಬ ಉದ್ದೇಶ ಅವರದ್ದಾಗಿದೆ.
ವಿಶೇಷ ಸೂಚನೆ: ಸಿನಿಮಾ ಲೋಕದ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ಫಿಲ್ಮಿ ಫಸ್ಟ್’ ಪ್ರತಿದಿನ ಸಂಜೆ 5.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್