newsfirstkannada.com

ವಿಶ್ವಕಪ್ ಗೆಲ್ಲುವ ತಂಡ ಯಾವುದು ಅಂತಾ ಭವಿಷ್ಯ ನುಡಿದ ಸಿದ್ದರಾಮಯ್ಯ; ಟೀಂ ಇಂಡಿಯಾ ಬಗ್ಗೆ ಹೇಳಿದ್ದೇನು..?

Share :

18-11-2023

    ಮೋದಿ ಸ್ಟೇಡಿಯಂನಲ್ಲಿ ನಾಳೆ ನಡೆಯಲಿದೆ ಮಹತ್ವದ ಫೈನಲ್

    ಟೀಮ್ ಇಂಡಿಯಾ ಕಪ್ ಗೆದ್ದೇ ಗೆಲ್ಲುತ್ತದೆ- ಸಿದ್ದರಾಮಯ್ಯ ವಿಶ್ವಾಸ

    ಬ್ಯಾಟಿಂಗ್, ಬೌಲಿಂಗ್​ನಲ್ಲೂ ಟೀಮ್ ಇಂಡಿಯಾ ಬಲಿಷ್ಠವಾಗಿದೆ

ಗುಜರಾತ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುವ ವರ್ಲ್ಡ್​​ಕಪ್​ ಫೈನಲ್ ಪಂದ್ಯದ ಮೇಲೆ ಕ್ರಿಕೆಟ್​ ಆಭಿಮಾನಿಗಳ ಚಿತ್ತ ನೆಟ್ಟಿದೆ. ಕಪ್ ಗೆಲ್ಲುವ ಫೆವರಿಟ್ ಪಂದ್ಯ ಭಾರತವಾದರೂ ಈಗಾಗಲೇ 5 ಬಾರಿ ವಿಶ್ವಕಪ್​ ಗೆದ್ದು ದಾಖಲೆ ಬರೆದಿರುವ ಆಸ್ಟ್ರೇಲಿಯಾ ಮತ್ತೆ ಕಪ್​ಗೆ ಮುತ್ತಿಕ್ಕುವ ತವಕದಲ್ಲಿದೆ. ವಿಶ್ವದೆಲ್ಲೆಡೆ ವರ್ಲ್ಡ್​​ಕಪ್​ ಬಗ್ಗೆ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರು, ಟೀಮ್ ಇಂಡಿಯಾ ಈ ಬಾರಿ ಕಪ್‌ ಗೆದ್ದೇ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಾಳೆ ಭಾರತ- ಆಸ್ಟ್ರೇಲಿಯಾ ನಡುವೆ ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದೆ. ಇದರಲ್ಲಿ ಟೀಮ್ ಇಂಡಿಯಾ ಜಯಭೇರಿ ಬಾರಿಸಲಿದೆ. ಈ ಬಾರಿ ಭಾರತ ವಿಶ್ವಕಪ್‌ ಗೆದ್ದೇ ಗೆಲ್ಲುತ್ತದೆ ಎಂದು ವಿಶ್ ಮಾಡಿ ಗುಡ್ ಲಕ್ ತಿಳಿಸಿದ್ದಾರೆ. ಭಾರತ ತಂಡದ ಎಲ್ಲ ಆಟಗಾರರು ಚೆನ್ನಾಗಿ ಬ್ಯಾಟಿಂಗ್, ಬೌಲಿಂಗ್ ಮಾಡುತ್ತಿದ್ದಾರೆ. ಫೀಲ್ಡಿಂಗ್​ನಲ್ಲೂ ಒಳ್ಳೆಯ ಚಾಣಕ್ಷತೆ ತೋರುತ್ತಿದ್ದಾರೆ. ನಮ್ಮ ತಂಡ ಈ ಬಾರಿ ಕಪ್ ಗೆಲ್ಲುವ ನಂಬಿಕೆ ಇದೆ. ಒಂದು ತಂಡವಾಗಿ ಆಟವಾಡಿದರೆ ಗೆಲುವು ಸಾಧ್ಯ. ಎಲ್ಲರೂ ಒಗ್ಗೂಡಿ ಉತ್ತಮವಾಗಿ ಆಟವಾಡಲಿ ಎಂದು ಸಿಎಂ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ವರ್ಲ್ಡ್​​ಕಪ್​ ಫೈನಲ್ ಪಂದ್ಯ ನಾಳೆ ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದೆ. ಈಗಾಗಲೇ ಪಂದ್ಯ ವೀಕ್ಷಣೆಯ ಟಿಕೆಟ್​​​ಗಳೆಲ್ಲ ಸೋಲ್ಡ್​​ಔಟ್ ಆಗಿವೆ ಎಂದು ಹೇಳಲಾಗಿದೆ. ಅಹಮದಾಬಾದ್​ ನಗರದ ಹೋಟೆಲ್​ಗಳೆಲ್ಲ ಭರ್ತಿಯಾಗಿವೆ ಎನ್ನಲಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ವಿಶ್ವಕಪ್ ಗೆಲ್ಲುವ ತಂಡ ಯಾವುದು ಅಂತಾ ಭವಿಷ್ಯ ನುಡಿದ ಸಿದ್ದರಾಮಯ್ಯ; ಟೀಂ ಇಂಡಿಯಾ ಬಗ್ಗೆ ಹೇಳಿದ್ದೇನು..?

https://newsfirstlive.com/wp-content/uploads/2023/11/CM_SIDDARAMAIAH-10.jpg

Load More