newsfirstkannada.com

World Cup: ಟೀಂ ಇಂಡಿಯಾ ಸೆಮೀಸ್​ಗೆ​​ ಎಂಟ್ರಿ ನೀಡಲು ಇನ್ನೆಷ್ಟು ಗೇಣು? ಹಿಂಗಾದ್ರೆ ಇಂಗ್ಲೆಂಡ್ ಕಿಕ್​ಔಟ್​ ಪಕ್ಕಾನಾ?

Share :

24-10-2023

  ಸೇಫ್ ಝೋನ್​ನಲ್ಲಿದೆ ಟೀಮ್ ಇಂಡಿಯಾ..!

  2 ಮ್ಯಾಚ್ ಗೆದ್ದರೆ ಸೆಮೀಸ್​​ ಬಹುತೇಕ ಫಿಕ್ಸ್​!

  ಸೆಮೀಸ್ ಪ್ರವೇಶಕ್ಕೆ ಎಷ್ಟು ಅಂಕ ಬೇಕು..?

ಏಕದಿನ ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾದ ನಾಗಲೋಟ ಮುಂದುವರಿಸಿದೆ. ಸದ್ಯ ಟೇಬಲ್​ ಟಾಪರ್​ ಆಗಿರೋ ಟೀಮ್​ ಇಂಡಿಯಾ ಸೆಮೀಸ್​ಗೆ ಎಂಟ್ರಿ ನೀಡಲು ಇನ್ನೆಷ್ಟು ಮ್ಯಾಚ್ ಗೆಲ್ಲಬೇಕು. ಬೇರೆ ಯಾವ ತಂಡಗಳಿಗೆ ಸೆಮೀಸ್​ಗೆ ಎಂಟ್ರಿ ನೀಡೋ ಚಾನ್ಸ್​​ಯಿದೆ.? ಈ ಬಗ್ಗೆ ಮಾಹಿತಿ ಇಲ್ಲಿದೆ.

ಟೀಮ್ ಇಂಡಿಯಾ ಏಕದಿನ ವಿಶ್ವಕಪ್​​​​​ನಲ್ಲಿ ಸೋಲಿಲ್ಲದ ಸರದಾರನ ಪಟ್ಟಕ್ಕೇರಿದೆ. ಸತತ 5 ಗೆಲುವುಗಳೊಂದಿಗೆ ಮುನ್ನುಗ್ಗುತ್ತಿರುವ ಟೀಮ್ ಇಂಡಿಯಾ, 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ವಿಶ್ವಕಪ್​ ಟೂರ್ನಿಯಲ್ಲಿ ಅಗ್ರಜನಾಗಿ ಮೆರೆಯುತ್ತಿದೆ. ಇದರ ಬೆನ್ನಲ್ಲೇ, ಈ ಆನ್​​ಬೀಟನ್ ಮೆನ್ ಇನ್ ಬ್ಲೂ ಪಡೆ, ​ ಸೆಮಿಫೈನಲ್​​ಗೇರಲು ಇನ್ನೆಷ್ಟು ಮ್ಯಾಚ್ ಗೆಲ್ಲಬೇಕು ಎಂಬ ಚರ್ಚೆ ನಡೀತಾ ಇದೆ.

ನಾಕೌಟ್​​ ಯಾರು..? ಕಿಕ್​ಔಟ್ ಯಾರು..?

ಹೌದು! ಸದ್ಯ ಆಡಿರುವ 5 ಪಂದ್ಯಗಳ ಪೈಕಿ ಐದರಲ್ಲಿ ಗೆದ್ದಿರುವ ರೋಹಿತ್ ಶರ್ಮಾ ಪಡೆಯ ಸೆಮೀಸ್​ ಹಾದಿ ಬಹುತೇಕ ಸೇಫ್ ಆಗಿದೆ. ಮುಂದಿನ 4 ಪಂದ್ಯಗಳ ಪೈಕಿ 2ಕ್ಕಿಂತ ಹೆಚ್ಚು ಪಂದ್ಯ ಗೆದ್ರೆ, ಟೀಮ್ ಇಂಡಿಯಾದ ಸೆಮೀಸ್​ ಸ್ಥಾನ ಗಟ್ಟಿಯಾಗಲಿದೆ. ರನ್​ರೇಟ್​ ಕೂಡ ಉತ್ತಮವಾಗಿರೋದ್ರಿಂದ ಟೀಮ್ ಇಂಡಿಯಾ ಸೆಮಿಫೈನಲ್​​​ಗೇರುವುದು ಬಹುತೇಕ ಕನ್ಫರ್ಮ್​.!

ಟೀಮ್ ಇಂಡಿಯಾ ಮಾತ್ರವೇ ಅಲ್ಲ. 2ನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ ಪಾಲಿಗೂ ಕೂಡ ಸೆಮೀಸ್​​ ಎಂಟ್ರಿ ಸುಲಭದ ಹಾದಿಯಾಗಿದೆ. ಆದ್ರೆ, 4 ಪಂದ್ಯಗಳ ಪೈಕಿ ಆ2ರಲ್ಲಾದ್ರೂ ಕಿವೀಸ್​ ಗೆಲ್ಲಬೇಕು. ಇಲ್ಲ ಕಿವೀಸ್ ಹಾದಿ ಟಫ್ ಫೈಟ್ ಆಗೋದು ಗ್ಯಾರಂಟಿ. ಇವ್ರೇ ಅಲ್ಲ.! ಸೌತ್ ಆಫ್ರಿಕಾ, ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ತ್ರಿಕೋನ ಸ್ಪರ್ಧೆ ಇದ್ದೇ ಇದೆ. ಹೀಗಾಗಿ ಟಫ್ ಕಾಂಪಿಟೇಶನ್​ ತಪ್ಪಿದಿಲ್ಲ.

2019ರ ಏಕದಿನ ವಿಶ್ವಕಪ್​ನಲ್ಲಿ ಏನಾಗಿತ್ತು..?

ಏಕದಿನ ವಿಶ್ವಕಪ್​​ನ ಸೆಮಿಫೈನಲ್​​ಗೆ ಎಂಟ್ರಿ ನೀಡಲು ಪ್ರತಿ ತಂಡಕ್ಕೆ 14 ಅಂಕಗಳ ಅಗತ್ಯತೆ ಇದೆ. ಹೀಗಾಗಿ ಪ್ರತಿ ತಂಡ ಭಾರೀ ಪೈಪೋಟಿಯೇ ನಡೆಸಬೇಕು. ಇನ್​ಫ್ಯಾಕ್ಟ್​_ 2019ರಲ್ಲಿ ರೌಂಡ್ ರಾಬಿನ್ ಮಾದರಿಯಲ್ಲೇ ನಡೆದಿದ್ದ ವಿಶ್ವಕಪ್​ನಲ್ಲಿ ಮಳೆಯ ಕಾರಣಕ್ಕೆ ಕೆಲ ಪಂದ್ಯಗಳು ವಾಶ್​ಔಟ್​ ಆಗಿದ್ವು. ಹೀಗಾಗಿ 5 ಪಂದ್ಯಗಳಲ್ಲಿ ಗೆದ್ದಿದ್ದ ನ್ಯೂಜಿಲೆಂಡ್​​​ ಸೆಮೀಸ್​​​​ಗೆ ಎಂಟ್ರಿ ನೀಡಿತ್ತು. ಆದ್ರೆ, ಈ ಸಲ ಇಂಥಹ ಪರಿಸ್ಥಿತಿ ಎದುರಾಗೋದು ಅನುಮಾನ. ಹೀಗಾಗಿ 7 ಮ್ಯಾಚ್ ಗೆದ್ದು, 14 ಅಂಕಗಳಿಸುವ ಅವಶ್ಯಕತೆ ಇದ್ದೇ ಇದೆ.

ಸದ್ಯ 3ನೇ ಸ್ಥಾನದಲ್ಲಿರುವ ಸೌತ್ ಆಫ್ರಿಕಾ + 2.212ರ ನೆಟ್​​ ರನ್​​ರೇಟ್​ನೊಂದಿಗೆ ಸೆಮೀಸ್​ ಟಿಕೆಟ್​ ಗಿಟ್ಟಿಸೋ ರೇಸ್​ನಲ್ಲಿ ಆಸಿಸ್​ ಹಾಗೂ ಪಾಕ್​ಗಿಂತ ಮುಂಚೂಣಿಯಲ್ಲಿದೆ. ಹೀಗಾಗಿ, 4ನೇ ಸ್ಥಾನಕ್ಕೆ ತೀವ್ರ ಹಗ್ಗಜಗ್ಗಾಟ ನಡೆಯೋದು ಗ್ಯಾರಂಟಿ.

ಒಂದು ಪಂದ್ಯ ಸೋತರೂ ಇಂಗ್ಲೆಂಡ್ ಕಿಕ್ಔಟ್..!

ಜೋಸ್ ಬಟ್ಲರ್​ ನೇತೃತ್ವದ ಇಂಗ್ಲೆಂಡ್​ ಆಡಿದ 4 ಪಂದ್ಯಗಳಲ್ಲಿ 3ರಲ್ಲಿ ಸೋತಿದೆ. ಇದರಿಂದ ಆಂಗ್ಲರ ಸೆಮೀಸ್ ಹಾದಿ ದುರ್ಗಮವಾಗಿದೆ. ಹಾಗಂತ ಸೆಮೀಸ್​ ಡೋರ್ ಸಂಪೂರ್ಣ ಮುಚ್ಚಿಲ್ಲ. 4ನೇ ಸ್ಥಾನಿಯಾಗಿ ಎಂಟ್ರಿ ನೀಡಬಹುದಾದ ಎಲ್ಲಾ ಸಾಧ್ಯತೆಗಳಿವೆ. ಇದಕ್ಕೆ ಮುಂದಿನ ಐದಕ್ಕೆ ಐದು ಪಂದ್ಯಗಳಲ್ಲಿ ಇಂಗ್ಲೆಂಡ್ ಗೆಲುವು ಕಾಣಬೇಕು. ಆದ್ರೆ, ಟೀಮ್ ಇಂಡಿಯಾ ಹಾಗೂ ಆಸ್ಟ್ರೇಲಿಯಾ ತಂಡಗಳ ಎದುರಿನ ಬಿಗ್ ಚಾಲೆಂಜ್ ಮೆಟ್ಟಿ ನಿಲ್ಲೋದೇ ಬಿಗ್ ಟಾಸ್ಕ್..!

ಒಟ್ಟಿನಲ್ಲಿ, ಸದ್ಯದ ಅಂಕಪಟ್ಟಿ ಲೆಕ್ಕಾಚಾರವನ್ನ ಗಮನಿಸಿದ್ರೆ ಟೀಮ್ ಇಂಡಿಯಾ ಮಾತ್ರವೇ ಸೇಫ್ ಜೋನ್​ನಲ್ಲಿರುವಂತೆ ಕಾಣಿಸ್ತಿದೆ. ಹೀಗಾಗಿ, ಟೂರ್ನಿಯ ಸೆಕೆಂಡ್​ ಹಾಫ್​ ಟ್ವಿಸ್ಟ್​ & ಟರ್ನ್​ ನೀಡೋದು ಕನ್​ಫರ್ಮ್​ ಆಗಿದೆ. ಯಾರು ಸೆಮೀಸ್​ಗೆ ಎಂಟ್ರಿ ಕೊಡ್ತಾರೆ.? ಯಾರು ಹೊರ ಬೀಳ್ತಾರೆ.? ಅನ್ನೋದಂತೂ ಸದ್ಯಕ್ಕೆ ಮಿಲಿಯನ್​ ಡಾಲರ್​ ಪ್ರಶ್ನೆಯಾಗಿದ್ದು, ಕಾಲವೇ ಇದಕ್ಕೆ ಉತ್ತರ ನೀಡಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

World Cup: ಟೀಂ ಇಂಡಿಯಾ ಸೆಮೀಸ್​ಗೆ​​ ಎಂಟ್ರಿ ನೀಡಲು ಇನ್ನೆಷ್ಟು ಗೇಣು? ಹಿಂಗಾದ್ರೆ ಇಂಗ್ಲೆಂಡ್ ಕಿಕ್​ಔಟ್​ ಪಕ್ಕಾನಾ?

https://newsfirstlive.com/wp-content/uploads/2023/09/Team_India-1.jpg

Load More