ಭಾರತೀಯ ಪಿಚ್ನಲ್ಲಿ ಕೆರಳಿ ನಿಲ್ತಾರೆ ವಾರ್ನರ್-ಸ್ಮಿತ್..!
ಮಿಚೆಲ್ ಸ್ಟಾರ್ಕ್-ಜಂಪಾ ಭಾರತಕ್ಕೆ ಸದಾ ದುಸ್ವಪ್ನ
ಪ್ರಬಲ ಆಸಿಸ್ ಮಟ್ಟಹಾಕಲು ಹೇಗಿರ್ಬೇಕು ಪ್ಲಾನ್..?
ಒನ್ಡೇ ವಿಶ್ವಕಪ್ಗೆ ವೇದಿಕೆ ಸಜ್ಜಾಗಿದೆ. ಇತಿಹಾಸ ನಿರ್ಮಿಸಲು ಉಭಯ ತಂಡಗಳು ರೆಡಿಯಾಗಿವೆ. 12 ವರ್ಷಗಳ ಬಳಿಕ ಭಾರತ ಚರಿತ್ರೆ ಸೃಷ್ಟಿಸಲು ಹವಣಿಸ್ತಿದೆ. ಆದರೆ ಅಂದುಕೊಂಡಷ್ಟು ಸುಲಭವಿಲ್ಲ. ಪಕ್ಕಾ ಪ್ಲಾನ್ ಮತ್ತು ಸ್ಟ್ರಾಟಜಿ ರೂಪಿಸೋದು ಅತ್ಯಗತ್ಯ. ಎಸ್ಪೆಶಲಿ ಇವರನ್ನ ಕಟ್ಟಿಹಾಕಿದ್ರೆ ಮಾತ್ರ ಟೀಮ್ ಇಂಡಿಯಾದ ಟ್ರೋಫಿ ಕನಸು ನನಸಾಗಲು ಸಾಧ್ಯ.
ಭಾರತ ವರ್ಸಸ್ ಆಸ್ಟ್ರೇಲಿಯಾ!. ಏಕದಿನ ವಿಶ್ವಕಪ್ನ ಫೈನಲಿಸ್ಟ್ಸ್. ಪ್ರಶಸ್ತಿ ರೇಸ್ನಲ್ಲಿ ತಾಕತ್ತಿನ ಪ್ರದರ್ಶನಕ್ಕೆ ಸಜ್ಜಾಗಿವೆ. ಫೈನಲ್ ಆರಂಭಕ್ಕೆ ಜಸ್ಟ್ 29 ಗಂಟೆಗಳಷ್ಟೇ ಬಾಕಿ ಇದ್ದು, ಭಾರತೀಯ ಅಭಿಮಾನಿಗಳ ಎದೆಬಡಿತ ಹೆಚ್ಚಿಸಿದೆ. ಟೂರ್ನಿಯಲ್ಲಿ ಅಜೇಯ ಆಟ ಮುಂದುವರಿಸಿರುವ ಭಾರತಕ್ಕೆ ಫೈನಲ್ ಗೆಲುವಂತೂ ಸುಲಭವಿಲ್ಲ. ಶಕ್ತಿಮೀರಿ ಹೋರಾಟ ನಡೆಸಲೇಬೇಕಿದೆ.

ಆಸ್ಟ್ರೇಲಿಯಾ ವಿಶ್ವಕಪ್ನ ಬೀಷ್ಮ..ಐದು ಬಾರಿ ಚಾಂಪಿಯನ್ ತಂಡ. ಇವರನ್ನ ಬಿಟ್ರೆ ಮತ್ಯಾವ ತಂಡವೂ ಇಷ್ಟೊಂದು ಸಲ ಟ್ರೋಫಿ ಗೆದ್ದಿಲ್ಲ. ಇಂತಹ ದೈತ್ಯ ತಂಡವನ್ನ ಮಟ್ಟಹಾಕಲು ಭಾರತಕ್ಕಿರೋದು ಒಂದೇ ದಾರಿ. ಅದುವೇ ಐವರ ಟಾರ್ಗೆಟ್. ಈ ಪಂಚಪಾಂಡವರನ್ನ ಕಟ್ಟಿಹಾಕಲು ರೋಹಿತ್ ಪಡೆ ಸೂಕ್ತ ಸ್ಟ್ರಾಟಜಿ ಹಣಿಯಬೇಕಿದೆ. ಯಾಕಂದ್ರೆ ಈ ಐವರು ಸದಾ ಭಾರತಕ್ಕೆ ಇನ್ನಿಲ್ಲದಂತೆ ಕಾಡಿದ್ದಾರೆ. ಸಂಡೇವಾರ್ನಲ್ಲಿ ಭಾರತಕ್ಕೆ ಅದಕ್ಕೆ ಆಸ್ಪದ ಕೊಡದೇ, ಬಹುಬೇಗನೆ ಖೆಡ್ಡಾಗೆ ಬೀಳಸಬೇಕಿದೆ.

ಡೇವಿಡ್ ವಾರ್ನರ್ ಹಾಗೂ ಸ್ಟೀವ್ ಸ್ಮಿತ್ಗೆ ಇಂಡಿಯನ್ ಪಿಚ್ಗಳಂದ್ರೆ ಸಾಕು ಕೆರಳಿ ನಿಲ್ತಾರೆ. ಅದ್ರಲ್ಲೂ ಭಾರತ ಎದುರಾಳಿ ಅಂದ್ರಂತೂ ಮುಗಿದೇ ಹೋಯ್ತು. ರನ್ ಭರಾಟೆ ನಡೆಸದೇ ಪೆವಿಲಿಯನ್ ಸೇರಲ್ಲ.
ಏಕದಿನದಲ್ಲಿ ಭಾರತ ವಿರುದ್ಧ ವಾರ್ನರ್-ಸ್ಮಿತ್
ವಾರ್ನರ್ ಸ್ಟೀವ್ ಸ್ಮಿತ್
26 ಪಂದ್ಯ 28
1215 ರನ್ 1306
50.62 ಎವರೇಜ್ 54.51
03/09 100/50 05/06
ಭಾರತ ವಿರುದ್ಧ 26 ಏಕದಿನ ಪಂದ್ಯವನ್ನಾಡಿರೋ ಡೇವಿಡ್ ವಾರ್ನರ್ 56.62 ಎವರೇಜ್ನಲ್ಲಿ 1215 ರನ್ ಬಾರಿಸಿದ್ದಾರೆ. 3 ಶತಕ ಹಾಗೂ 9 ಅರ್ಧಶತಕ ಮೂಡಿ ಬಂದಿವೆ. ಇನ್ನು ಸ್ಟೀವ್ ಸ್ಮಿತ್ 28 ಪಂದ್ಯವಾಡಿ 54.51 ಎವರೇಜ್ನಲ್ಲಿ 1306 ರನ್ ಕೊಳ್ಳೆ ಹೊಡೆದಿದ್ದಾರೆ. 5 ಸೆಂಚುರಿ ಬಾರಿಸಿದ್ರೆ 6 ಹಾಫ್ಸೆಂಚುರಿ ಬಾರಿಸಿದ್ದಾರೆ.
ನೋಡಿದ್ರಾ ವೀಕ್ಷಕರೇ,, ಭಾರತದ ಮೇಲೆ ಸ್ಮಿತ್-ವಾರ್ನರ್ ರನ್ ಪ್ರಹಾರನಾ ? ಕ್ಯಾಪ್ಟನ್ ರೋಹಿತ್ ಇವರಿಬ್ಬರನ್ನ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲು ಬಿಡಬಾರದು. ಸ್ಪೆಷಲ್ ಸ್ಟ್ರಾಟಜಿ ರೂಪಿಸಿ ಖೆಡ್ಡಾಗೆ ಕೆಡವಬೇಕು.

ಇನ್ನು ಬೌಲಿಂಗ್ನಲ್ಲಿ ಲೆಫ್ಟ್ ಆರ್ಮ್ ಪೇಸರ್ ಮಿಚೆಲ್ ಸ್ಟಾರ್ಕ್ ಹಾಗೂ ಸ್ಪಿನ್ನರ್ ಆ್ಯಡಂ ಜಂಪಾ ಭಾರತಕ್ಕೆ ಬಿಗ್ ಥ್ರೆಟ್. ನಿರ್ಣಾಯಕ ಸ್ಟೇಜ್ನಲ್ಲಿ ವಿಕೆಟ್ ಬೇಟೆಯಾಡಬಲ್ಲ ನಿಸ್ಸೀಮರು. ಭಾರತ ಅದ್ರಂತೂ ಜೋಶ್ ಹೈ ಇರುತ್ತೆ. ಪ್ರಸಕ್ತ ವಿಶ್ವಕಪ್ನಲ್ಲಿ ಜಂಪಾ 22 ವಿಕೆಟ್ ಕಬಳಿಸಿದ್ರೆ ಸ್ಟಾರ್ಕ್ 13 ವಿಕೆಟ್ ಪಡೆದು ಡೇಂಜರಸ್ ಆಗಿ ಪರಿಣಮಿಸಿದ್ದಾರೆ.ಸ್ಟಾರ್ಕ್ ಹಾಗೂ ಜಂಪಾ ವಿರುದ್ಧ ಇಂಡಿಯನ್ ಬ್ಯಾಟರ್ಸ್ ಅಟ್ಯಾಕಿಂಗ್ ಆಟಕ್ಕೆ ಆದ್ಯತೆ ನೀಡಬೇಕು. ಒತ್ತಡ ಹೇರಿದಷ್ಟು ನರ್ವಸ್ ಆಗ್ತಾರೆ. ಆಗ ಭಾರತ, ಆಸಿಸ್ ವಿರುದ್ಧ ಸುಲಭವಾಗಿ ಡಾಮಿನೆಂಟ್ ಸಾಧಿಸಬಹುದು.
ಮ್ಯಾಕ್ಸ್’ವೆಲ್’ ಆಟಕ್ಕೆ ಹಾಕಬೇಕಿದೆ ಬ್ರೇಕ್..!
ಮ್ಯಾಕ್ಸ್ವೆಲ್ ಬೆಂಕಿಚೆಂಡಿನ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ..ಯಾವ ಕ್ಷಣದಲ್ಲೂ, ಎಂತಹ ಬೌಲರ್ಗಳನ್ನ ಬೇಕಾದ್ರು ದಂಡಿಸಿ ಪಂದ್ಯದ ಗತಿಯನ್ನ ಬದಲಿಸುವ ಕೆಪಾಸಿಟಿ ಇದೆ. ಈ ವಿಶ್ವಕಪ್ನಲ್ಲಿ ಅಪ್ಘನ್ ವಿರುದ್ಧ ಬಾರಿಸಿದ ದ್ವಿಶತಕವೇ ಅದಕ್ಕೆ ಉತ್ತಮ ನಿದರ್ಶನ..ಸೋಲುವ ಪಂದ್ಯವನ್ನ, ನೋವನ್ನ ಲೆಕ್ಕಿಸದೇ ಏಕಾಂಗಿ ಗೆಲ್ಲಿಸಿಕೊಟ್ಟು ಶಹಬ್ಬಾಸ್ ಅನ್ನಿಸಿಕೊಂಡಿದ್ರು. ಮ್ಯಾಕ್ಸಿ, ಮ್ಯಾಕ್ಸಿಮಮ್ ಆಟ ಫೈನಲ್ ನಲ್ಲಿ ಮೂಡಿ ಬರಬಾರದು ಅಂದ್ರೆ ತಕ್ಕ ಯೋಜನೆ ರೂಪಿಸಬೇಕಿದೆ.
ಮ್ಯಾಕ್ಸ್ವೆಲ್,ಡೇವಿಡ್ ವಾರ್ನರ್-ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್ ಹಾಗೂ ಆ್ಯಡಂ ಜಂಪಾ..ಈ ಐವರ ಬಗ್ಗೆ ಟೀಮ್ ಇಂಡಿಯಾ ಎಚ್ಚರಿಕೆಯ ಹೆಜ್ಜೆ ಇಡಲೇಬೇಕಿದೆ. ಆದ್ರಲ್ಲಿ ಸಕ್ಸಸ್ ಕಂಡರೆ ಮಾತ್ರ ದಶಕದ ಬಳಿಕ ವಿಶ್ವಕಪ್ ಟ್ರೋಫಿ ನಮ್ಮದಾಗಲಿದೆ. ಇಲ್ಲವಾದ್ರೆ ಮತ್ತೆ ಚಿಪ್ಪೆ ಗತಿಯಾದೀತು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ