newsfirstkannada.com

World Cup: ಕೊಹ್ಲಿಯನ್ನೇ ಓವರ್​ಟೇಕ್​ ಮಾಡೋ ತವಕದಲ್ಲಿ ಪ್ರಿನ್ಸ್​ ಗಿಲ್!? ಪಂಜಾಬ್​ ಪುತ್ತರ್ ಮೇಲಿದೆ ಎಲ್ಲರ ಕಣ್ಣು

Share :

18-11-2023

    ಕಿಂಗ್​ ಕೊಹ್ಲಿಯನ್ನೇ ಓವರ್​ಟೇಕ್​ ಮಾಡ್ತಾರಾ ಪ್ರಿನ್ಸ್​ ಗಿಲ್.?

    ಅಹಮದಾಬಾದ್​​ನಲ್ಲಿ ಪಂಜಾಬ್​ ಪುತ್ತರ್ ಆರ್ಭಟ

    ಕಾಂಗರೂ ಪಡೆಗೆ ಟಕ್ಕರ್​ ಕೊಡ್ತಾರಾ ಶುಭ್​ಮನ್​.?

ಇಂಡೋ -ಆಸಿಸ್​ ಫೈನಲ್​ ಫೈಟ್​ನ ಹೀರೋ ಯಾರಾಗ್ತಾರೆ.? ಸದ್ಯ ಈ ಪ್ರಶ್ನೆಗೆ ಉತ್ತರದ ಹುಡುಕಾಟ ಜೋರಾಗಿದೆ. ಇದಕ್ಕೆ ಪಕ್ಕಾ ಉತ್ತರ ಸಿಗೋದು ಫೈನಲ್​ ಬ್ಯಾಟಲ್​ ಮುಗಿದ ಮೇಲೆನೆ. ಆದ್ರೂ, ಪ್ರಿಡಿಕ್ಷನ್​ ಜೋರಾಗಿ ನಡೀತಾ ಇದೆ. ಇಂಟರೆಸ್ಟಿಂಗ್​ ವಿಚಾರ ಏನಪ್ಪಾ ಅಂದ್ರೆ, ಈ ಪ್ರಿಡಿಕ್ಷನ್​ ಲೆಕ್ಕಾಚಾರದಲ್ಲಿ ಕಿಂಗ್​ ಕೊಹ್ಲಿಯನ್ನೇ ಪ್ರಿನ್ಸ್ ಶುಭ್​ಮನ್ ಗಿಲ್ ಮೀರಿಸಿದ್ದಾರೆ.

ಇಂಡೋ – ಆಸಿಸ್​ ಏಕದಿನ ವಿಶ್ವಕಪ್​ ಫೈನಲ್​ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಲೀಗ್​ ಹಂತದಲ್ಲಿ ಅಜೇಯ ಓಟ ನಡೆಸಿದ ಟೀಮ್​ ಇಂಡಿಯಾ, ಸೆಮಿಫೈನಲ್​ ಪಂದ್ಯದಲ್ಲೂ ಭರ್ಜರಿ ಜಯ ಸಾಧಿಸಿ ಸೆಮಿಸ್​ಗೆ ಲಗ್ಗೆ ಇಟ್ಟಿದೆ. ಟೀಮ್​ ಇಂಡಿಯಾದ ಬ್ಯಾಟ್ಸ್​ಮನ್​ಗಳು, ಬೌಲರ್​​ಗಳು ಅತ್ಯಮೋಘ ಪರ್ಫಾಮೆನ್ಸ್​ ನೀಡ್ತಿದ್ದಾರೆ. ಪ್ರತಿಯೊಬ್ಬ ಪಂದ್ಯದಲ್ಲೂ ಒಬ್ಬೊಬ್ಬರು ಹೀರೋಗಳು ಟೀಮ್​ ಇಂಡಿಯಾದ ಗೆಲುವಿನ ಹೀರೋಗಳಾಗಿದ್ದಾರೆ. ಇದೀಗ ಫೈನಲ್​ ಫೈಟ್​ನಲ್ಲಿ ಹೀರೋ ಯಾರಾಗ್ತಾರೆ ಅನ್ನೋದೆ ಕುತೂಹಲ ಮೂಡಿಸಿದೆ.

ವಿಶ್ವಕಪ್ ಫೈನಲ್​ ಫೈಟ್​​ನ ಹೀರೋ ಯಾರಾಗ್ತಾರೆ.?

ವಿಶ್ವಕಪ್​ ಟೂರ್ನಿಯ ಫೈನಲ್​ ಫೈಟ್​ ಪಂದ್ಯದಲ್ಲಿ ಯಾರು ಗೆಲ್ತಾರೆ.? ಅನ್ನೋ ಪ್ರಶ್ನೆ ಎಷ್ಟು ಜನರನ್ನ ಕಾಡ್ತಿದ್ಯೋ, ಪಂದ್ಯದ ಗೆಲುವಿನ ರೂವಾರಿ ಯಾರಾಗ್ತಾರೆ ಅನ್ನೊ ಕುತೂಹಲವೂ ಅಷ್ಟೆ ಕಾಡ್ತಿದೆ. ಕಿಂಗ್​ ಕೊಹ್ಲಿ, ಹಿಟ್​ಮ್ಯಾನ್​ ರೋಹಿತ್​ ಶರ್ಮಾ ಸೇರಿದಂತೆ ಎಲ್ಲರನ್ನ ಹಿಂದಿಕ್ಕಿ ಪ್ರಿನ್ಸ್​ ಶುಭ್​ಮನ್​ ಗಿಲ್​ ಆರ್ಭಟಿಸ್ತಾರೆ ಅನ್ನೋ ನಿರೀಕ್ಷೆ ಎಲ್ಲರದ್ದಾಗಿದೆ. ​ಯಾಕಂದ್ರೆ, ಅಹಮದಾಬಾದ್​ ಅಂಗಳದಲ್ಲಿ ಶುಭ್​ಮನ್​ ಅಂತಾ ಪರ್ಫಾಮೆನ್ಸ್​ ನೀಡಿದ್ದಾರೆ.

2ನೇ ಹೋಮ್​ಗ್ರೌಂಡ್​ನಲ್ಲಿ ಶುಭ್​ಮನ್​ ಶೈನಿಂಗ್​.!

ಪಂಜಾಬ್​ ಪುತ್ತರ್​ ಶುಭ್​ಮನ್​ ಗಿಲ್​ ಪಾಲಿಗೆ ಅಹಮದಾಬಾದ್​ನ ನರೇಂದ್ರ ಮೋದಿ ಮೈದಾನ 2ನೇ ತವರು. ಐಪಿಎಲ್​ನಲ್ಲಿ ಗುಜರಾತ್​ ಪರ ಆಡೋ ಶುಭ್​ಮನ್​ ಗಿಲ್​ಗೆ ಈ ಮೈದಾನದ ಜೊತೆ ಸ್ಪೆಷಲ್​ ಕನೆಕ್ಷನ್​ ಇದೆ. ಈ ಮೈದಾನದಲ್ಲಿ ಶುಭ್​ಮನ್​ ರನ್​ ಸುನಾಮಿ ಸೃಷ್ಟಿಸಿದ್ದಾರೆ. ಆಡಿದ ಐದು ಇಂಟರ್​ನ್ಯಾಷ್​ನಲ್​ ಪಂದ್ಯಗಳಲ್ಲಿ 74ರ ಸರಾಸರಿಯಲ್ಲಿ ರನ್​ಗಳಿಸಿದ ಸಾಧನೆ ಗಿಲ್​ದಾಗಿದೆ.

ನಮೋ ಮೈದಾನದಲ್ಲಿ ಗಿಲ್​ ಪ್ರದರ್ಶನ
ಪಂದ್ಯ 5
ರನ್ 296
ಸರಾಸರಿ 74.00
100 2

ನರೇಂದ್ರ ಮೋದಿ ಮೈದಾನದಲ್ಲಿ 5 ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನಾಡಿರುವ ಶುಭ್​ಮನ್​ ಗಿಲ್​ 296 ರನ್​ಗಳಿಸಿದ್ದಾರೆ. 74.00ರ ಸರಾಸರಿಯಲ್ಲಿ ರನ್​ಗಳಿಸಿರೋ ಶುಭ್​ಮನ್​, 2 ಶತಕ ಸಿಡಿಸಿದ್ದಾರೆ.

ಐಪಿಎಲ್​ನಲ್ಲೂ ದರ್ಬಾರ್​ ನಡೆಸಿರುವ ಪ್ರಿನ್ಸ್​.!

ಇಂಟರ್​ ನ್ಯಾಷನಲ್​ ಕ್ರಿಕೆಟ್​ ಮಾತ್ರವಲ್ಲ.. ಐಪಿಎಲ್​ನಲ್ಲೂ ಗಿಲ್​ ದರ್ಬಾರ್​ ನಡೆಸಿದ್ದಾರೆ. ನಮೋ ಮೈದಾನದ ರನ್​ಭೂಮಿಯಲ್ಲಿ ಬೌಲರ್​ಗಳ ಮೇಲೆ ದಂಡೆತ್ತಿ ಹೋಗಿರುವ ಯುವರಾಜ ರನ್​ ಕೊಳ್ಳೆ ಹೊಡೆದಿದ್ದಾರೆ. ಪ್ರಿನ್ಸ್​ ಶುಭ್​ಮನ್​ ಗಿಲ್​ ಆರ್ಭಟಕ್ಕೆ ಎದುರಾಳಿ ಪಡೆಗಳೆಲ್ಲಾ ಬೆಚ್ಚಿ ಬಿದ್ದಿವೆ. ಕೇವಲ 9 ಪಂದ್ಯಗಳಲ್ಲಿ ಅತಿ ಹೆಚ್ಚು ರನ್​ಗಳಿಸಿ ದಾಖಲೆ ನಿರ್ಮಿಸಿದ್ದಾರೆ.

ನಮೋ ಮೈದಾನದಲ್ಲಿ ಗಿಲ್​ IPL ಪ್ರದರ್ಶನ
ಪಂದ್ಯ 9
ರನ್ 572
ಸರಾಸರಿ 71.50
100/50 2/3

ನಮೋ ಮೈದಾನದಲ್ಲಿ 9 ಐಪಿಎಲ್​​ ಪಂದ್ಯವನ್ನಾಡಿರುವ ಶುಭ್​ಮನ್​ ಗಿಲ್​, 572 ರನ್​ಗಳಿಸಿದ್ದಾರೆ. 71.50ರ ಸರಾಸರಿಯಲ್ಲಿ ರನ್​ಗಳಿಸಿರೋ ಗಿಲ್​, 2 ಶತಕ, 3 ಅರ್ಧಶತಕ ಸಿಡಿಸಿದ್ದಾರೆ.

ವಿಶ್ವಕಪ್​ ಅಖಾಡದಲ್ಲೂ ಸಾಲಿಡ್​​ ಪರ್ಫಾಮೆನ್ಸ್​​..!

ಈ ಹಿಂದೆ ಅಹ್ಮದಾಬಾದ್​ನಲ್ಲಿ ಧಮ್​ದಾರ್​​​ ಪರ್ಫಾಮೆನ್ಸ್​ ನೀಡಿರೋದು ಮಾತ್ರವಲ್ಲ. ಈ ಬಾರಿಯ ವಿಶ್ವಕಪ್​ನಲ್ಲೂ ಗಿಲ್​ ಸಾಲಿಡ್​ ಟಚ್​ನಲ್ಲಿದ್ದಾರೆ. ಆಡಿದ 8 ಪಂದ್ಯಗಳಲ್ಲಿ ಡಿಸೆಂಟ್​​ ಪರ್ಫಾಮೆನ್ಸ್​ ನೀಡಿದ್ದಾರೆ. 50ರ ಸರಾಸರಿಯಲ್ಲಿ 350 ರನ್​ಗಳಿಸಿರೋ ಗಿಲ್​, ಫೈನಲ್​ ಫೈಟ್​ನಲ್ಲೂ ಸಾಲಿಡ್​​ ಪರ್ಫಾಮೆನ್ಸ್​​ ನೀಡೋ ಉತ್ಸಾಹದಲ್ಲಿದ್ದಾರೆ.

ವಿಶ್ವಕಪ್​ ಟೂರ್ನಿಯ ಸೆಮಿಫೈನಲ್​ ಪಂದ್ಯದಲ್ಲಿ ಸಾಲಿಡ್​ ಬ್ಯಾಟಿಂಗ್​ ನಡೆಸ್ತಾ ಇದ್ದ ಶುಭ್​ಮನ್​ ಗಿಲ್​ ರನ್ನ ದುರಾದೃಷ್ಟ ಕಾಡ್ತು. ಇಂಜುರಿಗೆ ತುತ್ತಾದ ಗಿಲ್​, ಸೆಂಚುರಿ ಸಿಡಿಸುವ ಚಿನ್ನದಂತಾ ಅವಕಾಶವನ್ನ ಮಿಸ್​ ಮಾಡಿಕೊಂಡ್ರು. ಇದೀಗ ಫೈನಲ್​ ಫೈಟ್​ನಲ್ಲಿ ಶುಭ್​ಮನ್​ಗೆ ಅದೃಷ್ಟ ಸಾಥ್​ ನೀಡಲಿ. ಶುಭ್​ಮನ್​ ಶೈನಿಂಗ್​ ಪರ್ಫಾಮೆನ್ಸ್​ ನೀಡಿ ಭಾರತದ ಗೆಲುವಿಗೆ ಕಾರಣರಾಗಲಿ ಅನ್ನೋದು ಫ್ಯಾನ್ಸ್​ ಪ್ರಾರ್ಥನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

World Cup: ಕೊಹ್ಲಿಯನ್ನೇ ಓವರ್​ಟೇಕ್​ ಮಾಡೋ ತವಕದಲ್ಲಿ ಪ್ರಿನ್ಸ್​ ಗಿಲ್!? ಪಂಜಾಬ್​ ಪುತ್ತರ್ ಮೇಲಿದೆ ಎಲ್ಲರ ಕಣ್ಣು

https://newsfirstlive.com/wp-content/uploads/2023/11/Shubhman-Gill.jpg

Load More