newsfirstkannada.com

World cup 2023: ಪ್ರೇಕ್ಷಕರಿಂದ ವಿಶ್ವ ದಾಖಲೆ ಬರೆಯಲು ಸಜ್ಜಾದ ಮೋದಿ ಸ್ಟೇಡಿಯಂ.. ಎಷ್ಟು ಜನರು ಪಂದ್ಯ ಕಣ್ತುಂಬಿಕೊಳ್ಳುತ್ತಿದ್ದಾರೆ ಗೊತ್ತಾ?

Share :

19-11-2023

  ಭಾರತ ಮತ್ತು ಆಸ್ಟ್ರೇಲಿಯಾ ಫೈನಲ್​ ಪಂದ್ಯ

  ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕಿಕ್ಕಿರಿದು ಸೇರಿದ ಜನರು

  ಮೋದಿ ಸ್ಟೇಡಿಯಂ ಭಾರತದ ಅತಿ ದೊಡ್ಡ ಸ್ಟೇಡಿಯಂ

ಇಂದು ಗುಜರಾತ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಫೈನಲ್​ ಪಂದ್ಯ ನಡೆಯುತ್ತಿದೆ. ಈ ಪಂದ್ಯವನ್ನು ಕಣ್ತುಂಬಿಕೊಳ್ಳಲು ಜನ ಸಾಗರ ನೆರೆದಿದ್ದಾರೆ.

ಇಂಡಿಯಾ ಮತ್ತು ಆಸ್ಟ್ರೇಲಿಯಾ ಜಿದ್ದಾ ಜಿದ್ದಿಯನ್ನು ಕಣ್ತುಂಬಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಆಸ್ಟ್ರೇಲಿಯಾ ಉಪ ಪ್ರಧಾನಿ ರಿಚರ್ಡ್​ ಮಾರ್ಲ್ಸ್​ ಕೂಡ ಪಂದ್ಯ ವೀಕ್ಷಸುತ್ತಿದ್ದಾರೆ. ಇದಲ್ಲದೆ ಅನೇಕ ಗಣ್ಯರು ಈ ಸ್ಟೇಡಿಯಂನಲ್ಲಿ ಬೀಡು ಬಿಟ್ಟಿದ್ದಾರೆ.

ಅಂದಹಾಗೆಯೇ, ಗುಜರಾತ್​ನ ನರೇಂದ್ರ ಮೋದಿ ಸ್ಟೇಡಿಯಂ ಭಾರತದ ಅತಿ ದೊಡ್ಡ ಸ್ಟೇಡಿಯಂ ಆಗಿದೆ. ಸುಮಾರು 1 ಲಕ್ಷ 32 ಸಾವಿರ ಜನರು ಇಲ್ಲಿ ಸೇರಬಹುದಾಗಿದೆ. ಆದರೆ ಇದೇ ಮೊದಲು 1.25 ಲಕ್ಷ ಜನರು ಆಗಮಿಸಿ ಪಂದ್ಯ ವೀಕ್ಷಿಸುತ್ತಿದ್ದಾರೆ.

ಇದನ್ನು ಓದಿ: World Cup ಆರಂಭದಿಂದ ಭಾರತದ ಎಷ್ಟು ಪ್ಲೇಯರ್ಸ್ 2 ಫೈನಲ್​ ಮ್ಯಾಚ್ ಆಡಿದ್ದಾರೆ? ಈ ಲಿಸ್ಟ್​ನಲ್ಲಿ ಕೊಹ್ಲಿ ಇದ್ದಾರಾ?

ಇನ್ನು ಗುಜರಾತ್​ ಟೈಟಾನ್ಸ್​ ಮತ್ತು ರಾಜಸ್ಥಾನ್​ ರಾಯಲ್ಸ್​ ನಡುವಿನ ಐಪಿಎಲ್​ 2022ರ ಪಂದ್ಯದ ಸಮಯದಲ್ಲಿ ಒಂದು ಲಕ್ಷದ ಒಂದು ಸಾವಿರದ ಐನೂರ ಅರುವತ್ತಾರು ಜನರು ಸೇರಿದ್ದರು. ಆ ಬಳಿಕ ಇಷ್ಟು ಜನರು ಇದೇ ಮೊದಲ ಬಾರಿಗೆ ಸೇರಿದ್ದಾರೆ.

ಇದನ್ನು ಓದಿ: INDvsAUS: ಯಾರ ಕಣ್ಣು ತಪ್ಪಿಸಿದರೂ ಈ ಕ್ಯಾಮೆರಾಗಳ ಕಣ್ಣು ತಪ್ಪಿಸೋಕಾಗಲ್ಲ! ವಿಶ್ವಕಪ್​ನಲ್ಲಿದೆ ಭಲೇ ಕ್ಯಾಮೆರಾಗಳು

ಇನ್ನು ಇಂದಿನ ವಿಶ್ವಕಪ್​ಗಾಗಿ 6 ಸಾವಿರ ಭದ್ರತಾ ಸಿಬ್ಬಂದಿಯನ್ನು ನೇಮಿಸಲಾಗಿದೆ. ಎಲ್ಲೆಡೆ ಭದ್ರತೆ ವಹಿಸಲಾಗಿದೆ. ಯಾವುದೇ ಅಡಚಣೆಯಾಗದಂತೆ ಜಾಗರೂಕತೆಯಿಂದ ಪಂದ್ಯ ನಡೆಯುತ್ತಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

World cup 2023: ಪ್ರೇಕ್ಷಕರಿಂದ ವಿಶ್ವ ದಾಖಲೆ ಬರೆಯಲು ಸಜ್ಜಾದ ಮೋದಿ ಸ್ಟೇಡಿಯಂ.. ಎಷ್ಟು ಜನರು ಪಂದ್ಯ ಕಣ್ತುಂಬಿಕೊಳ್ಳುತ್ತಿದ್ದಾರೆ ಗೊತ್ತಾ?

https://newsfirstlive.com/wp-content/uploads/2023/11/IND-2.jpg

Load More