newsfirstkannada.com

World cup 2023: ಬರೀ 3 ಸಿಕ್ಸ್​.. ಏನಾಗಿದೆ ಟೀಂ ಇಂಡಿಯಾಗೆ? ಭಯಬಿದ್ರಾ ರೋಹಿತ್​ ಪಡೆ?

Share :

19-11-2023

    ರನ್​ ಪೇರಿಸಲು ಹರಸಾಹಸ ಪಡುತ್ತಿರುವ ಟೀಂ ಇಂಡಿಯಾ

    ಆಸಿಸ್​​ ಬೌಲಿಗರ ದಾಳಿಗೆ ವಿಕೆಟ್​ ಒಪ್ಪಿಸುತ್ತಾ ಬಂದ ಆಟಗಾರರು

    ಏನಾಯ್ತು ಟೀಂ ಇಂಡಿಯಾದ ಆಟಗಾರರಿಗೆ? ಆಸಿಸ್​ ವಿರುದ್ಧ ಎಡವಿದ್ದೆಲ್ಲಿ?

INDvsAUS: ಇಂದು ಟೀಂ ಇಂಡಿಯಾ ಮತ್ತು ಆಸೀಸ್​ ನಡುವೆ ಫೈನಲ್​ ಪಂದ್ಯ ನಡೆಯುತ್ತಿದೆ. ಟಾಸ್​ ಗೆದ್ದ ಆಸ್ಟ್ರೇಲಿಯಾ ಬೌಲಿಂಗ್​ ಆಯ್ದುಕೊಂಡಿದೆ. ಆದರೆ ಬ್ಯಾಟಿಂಗ್​ ಇಳಿದ ರೋಹಿತ್​ ಪಡೆ ಮಾತ್ರ ನಿರೀಕ್ಷೆಯಷ್ಟು ರನ್​ ದಾಟದೆ, ರನ್​ ಪೇರಿಸಲು ಹರ ಸಾಹಸಪಡುತ್ತಿದೆ.

ಹೌದು. ಆರಂಭಿಕ ಬ್ಯಾಟ್ಸ್​ಮನ್​ ರೋಹಿತ್​ ಮೇಲೆ ನಿರೀಕ್ಷೆ ಬೆಟ್ಟದಷ್ಟಿತ್ತಾದರು 31 ಎಸೆತಕ್ಕೆ ಮೂರು ಸಿಕ್ಸ್​ 4 ಫೋರ್​ ಬಾರಿಸುವ ಮೂಲಕ 47 ರನ್​ ಬಾರಿಸಿ, ಬಳಿಕ ಔಟ್​ ಆದರು.. ಅತ್ತ ಶುಭ್ಮನ್ ಮೇಲಿನ ನಿರೀಕ್ಷೆ ನೀರಿನಲ್ಲಿ ಹೋಮ ಮಾಡಿದ ಹಾಗಿದೆ. ಕಾರಣ 7 ಎಸೆತಕ್ಕೆ 4 ರನ್​ ಬಾರಿಸಿ ಔಟ್​ ಆದರು.

ಇನ್ನು ಕೊಹ್ಲಿ 63 ಎಸೆತಕ್ಕೆ 4 ಫೋರ್​ ಬಾರಿಸಿ 54 ರನ್​ ಬಾರಿಸಿದ್ದರು. ಆದರೆ ಇವರ ವಿಕೆಟ್​ ಅನ್ನು ಕಮಿನ್ಸ್​ ಹೊಡೆದುರಳಿಸಿದನು.  ಶ್ರೇಯಸ್​ ಅಯ್ಯರ್​ ಕೂಡ 3 ಎಸತಕ್ಕೆ 1 ಬೌಡರಿ ಬಾರಿಸಿ 4 ರನ್​ ಬಾರಿಸಿದ್ದಾರೆ. ಅತ್ತ ಜಡೇಜಾ ಕೂಡ 22 ಎಸೆತವನ್ನೆ ಬಳಸಿಕೊಂಡು ಬರೀ 9 ರನ್​ ಬಾರಿಸಿದ್ದಾರೆ.

ಒಟ್ಟಿನಲ್ಲಿ ಇಂದು ಆಸೀಸ್​ ತಂಡ ಭಾರತೀಯರ ವಿಕೆಟ್​ ಕಬಳಿಸಲು ರೆಡಿಯಾಗಿ ಬಂದಿದ್ದಾರೆ. ಅದರಲ್ಲೂ ರೋಹಿತ್​ ಶರ್ಮಾ ಬಿಟ್ಟು ಉಳಿದ ಯಾವ ಆಟಗಾರರು ಕೂಡ ಸಿಕ್ಸ್​ ಬಾರಿಸಲು ಧೈರ್ಯವೇ ಮಾಡಿಲ್ಲ. ನಾಯಕ ಪ್ಯಾಟ್​ ಕಮಿನ್ಸ್​ ಮಾತ್ರ 2 ಟೀಂ ಇಂಡಿಯಾದ ಮುಖ್ಯವಾದ 2 ವಿಕೆಟ್ ಕಿತ್ತು ಸಂತಸದಲ್ಲಿ ತೇಲಾಡುತ್ತಿದ್ದಾರೆ. ಇನ್ನು ಬೌಲಿಂಗ್​ ಪಿಚ್​ ಆದ ಕಾರಣ ಚೆಂಡು ಎದುರಿಸಲು ಟೀಂ ಇಂಡಿಯಾದ ಆಟಗಾರರು ಪರದಾಡುತ್ತಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ​

World cup 2023: ಬರೀ 3 ಸಿಕ್ಸ್​.. ಏನಾಗಿದೆ ಟೀಂ ಇಂಡಿಯಾಗೆ? ಭಯಬಿದ್ರಾ ರೋಹಿತ್​ ಪಡೆ?

https://newsfirstlive.com/wp-content/uploads/2023/10/ROHIT_SHARMA-9.jpg

Load More