newsfirstkannada.com

ಕೊನೆವರೆಗೂ ಛಲ ಬಿಡದ ಆಫ್ರಿಕಾ.. 1 ವಿಕೆಟ್​ಗಳ ರೋಚಕ ಗೆಲುವು.. ವಿಶ್ವಕಪ್​ನಿಂದ ಪಾಕ್ ಬಹುತೇಕ ಮನೆಗೆ

Share :

28-10-2023

    ಪಾಕಿಸ್ತಾನ​​​-ಆಫ್ರಿಕಾ ನಡುವೆ ವಿಶ್ವಕಪ್​ ಪಂದ್ಯ

    ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಆಫ್ರಿಕಾ

    ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಕುಸಿದ ಭಾರತ

ಚೆನ್ನೈನ ಚೆಪಾಕ್ ಮೈದಾನದಲ್ಲಿ ದಕ್ಷಿಣ ಆಫ್ರಿಕಾ, ಗೆದ್ದು ಬೀಗಿದೆ. ಪಾಕ್ ತಂಡವನ್ನ ಮಣಿಸಿದ ಆಫ್ರಿಕನ್ನರು, ವಿಶ್ವಕಪ್​ನಲ್ಲಿ ಗೆಲುವಿನ ಓಟ ಮುಂದುವರೆಸಿದ್ದಾರೆ. ಮತ್ತೊಂದೆಡೆ ಆಫ್ರಿಕಾ ವಿರುದ್ಧ ಸೋಲು ಅನುಭವಿಸಿದ್ದ ಪಾಕಿಸ್ತಾನ, ವಿಶ್ವಕಪ್ ಟೂರ್ನಿಯಿಂದ ಬಹುತೇಕ ಹೊರಬಿದ್ದಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ, ಆರಂಭದಲ್ಲೇ ಆಘಾತ ಅನುಭವಿಸಿತು. ಅಬ್ದುಲ್ಲಾ ಶಫೀಕ್ ಮತ್ತು ಇಮಾಮ್-ಉಲ್-ಹಕ್, ಎಡಗೈ ವೇಗಿ ಮಾರ್ಕೊ ಜಾನ್ಸನ್​ಗೆ ವಿಕೆಟ್ ಒಪ್ಪಿಸಿದ್ರು. 3ನೇ ವಿಕೆಟ್​​ಗೆ ಬಾಬರ್ ಅಝಂ ಮತ್ತು ಮೊಹಮ್ಮದ್ ರಿಝ್ವಾನ್, 48 ರನ್​ಗಳ ಕಾಣಿಕೆ ನೀಡಿದ್ರು. ಈ ನಡುವೆ ರಿಝ್ವಾನ್ 31 ರನ್​ಗಳಿಸಿ ಔಟಾದ್ರೆ, ಇಫ್ತಿಕಾರ್ ಅಹ್ಮದ್ 21 ರನ್​ಗಳಿಸಿದ್ರು. ನಾಯಕ ಬಾಬರ್ ಅಝಂ ಬರೋಬ್ಬರಿ 50 ರನ್​ಗಳಿಸಿ, ಪೆವಿಲಿಯನ್ ಸೇರಿಕೊಂಡ್ರು.

6ನೇ ವಿಕೆಟ್​​ಗೆ ಸೌದ್ ಶಕೀಲ್ ಮತ್ತು ಶದಾಬ್ ಖಾನ್, ಬಿರುಸಿನ ಬ್ಯಾಟಿಂಗ್ ನಡೆಸಿದ್ರು. 71 ಎಸೆತಗಳಲ್ಲಿ 84 ರನ್​ ಕಲೆಹಾಕಿದ ಈ ಜೋಡಿ, ಆಫ್ರಿಕನ್ ಬೌಲರ್​ಗಳನ್ನ ಕಾಡಿತು. 43 ರನ್​ಗಳಿಸಿದ ಶದಾಬ್, ಕಾಟ್ಝಿ ಬೌಲಿಂಗ್​ನಲ್ಲಿ ಔಟಾದ್ರೆ, ಶಖೀಲ್ 52 ರನ್​ಗಳಿಸಿ, ಹೋರಾಟ ಮುಗಿಸಿದ್ರು. ಶಾಹೀನ್ ಅಫ್ರೀದಿ, ಮೊಹಮ್ಮದ್ ನವಾಝ್ ಮತ್ತು ಮೊಹಮ್ಮದ್ ವಾಸೀಂ ಒಬ್ಬರ ಹಿಂದೊಬ್ಬರು ಔಟಾದ್ರು. ಅಂತಿಮವಾಗಿ ಪಾಕಿಸ್ತಾನ 46.4 ಓವರ್​ಗಳಲ್ಲಿ, 270 ರನ್​ಗಳಿಸಿ ಆಲೌಟಾಯ್ತು. ಆಫ್ರಿಕಾ ಪರ ತಬ್ರೈಸ್ ಶಮ್ಸಿ 4 ಮತ್ತು ಯಾನ್ಸನ್ 3 ವಿಕೆಟ್ ಪಡೆದು ಮಿಂಚಿದ್ರು.

271 ರನ್​ಗಳ ಸವಾಲನ್ನು ಬೆನ್ನಟ್ಟಿದ್ದ ಆಫ್ರಿಕಾಕ್ಕೆ, ಕ್ವಿಂಟನ್ ಡಿಕಾಕ್ ಸ್ಫೋಟಕ ಆರಂಭ ಒದಗಿಸಿದ್ರು. ಆದ್ರೆ ಡಿಕಾಕ್ 14 ಎಸೆತಗಳಲ್ಲಿ 24 ರನ್​ಗಳಿಸಿ ಮಾಯವಾದ್ರು. ನಾಯಕ ಬವುಮ, ವ್ಯಾನ್ ಡರ್ ಡುಸೆನ್ ಮತ್ತು ಹೆನ್ರಿಚ್ ಕ್ಲಾಸೆನ್ ಸಹ, ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. ಬಿಗ್​​​​ ಹಿಟ್ಟರ್​​ ಡೇವಿಡ್​ ಮಿಲ್ಲರ್​ ಹಾಗೂ ಮಾರ್ಕ್​ ಜಾನ್ಸೆನ್ ಹೆಚ್ಚೇನೂ ಸದ್ದು ಮಾಡ್ಲಿಲ್ಲ. ದಿಟ್ಟ ಹೋರಾಟ ನಡೆಸಿದ ಏಡೆನ್ ಮಾರ್ಕ್​ರಾಮ್​ 93 ರನ್​ ಗಳಿಸಿ ಮಿಂಚಿದ್ರು.

250 ರನ್​ಗೆ 7 ವಿಕೆಟ್​ ಕಳೆದುಕೊಂಡ ಆಫ್ರಿಕಾಗೆ ಸುಲಭವಾಗಿ ಪಂದ್ಯ ಗೆಲ್ಲುವ ಚಾನ್ಸ್ ಇತ್ತು. ಕೊನೆಯಲ್ಲಿ ಭಾರಿ ಡ್ರಾಮಾ ನಡೀತು. ಆದರೂ ಕೊನೆಯವರೆಗೆ ಛಲ ಬಿಡದ ಆಫ್ರಿಕಾ ತಂಡ 1 ವಿಕೆಟ್​ಗಳ ರೋಚಕ ಗೆಲುವು ಸಾಧಿಸ್ತು.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಕೊನೆವರೆಗೂ ಛಲ ಬಿಡದ ಆಫ್ರಿಕಾ.. 1 ವಿಕೆಟ್​ಗಳ ರೋಚಕ ಗೆಲುವು.. ವಿಶ್ವಕಪ್​ನಿಂದ ಪಾಕ್ ಬಹುತೇಕ ಮನೆಗೆ

https://newsfirstlive.com/wp-content/uploads/2023/10/PAK.jpg

Load More