newsfirstkannada.com

World Cup 2023: ಒಂದೇ ಕಲ್ಲಲ್ಲಿ 2 ಹಕ್ಕಿ ಹೊಡೆಯೋದು ರೋಹಿತ್ ಕನಸು! ಆಸೀಸ್​ಗೆ ಮಣ್ಣು ಮುಕ್ಕಿಸಲು ಟೀಂ ಇಂಡಿಯಾ ರೆಡಿ

Share :

18-11-2023

    ಆಸಿಸ್​​​ಗೆ ಭಾರತವನ್ನ ಭಾರತದಲ್ಲೇ ಸೋಲಿಸುವಾಸೆ..!

    ಲೀಗ್​ ಅಲ್ಲ.. ಆ ಸೋಲಿಗೂ ಉತ್ತರಿಸಲು ಕಾಂಗರೂ ಪಣ!

    ಏಕದಿನ ವಿಶ್ವಕಪ್​ ಫೈನಲ್​ನಲ್ಲಿ ಸೋತಿದ್ದು ಎರಡೇ ಬಾರಿ!

ವಿಶ್ವ ಕ್ರಿಕೆಟ್​ನ ಮದಗಜಗಳು. ಎಲ್ಲರ ಪ್ರಶ್ನೆ ಒಂದೇ ಫೈನಲ್​ ಫೈಟ್​ನಲ್ಲಿ ಗೆಲ್ಲೋದ್ಯಾರು. ವಿಶ್ವ ಕ್ರಿಕೆಟ್​ನ ಅಧಿಪತಿಯಾಗಿ ಮೆರೆಯೋದು ಯಾರು?​ ಒಂದೆಡೆ ಟೀಮ್ ಇಂಡಿಯಾದ ನಾಗಲೋಟಕ್ಕೆ ಆಸ್ಟ್ರೇಲಿಯಾ ಬ್ರೇಕ್​ ಮಾಡೋ ಯತ್ನದಲ್ಲಿದ್ರೆ. ಮತ್ತೊಂದೆಡೆ ಬಲಿಷ್ಠ ಆಸ್ಟ್ರೇಲಿಯನ್ಸ್​ನ ಮತ್ತೊಮ್ಮೆ ಮಣ್ಣು ಮುಕ್ಕಿಸುವ ಕನಸು ಟೀಮ್ ಇಂಡಿಯಾದ್ದಾಗಿದೆ.

ಜಸ್ಟ್​ ಒಂದೇ ಹೆಜ್ಜೆ. ವಿಶ್ವ ಕಿರೀಟಕ್ಕೆ ಮುತ್ತಿಡಲು ಜಸ್ಟ್​ ಒಂದೇ ಒಂದು ಗೆಲುವು. ಈ ಒಂದು ಗೆಲುವಿಗಾಗಿಯೇ ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳು ಕಾದುಕುಳಿತಿದ್ದಾರೆ. ಒಂದೇ ಒಂದು ಗೆಲುವೇ ಅಜೇಯ ಭಾರತದ ಕನಸಾಗಿದೆ. ವಿಶ್ವ ಚಾಂಪಿಯನ್ಸ್ ಆಗಿ ಮೆರೆದಾಡಲು ಆ ಒಂದೇ ಒಂದು ಗೆಲುವೇ ಉಭಯ ತಂಡಗಳ ಮುಂದಿನ ಟಾರ್ಗೆಟ್​. ಇಂಥಹ ಒಂದು ಕನಸು. ಕೋಟ್ಯಾಂತರ ಅಭಿಮಾನಿಗಳ ಆಸೆ ಆಕಾಂಕ್ಷೆಗಳಿಗೆ ಸಾಕ್ಷಿಯಾಗ್ತಿರುವುದೇ ಅಹ್ಮದಬಾದ್​ನ ನಮೋ ಸ್ಟೇಡಿಯಂ.

ಹೌದು! ಇಂಡೋ-ಆಸಿಸ್​ನ ರಣರೋಚಕ ಫೈನಲ್​​ ಫೈಟ್​ಗೆ ಕೌಂಟ್​ಡೌನ್​ ಶುರುವಾಗಿದ್ದು, ಯಾರ್​ ಗೆಲ್ತಾರೆ ಎಂಬ ಕ್ಯೂರಿಯಾಸಿಟಿ ವಿಶ್ವ ಕ್ರಿಕೆಟ್​ ಅಭಿಮಾನಿಗಳಲ್ಲಿದ್ರೆ. ಇತ್ತ ಶತಾಯ ಗತಾಯ ಗೆಲ್ಲೋಕೆ ವಿಶ್ವ ಕ್ರಿಕೆಟ್​ನ ಮದಗಜಗಳು ಕಾಯ್ತಿವೆ. ಇದಕ್ಕಾಗಿ ಭಾರೀ ಗೇಮ್​​ಪ್ಲಾನ್​, ಸ್ಟ್ರಾಟರ್ಜಿಗಳನ್ನೇ ತೆರೆಹಿಂದೆ ಹೆಣೆಯುತ್ತಿವೆ.

ಇದೇ ಅಂಗಳದಲ್ಲಿ ಅಂದು ಸೋತಿತ್ತು ಬಲಿಷ್ಠ ಆಸ್ಟ್ರೇಲಿಯಾ!

ವಿಶ್ವಕಪ್​ನ ಆರಂಭಿಕ ಪಂದ್ಯದಲ್ಲೇ ಟೀಮ್ ಇಂಡಿಯಾ ಎದುರು ಎಡವಿದ್ದ ಆಸ್ಟ್ರೇಲಿಯಾ, ಈಗ ಲೀಗ್​​ ಸ್ಟೇಜ್​ ಸೋಲಿನ ಪ್ರತೀಕಾರ ತೀರಿಸಿಕೊಳ್ಳುವ ಹಂಬಲದಲ್ಲಿದೆ. ಇದಕ್ಕಾಗಿ ಭಾರೀ ರಣತಂತ್ರವನ್ನೇ ಹೆಣೆಯುತ್ತಿದೆ. ಅಷ್ಟೇ ಅಲ್ಲ.! ಲೀಗ್​ನಲ್ಲಿ ಮಾಡಿದ್ದ ತಪ್ಪುಗಳನ್ನ ಸರಿತಿದ್ದುಕೊಂಡು, ಟೀಮ್ ಇಂಡಿಯಾ ಎದುರು ಪ್ರಯೋಗಿಸುವ ಇರಾದೆ ಹೊಂದಿದೆ.

ಇಂಟ್ರೆಸ್ಟಿಂಗ್ ವಿಚಾರ ಏನಂದ್ರೆ, 2011ರ ವಿಶ್ವಕಪ್​ನಲ್ಲಿ ಇದೇ ಅಂಗಳದಲ್ಲಿ ಟೀಮ್ ಇಂಡಿಯಾ ಎದುರಿನ ಕ್ವಾಟರ್​​ ಫೈನಲ್​​ನಲ್ಲಿ ಮುಖಭಂಗ ಅನುಭವಿಸಿದ್ದ ಆಸ್ಟ್ರೇಲಿಯಾ, ಹ್ಯಾಟ್ರಿಕ್ ವಿಶ್ವಕಪ್ ಗೆಲ್ಲೋ ಸುವರ್ಣಾವಕಾಶ ಕಳೆದುಕೊಂಡಿತ್ತು. ಇದಕ್ಕೀಗ ತವರಿನಲ್ಲೇ ಟೀಮ್ ಇಂಡಿಯಾಗೆ ಸೋಲಿನ ಉತ್ತರ ನೀಡೋ ತವಕದಲ್ಲಿದೆ.

ಇದನ್ನು ಓದಿ: ಮೊಹಮ್ಮದ್ ಶಮಿಗೆ ವಿಶೇಷ ಗೌರವ ನೀಡಲು ಮುಂದಾದ ಯೋಗಿ ಸರ್ಕಾರ.. ಮಹತ್ವದ ನಿರ್ಧಾರ..!

8 ವರ್ಷದ ಬಳಿಕ ಕಪ್​ ಗೆಲ್ಲೋ ತವಕದಲ್ಲಿ ಯೆಲ್ಲೋ ಆರ್ಮಿ​

ವಿಶ್ವಕಪ್​ನ ಇತಿಹಾಸದಲ್ಲೇ ಮೋಸ್ಟ್​ ಸಕ್ಸಸ್​ಫುಲ್ ಟೀಮ್ ಆಗಿರುವ ಆಸ್ಟ್ರೇಲಿಯಾ, ಮೆಗಾ ಟೂರ್ನಿಯ ಫೈನಲ್​​ನಲ್ಲಿ ಸೋತಿದ್ದು ವಿರಳ. 1975 ಹಾಗೂ 1996ರಲ್ಲಿ ಬಿಟ್ರೆ, ಉಳಿದೈದು ಬಾರಿ ವಿಶ್ವ ಕಿರೀಟಕ್ಕೆ ಮುತ್ತಿಟ್ಟಿದೆ.

2015ರ ಏಕದಿನ ವಿಶ್ವಕಪ್​​ ಬಳಿಕ ಟ್ರೋಫಿಗೆ ಮುತ್ತಿಡುವಲ್ಲಿ ವಿಫಲರಾಗಿರುವ ಯೆಲ್ಲೋ ಆರ್ಮಿ, 2019ರಲ್ಲಿ ಇಂಗ್ಲೆಂಡ್​ ವಿರುದ್ಧದ​ ಸೆಮಿಸ್​ ಕದನದಲ್ಲಿ ಸೋತು ಹೊರ ಬಿದ್ದಿತ್ತು. ಆದ್ರೆ, 8 ವರ್ಷಗಳ ಬಳಿಕ ಫೈನಲ್​​ಗೇರಿರುವ ಆಸಿಸ್, 6ನೇ ಬಾರಿ ವಿಶ್ವಕಪ್​​ ಗೆದ್ದೇ ತೀರುವ ಛಲದಲ್ಲಿದೆ. ಆದ್ರೆ, ಇದಕ್ಕೆ ಟೀಮ್ ಇಂಡಿಯಾ, ಅಸ್ಪದ ನೀಡುತ್ತಾ ಅನ್ನೋದೇ ಪ್ರಶ್ನೆ..

5 ಬಾರಿಯ ಚಾಂಪಿಯನ್ಸ್​​ಗೆ ಸೋಲಿಸುವ ಛಲ

ಅತ್ತ ಟೀಮ್ ಇಂಡಿಯಾ ಎದುರು ತೊಡೆತಟ್ಟಲು ಆಸ್ಟ್ರೇಲಿಯಾ ಸಜ್ಜಾಗ್ತಿದ್ರೆ. ಇತ್ತ ಲೀಗ್​ನಲ್ಲಿ ಆಸ್ಟ್ರೇಲಿಯನ್ಸ್​ ಸೋಲಿಸಿರುವ ಟೀಮ್ ಇಂಡಿಯಾ, 5 ಬಾರಿಯ ಚಾಂಪಿಯನ್ಸ್​ಗೆ ಮತ್ತೊಮ್ಮೆ ಸೋಲಿನ ರುಚಿ ತೋರಿಸೋ ಹುಮ್ಮಸ್ಸಲ್ಲಿದೆ. ಇದಿಷ್ಟೇ ಅಲ್ಲ.! ಎರಡು ಸೋಲುಗಳ ಸೇಡು ಕೂಡ ಟೀಮ್ ಇಂಡಿಯಾ ಮುಂದಿದೆ.

ಇದನ್ನು ಓದಿ: INDvsAUS: ಮೋದಿ ಸ್ಟೇಡಿಯಂ ಬಳಿ ಜನಜಂಗುಳಿ.. ನಾಳಿನ ಪಂದ್ಯಕ್ಕಾಗಿ ಕಿಕ್ಕಿರಿದು ಸೇರಿದ ಜನ

ರೋಹಿತ್​ಗೆ ಒಂದೇ ಕಲ್ಲಲ್ಲಿ 2 ಹಕ್ಕಿ ಹೊಡೆಯೋ ಪ್ಲಾನ್..!

2023ರ ವಿಶ್ವ ಟೆಸ್ಟ್​ ಚಾಂಪಿಯನ್ ಶಿಫ್ ಫೈನಲ್​ನಲ್ಲಿ ಆಸ್ಟ್ರೇಲಿಯಾ ಎದುರು ಮುಖಭಂಗ ಅನುಭವಿಸಿದ್ದ ರೋಹಿತ್ ಪಡೆ, ಈಗ ಆ ಸೋಲಿಗೆ ತವರಿನಲ್ಲಿ ಸೇಡು ತೀರಿಸಿಕೊಳ್ಳುವ ಆತ್ಮವಿಶ್ವಾಸದಲ್ಲಿದೆ. ಅಷ್ಟೇ ಅಲ್ಲ! 2003ರ ಏಕದಿನ ವಿಶ್ವಕಪ್ ಸೋಲಿಗೂ ಉತ್ತರಿಸುವ ಮೂಲಕ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯೋ ಪ್ಲಾನ್​ನಲ್ಲಿದೆ.

ಒಟ್ಟಿನಲ್ಲಿ.. ವಿಶ್ವ ಕಿರೀಟ ಗೆಲ್ಲೋಕೆ ಉಭಯ ತಂಡಗಳು ನಾನಾ, ತಂತ್ರಗಳ ಜೊತೆ ಜೊತೆಗೆ ಆನ್​ಫೀಲ್ಡ್​ನಲ್ಲಿ ಶಕ್ತಿ ಮೀರಿ ಹೋರಾಟವನ್ನೇ ನಡೆಸಲಿದ್ದಾರೆ. ಈ ತಂತ್ರ-ರಣತಂತ್ರಗಳಲ್ಲಿ ಯಾರು ಅಂತಿಮವಾಗಿ ಗೆದ್ದು, ಚಾಂಪಿಯನ್ ಪಟ್ಟಕ್ಕೇರುತ್ತಾರೆ ಅನ್ನೋದಕ್ಕೆ ಇನ್ನಷ್ಟೇ ಉತ್ತರ ಸಿಗಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

World Cup 2023: ಒಂದೇ ಕಲ್ಲಲ್ಲಿ 2 ಹಕ್ಕಿ ಹೊಡೆಯೋದು ರೋಹಿತ್ ಕನಸು! ಆಸೀಸ್​ಗೆ ಮಣ್ಣು ಮುಕ್ಕಿಸಲು ಟೀಂ ಇಂಡಿಯಾ ರೆಡಿ

https://newsfirstlive.com/wp-content/uploads/2023/10/VIRAT_KOHLI_ROHIT.jpg

Load More