newsfirstkannada.com

ರನ್​​​, ವಿಕೆಟ್​​​, ಸಿಕ್ಸರ್‌ನಲ್ಲೂ ಟೀಂ ಇಂಡಿಯಾದ್ದೇ ಮೇಲುಗೈ; ಬಾಹುಬಲಿ ವಿರಾಟ್​ಗೆ ಮೂಗುದಾರ ಹಾಕೋದ್ಯಾರು?

Share :

18-11-2023

    'ಸಿಕ್ಸರ್ ಮಷಿನ್' ರೋಹಿತ್​ ಶರ್ಮಾರನ್ನ ಹಿಡಿಯೋರೇ ಇಲ್ವಾ..?

    ಮೊಹ್ಮದ್ ಶಮಿ, ಜಸ್​ಪ್ರಿತ್ ಬೂಮ್ರಾ ಬೌಲಿಂಗ್​ಗೆ ಉಡೀಸ್​

    ವಿಶ್ವಕಪ್​ನಲ್ಲಿ ನಾವೇ ಬೆಸ್ಟ್​​​.. ಈ ಸಲ ಕಪ್ ನಮ್ದೇ ​ಎಂದ ಫ್ಯಾನ್ಸ್

ಒಂದೊಳ್ಳೆ ಕೆಲಸ ಆಗ್ಬೇಕು ಅಂದ್ರೆ ಟೈಮ್ ಬರ್ಬೇಕು. ಅದೃಷ್ಟ ಚೆನ್ನಾಗಿರಬೇಕು ಅಂತಾರೆ. ಸದ್ಯ ಆ ಶುಭಕಾಲ ಟೀಮ್ ಇಂಡಿಯಾಗೆ ಬಂದಿದೆ. ಅತ್ಯಾದ್ಭುತ ಪ್ರದರ್ಶನ ನೀಡಿ ಫೈನಲ್​​​ಗೆ ಎಂಟ್ರಿ ಕೊಟ್ಟಿದೆ. ಸಂಡೇ ಮೆಗಾ ಫೈನಲ್​​ ಬ್ಯಾಟಲ್​​ನಲ್ಲಿ ಆಸ್ಟ್ರೇಲಿಯಾವನ್ನ ಎದುರಿಸಲಿದ್ದು, 2 ದಶಕದ ಸೋಲಿಗೆ ತಕ್ಕ ರಿವೆಂಜ್ ತೀರಿಸಿಕೊಳ್ಳಲು Team India ಹವಣಿಸ್ತಿದೆ.

ನವೆಂಬರ್​​​​ 19 ಏಕದಿನ ಕ್ರಿಕೆಟ್​​ನ ಡಾನ್​ ಯಾರು? ಫಿಫ್ಟಿ ಓವರ್​​​​​​​​​ ಮಾದರಿಗೆ ಸುಲ್ತಾನ್​​ ಯಾರು ಎಂದು ನಿರ್ಧಾರವಾಗುವ ದಿನ. ಈ ಏಕದಿನ ಸಿಂಹಾಸನ ಪಟ್ಟದ ಮೇಲೆ ಕ್ರಿಕೆಟ್​​ ಜಗತ್ತಿನ ಬಲಾಢ್ಯ ತಂಡಗಳೆರಡು ಕಣ್ಣಿಟ್ಟಿವೆ. ಸಂಡೇ ನಡೆಯುವ ವಿಶ್ವಕಪ್ ಫೈನಲ್​​​ ​​​​ ಮಹಾದಂಗಲ್​​ನಲ್ಲಿ ಮಾಜಿ ಚಾಂಪಿಯನ್ಸ್​ ಟೀಮ್ ಇಂಡಿಯಾ ಹಾಗೂ ಆಸ್ಟ್ರೇಲಿಯಾ ತಂಡಗಳು ಕಾದಾಡಲಿದ್ದು, ಹೈ ಎಕ್ಸ್​​ಪೆಕ್ಟೇಶನ್​​ ಮನೆ ಮಾಡಿದೆ.

ರೋಹಿತ್ ಶರ್ಮಾ

2 ದಶಕದ ಸೋಲಿನ ಲೆಕ್ಕ ಚುಕ್ತಾಗೆ ಚತುರ್ಥರು ಸನ್ನದ್ಧ

ಡೆಫಿನೆಟ್ಲಿ ಫೈನಲ್ ವಾರ್​​​ ರಣರೋಚಕ ಕಾದಾಟಕ್ಕೆ ಸಾಕ್ಷಿಯಾಗೋದ್ರಲ್ಲಿ ಎರಡು ಮಾತಿಲ್ಲ. ಯಾಕಂದ್ರೆ ಫೈನಲ್​ ರೇಸ್​​ನಲ್ಲಿ ಎದುರಾಗ್ತಿರೋದು ಅಂತಿಂಥ ತಂಡಗಳಲ್ಲ. ಎರಡು ವಿಶ್ವ ಕ್ರಿಕೆಟ್​ನ ಅಗ್ರ ತಂಡಗಳು. ಉಭಯ ತಂಡಗಳ ಗುರಿ ಒಂದೇ. ಫೈನಲ್​​​ ಗೆದ್ದು ಒನ್ಡೇಗೆ ಅಧಿಪತಿ ಅನ್ನಿಸಿಕೊಳ್ಳೋದು. ಈ ಸಲ ಆ ಚಾನ್ಸಸ್​​ ಟೀಮ್ ಇಂಡಿಯಾಗೇನೆ ಹೆಚ್ಚಿದೆ. ಇದು ಓವರ್ ಕಾನ್ಫಿಡೆಂಟ್​​​ ಮಾತುಗಳಲ್ಲ. ಬದಲಿಗೆ ವಿಶ್ವಕಪ್​​ ಕಾಳಗದಲ್ಲಿ ಭಾರತೀಯ ಕಲಿಗಳು ತೋರಿಸ್ತಿರೋ, ಕೆಚ್ಚದೆಯ ಪ್ರದರ್ಶನವೇ ಅದಕ್ಕೆ ಸಾಕ್ಷಿ.

ಬಾಹುಬಲಿ ಕೊಹ್ಲಿ ವಿಶ್ವಕಪ್​​ನ ರನ್​​ ‘ಕಿಂಗ್​​​’

ವಿರಾಟ್ ಕೊಹ್ಲಿ..! ಫ್ರಮ್​ ಡೇ ಒನ್ ಟು ಇವತ್ತಿನ ತನಕ ವಿಶ್ವಕಪ್​​​​​​ನಲ್ಲಿ ಗುನುಗುತ್ತಿರೋದು ಇದೊಂದು ಹೆಸರೇ. ಟೀಮ್ ಇಂಡಿಯಾದ ಈ ಬಾಹುಬಲಿ ನಡೆದಿದ್ದೇ ದಾರಿ. ಮನೋಜ್ಞ ಆಟದ ಮೂಲಕ ಪ್ರಸಕ್ತ ವಿಶ್ವಕಪ್​ನಲ್ಲಿ ಟಾಪ್ ಸ್ಕೋರರ್​ ಅನ್ನಿಸಿಕೊಂಡಿದ್ದಾರೆ. ಆಡಿದ 10 ಪಂದ್ಯಗಳಿಂದ 101.57 ರ ಸರಾಸರಿಲ್ಲಿ ಬರೋಬ್ಬರಿ 711 ರನ್​ ಚಚ್ಚಿದ್ದಾರೆ. 3 ಅಮೋಘ ಶತಕ ಮೂಡಿ ಬಂದಿವೆ. ವಿಶ್ವಕಪ್​​ ಪಂದ್ಯಾವಳಿ ಆವೃತ್ತಿಯೊಂದರಲ್ಲೇ ಅತ್ಯಧಿಕ ರನ್ ಗಳಿಸಿದ ಖ್ಯಾತಿಯು ಕೊಹ್ಲಿಯದ್ದಾಗಿದೆ. ಇಂತಹ ರನ್ ಸಾಮ್ರಾಟನನ್ನ ಹೇಗಪ್ಪಾ ಕಟ್ಟಿಹಾಕೋದು ಅಂತ ಆಸಿಸ್​​ ತಲೆಮೇಲೆ ಕೈಯಿಟ್ಟು ಕೂತಿದೆ.

ಸುನಾಮಿ ಶಮಿ ಗರಿಷ್ಠ ವಿಕೆಟ್ ಸರದಾರ..!

ಇನ್ನು ಕಿಂಗ್ ಕೊಹ್ಲಿ ರನ್​ ಗಳಿಕೆಯಲ್ಲಿ ಅಗ್ರಜ ಅನ್ನಿಸಿಕೊಂಡ್ರೆ, ಅತ್ಯಧಿಕ ವಿಕೆಟ್ ಟೇಕರ್​​​​ ಕೂಡ ಇಂಡಿಯನ್ ಕಲಿನೇ ಆಗಿದ್ದಾರೆ. ಆ ವೀರ ಪರಾಕ್ರಮಿ ಮತ್ಯಾರು ಅಲ್ಲ, ಅವರೇ ತೂಫಾನ್ ಮೊಹಮ್ಮದ್ ಶಮಿ. ಹೌದು, ಪ್ರಸಕ್ತ ವಿಶ್ವಕಪ್​ನಲ್ಲಿ ಔಟ್​​ ಸ್ಟ್ಯಾಂಡಿಂಗ್​ ಪರ್ಫಾಮೆನ್ಸ್​ ನೀಡ್ತಿದ್ದಾರೆ. ಆಡಿದ ಆರೇ ಪಂದ್ಯಗಳಲ್ಲಿ 23 ವಿಕೆಟ್​​ ಕಬಳಿಸಿ ದಿಗ್ಭಮೆ ಮೂಡಿಸಿದ್ದಾರೆ. ಇಂಟ್ರೆಸ್ಟಿಂಗ್ ಸಂಗತಿ ಏನಂದ್ರೆ ಇದೇ ವಿಶ್ವಕಪ್​​ನಲ್ಲಿ ಸ್ವಿಂಗ್ ಮಾಸ್ಟರ್​ 3 ಬಾರಿ 5 ವಿಕೆಟ್​​​​​ ಪಡೆದಿದ್ದು ಶ್ರೇಷ್ಠ ಸಾಧನೆ.

ಸಿಕ್ಸ್ ಬಾರಿಸೋದ್ರಲ್ಲಿ ರೋಹಿತ್​​ ಶರ್ಮಾ ಟಾಪರ್​​​​​​..!

ಇನ್ನು ಆರಂಭಿಕನಾಗಿ ರೋಹಿತ್​ ಶರ್ಮಾ ಹವಾ ಏನು ಕಮ್ಮಿ ಇಲ್ಲ. ಡಿಸ್ಟ್ರಾಕಿವ್​​ ಬ್ಯಾಟಿಂಗ್ ಮೂಲಕ ಎದುರಾಳಿಗೆ ಸಿಂಹಸ್ವಪ್ನರಾಗಿ ಕಾಡ್ತಿದ್ದಾರೆ. ಅದ್ಯಾವ ಮಟ್ಟಿಗೆ ಅನ್ನೋದಕ್ಕೆ ಅವರ ಬ್ಯಾಟ್​​​ನಿಂದ ಮೂಡಿಬಂದ ಸಿಕ್ಸರ್​​​ಗಳ​ ಸಂಖ್ಯೆನೆ ಬೆಸ್ಟ್​​ ಎಕ್ಸಾಂಪಲ್​. 2023ರ ವಿಶ್ವಕಪ್​​ ಸಮರದಲ್ಲಿ 28 ಸಿಕ್ಸ್​​​ ಬಾರಿಸಿದ್ದಾರೆ. ಹಿಟ್​ಮ್ಯಾನ್​​ ಹೊಡೆದಷ್ಟು ಸಿಕ್ಸರ್​ಗಳನ್ನ ಈ ವಿಶ್ವಕಪ್​​​​​​ನಲ್ಲಿ ಯಾರು ಹೊಡೆದಿಲ್ಲ. ಈ ಸಿಕ್ಸರ್​​​ ಕಿಂಗ್ ನನ್ನ ಕಟ್ಟಿಹಾಕೋದು ಆಸ್ಟ್ರೇಲಿಯಾಗೆ ದೊಡ್ಡ ಸವಾಲಾಗಿದೆ.

ಹಿಟ್​​ಮ್ಯಾನ್ ಬೆಸ್ಟ್​ ಕ್ಯಾಪ್ಟನ್​​​.. ಆಸೀಸ್​​​​​​​ಗೆ ಕೊಡ್ತಾರೆ ಗುನ್ನಾ..!

ಈ ವಿಶ್ವಕಪ್​​ನಲ್ಲಿ ರೋಹಿತ್​​​​​​​​​​​​​​ ದರ್ಬಾರ್​​​​ ಬರೀ ಬ್ಯಾಟಿಂಗ್​ಗೆ ಸೀಮಿತವಾಗಿಲ್ಲ. ಕ್ಯಾಪ್ಟನ್ಸಿಯಲ್ಲೂ ರೋಹಿತ್​​​​ ಧೂಳೆಬ್ಬಿಸಿದ್ದಾರೆ. ಪ್ರಸಕ್ತ ವಿಶ್ವಕಪ್​ನಲ್ಲಿ ಅಜೇಯ ಕ್ಯಾಪ್ಟನನ್ಸಿ ಇವರದ್ದಾಗಿದೆ. ರೋಹಿತ್ ನಾಯಕತ್ವದಲ್ಲಿ ಭಾರತ ಆಡಿದ 10ಕ್ಕೆ 10 ಪಂದ್ಯಗಳನ್ನ ಗೆದ್ದು ಹೊಸ ಇತಿಹಾಸ ಬರೆದಿದೆ. ಇಂತಹ ಬೆಸ್ಟ್​ ಕ್ಯಾಪ್ಟನ್​ ತಂತ್ರ ಅರಿಯೋದು ಎದುರಾಳಿ ಆಸಿಸ್​​ಗೆ ಕಬ್ಬಿಣದ ಕಡಲೆಯಾಗಲಿದೆ.

ಭಾರತ ತಂಡದ ಆಟಗಾರರು

ಜಸ್​ಪ್ರೀತ್ ಬೂಮ್ ಡಾಟ್​​​ ಬಾಲ್​​ ಪಂಟರ್​​​​​

ಇನ್ನು ಜಸ್​ಪ್ರೀತ್​​​​​​​ ಬೂಮ್ರ ಏನು ಕಮ್ಮಿ ಇಲ್ಲ. ಅವರು ಕೂಡ ಬಾಲ್​​ ಅನ್ನೋ ಶಾರ್ಪ್​ ವೆಪನ್ ಹಿಡಿದು ಎದುರಾಳಿ ಬ್ಯಾಟ್ಸ್​​​ಮನ್​ಗಳನ್ನ ಉಡೀಸ್ ಮಾಡ್ತಿದ್ದಾರೆ. ಈ ವಿಶ್ವಕಪ್​ನಲ್ಲಿ ಡೆತ್ ಓವರ್ ಸ್ಪೆಶಲಿಸ್ಟ್​ ಒಟ್ಟು 82.5 ಓವರ್​​​ ಬೌಲ್​ ಮಾಡಿದ್ದಾರೆ. ಅಂದ್ರೆ 497 ಬಾಲ್ಸ್ ಎಸೆದಿದ್ದು ಆ ಪೈಕಿ 335 ಬಾಲ್ಸ್ ಡಾಟ್ ಆಗಿವೆ. ​​ಯಾವೊಬ್ಬ ಬೌಲರ್​ನಿಂದ ಇಂತಹ ಸಾಧನೆ ಮೂಡಿ ಬಂದಿಲ್ಲ. ಇದರ ಜೊತೆ 3.98 ಬೆಸ್ಟ್ ಎಕಾನಮಿ ಕಾಯ್ದುಕೊಂಡಿದ್ದಾರೆ.

ಒನ್ಡೇ ಚಕ್ರವರ್ತಿ ಯಾರೆಂದು ನಿರ್ಧರಿಸುವ ವಿಶ್ವಕಪ್​ ಫೈನಲ್​ ಉಭಯ ತಂಡಕ್ಕೂ ಪ್ರತಿಷ್ಠೆಯಾಗಿದೆ. ಮೇಲಿನ ಸೂಪರ್ ಸ್ಟಾರ್ಸ್​ ನಮೋ ಸ್ಟೇಡಿಯಂನಲ್ಲಿ ರೋರಿಂಗ್ ನಡೆಸಿದ್ರೆ ಬಲಿಷ್ಠ ಆಸ್ಟ್ರೇಲಿಯಾ ಗಂಟುಮೂಟೆ ಕಟ್ಟೋದು ಗ್ಯಾರಂಟಿ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ರನ್​​​, ವಿಕೆಟ್​​​, ಸಿಕ್ಸರ್‌ನಲ್ಲೂ ಟೀಂ ಇಂಡಿಯಾದ್ದೇ ಮೇಲುಗೈ; ಬಾಹುಬಲಿ ವಿರಾಟ್​ಗೆ ಮೂಗುದಾರ ಹಾಕೋದ್ಯಾರು?

https://newsfirstlive.com/wp-content/uploads/2023/11/ROHIR_SHARMA_KOHLI_SHAMI.jpg

Load More