newsfirstkannada.com

ಹಾಲಿ ಚಾಂಪಿಯನ್​ ಮಗ್ಗಲು ಮುರಿದ ದಕ್ಷಿಣ ಆಫ್ರಿಕಾ; ಕೇವಲ 170 ರನ್​ಗಳಿಗೆ ಆಲೌಟ್ ಮಾಡಿ ಗರ್ವಭಂಗ..!

Share :

22-10-2023

    ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್​ಗೆ ಸೋಲು

    400 ರನ್​ಗಳ ಗುರಿ ಮುಟ್ಟುವಲ್ಲಿ ವಿಫಲ

    4 ಪಂದ್ಯವಾಡಿ 3 ರಲ್ಲಿ ಸೋತ ಬ್ರಿಟಿಷರು

ನಿನ್ನೆ ಮುಂಬೈನ ವಾಂಖೆಂಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ನೀಡಿದ್ದ 400 ರನ್​ಗಳ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್​ 170ಕ್ಕೆ ಆಲ್​ ಔಟ್​ ಆಗಿ ಮಕಾಡೆ ಮಲಗಿದೆ.

ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ್ದ ದಕ್ಷಿಣ ಆಫ್ರಿಕಾ ತಂಡ ಹೆನ್ರಿಚ್​ ಕ್ಲಾಸೆನ್ ಶತಕ ಹಾಗೂ ರೀಜಾ ಹೆಂಡ್ರಿಕ್ಸ್, ರಾಸ್ಸಿ ವ್ಯಾನ್ ಡೆರ್​ ಡಸ್ಸೆನ್ ಮತ್ತು ಮಾರ್ಕೊ ಜಾನ್ಸೆನ್ ಅವರ ಅರ್ಧಶತಕದ ಆಟದ ನೆರವಿನಿಂದ 400 ರನ್​ನ ಗುರಿಯನ್ನು ನೀಡಿತ್ತು.

ಈ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್​ ತಂಡ 12ನೇ ಓವರ್​ಗೆ ನಾಲ್ಕು ವಿಕೆಟ್​ಗಳನ್ನು ಕಳೆದುಕೊಂಡಿತು. 9ನೇ ವಿಕೆಟ್​ನಲ್ಲಿ ಗಸ್ ಅಟ್ಕಿನ್ಸನ್ ಮತ್ತು ಮಾರ್ಕ್ ವುಡ್ ಮಾಡಿದ 70 ರನ್​ನ ಜೊತೆಯಾಟ ತಂಡ 120ರ ಒಳಗೆ ಆಲ್​ಔಟ್​ ಆಗುವುದನ್ನು ತಪ್ಪಿಸಿತು. ಬಲಿಷ್ಠ ಅನುಭವಿ ಬ್ಯಾಟರ್​​ಗಳನ್ನು ಹೊಂದಿರುವ ಇಂಗ್ಲೆಂಡ್​ ಹರಿಣಗಳ ವೇಗದ ದಾಳಿಯ ಮುಂದೆ ಮಂಡಿಯೂರಿತು.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಹಾಲಿ ಚಾಂಪಿಯನ್​ ಮಗ್ಗಲು ಮುರಿದ ದಕ್ಷಿಣ ಆಫ್ರಿಕಾ; ಕೇವಲ 170 ರನ್​ಗಳಿಗೆ ಆಲೌಟ್ ಮಾಡಿ ಗರ್ವಭಂಗ..!

https://newsfirstlive.com/wp-content/uploads/2023/10/ENG.jpg

Load More