ಬಾಂಗ್ಲಾ ವಿರುದ್ಧ ನಡೆಯುತ್ತಿರುವ ಪಂದ್ಯಕ್ಕೂ ಮೊದಲೇ ನಿರ್ಧಾರ
ಟೀಮ್ ಇಂಡಿಯಾ ವಿರುದ್ಧ 302 ರನ್ಗಳ ಅಂತರದಿಂದ ಸೋಲು
1996ರ ತಂಡದ ಕ್ಯಾಪ್ಟನ್ ಅರ್ಜುನ್ ರಣತುಂಗ ಹೊಸ ಅಧ್ಯಕ್ಷ
ವಾಂಖೆಡೆಯಲ್ಲಿ ಟೀಮ್ ಇಂಡಿಯಾ ವಿರುದ್ಧ ಶ್ರೀಲಂಕಾ ತಂಡ 302 ರನ್ಗಳ ಅಂತರದಿಂದ ಹೀನಾಯವಾಗಿ ಸೋಲು ಹಾಗೂ ವಿಶ್ವಕಪ್ನಲ್ಲಿ ಕಳಪೆ ಪ್ರದರ್ಶನ ಹಿನ್ನೆಲೆಯಲ್ಲಿ ಇಡೀ ಲಂಕಾ ಕ್ರಿಕೆಟ್ ಬೋರ್ಡ್ನ ಅಧಿಕಾರಿಗಳನ್ನ ವಜಾಗೊಳಿಸಲಾಗಿದೆ. ಸದ್ಯ ಇಂದು ಬಾಂಗ್ಲಾ ವಿರುದ್ಧ ನಡೆಯುತ್ತಿರುವ ಪಂದ್ಯಕ್ಕೂ ಮೊದಲೇ ಅಲ್ಲಿನ ಕ್ರೀಡಾ ಸಚಿವ ರೋಶನ್ ರಣಸಿಂಗ್ ಈ ನಿರ್ಧಾರವನ್ನ ತೆಗೆದುಕೊಂಡಿದ್ದಾರೆ.
ಶ್ರೀಲಂಕಾ ಕ್ರೀಡಾ ಸಚಿವ ರೋಶನ್ ರಣಸಿಂಗ್ ಅವರು ಇಡೀ ಕ್ರಿಕೆಟ್ ಬೋರ್ಡ್ ಅಧಿಕಾರಿಗಳನ್ನ ವಜಾಗೊಳಿಸಿ 1996ರ ವರ್ಲ್ಡ್ಕಪ್ ಗೆದ್ದ ತಂಡದ ನಾಯಕ ಅರ್ಜುನ್ ರಣತುಂಗರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಕ್ರಿಕೆಟ್ ಬೋರ್ಡ್ ನಿಷ್ಠಾವಂತರನ್ನು ಕಡೆಗಣಿಸಿದ್ದು ಭ್ರಷ್ಟಾಚಾರದಿಂದ ಕೂಡಿದೆ. ಕೂಡಲೇ ಬೋರ್ಡ್ಗೆ ಸಂಬಂಧಿಸಿದವರು ರಾಜೀನಾಮೆ ಸಲ್ಲಿಸಬೇಕು ಎಂದು ಮೊನ್ನೆ ಖಡಕ್ ಆಗಿ ವಾರ್ನ್ ಮಾಡಿದ್ದರು.
ಇದರ ಬೆನ್ನಲ್ಲೇ ಶನಿವಾರದಂದು ಕ್ರಿಕೆಟ್ ಬೋರ್ಡ್ನ ಕಾರ್ಯದರ್ಶಿ ಹಾಗೂ ಸಂಸ್ಥೆಯಲ್ಲಿ 2ನೇ ಅತ್ಯುನ್ನತ ಸ್ಥಾನ ಹೊಂದಿದ್ದ ಮೋಹನ್ ಡಿ ಸಿಲ್ವಾ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ ಅರ್ಜನ್ ರಣತುಂಗ ಅವರನ್ನು ತಾತ್ಕಾಲಿಕ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ. ಇದರ ಜೊತೆಗೆ ಹೊಸದಾಗಿ ರಚಿಸಲಾದ 7 ಸದಸ್ಯರ ಸಮಿತಿಯು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ಒಳಗೊಂಡಿದೆ ಎಂದು ತಿಳಿದು ಬಂದಿದೆ.
ಇನ್ನು ಸದ್ಯ ನಡೆಯುತ್ತಿರುವ 2023ರ ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ತಂಡವು ಅತ್ಯಂತ ಕಳಪೆ ಪ್ರದರ್ಶನ ತೋರುತ್ತಿದ್ದು ಅಫ್ಘಾನ್ಗಿಂದ ಕೆಳಗಿದೆ. ಕ್ಯಾಪ್ಟನ್ ಕುಸಲಾ ಮೆಂಡೀಸ್ ಮಾರ್ಗದಲ್ಲಿ ಸಾಗುತ್ತಿರುವ ಟೀಮ್, ಈಗಾಗಲೇ 7 ಪಂದ್ಯಗಳನ್ನು ಆಡಿ 5 ಮ್ಯಾಚ್ಗಳಲ್ಲಿ ಸೋತು, 2ರಲ್ಲಿ ಮಾತ್ರ ಗೆದ್ದಿದೆ. ಇದರಿಂದ ಪಾಯಿಂಟ್ ಪಟ್ಟಿಯಲ್ಲಿ ಕೇವಲ 4 ಅಂಕಗಳಿಂದ 7ನೇ ಸ್ಥಾನದಲ್ಲಿ ಇದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ