newsfirstkannada.com

Team India: ಟಾಪರ್ಸ್​ ಸಕ್ಸಸ್​ ಹಿಂದೆ ಮಿಡಲ್​ ಆರ್ಡರ್​ ಶ್ರಮ.! ಶ್ರೇಯಸ್​- ರಾಹುಲ್ ಸೂಪರೋ ಸೂಪರ್

Share :

18-11-2023

  ಭಾರತದ ಮಿಡಲ್​ ಆರ್ಡರ್​ಗೆ​ ಮಾಸ್ಟರ್​ಗಳ ಬಲ

  ಟಾಪ್​ ಆರ್ಡರ್​ ಟಾಪ್​​ಕ್ಲಾಸ್ ಆಟಕ್ಕೆ ಇದೇ ಧೈರ್ಯ

  ಕನ್ನಡಿಗ ಕೆ ಎಲ್​ ರಾಹುಲ್​ ತಾಳ್ಮೆಯ ಹೋರಾಟಕ್ಕೆ ಸಲಾಂ

ಯಾವಾಗ್ಲೂ ಡಿಫೆನ್ಸಿವ್​ ಮೂಡ್​ನಲ್ಲಿ ಇರ್ತಿದ್ದ ಟೀಮ್​ ಇಂಡಿಯಾ ಟಾಪ್​ ಆರ್ಡರ್​ ಬ್ಯಾಟ್ಸ್​ಮನ್​ಗಳು ಅಗ್ರೆಸ್ಸಿವ್ ಅವತಾರ ಎತ್ತಿದ್ದು ಹೇಗೆ.? ಇದ್ದಕ್ಕಿಂದ್ದಂತೆ ಡೇರ್​ ಡೆವಿಲ್​ ಆಟವಾಡಲು ಧೈರ್ಯ ಬಂದಿದ್ದು ಹೇಗೆ.? ಈ ಪ್ರಶ್ನೆ ನಿಮ್ಮನ್ನೂ ಕಾಡಿರಬಹುದು ಇದಕ್ಕೆ ಉತ್ತರ ಮಿಡಲ್​ ಆರ್ಡರ್​ ಬ್ಯಾಟ್ಸ್​ಮನ್​ಗಳು. ಅದು ಹೇಗೆ ಅಂತೀರಾ? ಈ ಸ್ಟೋರಿ ಓದಿ.

ವಿಶ್ವಕಪ್​ ಟೂರ್ನಿಯಲ್ಲಿ ಟೀಮ್​ ಇಂಡಿಯಾದ ಸಕ್ಸಸ್​ ಹಿಂದಿನ ಸೂತ್ರ ಬ್ಯಾಟಿಂಗ್ ಅಪ್ರೋಚ್​ನಲ್ಲಾದ ಬದಲಾವಣೆ. ಟೀಮ್​ ಇಂಡಿಯಾ ಬ್ಯಾಟ್ಸ್​ಮನ್​ಗಳು ಹಿಂದೆದಿಗಿಂತಲೂ ಅಗ್ರೆಸ್ಸಿವ್​ ಆಟವಾಡ್ತಿದ್ದಾರೆ. ಕ್ಯಾಪ್ಟನ್​ ರೋಹಿತ್​ ಶರ್ಮಾ ಇಂಟ್ರ್ಯುಡ್ಯೂಸ್​ ಮಾಡಿದ ಈ ಸೂತ್ರ, ವಿಶ್ವಕಪ್​ ಅಖಾಡದಲ್ಲಿ​ ಭಾರತದ ಯಶಸ್ಸಿನ ಟಾಪ್​ ಸೀಕ್ರೆಟ್​.! ಆರಂಭದಲ್ಲೇ ಬೌಂಡರಿ-ಸಿಕ್ಸರ್​ಗಳ ಸುರಿಮಳೆ ಸುರಿಸ್ತಾ ಇರೋ ಕ್ಯಾಪ್ಟನ್​ ರೋಹಿತ್​, ಬಿಗ್​ ಇನ್ನಿಂಗ್ಸ್​ಗೆ ಸಾಲಿಡ್​ ಅಡಿಪಾಯ ಹಾಕ್ತಿದ್ದಾರೆ.

ಕ್ಯಾಪ್ಟನ್​ ರೋಹಿತ್​ ಶರ್ಮಾ ಮಾತ್ರವಲ್ಲ. ಯಂಗ್​ಗನ್​ ಶುಭ್​​ಮನ್​ ಗಿಲ್​, 3ನೇ ಕ್ರಮಾಂಕದಲ್ಲಿ ಕಣಕ್ಕಿಳಿಯೋ ವಿರಾಟ್​ ಕೊಹ್ಲಿ ಕೂಡ ಬೌಲರ್​ಗಳ ಬೆಂಡೆತ್ತುತ್ತಿದ್ದಾರೆ. ರಣಾಗಂಣದಲ್ಲಿ ಎದುರಾಳಿಗಳ ಗೇಮ್​ಪ್ಲಾನ್​ಗಳನ್ನ ಟೀಮ್​ ಇಂಡಿಯಾದ ಟಾಪ್​ ಆರ್ಡರ್​ ಬ್ಯಾಟರ್ಸ್​​ ಚಿಂದಿ ಉಡಾಯಿಸ್ತಿದ್ದಾರೆ. ಡಿಫೆನ್ಸಿವ್​ ಮೂಡ್​ನಲ್ಲಿ ಇರ್ತಾ ಇದ್ದ ಟೀಮ್​ ಇಂಡಿಯಾದ ಬ್ಯಾಟರ್ಸ್​ ಇದ್ದಕ್ಕಿದ್ದಂತೆ ಡೇರ್​ ಡೆವಿಲ್ಸ್​ ಆಗಿದ್ದಾರೆ.

ಮಿಡಲ್​ ಆರ್ಡರ್​ಗೆ​ ಮಾಸ್ಟರ್​ಗಳ ಬಲ.. ಟಾಪ್​ ಆರ್ಡರ್​ಗೆ​ ಧೈರ್ಯ.!

ವಿಶ್ವಕಪ್​ಗೂ ಮುನ್ನ ಡಿಫೆನ್ಸಿವ್​ ಮೂಡ್​ನಲ್ಲಿ ಇನ್ನಿಂಗ್ಸ್​ ಸ್ಟಾರ್ಟ್​ ಮಾಡ್ತಾ ಇದ್ದ ಟೀಮ್​ ಇಂಡಿಯಾ ಎದುರಾಳಿಗಳ ರಣತಂತ್ರಕ್ಕೆ ಸುಲಭಕ್ಕೆ ಸಿಕ್ಕಿ ಬೀಳ್ತಿತ್ತು. ಆದ್ರೆ, ಈಗ ಟೀಮ್​ ಇಂಡಿಯಾ ಅಗ್ರೆಸ್ಸಿವ್​ ಆಟ ಎದುರಾಳಿಗಳಲ್ಲಿ ನಡುಕ ಹುಟ್ಟಿಸ್ತಾ ಇದೆ. ತಂಡವೂ ಆರಂಭದಲ್ಲೇ ಮೇಲುಗೈ ಸಾಧಿಸ್ತಿದೆ. ಇದ್ರ ಹಿಂದೆ ಸಿಕ್ಕಾಪಟ್ಟೆ ರಿಸ್ಕ್​ ಇದೆ. ರನ್​ಗಳಿಸೋ ಭರದಲ್ಲಿ ವಿಕೆಟ್​ ಕಳೆದುಕೊಂಡ್ರೆ, ಮುಂದೆ ಏನಪ್ಪಾ ಕಥೆ ಅನ್ನೋ ಟೆನ್ಶನ್​ ಹಿಂದಿತ್ತು. ಆದ್ರೆ, ಈಗ ಅದಿಲ್ಲ.. ಮಿಡಲ್​ ಆರ್ಡರ್​ಗೆ ಮಾಸ್ಟರ್​ಗಳ ಬಲ ಬಂದಿದೆ.

ಇದನ್ನು ಓದಿ: World Cup 2023: ಆಸೀಸ್​ಗೆ ಈತನೇ ಕೃಪಾಕಟಾಕ್ಷ! ಯೆಲ್ಲೋ ಆರ್ಮಿಯ ​​​ಹಣೆಬರಹ ಬದಲಿಸಿದ ಪುಣ್ಯಾತ್ಮ ಈತ!

4ನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್​​​ ಸೂಪರ್ ಆಟ.!

4ನೇ ಕ್ರಮಾಂಕದ ತಲೆನೋವು ಈ ವಿಶ್ವಕಪ್​ಗೂ ಮುನ್ನ ಕೂಡ ಟೀಮ್​ ಇಂಡಿಯಾವನ್ನ ಕಾಡಿತ್ತು. ಆದ್ರೆ, ಶ್ರೇಯಸ್​ ಅಯ್ಯರ್​ ಈ ಸಮಸ್ಯೆಗೆ ಪರಿಹಾರವಾಗಿ ನಿಂತಿದ್ದಾರೆ. 4ನೇ ಕ್ರಮಾಂಕದಲ್ಲಿ ಜವಾಬ್ದಾರಿಯುತ ಆಟವಾಡ್ತಿದ್ದಾರೆ. ಗೇಮ್​ ರೀಡ್​ ಮಾಡೋದ್ರಲ್ಲೂ ಪಂಟರ್​ ಅನ್ನೋದನ್ನ ನಿರೂಪಿಸಿರುವ ಶ್ರೇಯಸ್​, ಸಿಚ್ಯುವೇಶನ್​ಗೆ ತಕ್ಕಂತೆ ಬ್ಯಾಟ್​ ಬೀಸ್ತಿದ್ದಾರೆ. ಮಿಸ್ಟರ್​ ಡಿಪೆಂಡೆಬಲ್​ ಅಂದ ಮಾತ್ರಕ್ಕೆ ಕ್ಲಾಸ್​ ಆಟ ಮಾತ್ರವಲ್ಲ. ಮಾಸ್​ ಆಟದಲ್ಲೂ ಮಿಂಚುತ್ತಿದ್ದಾರೆ. ಇದಕ್ಕೆ ಸೆಮಿಫೈನಲ್​ ಪಂದ್ಯ ಇನ್ನಿಂಗ್ಸ್​ ಬೆಸ್ಟ್​ ಎಕ್ಸಾಂಪಲ್​.!

ಕನ್ನಡಿಗ ರಾಹುಲ್​ ತಾಳ್ಮೆಯ ಹೋರಾಟಕ್ಕೆ ಒಂದು ಸಲಾಂ.!

ಅಂದು ರಾಹುಲ್​ ದ್ರಾವಿಡ್​ ನಿಭಾಯಿಸ್ತಾ ಇದ್ದ ರೋಲ್​ ಅನ್ನೆ ಸದ್ಯ ಕನ್ನಡಿಗ ಕೆ.ಎಲ್​ ರಾಹುಲ್​ ನಿಭಾಯಿಸ್ತಿದ್ದಾರೆ. ಮಿಸ್ಟರ್​ ಡಿಪೆಂಡೆಬಲ್​​ ಆಗಿ ತಂಡದ ಹಿತಕ್ಕಾಗಿ ಕನ್ನಡಿಗ ಹೋರಾಟ ನಡೆಸ್ತಿದ್ದಾನೆ. ಟಾಪ್​ ಆರ್ಡರ್​ ವೈಫಲ್ಯ ಅನುಭವಿಸಿದಾಗಲೆಲ್ಲಾ ಟೊಂಕ ಕಟ್ಟಿ ನಿಂತು ಹೋರಾಟ ನಡೆಸ್ತಿದ್ದಾನೆ. ವಿಶ್ವಕಪ್​ ಟೂರ್ನಿಯ ಮೊದಲ ಪಂದ್ಯದಲ್ಲಿ ಆಸಿಸ್​ ವಿರುದ್ಧ ನಡೆಸಿದ ಕೆಚ್ಚೆದೆಯ ಹೋರಾಟವೇ ಇದಕ್ಕೆ ನಿದರ್ಶನ.

ಇದನ್ನು ಓದಿ: IND V/S AUS: ವಿಶ್ವಕಪ್​ ಫೈನಲ್‌ ಪಂದ್ಯ ಒನ್​ ಸೈಡೆಡ್ ಗೇಮ್‌ ಆಗೋಕೆ ಚಾನ್ಸೇ ಇಲ್ಲ.. ಕಾರಣ ಏನು ಗೊತ್ತಾ?

ಶ್ರೇಯಸ್​ – ರಾಹುಲ್​ ಜೊತೆಯಾಟ ಸೂಪರ್​..!

ವೈಯಕ್ತಿಕವಾಗಿ ಮಾತ್ರವಲ್ಲ.. 4-5ನೇ ಕ್ರಮಾಂಕದ ಬ್ಯಾಟ್ಸ್​ಮನ್​ಗಳಾದ ಶ್ರೇಯಸ್ ಅಯ್ಯರ್​, ಕೆ.ಎಲ್​ ರಾಹುಲ್​ ಜೊತೆಯಾಟ ಸೂಪರ್​.! ಸೆಮಿಫೈನಲ್​ನಂತಹ ಹೈ ಪ್ರೆಶರ್​ ಗೇಮ್​ನಲ್ಲಿ ಇವರಿಬ್ಬರು ಆಡಿದ 208 ರನ್​ಗಳ ಭರ್ಜರಿ ಜೊತೆಯಾಟ ವಿಶ್ವಕಪ್​ ಟೂರ್ನಿಯ ಇತಿಹಾಸದಲ್ಲೇ ಹೆಚ್ಚು ರನ್​ಗಳ ಜೊತೆಯಾಟವಾಗಿದೆ. ಇವರಿಬ್ಬರ ಜವಾಬ್ದಾರಿಯುತ ಆಟಕ್ಕೆ ಇದೇ ಸಾಕ್ಷಿಯಾಗಿದೆ.

ಒಟ್ಟಿನಲ್ಲಿ, ಟೀಮ್​ ಇಂಡಿಯಾದ ಅಜೇಯ ಓಟದ ಹಿಂದೆ ಮಿಡಲ್​ ಆರ್ಡರ್ ಬ್ಯಾಟ್ಸ್​ಮನ್​ಗಳದ್ದೂ​ ಶ್ರಮವಿದೆ ಅನ್ನೋ ಸತ್ಯವನ್ನ ಒಪ್ಪಿಕೊಳ್ಳಲೇಬೇಕು. ಟೀಮ್​ ಮ್ಯಾನೇಜ್​ಮೆಂಟ್​ ತಮಗೆ ನೀಡಿರುವ ಜವಾಬ್ದಾರಿಯನ್ನ ಸಮರ್ಥವಾಗಿ ಇವರಿಬ್ಬರು ನಿಭಾಯಿಸ್ತಾರೆ. ತಮ್ಮ ಮೇಲೆ ಇಟ್ಟ ಭರವಸೆಯನ್ನ ಉಳಿಸಿಕೊಂಡು ಟಾಪ್​ ಆರ್ಡರ್​ ಬ್ಯಾಟ್ಸ್​ಮನ್​ಗಳು ಫಿಯರ್​ ಲೆಸ್​​ ನೆರವಾಗ್ತಿದ್ದಾರೆ. ತಂಡಕ್ಕಾಗಿ ಸೆಲ್ಫ್​ಲೆಸ್​ ಆಟವಾಡ್ತಿರೋ ಶ್ರೇಯಸ್​, ರಾಹುಲ್​ಗೆ ಒಂದು ಸಲಾಂ ಹೇಳಲೇಬೇಕು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Team India: ಟಾಪರ್ಸ್​ ಸಕ್ಸಸ್​ ಹಿಂದೆ ಮಿಡಲ್​ ಆರ್ಡರ್​ ಶ್ರಮ.! ಶ್ರೇಯಸ್​- ರಾಹುಲ್ ಸೂಪರೋ ಸೂಪರ್

https://newsfirstlive.com/wp-content/uploads/2023/10/Team-India_Ashwin.png

Load More