newsfirstkannada.com

ವಿರಾಟ್ ಕೊಹ್ಲಿ-ರೋಹಿತ್​ ಶರ್ಮಾ ನಡುವೆ ನೋ ವಾರ್​.. ಟೀಮ್​ ಇಂಡಿಯಾ ಒಗ್ಗಟ್ಟಿನ ಹಿಂದಿದ್ದಾರೆ ಕನ್ನಡದ ಗುರುಗಳು!

Share :

25-10-2023

  ಸೋಲಿಲ್ಲದ ಸರದಾರನಂತೆ ಮುನ್ನುಗ್ಗುತ್ತಿರುವ ಟೀಮ್​ ಇಂಡಿಯಾ

  ಆಟಗಾರರಿಂದ ಡ್ರೆಸ್ಸಿಂಗ್ ರೂಮ್​, ಮೈದಾನದಲ್ಲಿ ಒಗ್ಗಟ್ಟು ಪ್ರದರ್ಶನ

  ಬಲಾಢ್ಯ ತಂಡಗಳನ್ನೆಲ್ಲ ಮಣ್ಣು ಮುಕ್ಕಿಸುತ್ತಿರುವ ಟೀಮ್ ಇಂಡಿಯಾ

ಟೀಮ್ ಇಂಡಿಯಾವನ್ನ ನೋಡ್ತಿದ್ರೆ, ಈ ಸಲ ವಿಶ್ವಕಪ್​ ಗೆಲುವಿನ ಭರವಸೆ ದಿನೇ ದಿನೇ ಹೆಚ್ಚಾಗುತ್ತಿದೆ. 2011ರ ಏಕದಿನ ವಿಶ್ವಕಪ್ ಟೂರ್ನಿ ಪದೆ ಪದೇ ನೆನಪಾಗುತ್ತಿದೆ. ತಂಡದ ಈ ಗೆಲುವಿನ ನಾಗಲೋಟದ ಹಿಂದೆ, ಒಂದು ಸಿಕ್ರೇಟ್​ ಕಥೆಯಿದೆ. ಅದೇನು..

ಏಕದಿನ ವಿಶ್ವಕಪ್​ನಲ್ಲಿ ಅದ್ಭುತ ಆಟವಾಡ್ತಿರೋ ಟೀಮ್ ಇಂಡಿಯಾ, ಸೆಮೀಸ್​​ನತ್ತ ಹೆಜ್ಜೆ ಇಟ್ಟಿದೆ. ಸೋಲಿಲ್ಲದ ಸರದಾರನಂತೆ ಮುನ್ನುಗ್ಗುತ್ತಿರುವ ಪರಿ ನೋಡಿದ್ರೆ, ಈ ಸಲ ವಿಶ್ವ ಕಿರೀಟಕ್ಕೆ ಮುತ್ತಿಡೋದು ಖಾಯಂ ಎನಿಸಿದೆ. ಬಲಾಢ್ಯ ತಂಡಗಳನ್ನೆಲ್ಲ ಮಣ್ಣು ಮುಕ್ಕಿಸುತ್ತಿರುವ ಟೀಮ್ ಇಂಡಿಯಾ ಸಕ್ಸಸ್​ನ ಅಲೆಯಲ್ಲಿ ತೇಲಾಡುತ್ತಿದೆ. ಟೀಮ್ ಇಂಡಿಯಾದ ಈ ಸಕ್ಸಸ್​ ಹಿಂದೆ ಒಂದು ಸ್ಪೆಷಲ್​​ ಸೂತ್ರವಿದೆ.

ಟೀಮ್ ಇಂಡಿಯಾ ಸಕ್ಸಸ್ ಹಿಂದೆ ಒಗ್ಗಟ್ಟಿನ ಮಂತ್ರ..!

ಈ ಹಿಂದೆ ಟೀಮ್ ಇಂಡಿಯಾದಲ್ಲಿ ಬರೀ ಬಣರಾಜಕೀಯದ್ದೇ ಸುದ್ದಿ. ಬಂಡಾಯ ಹಾಗೂ ಭಿನ್ನಾಭಿಪ್ರಾಯದ್ದೇ ಹೊಗೆ. ಆದ್ರೀಗ ಟೀಮ್ ಇಂಡಿಯಾಲ್ಲಿ ಇದೆಲ್ಲಕ್ಕೂ ಫುಲ್​ಸ್ಟಾಪ್​ ಬಿದ್ದಿದೆ. ಒನ್​ ಟೀಮ್ ಒನ್​ ಅಜೆಂಡಾ ವಾತಾವರಣ ಕ್ರಿಯೇಟ್​ ಆಗಿದೆ. ಎಂದೂ ಕಾಣದ ಪರಸ್ಪರ ಗೌರವ ಆಟಗಾರರ ನಡುವೆ ಕಾಣ್ತಿದೆ. ಆನ್​ಫೀಲ್ಡ್​ನಲ್ಲೇ ಅಲ್ಲ, ಆಫ್​ ದಿ ಫೀಲ್ಡ್​ನಲ್ಲೂ ಆಟಗಾರರ ಸಮನ್ವಯತೆ ಟೀಮ್ ಇಂಡಿಯಾದ ಸಕ್ಸಸ್​ ಸಿಕ್ರೇಟ್​ ಆಗಿ ಮಾರ್ಪಟ್ಟಿದೆ.

2011ರ ವಿಶ್ವಕಪ್​​ ನೆನಪಿಸ್ತಿದೆ ಡ್ರೆಸ್ಸಿಂಗ್​ ರೂಮ್​!

ಸದ್ಯದ ಟೀಮ್ ಇಂಡಿಯಾವನ್ನ ನೋಡ್ತಿದ್ರೆ, ನಿಜಕ್ಕೂ 2011ರ ಟೀಮ್ ಇಂಡಿಯಾವನ್ನೇ ನೋಡಿದಂತಿದೆ. 2011ರ ವಿಶ್ವಕಪ್​​ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದೇ ಆಟಗಾರರ ನಡುವಿನ ಒಗ್ಗಟ್ಟು. ಆ ಒಗ್ಗಟ್ಟಿನ ಮಂತ್ರವೇ ಟೀಮ್ ಇಂಡಿಯಾವನ್ನ ವಿಶ್ವ ಕಿರೀಟಕ್ಕೆ ಮುತ್ತಿಡುವಂತೆ ಮಾಡಿತ್ತು.. ಇದೀಗ ಅಂಥದ್ದೇ ವಾತಾವರಣ ಮತ್ತೆ ನಿರ್ಮಾಣವಾಗಿದೆ.

ಒಬ್ಬರನ್ನ ಒಬ್ಬರು ಟೀಕಿಸಿಕೊಳ್ಳದೆ, ಸಹ ಆಟಗಾರರನ್ನ ಬೆನ್ನು ತಟ್ಟುತ್ತಾ ಸಾಗ್ತಿರುವ ಪರಿಯೇ ಇದಕ್ಕೆ ಬೆಸ್ಟ್​ ಎಕ್ಸಾಂಪಲ್​. ಇತರೆ ಆಟಗಾರರ ಯಶಸ್ಸನ್ನು ಎಲ್ರೂ ಸಂಭ್ರಮಿಸ್ತಿದ್ದಾರೆ. ವಿರಾಟ್ ಕೊಹ್ಲಿ ಶತಕ ಹಾಗೂ ಶ್ರೇಯಸ್​ ಅಯ್ಯರ್ ಅರ್ಧಶತಕಕ್ಕೆ ಕೆ.ಎಲ್​ ರಾಹುಲ್​ ಸಾಥ್​ ನೀಡಿದ ರೀತಿಯೇ ಇದಕ್ಕೆ ಬೆಸ್ಟ್​ ಎಕ್ಸಾಂಪಲ್​.

ಈ ಹಿಂದೆ ಒಂದೇ ಒಂದು ಕ್ಯಾಚ್ ಬಿಟ್ಟರೆ, ಸಹ ಆಟಗಾರರನ ಮೇಲೆ ಕೂಗಾಡುತ್ತಿದ್ದ ಆಟಗಾರರು, ಈಗ ಕೂಲ್​ & ಕಾಮ್​ ಆಗಿದ್ದಾರೆ. ಇದೆಲ್ಲವೂ ಡ್ರೆಸ್ಸಿಂಗ್ ರೂಮ್​ನಲ್ಲಿನ ಒಗ್ಗಟ್ಟನ್ನು ಎತ್ತಿ ತೋರಿಸ್ತಿದೆ. ಪ್ಲೇಯಿಂಗ್ ಇಲೆವೆನ್​ನಲ್ಲಿ ಚಾನ್ಸ್ ಸಿಗದಿದ್ರೂ ಆಟಗಾರರಲ್ಲಿ ಬೇಸರವಿಲ್ಲ. ಬದಲಾಗಿ ಆಪ್​ ಫೀಲ್ಡ್​ನಿಂದಲೇ ತಂಡಕ್ಕೆ ನೆರವಾಗ್ತಿದ್ದಾರೆ. ಇದೆಲ್ಲವೂ ಡ್ರೆಸ್ಸಿಂಗ್​​​​ ರೂಮ್​ನಲ್ಲಿನ ಸಮನ್ವಯತೆಗೆ ಹಿಡಿದ ಕನ್ನಡಿಯಾಗಿದೆ.

ತಂಡದಲ್ಲಿಲ್ಲ ಸಿನೀಯರ್.. ಜೂನಿಯರ್ ಎಂಬ ಭಾವ..!

ಸಿನೀಯರ್-ಜೂನಿಯರ್ ಎಂಬ ಅಹಃ, ಇಡೀ ತಂಡದ ಸ್ವಾಸ್ಥ್ಯವನ್ನೇ ಹಾಳು ಮಾಡುತ್ತೆ. ಆದ್ರೆ, ರೋಹಿತ್ ನಾಯಕತ್ವದ ಟೀಮ್ ಇಂಡಿಯದಲ್ಲಿ ಅಂಥಹ ಬೇದಭಾವ ಇಲ್ಲ. ಇದಕ್ಕೆ ಬೆಸ್ಟ್ ಎಕ್ಸಾಂಪಲ್.. ಪಂದ್ಯಕ್ಕೂ ಮುನ್ನ ಯುವ ಆಟಗಾರರ ಪೆಪ್ ಟಾಕ್.. ಹಿರಿಯರಷ್ಟೇ ಅಲ್ದೇ ಗಿಲ್​ರಂಥ ಯುವ ಆಟಗಾರನಿಗೂ ಇಡೀ ತಂಡವನ್ನ ಉದ್ದೇಶಿಸಿ ಮಾತನಾಡುವ ಅವಕಾಶ ನೀಡಲಾಗ್ತಿದೆ.

ರೋಹಿತ್​-ಕೊಹ್ಲಿ ನಡುವೆ ನೋ ವಾರ್​..!

ರೋಹಿತ್ ಆ್ಯಂಡ್ ಕೊಹ್ಲಿ. ಇವರಿಬ್ಬರ ನಡುವಿನ ಕ್ಲಾಶ್​ ಪದೇ ಪದೇ ಸದ್ದು ಮಾಡ್ತಿತ್ತು. ಇದೀಗ ನಾನು ಎಂಬ ಅಹಂ ಈ ಇಬ್ಬರಲ್ಲೂ ಕಣ್ಮರೆಯಾಗಿದೆ. ತಂಡಕ್ಕಾಗಿ ಟ್ರೋಫಿ ಗೆಲ್ಲಬೇಕೆಂಬ ತುಡಿತ ಇಬ್ಬರಲ್ಲೂ ಕಾಣ್ತಿದೆ. ನಾಯಕನ ಬೆನ್ನಿಗೆ ವಿರಾಟ್​ ನಿಲ್ಲುತ್ತಿದ್ದಾರೆ. ವಿರಾಟ್​ ಆಟಕ್ಕೆ ರೋಹಿತ್ ಪ್ರೋತ್ಸಾಹಿಸುತ್ತಿದ್ದಾರೆ. ಇವರಿಬ್ಬರು ಸ್ನೇಹ ತಂಡದಲ್ಲಿನ ಜೋಶ್ ಮತ್ತಷ್ಟು ಹೆಚ್ಚಿಸಿದೆ.

ಟೀಮ್​ ಇಂಡಿಯಾ ಈ ಒಗ್ಗಟ್ಟಿನ ಸೂತ್ರ ಹಿಂದಿನ ಸೂತ್ರದಾರರು ಕೋಚ್​ ರಾಹುಲ್​ ದ್ರಾವಿಡ್​ & ಕ್ಯಾಪ್ಟನ್​ ರೋಹಿತ್​ ಶರ್ಮಾ. ಇವರಿಬ್ಬರ ನಡೆ ನಡಿ ಎಲ್ಲವೂ ತಂಡದ ವಾತಾವರಣದ ಮೇಲೆ ಬಿಗ್​ ಇಂಪ್ಯಾಕ್ಟ್​ ಮೂಡಿಸಿದೆ. ಒಟ್ಟಿನಲ್ಲಿ, ಆಟಗಾರರ ಒಗ್ಗಟ್ಟು ನೋಡಿದ್ರೆ, 2011ರ ವಿಶ್ವಕಪ್​​ನ ಜೈತ್ರಯಾತ್ರೆ ಮತ್ತೊಮ್ಮೆ ರಿಕ್ರೀಯೆಟ್ ಆಗೋ ಭರವಸೆಯಂತೂ ಹೆಚ್ಚಾಗ್ತಿದೆ. ಆ ಭರವಸೆ ನಿಜವಾಗಲಿ ಅನ್ನೋದೆ ಎಲ್ಲರ ಪ್ರಾರ್ಥನೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ವಿರಾಟ್ ಕೊಹ್ಲಿ-ರೋಹಿತ್​ ಶರ್ಮಾ ನಡುವೆ ನೋ ವಾರ್​.. ಟೀಮ್​ ಇಂಡಿಯಾ ಒಗ್ಗಟ್ಟಿನ ಹಿಂದಿದ್ದಾರೆ ಕನ್ನಡದ ಗುರುಗಳು!

https://newsfirstlive.com/wp-content/uploads/2023/10/ROHIT_KOHLI.jpg

Load More