newsfirstkannada.com

World Cup 2023: ಟೀಂ ಇಂಡಿಯಾ ಸೋತ ಬೆನ್ನಲ್ಲೇ ಇಬ್ಬರು ಆತ್ಮಹತ್ಯೆ.. ಈ ಸಾವು ನ್ಯಾಯವೇ?

Share :

21-11-2023

    23 ವರ್ಷದ ಇಬ್ಬರು ಯುವಕರು ಆತ್ಮಹತ್ಯೆ

    ಪಂದ್ಯ ನೋಡಲೆಂದೇ ರಜೆ ತೆಗೆದುಕೊಂಡಿದ್ದ ಉದ್ಯೋಗಿ

    ಪಂದ್ಯ ಮುಗಿಯುತ್ತಿದ್ದಂತೆ ನೇಣಿಗೆ ಕೊರಳೊಡ್ಡಿದ ಯುವಕರು

ವಿಶ್ವಕಪ್​ನಲ್ಲಿ ಭಾರತ ಸೋತಿದ್ದನ್ನು ಅರಗಿಸಿಕೊಳ್ಳಲಾಗದೆ ಇಬ್ಬರು ವ್ಯಕ್ತಿಗಳು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಬೆಳಕಿಗೆ ಬಂದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಪಶ್ಚಿಮ ಬಂಗಾಳದ ಬಂಕುರಾ ಮೂಲದ ರಾಹುಲ್​ ಲೋಹರ್​(23) ಮತ್ತು ಒಡಿಶಾದ ಜಾಜ್​ಪುರದ ದೇವ್​ ರಣಹಾನ್​ ದಾಸ್​(23) ಎಂದು ಗುರುತಿಸಲಾಗಿದೆ.

ರಾಹುಲ್​ ಲೋಹರ್ ಭಾನುವಾರ ರಾತ್ರಿ 11 ಗಂಟೆಯ ಸುಮಾರಿಗೆ ಬಂಕುರಾದ ಬೆಲಿತೋರ್​ ಪೊಲೀಸ್​ ಠಾಣೆ ಬಳಿ ಕ್ರಿಕೆಟ್​ ಪಂದ್ಯ ವೀಕ್ಷಿಸುತ್ತಿದ್ದರು. ಟೀಂ ಇಂಡಿಯಾ ಸೋತ ಬೆನ್ನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ದೇವ್​ ರಣಹಾನ್​ ದಾಸ್ ಕೂಡ ಪಂದ್ಯ ಮುಗಿದ ನಂತರ ಬಿಂಜರ್​ಪುರದ ತನ್ನ ಮನೆಯ ಟೆರೇಸ್​ ಮೇಲೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇದನ್ನು ಓದಿ: World Cup 2027: ಮುಂದಿನ ವಿಶ್ವಕಪ್​ ಎಲ್ಲಿ ನಡೆಯುತ್ತೆ? ಎಷ್ಟು ತಂಡಗಳು ಇರಲಿವೆ? ಇಲ್ಲಿದೆ ಮಾಹಿತಿ

ರಾಹುಲ್​ ಲೋಹರ್ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನು. ಫೈನಲ್​ ಪಂದ್ಯ ವೀಕ್ಷಿಸಲು ರಜೆಯನ್ನು ಪಡೆದಿದ್ದನು. ಪಂದ್ಯ ಮುಗಿದ ಕೂಡಲೆ ಮನೆಯ ಕೋಣೆಯಲ್ಲಿ ನೇಣು ಹಾಕಿಕೊಂಡಿದ್ದಾನೆ ಎಂದು ಆತನ ಸೋದರ ಮಾವ ಉತ್ತಮ್​ ಸುರ್​ ಪೊಲೀಸರಿಗೆ ತಿಳಿಸಿದ್ದಾರೆ.

ಇದನ್ನು ಓದಿ: ಆಸ್ಟ್ರೇಲಿಯಾ ವಿರುದ್ಧ ಸೋತದ್ದಕ್ಕೆ ಉದ್ಯೋಗಿಗಳಿಗೆ ರಜೆ! ಬೇಸರ ನಿವಾರಿಸಿಕೊಳ್ಳಲು ಬಾಸ್​ ತೆಗೆದುಕೊಂಡ್ರು ಈ ನಿರ್ಧಾರ

ಒಡಿಶಾದ ದೇವ್​ ರಣಹಾನ್​ ದಾಸ್ ‘‘ಭಾವನಾತ್ಮಕ ಸಿಂಡ್ರೋಮ್​ಗೆ’’ ಒಳಗಾಗಿದ್ದನು. ಟೀಂ ಇಂಡಿಯಾ ಸೋತಿದ್ದನ್ನು ತಡೆದುಕೊಳ್ಳಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆತನ ಚಿಕ್ಕಪ್ಪ ಪೊಲೀಸರಿಗೆ ತಿಳಿಸಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

World Cup 2023: ಟೀಂ ಇಂಡಿಯಾ ಸೋತ ಬೆನ್ನಲ್ಲೇ ಇಬ್ಬರು ಆತ್ಮಹತ್ಯೆ.. ಈ ಸಾವು ನ್ಯಾಯವೇ?

https://newsfirstlive.com/wp-content/uploads/2023/11/IND-16.jpg

Load More