ನಿನ್ನೆ ನಡೆದ ಮಹತ್ವದ ಪಂದ್ಯದಲ್ಲಿ ಟೀಮ್ ಇಂಡಿಯಾಕ್ಕೆ ಸೋಲು
ವಿಶ್ವಕಪ್ ಪ್ರಧಾನ ಮಾಡಿ ವಿಶ್ ಮಾಡ್ತಿದ್ದಾಗ ಬೆನ್ನು ತಟ್ಟಿದ ಪ್ಲೇಯರ್ಸ್
ಬೆನ್ನು ತಟ್ಟಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್
ವಿಶ್ವಕಪ್ ಫೈನಲ್ ಪಂದ್ಯ ನೋಡಲು ಪ್ರಧಾನಿ ಮೋದಿ, ಸಿನಿಮಾ ನಟ, ನಟಿಯರು, ಹಿರಿಯ ಕ್ರಿಕೆಟ್ ಆಟಗಾರರು, ರಾಜಕೀಯ ಗಣ್ಯರು ಸೇರಿದಂತೆ ಸಾಕಷ್ಟು ಅಭಿಮಾನಿಗಳು ಆಗಮಿಸಿದ್ದರು. ಆಸ್ಟ್ರೇಲಿಯಾ ವಿರುದ್ಧದ ಫೈನಲ್ ಪಂದ್ಯ ಭಾರತ ಸೋಲುತ್ತಿದ್ದಂತೆ ಭಾತೀಯರ ಹೃದಯದ ಕಟ್ಟೆ ಹೊಡೆದು ಹೋಯಿತು. ವಿಶ್ವಕಪ್ ಗೆದ್ದ ಸಂಭ್ರಮದಲ್ಲಿದ್ದ ಕಾಂಗರೂ ಕ್ಯಾಪ್ಟನ್ ಪ್ಯಾಟ್ ಕಮಿನ್ಸ್ಗೆ ವರ್ಲ್ಡ್ಕಪ್ ಪ್ರಶಸ್ತಿ ಪ್ರದಾನ ಮಾಡಿ ವಿಶ್ ಮಾಡುತ್ತಿದ್ದ ಪ್ರಧಾನಿ ನರೇಂದ್ರ ಮೋದಿಯವರಿಗೆ ಆಸಿಸ್ ಪ್ಲೇಯರ್ಸ್ ಬೆನ್ನು ತಟ್ಟಿರುವ ವಿಡಿಯೋ ವೈರಲ್ ಆಗಿದೆ.
ನಿನ್ನೆ ಟೀಮ್ ಇಂಡಿಯಾದ ವಿರುದ್ಧ ಜಯ ಗಳಿಸಿದ್ದ ಆಸ್ಟ್ರೇಲಿಯಾ ತಂಡದ ಕ್ಯಾಪ್ಟನ್ ಪ್ಯಾಟ್ ಕಮಿನ್ಸ್ಗೆ ಪ್ರಧಾನಿ ನರೇಂದ್ರ ಮೋದಿಯವರು ವೇದಿಕೆ ಮೇಲೆ ವಿಶ್ವಕಪ್ ಪ್ರಶಸ್ತಿ ಪ್ರದಾನ ಮಾಡಿದರು. ಬಳಿಕ ಆಸಿಸ್ನ ಎಲ್ಲ ಆಟಗಾರರಿಗೆ ವಿಶ್ ಮಾಡುತ್ತ ಪ್ರಧಾನಿ ಬರುತ್ತಿದ್ದರು. ಅದರಂತೆ ಆಸ್ಟ್ರೇಲಿಯಾದ ಬ್ಯಾಟ್ಸ್ಮನ್ಸ್ ಮಿಚೆಲ್ ಮಾರ್ಷ್, ಮಾರ್ನಸ್ ಲ್ಯಾಬುಸ್ಚಾಗ್ನೆಗೂ ಥ್ಯಾಂಕ್ಸ್ ಕೊಡುತ್ತಾರೆ. ಈ ವೇಳೆ ಇಬ್ಬರು ಪ್ರಧಾನಿ ಮೋದಿಯವರಿಗೆ ಥ್ಯಾಂಕ್ಸ್ ಕೊಟ್ಟು ಬೆನ್ನು ತಟ್ಟಿದ್ದಾರೆ.
Dont show a clipped post. Modiji congratulated the Captain and then the whole team. Fake news pic.twitter.com/NLE2LXNEVU
— Dr Poornima🚩🇮🇳 (@PoornimaNimo) November 19, 2023
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಹಮದಾಬಾದ್ನ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ ಸೋತಿದೆ. ಇನ್ನು ಫೈನಲ್ ಪಂದ್ಯದಲ್ಲಿ ಭಾರತ 50 ಓವರ್ಗಳಲ್ಲಿ 10 ವಿಕೆಟ್ ಕಳೆದುಕೊಂಡು 240 ರನ್ಗಳ ಟಾರ್ಗೆಟ್ ನೀಡಿತ್ತು. ಈ ಗುರಿ ಬೆನ್ನತ್ತಿದ್ದ ಆಸ್ಟ್ರೇಲಿಯಾ 43 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 241 ರನ್ ಗಳಿಸಿ ಗೆಲುವು ಪಡೆದು ಸಂಭ್ರಮಿಸಿತು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ