newsfirstkannada.com

10, 30, 50 ಕೋಟಿ ಅಲ್ಲವೇ ಅಲ್ಲ.. ವಿಶ್ವಕಪ್ ಫೈನಲ್​ ಮೇಲೆ ಕೋಟಿ ಕೋಟಿ ಬೆಟ್ಟಿಂಗ್…!

Share :

19-11-2023

    ಭಾರತ-ಆಸ್ಟ್ರೇಲಿಯಾ ಫೈನಲ್ ಪಂದ್ಯದತ್ತ ವಿಶ್ವದ ಚಿತ್ತ

    ಗ್ಯಾಂಬ್ಲರ್​ಗಳ ಲೆಕ್ಕಾಚಾರ ಏನು? ಬೆಟ್ಟಿಂಗ್ ಯಾರ ಮೇಲೆ?

    ಕೊಹ್ಲಿ, ಶ್ರೇಯಸ್, ಮೇಲೆ ಗ್ಯಾಂಬ್ಲರ್​ಗಳಿಗೆ ವಿಶ್ವಾಸ ಇಲ್ಲ

ಭಾರತ-ಆಸ್ಟ್ರೇಲಿಯಾ ಹೈವೋಲ್ಟೇಜ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಪಂದ್ಯದತ್ತ ಇಡೀ ವಿಶ್ವದ ಚಿತ್ತ ನೆಟ್ಟಿದೆ. ಯಾಕಂದ್ರೆ ಈ ಫೈನಲ್ ಫೈಟ್, ಆಟಗಾರರಿಗೆ ಪ್ರತಿಷ್ಟೆಯಾದ್ರೆ ಗ್ಯಾಂಬ್ಲರ್​​ಗಳಿಗೆ ದುಡ್ಡು ಮಾಡೋಕೆ, ಇದೇ ಬೆಸ್ಟ್ ಟೈಮ್. ನಮೋ ಸ್ಟೇಡಿಯಮ್​ನಲ್ಲಿ ನಡೆಯೋ ಈ ಪಂದ್ಯಕ್ಕೆ ಕೋಟಿ ಕೋಟಿ ಬೆಟ್ಟಿಂಗ್ ನಡೆದಿದೆ.

ನರೇಂದ್ರ ಮೋದಿ ಸ್ಟೇಡಿಯಮ್​ನಲ್ಲಿ ವಿಶ್ವದ ಎರಡು ಬಲಿಷ್ಟ ತಂಡಗಳ ರಣರೋಚಕ ಕಾದಾಟ ನೋಡಲು ಇಡೀ ವಿಶ್ವವೇ ಕಾದುಕುಳಿತಿದೆ. ತವರಿನಲ್ಲಿ ಟೀಮ್ ಇಂಡಿಯಾಕ್ಕೆ ಈ ಪಂದ್ಯ ಪ್ರತಿಷ್ಟೆಯ ಪ್ರಶ್ನೆ. 20 ವರ್ಷಗಳ ಸೇಡಿನ ಸಮರ ಈ ಪಂದ್ಯವಾಗಿದೆ. ಮತ್ತೊಂದೆಡೆ ಆಸ್ಟ್ರೇಲಿಯಾ, ಭಾರತದಲ್ಲೇ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸೋಕೆ ತುದಿಗಾಲಲ್ಲಿ ನಿಂತಿದೆ.

ಫೈನಲ್ ಬ್ಯಾಟಲ್ ಶುರುವಾಗೋಕೂ ಮುನ್ನ ಈ ಪಂದ್ಯ ಹಲವು ದಾಖಲೆಗಳನ್ನು ಪುಡಿಪುಡಿ ಮಾಡಿದೆ. ಟೀಮ್ ಇಂಡಿಯಾ ಈ ಪಂದ್ಯ ಗೆಲ್ಲೋ ಫೇವರಿಟ್ಸ್ ಆಗಿರೋದ್ರಿಂದ ಗ್ಯಾಂಬ್ಲರ್​ಗಳು ಈ ಪಂದ್ಯದ ಮೇಲೆ ಸಾವಿರಾರೂ ಕೋಟಿ ಬೆಟ್ಟಿಂಗ್ ಹಾಕೋಕೆ ಮುಂದಾಗಿದ್ದಾರೆ.

70 ಸಾವಿರ ಕೋಟಿ ಬೆಟ್ಟಿಂಗ್

ವಿಶ್ವದಾದ್ಯಂತ ಭಾರತ-ಆಸ್ಟ್ರೇಲಿಯಾ ಫೈನಲ್ ಪಂದ್ಯಕ್ಕೆ 70 ಸಾವಿರಕ್ಕೂ ಹೆಚ್ಚು ಕೋಟಿ ರೂಪಾಯಿ, ಬೆಟ್ಟಿಂಗ್ ಧಂದೆ ಶುರುವಾಗಿದೆ. ಲೀಗ್ ಪಂದ್ಯದಲ್ಲಿ ಭಾರತ-ಪಾಕಿಸ್ತಾನ ಪಂದ್ಯಕ್ಕೆ 40 ಸಾವಿರ ಕೋಟಿ ಬೆಟ್ಟಿಂಗ್​ ಹಾಕಲಾಗಿತ್ತು. ಆದ್ರೀಗ ಇಂಡೋ-ಆಸಿಸ್ ಫೈನಲ್ ಪಂದ್ಯ ಈ ಎಲ್ಲಾ ದಾಖಲೆಗಳನ್ನ ಉಡೀಸ್ ಮಾಡಿದೆ.

ಟೀಮ್ ಇಂಡಿಯಾ ಟಾಸ್ ಗೆಲ್ಲುತ್ತೆ, ಮೊದಲು ಬ್ಯಾಟಿಂಗ್ ಮಾಡುತ್ತೆ..!

ಗ್ಯಾಂಬ್ಲರ್​ಗಳ ಪ್ರಕಾರ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಟಾಸ್ ಗೆಲ್ಲುತ್ತೆ. ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಮಾಡ್ತಾರೆ ಎಂದು ಹೇಳಲಾಗ್ತಿದೆ. ಗ್ಯಾಂಬ್ಲರ್​ಗಳ ಪ್ರಿಡಿಕ್ಷನ್ ನಿಜನೋ ಸುಳ್ಳೋ ಗೊತ್ತಿಲ್ಲ. ಆದ್ರೆ ಬೆಟ್ಟಿಂಗ್ ಅಂತೂ ಬಲು ಜೋರಾಗಿದೆ.

ರೋಹಿತ್ ಶರ್ಮಾ, ಸೂರ್ಯಕುಮಾರ್ ಮೇಲೆ ಹಣದ ಹೊಳೆ

ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್, ಶ್ರೇಯಸ್ ಅಯ್ಯರ್, ಬ್ಯಾಟಿಂಗ್​ನಲ್ಲಿ ಸಾಲಿಡ್ ಪರ್ಫಾಮೆನ್ಸ್ ನೀಡ್ತಿದ್ದಾರೆ. ಗ್ಯಾಂಬ್ಲರ್​ಗಳು, ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್, ಬ್ಯಾಟಿಂಗ್​​​​ನಲ್ಲಿ ಮಿಂಚ್ತಾರೆ ಎಂದು ಹೇಳ್ತಿದ್ದಾರೆ.

ಸಿರಾಜ್, ಬೂಮ್ರಾ ಮೇಲೆ ಬೆಟ್ ಯಾಕೆ..?

ಮೊಹಮ್ಮದ್ ಶಮಿ ಈ ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾದ ಔಟ್​ಸ್ಟ್ಯಾಂಡಿಂಗ್ ಬೌಲರ್. ಆದ್ರೆ ಗ್ಯಾಂಬ್ಲರ್​ಗಳು, ಮೊಹಮ್ಮದ್ ಸಿರಾಜ್ ಮತ್ತು ಜಸ್ಪ್ರೀತ್ ಬೂಮ್ರಾ ಮೇಲೆ, ಹೆಚ್ಚು ನಂಬಿಕೆ ಹೊಂದಿದ್ದಾರೆ. ಹಾಗಾಗೇ ಇವ್ರ ಮೇಲೆ ಕೋಟಿ ಕೋಟಿ ಸುರಿಯೋಕೆ ಮುಂದಾಗಿದ್ದಾರೆ.

ಲೋ ಸ್ಕೋರಿಂಗ್ ಗೇಮ್ ನಿರೀಕ್ಷೆ

ಅಹ್ಮದಾಬಾದ್​​ನಲ್ಲಿ ನಡೆಯೋ ಫೈನಲ್ ಪಂದ್ಯ, ಲೋ ಸ್ಕೋರಿಂಗ್ ಗೇಮ್ ಅನ್ನೋದು ಗ್ಯಾಂಬ್ಲರ್​ಗಳ ನಂಬಿಕೆ. ಈ ಪಿಚ್​ನಲ್ಲಿ 250 ರಿಂದ 300 ರನ್​​ ಅಷ್ಟೇ ಸ್ಕೋರ್ ಮಾಡೋಕಾಗೋದು ಅಂತ ಕೆಲ ಗ್ಯಾಂಬ್ಲರ್​ಗಳ ಮಾತಾದ್ರೆ ಇನ್ನೂ ಕೆಲವರು 300 ರಿಂದ 400 ಆಗುತ್ತೆ ಅಂತ ಹೇಳ್ತಿದ್ದಾರೆ. ಒಟ್ನಲ್ಲಿ ವಿಶ್ವಕಪ್ ಫೈನಲ್ ಗೆದ್ದ ತಂಡಕ್ಕೆ ಸಿಗೋದು 33 ಕೋಟಿ ರೂಪಾಯಿ. ಆದ್ರೆ ದೇಶ-ವಿದೇಶಗಳ ಗ್ಯಾಂಬ್ಲರ್​ಗಳು ಸಾವಿರಾರೂ ಕೋಟಿ ರೂಪಾಯಿ ಬೆಟ್ಟಿಂಗ್ ಹಾಕಿ, ಹಣವನ್ನ ನೀರಿನಂತೆ ಖರ್ಚು ಮಾಡ್ತಿದ್ದಾರೆ. ಏನೇ ಇರಲಿ, ಗ್ಯಾಂಬ್ಲರ್​ಗಳ ಲೆಕ್ಕಾಚಾರ ಸರಿ ಆಗುತ್ತಾ ಇಲ್ಲ ಉಲ್ಟಾ ಆಗುತ್ತಾ..? ಕಾದುನೋಡೋಣ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

10, 30, 50 ಕೋಟಿ ಅಲ್ಲವೇ ಅಲ್ಲ.. ವಿಶ್ವಕಪ್ ಫೈನಲ್​ ಮೇಲೆ ಕೋಟಿ ಕೋಟಿ ಬೆಟ್ಟಿಂಗ್…!

https://newsfirstlive.com/wp-content/uploads/2023/11/ROHITH-1.jpg

Load More