ಯಾವುದೇ ಕಾರಣಕ್ಕೂ ಇವತ್ತು ವಿದ್ಯುತ್ ಸ್ಥಗಿತಗೊಳಿಸದಂತೆ ಮನವಿ
ಫೋನ್ ಮೇಲೆ ಫೋನ್ ಬರುತ್ತಿರುವುದರಿಂದ ಬೇಸತ್ತ ಬೆಸ್ಕಾಂ ಸಿಬ್ಬಂದಿ
100ಕ್ಕೂ ಅಧಿಕ ಕರೆ ಮಾಡಿ ಕರೆಂಟ್ ತೆಗೆಯಬೇಡಿ ಎಂದು ಫ್ಯಾನ್ಸ್ ಒತ್ತಾಯ
ದಾವಣಗೆರೆ: ವಿಶ್ವಕಪ್ ಫೈನಲ್ ಕ್ರಿಕೆಟ್ ಪಂದ್ಯ ನಡೆಯುತ್ತಿರುವ ವೇಳೆ ಕೆಲವೊಬ್ಬರಿಗೆ ಫುಲ್ ಟೆನ್ಷನ್ ಆಗಿರುತ್ತದೆ. ಏಕೆಂದರೆ ಎಲ್ಲಿ ಕರೆಂಟ್ ತೆಗೆದು ಬಿಡುತ್ತಾರೋ ಏನೋ ಅಂತ. ಅದಕ್ಕಾಗಿ ಮೊದಲೇ ವಿದ್ಯುತ್ ಕೇಂದ್ರ ಕಚೇರಿಗೆ ಫೋನ್ ಮಾಡಿ ಕರೆಂಟ್ ತೆಗೆಯಬೇಡಿ ಎಂದು ಹೇಳುತ್ತಾರೆ. ಇಂತಹದ್ದೆ ಸಂಗಂತಿ ದಾವಣಗೆರೆಯ ಬೆಸ್ಕಾಂ ಕಚೇರಿಯಲ್ಲಿ ನಡೆದಿದ್ದು ಇಲ್ಲಿವರೆಗೆ 100ಕ್ಕೂ ಅಧಿಕ ಫೋನ್ ಕರೆಗಳನ್ನ ಮಾಡಿ ಕರೆಂಟ್ ತೆಗೆಯಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ವಿಶ್ವಕಪ್ ಪಂದ್ಯ ಹಿನ್ನೆಲೆಯಲ್ಲಿ ದಾವಣಗೆರೆಯ ಬೆಸ್ಕಾಂ ಕಚೇರಿಗೆ ಕ್ರಿಕೆಟ್ ಅಭಿಮಾನಿಗಳು ಫೋನ್ ಮಾಡಿ ಯಾವುದೇ ಕಾರಣಕ್ಕೂ ಇವತ್ತು ವಿದ್ಯುತ್ ಸ್ಥಗಿತಗೊಳಿಸಬಾರದು ಎಂದು ಹೇಳಿದ್ದಾರೆ. ಇಲ್ಲಿವರೆಗೂ 100ಕ್ಕೂ ಅಧಿಕ ಫೋನ್ ಕರೆಗಳು ಬಂದಿವೆ. ಈಗಲೂ ಬರುತ್ತಿವೆ ಅಂತ ಕಚೇರಿ ಸಿಬ್ಬಂದಿ ಬೇಸರ ವ್ಯಕ್ತಪಡಿಸಿದ್ದಾರೆ.
ಹೀಗಾಗಿಯೇ ಬೆಸ್ಕಾಂ ಕಚೇರಿ ಸಿಬ್ಬಂದಿ ಇಂದು ಯಾವುದೇ ರೀತಿಯ ಲೊಡ್ ಶೆಡ್ಡಿಂಗ್ ಇರುವುದಿಲ್ಲ. ವಿದ್ಯುತ್ ಸಂಬಂಧಿತ ಕಾಮಗಾರಿಗಳನ್ನು ಮಾಡಲ್ಲ. ಅಭಿಮಾನಿಗಳು ಎಲ್ಲರು ನೆಮ್ಮದಿಯಾಗಿ ವರ್ಲ್ಡ್ಕಪ್ ಮ್ಯಾಚ್ ನೋಡಬಹುದು ಎಂದು ಭರವಸೆ ನೀಡಿದ್ದಾರೆ. ಸದ್ಯ ಇದರಿಂದ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ