newsfirstkannada.com

ಈ ರಿಯಲ್ ವಾರಿಯರ್ಸ್​​​ನಿಂದ ತಪ್ಪಿಸಿಕೊಳ್ಳೋದು ಆಸಿಸ್​ಗೆ ಕಷ್ಟ.. ಕಾಂಗರೂ ಮೇಲೆ ಸವಾರಿಗೆ ರೋಹಿತ್ ಮಾಸ್ಟರ್ ಪ್ಲಾನ್..!

Share :

Published November 19, 2023 at 12:32pm

Update November 19, 2023 at 12:53pm

    ಇಂಡೋ-ಆಸಿಸ್​ ವಿಶ್ವಕಪ್ ಫೈನಲ್​​ ದಂಗಲ್

    ಭಾರತಕ್ಕೆ ವಿಶ್ವಕಪ್​ ಗೆಲ್ಲಿಸಿಕೊಡಲು ಐವರು ಪಣ

    ಆಸಿಸ್​​​ ಸಂಹಾರವೇ ಇವರ ಮೇನ್​ ಟಾರ್ಗೆಟ್

ಗೆದ್ದು ಬಾ ಭಾರತ..! ಕೋಟ್ಯಾನುಕೋಟಿ ಕ್ರಿಕೆಟ್ ಅಭಿಮಾನಿಗಳ ಒಕ್ಕೊರಲ ಪ್ರಾರ್ಥನೆಯಾಗಿದೆ. ಬರೀ ಫ್ಯಾನ್ಸ್​​ ಅಷ್ಟೇ ಅಲ್ಲ, ಸಂಡೇ ಫೈನಲ್​​ವಾರ್​​​​​​​ಗೆ ಸಜ್ಜಾಗಿರೋ ಪ್ರತಿಯೊಬ್ಬ ಟೀಮ್ ಇಂಡಿಯಾ ಆಟಗಾರರ ಅಲ್ಟಿಮೇಟ್​​ ಗುರಿ. ಇನ್ನೇನು ಬ್ಯಾಟ್​​​​, ಬಾಲ್​ ಅನ್ನೋ ವೆಪನ್ಸ್​​ ಹಿಡಿದು ಬಲಾಢ್ಯ ಆಸ್ಟ್ರೇಲಿಯನ್ಸ್ ಪುಡಿಗಟ್ಟಬೇಕಷ್ಟೇ. ಅದು ಈ ವಾರಿಯರ್ಸ್​ಯಿಂದ ಮಾತ್ರ ಸಾಧ್ಯ.

ವಿಜಯಗಳನ್ನು ಸಾಧಿಸೋದು ಇತಿಹಾಸಕ್ಕೋಸ್ಕರ. ಆ ವಿಜಯ ಈ ಬಾರಿ ಭಾರತ ತಾಂಬೆಯ ಮಕ್ಕಳದಾಗುತ್ತಾ? ಅದು ಭಾರತದ ಹೆಮ್ಮೆಯ ಪುತ್ರ, ಹುಕ್ಕಿನ ಮನುಷ್ಯ ಸರ್ದಾರ್ ವಲ್ಲಭಾಯಿ ಪಟೇಲ್​​​ ಜನ್ಮತಾಳಿದ ಪವಿತ್ರ ಪುಣಭೂಮಿಯಲ್ಲಿ? ಆ ಅದ್ಭುತ ಚರಿತ್ರೆ ರಚನೆಗೆ ಕೌಂಟ್​ಡೌನ್​​​ ಶುರುವಾಗಿದೆ. ಐಕಾನಿಕ್ ನಮೋ ಸ್ಟೇಡಿಯಂನಲ್ಲಿ ವಿಶ್ವಕಪ್ ಕಿರೀಟಕ್ಕಾಗಿ ಇಂಡೋ-ಆಸಿಸ್​ ಟೀಮ್ಸ್​​ ವೀರಸೇನಾನಿಗಳಂತೆ ಹೋರಾಡಲು ಸಜ್ಜಾಗಿವೆ.

1983, 2011 ರಲ್ಲಿ ವಿಶ್ವಗೆದ್ದ ಭಾರತಕ್ಕೆ ಮತ್ತೊಮ್ಮೆ ಆ ಸೌಭಾಗ್ಯ ಕೂಡಿ ಬಂದಿದೆ. ತಂಡವು ಅದಕ್ಕೆ ರಿಸರ್ವ್​ ಆಗಿದೆ. ಅದಕ್ಕೆ ಈ ವಿಶ್ವಕಪ್​ನಲ್ಲಿ ಭಾರತ ಸಾಗಿ ಬಂದ ಹಾದಿನೇ ಸಾಕ್ಷಿ. ಜಿದ್ದಿಗೆ ಬಿದ್ದವರಂತೆ ಪ್ರತಿಯೊಬ್ಬರು ಪಂದ್ಯ ಗೆಲ್ಲಿಸಿಕೊಟ್ಟಿದ್ದಾರೆ. ಆದರೆ ಫೈನಲ್​​​​​​ ಕಾಳಗ ಗೆಲ್ಲಿಸಿಕೊಡೋಱರು? ವಿಕ್ಟರಿ ಹೀರೋ ಅನ್ನಿಸಿಕೊಳ್ಳಲು ಪ್ರಬಲ ಪೈಪೋಟಿ ಏರ್ಪಟ್ಟಿದೆ.

ಆಸಿಸ್​​ ಮೇಲೆ ದಂಡಯಾತ್ರೆ ನಡೆಸ್ತಾರಾ ಚಕ್ರವರ್ತಿ ಕೊಹ್ಲಿ..?

ವಿರಾಟ್ ಕೊಹ್ಲಿ..! ವಿಶ್ವಕಪ್​ ಫೈನಲ್​​​​​​​ನ ಸೆಂಟರ್ ಆಫ್​ ಅಟ್ರ್ಯಾಕ್ಷನ್​​. ಲೀಗ್​, ಸೆಮಿಫೈನಲ್​​​ ಕಿಂಗ್ ಕೊಹ್ಲಿ ಎದುರಾಳಿ ಮೇಲೆ ದಂಡೆತ್ತಿ ಹೋಗಿದ್ದಾರೆ. ಈಗ ಅವರ ಅಲ್ಟಿಮೇಟ್​ ಟಾರ್ಗೆಟ್​​​​​​ ಆಸ್ಟ್ರೇಲಿಯಾ. 711 ರನ್​ಗಳೊಂದಿಗೆ ಟಾಪ್ ಸ್ಕೋರರ್ ಅನ್ನಿಸಿಕೊಂಡಿದ್ದು, ಇಂದು ಶತಾಯಗತಾಯ ಕಮಿನ್ಸ್​ ಪಡೆ ಮೇಲೆ ಸವಾರಿ ನಡೆಸಲು ಇನ್ನಿಲ್ಲದಂತೆ ಹವಣಿಸ್ತಿದ್ದಾರೆ.

ನಮೋ ಸ್ಟೇಡಿಯಂನಲ್ಲಿ ಘರ್ಜಿಸಲು ರೋಹಿತ್​​​​ ಸನ್ನದ್ಧ..!

ಮುಂಚೂಣಿಯಾಗಿ ಯಶಸ್ವಿಯಾಗಿ ತಂಡ ಮುನ್ನಡೆಸ್ತಿರೋ ರೋಹಿತ್ ಶರ್ಮಾ ಕೂಡ ಫೈನಲ್​​ನಲ್ಲಿ ಅಬ್ಬರಿಸಿ ಬೊಬ್ಬಿರಿಯಲು ಎದುರು ನೋಡ್ತಿದ್ದಾರೆ. ಆರಂಭಿಕನಾಗಿ ಇಲ್ಲಿ ತನಕ ಹಿಟ್​ಮ್ಯಾನ್​ ಆರ್ಭಟಕ್ಕೆ ಮೂಗುದಾರ ಹಾಕಲು ಸಾಧ್ಯವಾಗಿಲ್ಲ. ಫೈನಲ್​ ದಂಗಲ್​​ನಲ್ಲಿ ಅದು ಕಷ್ಟನೇ. ರೋಹಿತ್​ ಪ್ರಚಂಡ ಫಾರ್ಮ್​ನಲ್ಲಿದ್ದಾರೆ. 550 ರನ್ ರೋಹಿತ್​ ಖಾತೆಯಲ್ಲಿದ್ದು, ಇಂದು ಮತ್ತೊಂದು ಡಿಸ್ಟ್ರಕ್ಟಿವ್​ ಇನ್ನಿಂಗ್ಸ್​​​​​​​​​​​​​ ಕಟ್ಟೋದನ್ನ ಎದುರು ನೋಡ್ತಿದ್ದಾರೆ.

ಫೈನಲ್ ದಂಗಲ್​​ನಲ್ಲಿ ಶಮಿ ಫೈರಿ ಸ್ಪೆಲ್ ಮರುಕಳಿಸುತ್ತಾ?

ಪ್ರಸಕ್ತ ವಿಶ್ವಕಪ್​​ನಲ್ಲಿ ಮೊಹಮ್ಮದ್​​ ಶಮಿ ದರ್ಬಾರ್ ಜೋರಾಗಿದೆ. ಬೌಲಿಂಗ್​​​​​​​​​​ ಶಕ್ತಿ ಅನ್ನಿಸಿಕೊಂಡಿರೋ ಸ್ಪೀಡ್​ ಮಾಸ್ಟರ್ ಬೆಂಕಿ ಉಗುಳಿದ್ದಾರೆ. ಇನ್ನಿಂಗ್ಸ್​ಗಳಿಂದ 23 ವಿಕೆಟ್​​​​​ ಹಂಟ್ ಮಾಡಿದ್ದು ಆಸಿಸ್​ ಪಾಲಿಗೆ​​​​​​ ದುಸ್ವಪ್ನರಾಗಿದ್ದಾರೆ. ಸೆಮಿಸ್​​ನಲ್ಲಿ ಸಿಂಗಲ್​​​​​ ಹ್ಯಾಂಡೆಡ್ಲಿ ಪಂದ್ಯ ಗೆಲ್ಲಿಸಿದ್ರು. ಅದನ್ನೇ ರಿಪೀಟ್ ಮಾಡುವ ತವಕದಲ್ಲಿದ್ದಾರೆ.

ಆಲ್​​ರೌಂಡ್​ ಆಟದಿಂದ ಪಂಚ್ ಕೊಡ್ತಾರಾ ಜಡೇಜಾ?

ಇವರಷ್ಟೇ ಅಲ್ಲದೇ ಆಲ್​ರೌಂಡರ್ ರವೀಂದ್ರ ಜಡೇಜಾ ಕೂಡ ವಿಶ್ವಕಪ್​​ ಗೆಲುವಿಗಾಗಿ ಪಣತೊಟ್ಟಿದ್ದಾರೆ. ಬೌಲಿಂಗ್​ನಲ್ಲಿ 16 ವಿಕೆಟ್​ ಬೇಟೆಯಾಡಿದ್ರೆ ಬ್ಯಾಟಿಂಗ್​​ನಲ್ಲಿ 111 ರನ್​ಗಳ ಕಾಣಿಕೆ ನೀಡಿದ್ದಾರೆ. ಇನ್ನೂ ಫೀಲ್ಡಿಂಗ್​​ನಲ್ಲಂತೂ ಹೇಳೋದೆ ಬೇಡ. ಅದ್ಭುತ ಕ್ಯಾಚಸ್​ ಹಿಡಿದು ಗೆಲುವಿಗೆ ನೆರವಾಗ್ತಿದ್ದಾರೆ. ಜಡ್ಡುರ ಈ ಆಲ್​ರೌಂಡರ್​​ ಆಸಿಸ್​​​​​​​​​ ನಿದ್ದೆಗೆಡಿಸಿದೆ. ಈ ನಾಲ್ವರು ಮಾತ್ರವಲ್ಲ..ಡೆತ್ ಸ್ಪೆಶಲಿಸ್ಟ್​ ಜಸ್​ಪ್ರೀತ್ ಬೂಮ್ರಾ, ಡೇಂಜರಸ್​ ಬ್ಯಾಟರ್ಸ್​ ಸೂರ್ಯಕುಮಾರ್ ಯಾದವ್ ಹಾಗೂ ಮೊಹಮ್ಮದ್ ಸಿರಾಜ್ ಕೂಡ ಕಾಂಗರೂಸ್​​​​​​​ ಬೇಟೆಗೆ ಹವಣಿಸ್ತಿದ್ದಾರೆ. ಈ ರಿಯಲ್ ವಾರಿಯರ್ಸ್​ಗಳಿಂದ ತಪ್ಪಿಸಿಕೊಳ್ಳೋದು ಆಸಿಸ್​ಗೆ ಕಷ್ಟವೇ ಸೈ..

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಈ ರಿಯಲ್ ವಾರಿಯರ್ಸ್​​​ನಿಂದ ತಪ್ಪಿಸಿಕೊಳ್ಳೋದು ಆಸಿಸ್​ಗೆ ಕಷ್ಟ.. ಕಾಂಗರೂ ಮೇಲೆ ಸವಾರಿಗೆ ರೋಹಿತ್ ಮಾಸ್ಟರ್ ಪ್ಲಾನ್..!

https://newsfirstlive.com/wp-content/uploads/2023/11/Team-INDIA-4-2.jpg

Load More