newsfirstkannada.com

World Cup: ಚೇತರಿಸಿಕೊಳ್ಳದ ಹಾರ್ದಿಕ್ ಪಾಂಡ್ಯ; ಭಾರತ, ಇಂಗ್ಲೆಂಡ್ ವಿಶ್ವಕಪ್ ಪಂದ್ಯಕ್ಕೆ ಅಲಭ್ಯ!

Share :

25-10-2023

  ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಗಾಯಕ್ಕೆ ಒಳಗಾಗಿದ್ದ ಹಾರ್ದಿಕ್‌ ಪಾಂಡ್ಯ

  ಪಾಂಡ್ಯ ಗಾಯದಿಂದ ರಿಕವರ್ ಆಗದ ಕಾರಣ ಇನ್ನಷ್ಟು ಚಿಕಿತ್ಸೆ ಅಗತ್ಯ

  ಪಾಂಡ್ಯ ಓವರ್‌ನಲ್ಲಿ ಉಳಿದ ಮೂರು ಬಾಲ್‌ ಎಸೆದಿದ್ದ ವಿರಾಟ್​ ಕೊಹ್ಲಿ

ಬಾಂಗ್ಲಾದೇಶದ ವಿರುದ್ಧದ ವಿಶ್ವಕಪ್​ ಪಂದ್ಯದಲ್ಲಿ ಎಡಗಾಲಿನ ಪಾದದ ಗಾಯಕ್ಕೆ ತುತ್ತಾಗಿರುವ ಹಾರ್ದಿಕ್ ಪಾಂಡ್ಯ ಮುಂದಿನ ಪಂದ್ಯ ಆಡುವುದಿಲ್ಲ ಎಂದ ಹೇಳಲಾಗುತ್ತಿದೆ. ಈಗಾಗಲೇ ನ್ಯೂಜಿಲೆಂಡ್​ ಜೊತೆಗಿನ ಪಂದ್ಯದಿಂದ ಹೊರಗುಳಿದಿದ್ದ ಸ್ಟಾರ್​ ಆಲ್​ ರೌಂಡರ್​ ಅಕ್ಟೋಬರ್​ 29 ರಂದು ಇಂಗ್ಲೆಂಡ್​ ವಿರುದ್ಧದ ಮ್ಯಾಚ್​ನಿಂದಲೂ ಹೊರಗುಳಿಯಲಿದ್ದಾರೆ ಎನ್ನಲಾಗಿದೆ.

ಭಾರತದ ಉಪನಾಯಕ ಹಾರ್ದಿಕ್ ಪಾಂಡ್ಯ ಬಾಂಗ್ಲಾ ಜೊತೆಗಿನ ಪಂದ್ಯದಲ್ಲಿ ಎಡಗಾಲಿನ ಪಾದದ ಗಾಯಕ್ಕೆ ಒಳಗಾಗಿದ್ದರು. ಈ ವೇಳೆ ಬೌಲಿಂಗ್ ಮಾಡುತ್ತಿದ್ದ ಪಾಂಡ್ಯ ಪಂದ್ಯದ ನಡುವೆ ಮೈದಾನದಿಂದ ಹೊರ ಬಂದಿದ್ದರು. ಇದರಿಂದ ಉಳಿದ 3 ಬೌಲ್​ಗಳನ್ನು ವಿರಾಟ್​ ಕೊಹ್ಲಿ ಮಾಡಿದ್ದರು. ಸದ್ಯ ಇನ್ನು ಚಿಕಿತ್ಸೆ ಪಡೆಯುತ್ತಿರುವ ಪಾಂಡ್ಯ ಇನ್ನು ರಿಕವರ್ ಆಗಿಲ್ಲ ಎಂದು ಈ ಬಗ್ಗೆ ಬೆಂಗಳೂರಿನ ಎನ್​ಸಿಎನ ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗಿದೆ.

ಹಾರ್ದಿಕ್ ಪಾಂಡ್ಯ ಮತ್ತು ವಿರಾಟ್ ಕೊಹ್ಲಿ

ಹೀಗಾಗಿ ಅವರಿಗೆ ಇನ್ನಷ್ಟು ದಿನ ವಿಶ್ರಾಂತಿ ಅಗತ್ಯವಿದ್ದು ಇಂಗ್ಲೆಂಡ್​ ಜೊತೆಗಿನ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಈ ಮೊದಲು ಆಡಲಿದ್ದಾರೆ ಎಂದು ಬಿಸಿಸಿಐ ಹೇಳಿತ್ತು. ಆದರೆ ಅವರು ಇನ್ನು ಚೇತರಿಸಿಕೊಳ್ಳದ ಕಾರಣ ಹೊರಗುಳಿಯಲಿದ್ದಾರೆ. ಅಲ್ಲದೇ ನವೆಂಬರ್​ 5, 12 ರಂದು ನಡೆಯುವ ದಕ್ಷಿಣ ಆಫ್ರಿಕಾ, ನೆದರ್​ಲೆಂಡ್ಸ್​ ವಿರುದ್ಧದ ಪಂದ್ಯಗಳಲ್ಲಿ ಪಾಂಡ್ಯ ಕಣಕ್ಕೆ ಇಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಪುಣೆಯ ಸ್ಟೇಡಿಯಂನಲ್ಲಿ ನಡೆದ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್​ ಮಾಡುತ್ತಿದ್ದ ಆಲ್​ ರೌಂಡರ್​ ಹಾರ್ದಿಕ್ ಪಾಂಡ್ಯ ಓವರ್​ನ 3ನೇ ಬೌಲಿಂಗ್ ಮಾಡುವಾಗ ಗಾಯಕ್ಕೆ ಒಳಗಾಗಿದ್ದರು. ಇದರಿಂದ ನ್ಯೂಜಿಲೆಂಡ್​ ವಿರುದ್ಧದ ಪಂದ್ಯದ ವೇಳೆ ಹಾರ್ದಿಕ್ ಬದಲಾಗಿ ಸೂರ್ಯಕುಮಾರ್ ಅವರು ಕಣಕ್ಕೆ ಇಳಿದಿದ್ದರು. ಇನ್ನು ಮುಂದಿನ ಮ್ಯಾಚ್​ಗಳಲ್ಲೂ ಸೂರ್ಯ ಅವರೇ ಆಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

World Cup: ಚೇತರಿಸಿಕೊಳ್ಳದ ಹಾರ್ದಿಕ್ ಪಾಂಡ್ಯ; ಭಾರತ, ಇಂಗ್ಲೆಂಡ್ ವಿಶ್ವಕಪ್ ಪಂದ್ಯಕ್ಕೆ ಅಲಭ್ಯ!

https://newsfirstlive.com/wp-content/uploads/2023/10/HARDHIK_PANDYA-2.jpg

Load More