ಮ್ಯಾಚ್ ನೋಡಲು ವಿಶ್ವದ ಹಲವು ಕಡೆಯಿಂದ ಬರ್ತಾರೆ ಫ್ಯಾನ್ಸ್
ಯಾವ ಸಮಸ್ಯೆಗಾಗಿ ಈ ಪಂದ್ಯ ಮುಂದೂಡಲಾಗಿದೆ ಗೊತ್ತಾ..?
ಐಸಿಸಿಗೆ ಈ ಬಗ್ಗೆ ಪತ್ರ ಬರೆದ ಬಿಸಿಸಿಐನ ಮೂವರು ಅಧಿಕಾರಿಗಳು
2023ರ ಏಕದಿನ ವಿಶ್ವಕಪ್ ಪಂದ್ಯಗಳು ಭಾರತದಲ್ಲಿ ನಡೆಯಲಿದ್ದು ಇಡೀ ಟೂರ್ನಿಯಲ್ಲಿ ಭಾರತ-ಪಾಕಿಸ್ತಾನದ ನಡುವಿನ ಕದನವು ಹೈವೋಲ್ಟೇಜ್ ಪಂದ್ಯವಾಗಲಿದೆ. ಈಗಾಗಲೇ ಬಿಡುಗಡೆಗೊಂಡ ವೇಳಾಪಟ್ಟಿಯಲ್ಲಿ ಭಾರತ-ಪಾಕ್ ಮ್ಯಾಚ್ ಅನ್ನು ಅಕ್ಟೋಬರ್ 15ಕ್ಕೆ ನಿಗದಿ ಪಡಿಸಲಾಗಿತ್ತು. ಆದರೆ ಒಂದು ದಿನ ಮುಂಚಿತವಾಗಿಯೇ ಈ ಮಹಾ ಕದನ ನಡೆಯಲಿದೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ವಿಶ್ವಕಪ್ ಟೂರ್ನಿಯ ಸಂಭಾವ್ಯ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದ್ದು ಇದರಲ್ಲಿ ಭಾರತ-ಪಾಕ್ ಪಂದ್ಯ ಅಕ್ಟೋಬರ್ 15 ರಂದು ಗುಜರಾತ್ನಲ್ಲಿ ಆಯೋಜನೆ ಮಾಡಲಾಗಿತ್ತು. ಆದ್ರೆ ಅಂದೇ ನವರಾತ್ರಿ ಹಬ್ಬ ಇರುವುದರಿಂದ ಭದ್ರತೆ ಸಮಸ್ಯೆಗಳು ಎದುರಾಗಲಿವೆ ಎಂದು ಅಲ್ಲಿನ ಪೊಲೀಸ್ ಇಲಾಖೆ ಮಾಹಿತಿ ನೀಡಿದೆ. ಹೀಗಾಗಿ ಒಂದು ದಿನ ಮೊದಲೇ ಅಂದರೆ ಅಕ್ಟೋಬರ್ 14 ರಂದು ಮಹಾ ಕದನ ನಡೆಯಲಿದೆ ಎನ್ನಲಾಗ್ತಿದೆ.
ಭಾರತ-ಪಾಕ್ ನಡುವಿನ ಪಂದ್ಯ ಎಂದರೆ ವಿಶ್ವದ ಹಲವು ಕಡೆಯಿಂದ ಕ್ರಿಕೆಟ್ ಅಭಿಮಾನಿಗಳು ಪಂದ್ಯ ವೀಕ್ಷಣೆಗೆ ಆಗಮಿಸುತ್ತಾರೆ. ಈಗಾಗಲೇ ಅಹಮದಾಬಾದ್ನಲ್ಲಿ ಹೋಟೆಲ್ಗಳೆಲ್ಲ ಅಡ್ವಾನ್ಸ್ ಬುಕ್ ಆಗಿದ್ದಾವೆ ಎನ್ನಲಾಗಿದೆ. ಹೀಗಾಗಿ ಪಂದ್ಯ ಮತ್ತು ನವರಾತ್ರಿ ಹಬ್ಬ ಎರಡು ಒಂದೇ ದಿನ ನಡೆದರೆ ಭದ್ರತೆಗೆ ತೊಂದರೆಗಳು ಆಗಲಿವೆ. ಈ ಹಿನ್ನೆಲೆಯಲ್ಲಿ ಪಂದ್ಯವನ್ನೇ ಒಂದು ದಿನ ಮುಂಚಿತವಾಗಿ ನಡೆಸಲು ಪ್ಲಾನ್ ಮಾಡಲಾಗಿದೆ. ಅಲ್ಲದೇ ವಿಶ್ವಕಪ್ ವೇಳಾಪಟ್ಟಿಯಲ್ಲಿ ಇನ್ನಷ್ಟು ಬದಲಾವಣೆಗಳು ಆಗಲಿವೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜೈ ಶಾ ಹಾಗೂ ಇತರೆ ಮೂವರು ಸಿಬ್ಬಂದಿ ಸೇರಿದಂತೆ ಐಸಿಸಿಗೆ ಪತ್ರ ಬರೆದಿದ್ದು ವಿಶ್ವಕಪ್ ವೇಳಾಪಟ್ಟಿಯಲ್ಲಿ ಇನ್ನಷ್ಟು ಬದಲಾವಣೆಗಳನ್ನ ಮಾಡುವಂತೆ ಮನವಿ ಮಾಡಿದೆ. ಅಲ್ಲದೇ ಪಂದ್ಯ ನಡೆಯುವ ಸ್ಟೇಡಿಯಂ ಈಗ ನಿಗದಿಯಾಗಿದ್ದೇ ಇರಲಿದೆ. ಆದರೆ ಸಮಯ ಮತ್ತು ದಿನಾಂಕಗಳನ್ನು ಮಾತ್ರ ಬದಲಾವಣೆಯಾಗಲಿದೆ. ಒಂದು ಪಂದ್ಯವಾದ ಬಳಿಕ 6 ದಿನಗಳ ಅಂತರ ಇದೆ. ಇದನ್ನು 4-5 ದಿನಕ್ಕೆ ಕಡಿಮೆಗೊಳಿಸಬೇಕು ಎಂದು ಬಿಸಿಸಿಐ ಪತ್ರದಲ್ಲಿ ಮನವಿ ಮಾಡಿದೆ ಎಂದು ತಿಳಿಸಲಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
===========