ಟೀಮ್ ಇಂಡಿಯಾಗೆ 243 ರನ್ಗಳ ಭರ್ಜರಿ ಗೆಲುವು
ವಿಶ್ವಕಪ್ನಲ್ಲಿ ಟೀಮ್ ಇಂಡಿಯಾಗೆ ಸತತ 8ನೇ ಗೆಲುವು
ಭಾರತದ ಕ್ರಿಕೆಟ್ ಕಾಶಿಯಲ್ಲಿ ಕೊಹ್ಲಿಗೆ ಶತಕ ಸಂಭ್ರಮ
ಅನ್ಸ್ಟಾಪಬಲ್. ಅನ್ಸ್ಟಾಪಬಲ್. ಟೀಮ್ ಇಂಡಿಯಾ ಗೆಲುವಿಗಿಲ್ಲ ಅನ್ಸ್ಟಾಪಬಲ್. ಸೌತ್ ಆಫ್ರಿಕಾ ಎದುರಿನ ಗೆಲುವು ನೋಡಿದ್ಮೇಲೆ ವಿಶ್ವ ಕ್ರಿಕೆಟ್ ಅಭಿಮಾನಿಗಳ ಮನದ ಮಾತು. ಹಾಗಾದ್ರೆ ಭಾರತದ ಕ್ರಿಕೆಟ್ ಕಾಶಿಯಲ್ಲಿ ಆಫ್ರಿಕನ್ಸ್ನ ಇಂಡಿಯನ್ ಟೈಗರ್ಸ್ ಬೇಟೆಯಾಡಿದ್ದೇಗೆ?
ಭಾರತ ಎದುರು ‘ಸೋತ‘ ಆಫ್ರಿಕಾ
ಭಾರತದ ಕ್ರಿಕೆಟ್ ಕಾಶಿ ಈಡನ್ ಗಾರ್ಡನ್ಸ್ನಲ್ಲಿ ಅಕ್ಷರಶಃ ನಡೆದಿದ್ದು, ಟೀಮ್ ಇಂಡಿಯಾದ ದಂಡಯಾತ್ರೆ. ಬ್ಯಾಟಿಂಗ್, ಬೌಲಿಂಗ್ನಲ್ಲಿ ಘರ್ಜಿಸಿದ ಇಂಡಿಯನ್ ಟೈಗರ್ಸ್, ಹರಿಣಗಳ ಚೆಂಡಾಡಿದ್ರು. ಬರೋಬ್ಬರಿ 243 ರನ್ಗಳ ವಿಜಯದ ಪತಾಕೆ ಹಾರಿಸಿದ ಟೀಮ್ ಇಂಡಿಯಾ ಕಿಂಗ್ ಕೊಹ್ಲಿಗೆ ಗೆಲುವಿನ ಗಿಫ್ಟ್ ನೀಡ್ತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ರೋಹಿತ್, ಹರಿಣಗಳ ಮೇಲೆ ಸವಾರಿ ನಡೆಸಿದ್ರು. 24 ಎಸೆತಗಳಲ್ಲೇ 6 ಬೌಂಡರಿ, 2 ಸಿಕ್ಸರ್ ಒಳಗೊಂಡ 40 ರನ್ ಸಿಡಿಸಿ ವಿಕೆಟ್ ಒಪ್ಪಿಸಿದ್ರು. ಈ ಬೆನ್ನಲ್ಲೇ 23 ರನ್ ಗಳಿಸಿದ್ದ ಶುಭ್ಮನ್, ಕೇಶವ್ ಮಹಾರಾಜನ ಅದ್ಭುತ ಎಸೆತಕ್ಕೆ ಕ್ಲೀನ್ಬೌಲ್ಡ್ ಆದರು.
4ನೇ ವಿಕೆಟ್ಗೆ ವಿರಾಟ್-ಶ್ರೇಯಸ್ 134 ರನ್ಗಳ ಜೊತೆಯಾಟ
93 ರನ್ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದ ಟೀಮ್ ಇಂಡಿಯಾಗೆ ಆಸರೆಯಾಗಿದ್ದೆ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್. 4ನೇ ವಿಕೆಟ್ಗೆ 134 ರನ್ಗಳ ಜೊತೆಯಾಟವಾಡಿದ್ರು. ಅರ್ಧಶತಕ ಸಿಡಿಸಿ ರನ್ಗಳಿಕೆಗೆ ವೇಗ ನೀಡಿದ್ದ ಶ್ರೇಯಸ್ 77 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ರಾಹುಲ್ ಬಂದಷ್ಟೇ ಬೇಗ ವಿಕೆಟ್ ಒಪ್ಪಿಸಿದ್ರೆ, ಸೂರ್ಯ ಆಟ 22 ರನ್ಗಳಿಗೆ ಅಂತ್ಯವಾಯ್ತು. ಏಕಾಂಗಿ ಹೋರಾಟ ನಡೆಸಿದೆ ವಿರಾಟ್, ಅಜೇಯ 101 ರನ್ಗಳೊಂದಿಗೆ ಏಕದಿನ ವೃತ್ತಿ ಜೀವನದ 49ನೇ ಶತಕ ದಾಖಲಿಸಿದರು. ಡೆತ್ ಓವರ್ನಲ್ಲಿ ಅಬ್ಬರಿಸಿದ ಜಡೇಜಾ 15 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಒಳಗೊಂಡ 29 ರನ್ ಸಿಡಿಸಿದ್ರು. ಪರಿಣಾಮ ಟೀಮ್ ಇಂಡಿಯಾ ನಿಗದಿತ 50 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 326 ರನ್ ದಾಖಲಿಸಿತು.
ಭಾರತೀಯ ಬೌಲರ್ಗಳ ದಾಳಿಗೆ ಆಫ್ರಿಕಾ ಅಟ್ಟರ್ಫ್ಲಾಫ್
327 ರನ್ಗಳ ಟಾರ್ಗೆಟ್ ಬೆನ್ನತ್ತಿದ್ದ ಸೌತ್ ಆಫ್ರಿಕಾ ಇಂಡಿಯನ್ ಬೌಲರ್ಸ್ ಎದುರು ಅಕ್ಷರಶಃ ಪರದಾಡಿದರು. ಆರಂಭದಲ್ಲೇ ಡೇಂಜರಸ್ ಡಿಕಾಕ್, ವಿಕೆಟ್ ಉರುಳಿಸಿದ ಸಿರಾಜ್ ಎದುರಾಳಿಯನ್ನ ಒತ್ತಡಕ್ಕೆ ಸಿಲುಕಿಸಿದ್ರೆ, ತೆಂಬಾ ಬವುಮಾಗೆ ಜಡ್ಡು ಮ್ಯಾಜಿಕಲ್ ಎಸೆತಕ್ಕೆ ದಂಗಾಗಿ ಪೆವಿಲಿಯನ್ಗೆ ಹೆಜ್ಜೆಹಾಕಿದ್ರು. ಈ ಬೆನ್ನಲ್ಲೇ ದಾಳಿಗಿಳಿದ ಮೊಹಮ್ಮದ್ ಶಮಿ, ವಾನ್ ಡರ್ ಡುಸೆನ್ ಹಾಗೂ ಮಾರ್ಕಮ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ರವೀಂದ್ರ ಜಡೇಜಾ, ಕ್ಲಾಸೆನ್ಗೆ ಎಲ್ಬಿಡ್ಲ್ಯೂ ಬಲೆಗೆ ಸಿಲುಕಿಸುವಲ್ಲಿ ಯಶಸ್ವಿಯಾದ್ರು. ಇದರೊಂದಿಗೆ 40 ರನ್ಗಳಿಗೆ ಪ್ರಮುಖ 5 ವಿಕೆಟ್ ಕಳೆದುಕೊಂಡಿದ್ದ ಸೌತ್ ಆಫ್ರಿಕಾ, ಸೋಲಿನತ್ತ ಹೆಜ್ಜೆಹಾಕಿತ್ತು.
ಈ ವೇಳೆ ಜಡ್ಡು ಸ್ಪಿನ್ ಜಾಲಕ್ಕೆ ಸಿಲುಕಿದ ಮಿಲ್ಲರ್ 11 ರನ್ಗೆ ಆಟ ಅಂತ್ಯಗೊಳಿಸಿದರು. ಕೇಶವ್ ಮಹಾರಾಜ್, ಕಗಿಸೋ ರಬಡ ಬಂದಷ್ಟೇ ವೇಗವಾಗಿ ಹಿಂತಿರುಗಿದ್ರು. ಮಾರ್ಕೋ ಯಾನ್ಸನ್, ಲುಂಗಿ ಎಂಗಿಡಿ ಕುಲ್ದೀಪ್ಗೆ ವಿಕೆಟ್ ಒಪ್ಪಿಸುವುದರೊಂದಿಗೆ 83 ರನ್ಗೆ ಸರ್ವಪತನ ಕಂಡ ಸೌತ್ ಆಫ್ರಿಕಾ, 243 ರನ್ಗಳ ಹೀನಾ ಸೋಳಲು ಕಾಣ್ತು. ಇದರೊಂದಿಗೆ ಟೀಮ್ ಇಂಡಿಯಾ, ವಿಶ್ವಕಪ್ನಲ್ಲಿ ಸತತ 8ನೇ ಗೆಲುವು ದಾಖಲಿಸಿತು. ವಿರಾಟ್ಗೆ ಬರ್ತ್ ಡೇ ಗಿಫ್ಟ್ ನೀಡ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ